ಪ್ರಧಾನ ಮಂತ್ರಿಯವರ ಕಛೇರಿ

ಇಂಧನ ವಲಯದ ಪರಿಶೀಲನಾ ಸಭೆ ನಡೆಸಿದ ಪ್ರಧಾನಿ ಮೋದಿ

Posted On: 01 MAY 2020 5:52PM by PIB Bengaluru

ಇಂಧನ ವಲಯದ ಪರಿಶೀಲನಾ ಸಭೆ ನಡೆಸಿದ ಪ್ರಧಾನಿ ಮೋದಿ

 

ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಇಂಧನ ವಲಯದ ಬಗ್ಗೆ ವಿಸ್ತೃತ ಸಭೆ ನಡೆಸಿದರು ಮತ್ತು ಕೋವಿಡ್-19  ಪರಿಣಾಮದ ಬಗ್ಗೆ ಮಾಹಿತಿ ಪಡೆದರುಇಂಧನ ಕ್ಷೇತ್ರದ ಸುಸ್ಥಿರತೆಸ್ಥಿತಿಸ್ಥಾಪಕತ್ವ ಮತ್ತು ದಕ್ಷತೆಯನ್ನು ಹೆಚ್ಚಿಸಲು ವಿವಿಧ ದೀರ್ಘಕಾಲೀನ ಸುಧಾರಣೆಗಳ ಬಗ್ಗೆಯೂ ಅವರು ಚರ್ಚಿಸಿದರು.

ಚರ್ಚೆಯಲ್ಲಿ ಸುಗಮ ವ್ಯವಹಾರನವೀಕರಿಸಬಹುದಾದ ಪ್ರಸರಣಕಲ್ಲಿದ್ದಲು ಪೂರೈಕೆಯಲ್ಲಿ ನಮ್ಯತೆಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಪಾತ್ರ ಮತ್ತು ವಿದ್ಯುತ್ ಕ್ಷೇತ್ರದಲ್ಲಿ ಹೂಡಿಕೆಯನ್ನು ಹೆಚ್ಚಿಸುವ ಕುರಿತ ಕ್ರಮಗಳು ಸೇರಿದ್ದವು.

ಆರ್ಥಿಕತೆಯನ್ನು ಮುನ್ನಡೆಸುವಲ್ಲಿ ಇಂಧನ ಕ್ಷೇತ್ರದ ಮಹತ್ವವನ್ನು ಪ್ರಧಾನಿಯವರು ಒತ್ತಿಹೇಳಿದರುಖಾಸಗಿ ಹೂಡಿಕೆಗಳನ್ನು ಆಕರ್ಷಿಸಲು ಒಪ್ಪಂದಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಅಗತ್ಯವನ್ನು ಚರ್ಚಿಸಲಾಯಿತು.

ಗ್ರಾಹಕ ಕೇಂದ್ರಿತದ ಮಹತ್ವವನ್ನು ಒತ್ತಿ ಹೇಳಿದ ಅವರುಎಲ್ಲಾ ಗ್ರಾಹಕರಿಗೆ 24X7 ಗುಣಮಟ್ಟದ ಮತ್ತು ವಿಶ್ವಾಸಾರ್ಹ ವಿದ್ಯುತ್ ಪೂರೈಸುವ ಗುರಿಯತ್ತ ಕೆಲಸ ಮಾಡಲು ನಿರ್ದೇಶಿಸಿದರುಸುಧಾರಿತ ಆಡಳಿತದ ಜೊತೆಗೆ ದರ ತರ್ಕಬದ್ಧಗೊಳಿಸುವಿಕೆ ಮತ್ತು ಸಬ್ಸಿಡಿಗಳನ್ನು ಸಕಾಲಿಕವಾಗಿ ಬಿಡುಗಡೆ ಮಾಡುವುದು ಸೇರಿದಂತೆ ವಿತರಣಾ ಕಂಪನಿಗಳ ಕಾರ್ಯಸಾಧ್ಯತೆಯನ್ನು ಸುಧಾರಿಸುವ ಕ್ರಮಗಳ ಬಗ್ಗೆ ಚರ್ಚಿಸಲಾಯಿತು.

ಸಭೆಯಲ್ಲಿ ಗೃಹ ಸಚಿವರುಹಣಕಾಸು ಸಚಿವರುಇಂಧನಕೌಶಲ್ಯ ಮತ್ತು ಎನ್ಆರ್ ರಾಜ್ಯ ಸಚಿವರು ಮತ್ತು ಹಣಕಾಸು ರಾಜ್ಯ ಸಚಿವರುಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

***



(Release ID: 1620301) Visitor Counter : 199