PIB Headquarters

ಕೋವಿಡ್-19: ಪಿ ಐ ಬಿ ದೈನಿಕ ವರದಿ

Posted On: 30 APR 2020 6:20PM by PIB Bengaluru

ಕೋವಿಡ್-19: ಪಿ ಐ ಬಿ ದೈನಿಕ ವರದಿ

 

https://static.pib.gov.in/WriteReadData/userfiles/image/image002482A.pnghttps://static.pib.gov.in/WriteReadData/userfiles/image/image001ZTPU.jpg

(ಕಳೆದ 24 ಗಂಟೆಗಳಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಮಾಧ್ಯಮ ಹೇಳಿಕೆಗಳು ಮತ್ತು ಪಿಐಬಿ ಮಾಡಿದ ವಾಸ್ತವದ ಪರಿಶೀಲನೆ -Fact check- ಯನ್ನು ಒಳಗೊಂಡಿದೆ)

 

  • ಒಟ್ಟು 33,050 ದೃಢೀಕೃತ ಕೋವಿಡ್ -19 ಪ್ರಕರಣಗಳಲ್ಲಿ 8,324 ಜನರು ಗುಣಮುಖರಾಗುವುದರೊಂದಿಗೆ ಗುಣಮುಖ ದರ 25.19 % ಗೇರಿದೆ.; ದುಪ್ಪಟ್ಟಾಗುವ ದರ 11 ದಿನಗಳಿಗೆ ಸುಧಾರಿಸಿದೆ. ನಿನ್ನೆಯಿಂದೀಚೆಗೆ 1718 ಹೊಸ ಪ್ರಕರಣಗಳು ವರದಿಯಾಗಿವೆ
  • ಎಲ್ಲಾ ಆರೋಗ್ಯ ಸೇವೆಗಳು, ವಿಶೇಷವಾಗಿ ಖಾಸಗಿ ರಂಗದ ಸೇವೆಗಳು ಕಾರ್ಯಾಚರಿಸುವಂತಿರಲು ಮತ್ತು ಸಂಕೀರ್ಣ ಸೇವೆಗಳನ್ನು ಒದಗಿಸುವಲ್ಲಿ ಕಾರ್ಯನಿರತವಾಗಿರುವಂತೆ ಖಾತ್ರಿಪಡಿಸಲು ರಾಜ್ಯಗಳಿಗೆ ಆರೋಗ್ಯ ಸಚಿವರ ಕರೆ.
  • ಭಾರತದಲ್ಲಿ ಹೂಡಿಕೆ ಉತ್ತೇಜನಕ್ಕೆ ಕಾರ್ಯ ಯೋಜನೆಗಾಗಿ ಪ್ರಧಾನ ಮಂತ್ರಿ ಅವರಿಂದ ಸಮಗ್ರ ಸಭ್ಹೆ.
  • ಕೋವಿಡ್ -19 ವಿರುದ್ದ ಹೋರಾಟಕ್ಕೆ ಹೊಸ ಮಾರ್ಗದರ್ಶಿಗಳು ಮೇ 4 ರಿಂದ ಜಾರಿಗೆ, ಹಲವು ಜಿಲ್ಲೆಗಳಲ್ಲಿ  ಗಮನಾರ್ಹ ಸಡಿಲಿಕೆಗೆ ಅವಕಾಶ ಎಂದು ಎಂ.ಎಚ್.. ಹೇಳಿಕೆ.
  • ಕೋವಿಡ್ -19 ಮತ್ತು ಆ ಬಳಿಕದ ಲಾಕ್ ಡೌನ್ ಕಾರಣದಿಂದ ವಿಶ್ವವಿದ್ಯಾಲಯದ ಪರೀಕ್ಷೆಗಳು ಮತ್ತು ಶೈಕ್ಷಣಿಕ ಕ್ಯಾಲೆಂಡರ್ ಕುರಿತಂತೆ ಯು.ಜಿ.ಸಿ.ಯಿಂದ ಮಾರ್ಗದರ್ಶಿಗಳ ಬಿಡುಗಡೆ.
  • ಲಾಕ್ ಡೌನ್ ಅವಧಿಯಲ್ಲಿ ಕೂಡಾ ಕೃಷಿ ಕ್ಷೇತ್ರಕ್ಕೆ ಸರಕಾರ ಗರಿಷ್ಟ ಆದ್ಯತೆ ನೀಡಿದೆ, ಎನ್ನುತ್ತಾರೆ ಸಚಿವರು.

 

ಕೋವಿಡ್ -19 ಕುರಿತಂತೆ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಿಂದ ಅಪ್ ದೇಟ್

ಇದುವರೆಗೆ 8,324 ಮಂದಿ ಗುಣಮುಖರಾಗಿದ್ದಾರೆ . ಇದರಿಂದ ನಮ್ಮ ಒಟ್ಟು ಗುಣಮುಖ ದರ 25.19 % ಆಗಿದೆ. ಈಗ ಒಟ್ಟು ದೃಢೀಕೃತ ಪರಕರಣಗಳ ಸಂಖ್ಯೆ 33,050. ನಿನ್ನೆಯಿಂದೀಚೆಗೆ ಕೋವಿಡ್ -19 ದೃಢೀಕೃತ ಪ್ರಕರಣಗಳ ಸಂಖ್ಯೆಯಲ್ಲಿ  1718 ರಷ್ಟು ಹೆಚ್ಚಳವಾಗಿದೆ. ದೇಶದಲ್ಲಿ ಪ್ರಕರಣಗಳು ದುಪ್ಪಟ್ಟಾಗುವ ದರ ದೇಶಾದ್ಯಂತ 11 ದಿನಗಳು. ಈ ಮೊದಲು ಲಾಕ್ ಡೌನ್ ಆರಂಭಕ್ಕೆ ಮುಂಚೆ ಇದು 3.4 ದಿನಗಳಷ್ಟಾಗಿತ್ತು. ಇದುವರೆಗೆ ಪ್ರಕರಣಗಳಲ್ಲಿ ಮೃತ್ಯು ದರ 3.2 % , ಇವರಲ್ಲಿ 65 % ಗಂಡಸರು ಮತ್ತು 35 % ಮಹಿಳೆಯರು. ಡಾ. ಹರ್ಷ ವರ್ಧನ ಅವರು ಎಲ್ಲಾ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಸಚಿವರಿಗೆ ಪತ್ರ ಬರೆದು ಅಡೆ ತಡೆ ರಹಿತ ರಕ್ತದಾನ  ಮತ್ತು ರಕ್ತದ ವರ್ಗಾವಣೆಯನ್ನು ರಕ್ತಕ್ಕೆ ಸಂಬಂಧಿಸಿದ ರೋಗಗಳಿಗೆ ಖಾತ್ರಿಪಡಿಸುವಂತೆ ಕೋರಿದ್ದಾರೆ. ಖಾಸಗಿ ವಲಯವೂ ಸಹಿತ ಎಲ್ಲಾ ಆರೋಗ್ಯ ಸೇವೆಗಳು ಕಾರ್ಯಾಚರಿಸುತ್ತಿರಬೇಕು ಮತ್ತು ಸಂಕೀರ್ಣ ಸೇವೆಗಳನ್ನು ಒದಗಿಸುತ್ತಿರಬೇಕು ಎಂದು ರಾಜ್ಯಗಳಿಗೆ ಸಲಹೆ ಮಾಡಲಾಗಿದೆ.

ವಿವರಗಳಿಗೆhttps://pib.gov.in/PressReleseDetail.aspx?PRID=1619912

ಭಾರತದಲ್ಲಿ ಹೂಡಿಕೆಯನ್ನು ಉತ್ತೇಜಿಸಲು ಕಾರ್ಯ ಯೋಜನೆ ತಯಾರಿ ಚರ್ಚೆಗಾಗಿ ಸಮಗ್ರ ಸಭೆ ನಡೆಸಿದ ಪ್ರಧಾನ ಮಂತ್ರಿ .

ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ  ದೇಶದ ಆರ್ಥಿಕತೆಗೆ ಚೈತನ್ಯ ನೀಡುವುದಕ್ಕಾಗಿ ಭಾರತದಲ್ಲಿ ವಿದೇಶೀ ಹೂಡಿಕೆಯನ್ನು ಆಕರ್ಷಿಸಲು ಮತ್ತು ಸ್ಥಳೀಯ ಹೂಡಿಕೆಯನ್ನು ಉತ್ತೇಜಿಸಲು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಕಾರ್ಯ ಯೋಜನೆ ರೂಪಿಸುವುದಕ್ಕಾಗಿ ಸಮಗ್ರ ಸಭೆ ನಡೆಸಿದರು. ದೇಶದ ಹಾಲಿ ಇರುವ ಕೈಗಾರಿಕಾ ಭೂಮಿ, ನಿವೇಶನ, ಎಸ್ಟೇಟುಗಳಲ್ಲಿ ಇನ್ನಷ್ಟು ಮೂಲಸೌಕರ್ಯಗಳನ್ನು ಅಭಿವೃದ್ದಿ ಮಾಡಲು ಯೋಜನೆಯನ್ನು ತಯಾರಿಸುವ ಬಗ್ಗೆ ಚರ್ಚಿಸಲಾಯಿತು. ಮತ್ತು ಅವಶ್ಯ ಹಣಕಾಸು ಬೆಂಬಲ ನೀಡುವುದಕ್ಕೂ ಚರ್ಚಿಸಲಾಯಿತು. ಸಭೆಯಲ್ಲಿ ಪ್ರಧಾನ ಮಂತ್ರಿ ಶ್ರೀ ಮೋದಿ ಅವರು  ಕೈಗಾರಿಕೋದ್ಯಮಿಗಳ ಕೈಹಿಡಿಯಲು ಕಾರ್ಯತತ್ಪರ ಧೋರಣೆಯನ್ನು ಅನುಸರಿಸುವಂತೆ ಮತ್ತು ಅವರ ಸಮಸ್ಯೆಗಳತ್ತ ಗಮನ ಹರಿಸಿ , ಅವರಿಗೆ ಎಲ್ಲಾ ಕೇಂದ್ರೀಯ ಮತ್ತು ರಾಜ್ಯಗಳ ಮಂಜೂರಾತಿಯನ್ನು ಕಾಲಮಿತಿಯಲ್ಲಿ ಪಡೆದುಕೊಳಲು ಸಹಾಯ ಮಾಡಬೇಕು ಎಂದರು.

ವಿವರಗಳಿಗೆhttps://pib.gov.in/PressReleseDetail.aspx?PRID=1619661

ಕೋವಿಡ್ -19 ಹರಡುವಿಕೆ ಹಿನ್ನೆಲೆಯಲ್ಲಿ ಜಾರಿ ಮಾಡಲಾಗಿರುವ ಲಾಕ್ ಡೌನ್ ಪರಿಸ್ಥಿತಿ ಕುರಿತಂತೆ ಸಮಗ್ರ ಪರಾಮರ್ಶನಾ ಸಭೆ ನಡೆಸಿದ ಎಂ.ಎಚ್..

ಲಾಕ್ ಡೌನ್ ಪರಿಸ್ಥಿತಿಯ ಬಗ್ಗೆ ಗೃಹ ವ್ಯವಹಾರಗಳ ಸಚಿವಾಲಯ ಸಮಗ್ರ ಪರಾಮರ್ಶನಾ ಸಭೆಯನ್ನು ನಡೆಸಿತು. ಲಾಕ್ ಡೌನ್ ನಿಂದಾಗಿ ಇದುವರೆಗೆ ಪರಿಸ್ಥಿತಿಯಲ್ಲಿ ಗಮನಾರ್ಹ ಸುಧಾರಣೆ ಮತ್ತು ದೊಡ್ಡ ಮಟ್ಟದಲ್ಲಿ ಪ್ರಯೋಜನಗಳಾಗಿರುವ ಬಗ್ಗೆ ಗಮನಿಸಲಾಯಿತು. ಲಾಕ್ ಡೌನಿನ ಪ್ರಯೋಜನಗಳು ವ್ಯರ್ಥವಾಗದಂತೆ ನೋಡಿಕೊಳ್ಲಲು , ಮೇ 3 ರವರೆಗೆ ಲಾಕ್ ಡೌನ್ ಮಾರ್ಗದರ್ಶಿಗಳನ್ನು ಕಟ್ಟು ನಿಟ್ಟಾಗಿ ಅನುಸರಿಸುವುದು ಅವಶ್ಯ ಎಂದು ಮನಗಾಣಲಾಯಿತು. ಕೋವಿಡ್ -19 ರ ವಿರುದ್ದ ಹೊರಾಟಕ್ಕೆ ಹೊಸ ಮಾರ್ಗದರ್ಶಿಗಳು ಮೇ 4 ರಿಂದ ಜಾರಿಗೆ ಬರಲಿವೆ. ಇವು ಹಲವು ಜಿಲ್ಲೆಗಳಿಗೆ ಗಮನಾರ್ಹ ಸಡಿಲಿಕೆಗಳನ್ನು ಒದಗಿಸಲಿವೆ. ಈ ಬಗ್ಗೆ ವಿವರಗಳನ್ನು ಮುಂದಿನ ದಿನಗಳಲ್ಲಿ ಒದಗಿಸಲಾಗುವುದು.

ವಿವರಗಳಿಗೆhttps://pib.gov.in/PressReleseDetail.aspx?PRID=1619580

ನಾಗರಿಕ ಸೊಸೈಟಿಗಳು/ ಎನ್.ಜಿ..ಗಳ ಜೊತೆ ವೀಡಿಯೋ ಕಾನ್ಪರೆನ್ಸ್ ಮೂಲಕ ಡಾ. ಹರ್ಷ ವರ್ಧನ್ ಸಂವಾದ

ಸಮಾಜದ ವಿವಿಧ ವಲಯಗಳಿಗೆ ಆಹಾರ ಮತ್ತು ಇತರ ಆವಶ್ಯಕತೆಗಳನ್ನು  ಒದಗಿಸುವಲ್ಲಿ 92,000 ಕ್ಕೂ ಅಧಿಕ ಎನ್.ಜಿ.ಒ.ಗಳು ಸಲ್ಲಿಸಿರುವ ನಿಸ್ವಾರ್ಥ ಕೆಲಸಕ್ಕೆ ಪ್ರಧಾನ ಮಂತ್ರಿಗಳ ಪರವಾಗಿ ಮತ್ತು ಆರೋಗ್ಯ ಹಾಗು ಕುಟುಂಬ ಕಲ್ಯಾಣ ಇಲಾಖೆಯ ಪರವಾಗಿ ಡಾ. ಹರ್ಷ ವರ್ಧನ ಅವರು ಕೃತಜ್ಞತೆ ಸಲ್ಲಿಸಿದ್ದಾರೆ. ಕೋವಿಡ್-19 ನಿಭಾವಣೆಯಲ್ಲಿ ಈ ಸಂಘಟನೆಗಳ ಕೊಡುಗೆ ಮಹತ್ವದ್ದು ಎಂದವರು ಮೆಚ್ಚುಗೆ ಸೂಚಿಸಿದ್ದಾರೆ. ಈ ಸಂಘಟನೆಗಳ ಕೆಲಸವು ಇತರರಿಗೆ ಪ್ರೇರಣೆ ನೀಡಿ ಅವರು ಮುಂದೆ ಬಂದು ಈ ನಿಟ್ಟಿನಲ್ಲಿ ಕೊಡುಗೆ ಕೊಡುವಂತಾಯಿತು ಎಂದೂ ಅವರು ಹೇಳಿದ್ದಾರೆ.

ವಿವರಗಳಿಗೆhttps://pib.gov.in/PressReleseDetail.aspx?PRID=1619908

ಕೋವಿಡ್ -19 ಮತ್ತು ಆ ಬಳಿಕದ ಲಾಕ್ ಡೌನ್ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯಗಳಿಗೆ ಪರೀಕ್ಷೆಗಳು ಮತ್ತು ಶೈಕ್ಷಣಿಕ ವೇಳಾಪಟ್ಟಿ ಕುರಿತು ಯು.ಜಿ.ಸಿ. ಮಾರ್ಗದರ್ಶಿಗಳು

ಯು.ಜಿ.ಸಿ.ಯು ಹೊರಡಿಸಿರುವ ಮಾರ್ಗದರ್ಶನಗಳಲ್ಲಿ ಪ್ರಮುಖ ಶಿಫಾರಸುಗಳು ಈ ಕೆಳಗಿನಂತಿವೆ:

1. ಮಧ್ಯಂತರ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ: ಹಾಲಿ ಮತ್ತು ಹಿಂದಿನ ಸೆಮಿಸ್ಟರ್ ಗಳ ಆಂತರಿಕ ಮೌಲ್ಯಮಾಪನ ಆಧರಿಸಿ ಗ್ರೇಡ್ ನೀಡಲಾಗುವುದು. ಕೋವಿಡ್ -19 ಪರಿಸ್ಥಿತಿ ಸಹಜತೆಗೆ ಮರಳಿರುವ ರಾಜ್ಯಗಳಲ್ಲಿ , ಜುಲೈ ತಿಂಗಳಲ್ಲಿ ಪರೀಕ್ಷೆಗಳು ನಡೆಯಲಿವೆ.

2. ಅಂತಿಮ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ: ಜುಲೈ ತಿಂಗಳಲ್ಲಿ ಪರೀಕ್ಷೆಗಳು ನಡೆಯುತ್ತವೆ.

3. ಪ್ರತೀ ವಿಶ್ವವಿದ್ಯಾಲಯಗಳಲ್ಲಿ ಕೋವಿಡ್ -19 ಘಟಕವನ್ನು / ಕೋಶವನ್ನು ಸ್ಥಾಪಿಸಲಾಗುವುದು, ಅದು ವಿದ್ಯಾರ್ಥಿಗಳ ಶೈಕ್ಷಣಿಕ ವೇಳಾಪಟ್ಟಿ ಮತ್ತು ಪರೀಕ್ಷೆಗಳಿಗೆ ಸಂಬಂಧಿಸಿದ ವಿಷಯಗಳನ್ನು ಪರಿಹರಿಸುವ ಅಧಿಕಾರ ಹೊಂದಿರುತ್ತದೆ.

4. ಯು.ಜಿ.ಸಿ.ಯಲ್ಲಿ ಕೋವಿಡ್ -19 ಘಟಕವನ್ನು ತ್ವರಿತ ನಿರ್ಧಾರ ಕೈಗೊಳ್ಳುವುದಕ್ಕಾಗಿ ರಚಿಸುವುದು.

ವಿವರಗಳಿಗೆhttps://pib.gov.in/PressReleseDetail.aspx?PRID=1619579

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಬಾಂಗ್ಲಾದೇಶದ ಪ್ರಧಾನ ಮಂತ್ರಿ ಗೌರವಾನ್ವಿತ ಶೇಖ್ ಹಸೀನಾ ನಡುವೆ ದೂರವಾಣಿ ಕರೆ

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬಾಂಗ್ಲಾದೇಶ ಗಣತಂತ್ರದ ಪ್ರಧಾನ ಮಂತ್ರಿ ಗೌರವಾನ್ವಿತ ಶೇಖ್  ಹಸೀನಾ  ಜೊತೆ ದೂರವಾಣಿಯಲ್ಲಿ ಮಾತನಾಡಿದರು. ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಈ ಪ್ರಾದೇಶಿಕ ವಲಯದಲ್ಲಿ ಇರುವ ಸ್ಥಿತಿಯ ಬಗ್ಗೆ ಮತ್ತು ಪರಸ್ಪರ ದೇಶಗಳಲ್ಲಿ ಈ ಸಾಂಕ್ರಾಮಿಕವನ್ನು ನಿಯಂತ್ರಿಸಲು ಕೈಗೊಂಡಿರುವ ಕ್ರಮದ ಬಗ್ಗೆ ಮಾತುಕತೆ ನಡೆಸಿದರು. ಸಾರ್ಕ್ ಕೋವಿಡ್ -19 ತುರ್ತು ನಿಧಿಗೆ 1.5 ಮಿಲಿಯನ್ ಅಮೆರಿಕನ್ ಡಾಲರ್ ನೀಡಿರುವುದಕ್ಕೆ ಪ್ರಧಾನ ಮಂತ್ರಿ ಶ್ರೀ ಮೋದಿ ಅವರು ಪ್ರಧಾನ ಮಂತ್ರಿ ಶೇಖ್ ಹಸೀನಾ ಅವರಿಗೆ ಕೃತಜ್ಞತೆ ಸಲ್ಲಿಸಿದರು. ಈ ವಲಯದಲ್ಲಿ ಕೋವಿಡ್ -19 ವಿರುದ್ದ ಸಮರೋಪಾದಿಯಲ್ಲಿ ಕ್ರಮ ಕೈಗೊಂಡು ಸಮನ್ವಯ ಪ್ರಯತ್ನಗಳಲ್ಲಿ ನಾಯಕತ್ವ ವಹಿಸಿದುದಕ್ಕಾಗಿ ಮತ್ತು ಬಾಂಗ್ಲಾದೇಶಕ್ಕೆ ವೈದ್ಯಕೀಯ ಪೂರೈಕೆ ಮತ್ತು ಸಾಮರ್ಥ್ಯವರ್ಧನೆಗೆ ಸಂಬಂಧಿಸಿ ನೆರವು ನೀಡಿರುವುದಕ್ಕೆ ಪ್ರಧಾನ ಮಂತ್ರಿ ಶೇಖ್ ಹಸೀನಾ ಅವರು ಪ್ರಧಾನ ಮಂತ್ರಿ ಶ್ರೀ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸಿದರು.

ವಿವರಗಳಿಗೆhttps://pib.gov.in/PressReleseDetail.aspx?PRID=1619493

ಪ್ರಧಾನ ಮಂತ್ರಿ ಮತ್ತು ಮ್ಯಾನ್ಮಾರ್ ಕೌನ್ಸಿಲರ್ ಡೋವಾಂಗ್ ಸಾನ್ ಸೂಕಿ ನಡುವೆ ದೂರವಾಣಿ ಸಂಭಾಷಣೆ.

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮ್ಯಾನ್ಮಾರ್ ರಿಪಬ್ಲಿಕ್ ಆಫ್ ಯೂನಿಯನ್ ಕೌನ್ಸಿಲರ್ ಡೋವಾಂಗ್ ಸಾನ್ ಸೂಕಿ ಜೊತೆ ದೂರವಾಣಿ ಸಂಭಾಷಣೆ ನಡೆಸಿದರು. ದೇಶೀಯ ಮತ್ತು ವಲಯದಲ್ಲಿ ಕೋವಿಡ್ -19 ರ ಪರಿಸ್ಥಿತಿಯ ಬಗ್ಗೆ ಈ ಇಬ್ಬರು ನಾಯಕರೂ ವಿಚಾರ ವಿನಿಮಯ ನಡೆಸಿದರು ಮತ್ತು ಈ ಜಾಗತಿಕ ಸಾಂಕ್ರಾಮಿಕ ಹರಡುವಿಕೆ ನಿಯಂತ್ರಿಸುವ ನಿಟ್ಟಿನಲ್ಲಿ ಕೈಗೊಂಡ ಕ್ರಮಗಳನ್ನು ಹಂಚಿಕೊಂಡರು. ಭಾರತದ  ನೆರೆ ಹೊರೆ ಮೊದಲು ನೀತಿಯಲ್ಲಿ ಮ್ಯಾನ್ಮಾರ್ ಪ್ರಮುಖ ಆಧಾರಸ್ಥಂಭವಾಗಿರುವುದರ ಮಹತ್ವವನ್ನು ಒತ್ತಿ ಹೇಳಿದ ಪ್ರಧಾನ ಮಂತ್ರಿ ಶ್ರೀ ಮೋದಿ ಅವರು ಕೋವಿಡ್ -19 ಉಂಟುಮಾಡುವ ಆರೋಗ್ಯ ಸಂಬಂಧಿ  ಪರಿಣಾಮಗಳು ಮತ್ತು ಆರ್ಥಿಕ ಪರಿಣಾಮಗಳನ್ನು ನಿಭಾಯಿಸಲು, ಸಾಧ್ಯ ಇರುವ ಎಲ್ಲಾ ಬೆಂಬಲ ನೀಡಲು ಭಾರತ ಸಿದ್ದ ಇರುವುದನ್ನು ತಿಳಿಸಿದರು.

ವಿವರಗಳಿಗೆhttps://pib.gov.in/PressReleseDetail.aspx?PRID=1619654

ವ್ಯಾಪಾರ ಮತ್ತು ಕೈಗಾರಿಕೆಗಳಿಗೆ ಸಂಬಂಧಪಟ್ಟ ವಿಷಯಗಳ ಮೇಲೆ ನಿಗಾ ವಹಿಸುವಲ್ಲಿ ಹಾಗು ಲಾಕ್ ಡೌನ್ ಅವಧಿಯಲ್ಲಿ ವಿವಿಧ ಭಾಗೀದಾರರು ಎದುರಿಸುತ್ತಿರುವ ಸಂಕಷ್ಟಗಳನ್ನು ಪರಿಹರಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ  ಡಿ.ಪಿ... ಟಿ ನಿಯಂತ್ರಣ ಕೊಠಡಿ

ವಾಣಿಜ್ಯ ಮತ್ತು ಕೈಗಾರಿಕೆಗಳ ಸಚಿವಾಲಯದ ಅಡಿಯಲ್ಲಿರುವ ಕೈಗಾರಿಕಾ ಉತ್ತೇಜನ ಮತ್ತು  ಆಂತರಿಕ ವ್ಯಾಪಾರ ಇಲಾಖೆಯು 26.3.2020 ರಿಂದ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದೆ. ಕೈಗಾರಿಕೆ ಮತ್ತು ವ್ಯಾಪಾರಕ್ಕೆ ಸಂಬಂಧಿಸಿದ ವ್ಯವಹಾರಗಳ ಮೇಲೆ ನಿಗಾ ಇಡುವುದು, ಅವುಗಳಿಗೆ ಸಂಬಂಧಪಟ್ಟ ವಿಷಯಗಳನ್ನು ರಾಜ್ಯ ಸರಕಾರಗಳು, ಜಿಲ್ಲಾ ಮತ್ತು ಪೊಲೀಸ್ ಅಧಿಕಾರಿಗಳ ಮತ್ತು ಇತರ ಸಂಬಂಧಿತ ಏಜೆನ್ಸಿಗಳ ಗಮನಕ್ಕೆ ತಂದು ಪರಿಹಾರಕ್ಕೆ ಯತ್ನಿಸುವುದು ಇದರ ಕಾರ್ಯಚಟುವಟಿಕೆಗಳಲ್ಲಿ ಸೇರಿದೆ. 89 % ವಿಚಾರಣೆಗಳು ಈ ನಿಯಂತ್ರಣ ಕೊಠಡಿಯಿಂದಾಗಿ ಪರಿಹರಿಸಲ್ಪಟ್ಟಿವೆ. ಸಚಿವರು ಇದರ ಬಗ್ಗೆ ನಿಗಾ ವಹಿಸಿ ಪರಾಮರ್ಶೆ ನಡೆಸುತ್ತಿದ್ದು, ಕಾರ್ಯದರ್ಶಿಗಳು ಮತ್ತು ಹಿರಿಯ ಅಧಿಕಾರಿಗಳು ಸಮಸ್ಯೆಗಳ ತ್ವರಿತ ಇತ್ಯರ್ಥಕ್ಕೆ ಸಹಾಯ ನೀಡಿದ್ದಾರೆ.

ದೂರವಾಣಿ ಸಂಖ್ಯೆ: 01123062487  ಮತ್ತು ಇ-ಮೇಲ್ controlroom-dpiit[at]gov[dot]in.

ವಿವರಗಳಿಗೆhttps://pib.gov.in/PressReleseDetail.aspx?PRID=1619521

ಲಾಕ್ ಡೌನ್ ಅವಧಿಯಲ್ಲಿಯೂ ಕೃಷಿ ವಲಯಕ್ಕೆ ಸರಕಾರ ಗರಿಷ್ಟ ಆದ್ಯತೆ ನೀಡಿದೆ ಎಂದು ಕೇಂದ್ರ ಕೃಷಿ ಸಚಿವರು

ಕೃಷಿ ಮತ್ತು ರೈತರ ಕಲ್ಯಾಣ ಸಚಿವರಾದ ಶ್ರೀ ನರೇಂದ್ರ ಸಿಂಗ್ ತೋಮರ್ ಅವರು ಲಾಕ್ ಡೌನ್ ಅವಧಿಯಲ್ಲಿಯೂ ಸರಕಾರವು ಕೃಷಿ ಕ್ಷೇತ್ರಕ್ಕೆ ಗರಿಷ್ಟ ಆದ್ಯತೆಯನ್ನು ನೀಡಿದೆ ಎಂದು ಹೇಳಿದ್ದಾರೆ. ಇದರಿಂದ ಅಲ್ಲಿ ಆಹಾರ ಧಾನ್ಯಗಳ ಕೊರತೆ ಉದ್ಭವಿಸಲಿಲ್ಲ ಮತ್ತು ದೇಶಾದ್ಯಂತ ಬೇಳೆ ಕಾಳುಗಳ ಕೊರತೆ ಆಗಲಿಲ್ಲ, ಸರಕಾರ ತರಕಾರಿಗಳು ಮತ್ತು ಹಾಲು ಪೂರೈಕೆಯನ್ನು ಖಾತ್ರಿಪಡಿಸಿತು ಎಂದವರು ಹೇಳಿದರು.

ವಿವರಗಳಿಗೆhttps://pib.gov.in/PressReleseDetail.aspx?PRID=1619391

https://static.pib.gov.in/WriteReadData/userfiles/image/image001G7O1.jpg

 

ಅವಶ್ಯಕ ಸಾಮಗ್ರಿಗಳು ಮತ್ತು ವೈದ್ಯಕೀಯ ಪೂರೈಕೆಗಳನ್ನು ಒದಗಿಸುವ ಮೂಲಕ ಕೋವಿಡ್ -19 ರ ವಿರುದ್ದದ ಯುದ್ದವನ್ನು ಬಲಪಡಿಸಲು 411 ಲೈಫ್ ಲೈನ್ ಉಡಾನ್ ವಿಮಾನಗಳ ನಿರ್ವಹಣೆ

ಏರಿಂಡಿಯಾ, ಅಲಯೆನ್ಸ್ ಏರ್, ಐ.ಎ.ಎಫ್., ಮತ್ತು ಖಾಸಗಿ ಕ್ಯಾರಿಯರ್ ಗಳಿಂದ ಲೈಫ್ ಲೈನ್ ಉಡಾನ್ ಯೋಜನೆ ಅಡಿಯಲ್ಲಿ 411 ವಿಮಾನಗಳು ಹಾರಾಟ ನಡೆಸಿವೆ. ಇಂದಿನವರೆಗೆ ಲೈಫ್ ಲೈನ್ ಉಡಾನ್ ವಿಮಾನಗಳು ಸಾಗಿಸಿದ ಸರಕು ಪ್ರಮಾಣ ಸುಮಾರು 776.73 ಟನ್ನುಗಳು ಮತ್ತು ಕ್ರಮಿಸಿದ ದೂರ 4,04,224 ಕಿ.ಮೀ. ಗೂ ಅಧಿಕ. ಲೈಫ್ ಲೈನ್ ಉಡಾನ್ ವಿಮಾನಗಳನ್ನು ಎಂ.ಒ.ಸಿ.ಎ.ಯು ಕೋವಿಡ್ -19 ರ ವಿರುದ್ದ ಭಾರತದ ಹೋರಾಟವನ್ನು ಬೆಂಬಲಿಸಿ  ದೇಶೀಯ ವಲಯದಲ್ಲಿ ಅವಶ್ಯಕ ವೈದ್ಯಕೀಯ ಸರಕುಗಳನ್ನು ದೂರದ ದುರ್ಗಮ ಪ್ರದೇಶಗಳಿಗೆ ಸಾಗಿಸಲು ನಿರ್ವಹಿಸುತ್ತಿದೆ. ಪವನ್ ಹಂಸ ಲಿಮಿಟೆಡ್ ಸಹಿತ ಹೆಲಿಕಾಪ್ಟರ್ ಸೇವೆಗಳನ್ನು ಜಮ್ಮು ಮತ್ತು ಕಾಶ್ಮೀರ, ಲಡಾಖ್, ದ್ವೀಪಗಳು, ಮತ್ತು ಈಶಾನ್ಯ ವಲಯಗಳಲ್ಲಿ ಸಂಕೀರ್ಣ ವೈದ್ಯಕೀಯ ಸರಕು ಮತ್ತು ರೋಗಿಗಳನ್ನು ಸಾಗಿಸಲು ಬಳಸಲಾಗುತ್ತಿದೆ. 2020 ರ ಏಪ್ರಿಲ್ 28 ರ ವರೆಗೆ ಪವನ ಹಂಸ 2.0 ಟನ್ ಸರಕು ಸಾಗಿಸಿದೆ, 7,257 ಕಿಲೋ ಮೀಟರ್ ದೂರ ಕ್ರಮಿಸಿದೆ.

ವಿವರಗಳಿಗೆhttps://pib.gov.in/PressReleseDetail.aspx?PRID=1619674

ದೇಶದ 8 ಕೋಟಿ ಮೊಬೈಲ್ ಫೋನುಗಳನ್ನು ತಲುಪಿದ ಆರೋಗ್ಯಸೇತು ಆಪ್

ಉದ್ಭವಿಸಿರುವ ಪ್ರತಿಕೂಲ ಪರಿಸ್ಥಿತಿಯಲ್ಲಿ ಹೊಸ ಅವಕಾಶಗಳನ್ನು ಅನ್ವೇಷಣೆ ಮಾಡಿಕೊಂಡು ದೇಶವನ್ನು ಇಲೆಕ್ಟ್ರಾನಿಕ್ಸ್ ಉತ್ಪಾದನಾ ತಾಣವಾಗಿಸುವಂತೆ ಕೇಂದ್ರ ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಶ್ರೀ ರವಿಶಂಕರ ಪ್ರಸಾದ್ ಇಲೆಕ್ಟ್ರಾನಿಕ್ಸ್ ಉದ್ಯಮ ವಲಯವನ್ನು ಆಗ್ರಹಿಸಿದ್ದಾರೆ. ಇಲೆಕ್ಟ್ರಾನಿಕ್ಸ್ ಕೈಗಾರಿಕಾ ಸಂಘಟನೆಗಳು, ಚೇಂಬರ್ ಗಳು ಮತ್ತು ಪ್ರಮುಖ ಉದ್ಯಮಪತಿಗಳ ಜೊತೆಗಿನ ಸಭೆಯಲ್ಲಿ ಅವರು ಜಾಗತಿಕ ಹೂಡಿಕೆ ಆಕರ್ಷಿಸಲು ಮತ್ತು ವಲಯವನ್ನು ಬಲಪಡಿಸಲು ಸಚಿವಾಲಯವು ಅಧಿಸೂಚಿಸಿರುವ ಹೊಸ ಯೋಜನೆಗಳ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಮತ್ತು ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ  ಇಲೆಕ್ಟ್ರಾನಿಕ್ಸ್ ಉದ್ಯಮವನ್ನು ಕೋರಿದರು. ವೈದ್ಯಕೀಯ ಇಲೆಕ್ಟ್ರಾನಿಕ್ಸ್ ಉದ್ಯಮದ ಪಾತ್ರ ಈಗ ಸಂಪೂರ್ಣ ಬದಲಾವಣೆಯ ಹಾದಿಯಲ್ಲಿದೆ ಎಂಬುದನ್ನವರು ಒತ್ತಿ  ಹೇಳಿದರು.

ವಿವರಗಳಿಗೆhttps://pib.gov.in/PressReleseDetail.aspx?PRID=1619707

ಎಂ.ಎಸ್.ಎಂ.. ಗಳ ಯೋಜನೆಗಳು, ಚಿಂತನೆಗಳು, ಅನ್ವೇಷಣೆ ಮತ್ತು ಸಂಶೋಧನಾ ಪೋರ್ಟಲ್ ಗೆ ಶ್ರೀ ಗಡ್ಕರಿ ಚಾಲನೆ

ಈ ಪೋರ್ಟಲ್(http://ideas.msme.gov.in/) ಕೇಂದ್ರ ಸರಕಾರ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರಕಾರಗಳ ಎಲ್ಲ ಯೋಜನೆಗಳ ಬಗ್ಗೆ ವಿವರಗಳನ್ನು ಒದಗಿಸುತ್ತದೆ. ಇದರಲ್ಲಿ ಈ ವಲಯದ ಅನ್ವೇಷಣೆಗಳನ್ನು , ಚಿಂತನೆಗಳನ್ನು ಮತ್ತು ಸಂಶೋಧನೆಗಳನ್ನು ಅಪ್ ಲೋಡ್ ಮಾಡಲು ಅವಕಾಶವಿದೆ. ಈ ಪೋರ್ಟಲ್ ಚಿಂತನೆಗಳ ಕ್ರೋಢೀಕರಣದ ಅವಕಾಶಗಳನ್ನು ಹೊಂದಿರುವುದು ಮಾತ್ರವಲ್ಲ ಕ್ರೌಡ್ ಸೋರ್ಸಿಂಗ್ ಮೂಲಕ ಆ ಚಿಂತನೆಗಳ ಮೌಲ್ಯಮಾಪನ ಮತ್ತು ರೇಟಿಂಗ್ ವ್ಯವಸ್ಥೆಯನ್ನೂ ಒಳಗೊಂಡಿದೆ. ಇದು ವೆಂಚರ್ ಬಂಡವಾಳ, ವಿದೇಶೀ ಸಹಯೋಗ ಇತ್ಯಾದಿಗಳ ಒಳಹರಿವಿಗೂ ಅನುಕೂಲತೆಗಳನ್ನು ಒಳಗೊಂಡಿದೆ.

ವಿವರಗಳಿಗೆhttps://pib.gov.in/PressReleseDetail.aspx?PRID=1619559

ಉಚಿತ ಊಟ ವಿತರಣೆಯಲ್ಲಿ ಭಾರತೀಯ ರೈಲ್ವೇಯು ಇಂದು 3 ಮಿಲಿಯನ್ ಗಡಿ ದಾಟಿತು

ಕೋವಿಡ್ -19 ರ ಹಿನ್ನೆಲೆಯಲ್ಲಿ ಜಾರಿಯಲ್ಲಿರುವ ಲಾಕ್ ಡೌನ್ ನಿಂದಾಗಿ ದೇಶಾದ್ಯಂತ ಸುಮಾರು 300 ಸ್ಥಳಗಳಲ್ಲಿ ಊಟವನ್ನು ವಿತರಿಸಲಾಗಿದೆ. ಭಾರತೀಯ ರೈಲ್ವೇ ಸಂಘಟನೆಗಳು ಬಿಸಿಯೂಟ ವಿತರಿಸಲು ತಂಡ ಕಟ್ಟಿಕೊಂಡಿದ್ದವು ಮತ್ತು ಸಾವಿರಾರು ಜನರಿಗೆ ದಿನನಿತ್ಯ ಊಟ ವಿತರಿಸಿವೆ.

ವಿವರಗಳಿಗೆhttps://pib.gov.in/PressReleseDetail.aspx?PRID=1619944

ವಾಹನೋದ್ಯಮದ ದಿಗ್ಗಜರಿಂದ  ಕೋವಿಡ್ -19 ನಿಭಾವಣೆಯಲ್ಲಿ ಪ್ರಧಾನ ಮಂತ್ರಿಯವರ ನಾಯಕತ್ವಕ್ಕೆ ಪ್ರಶಂಸೆ.

ಭಾರೀ ಕೈಗಾರಿಕೆಗಳು ಮತ್ತು ಸಾರ್ವಜನಿಕ ಉದ್ಯಮಗಳ ಕೇಂದ್ರ ಸಚಿವರಾದ ಶ್ರೀ ಪ್ರಕಾಶ್ ಜಾವಡೇಕರ್ ಅವರು ಇಂದು ಭಾರತೀಯ ವಾಹನೋದ್ಯಮದ ಆಯ್ದ ಸಿ.ಇ.ಒ.ಗಳ ಗುಂಪಿನ ಸಭೆ ಆಯೋಜಿಸಿದ್ದರು. ಭಾರತೀಯ ವಾಹನೋದ್ಯಮದ ಮೇಲೆ ಕೋವಿಡ್ -19 ರ ಸಂಭಾವ್ಯ ಪರಿಣಾಮವನ್ನು ಅರ್ಥಮಾಡಿಕೊಳ್ಳುವುದು ಮತ್ತು ಪರಿಣಾಮವನ್ನು ಕನಿಷ್ಟ ಪ್ರಮಾಣಕ್ಕೆ ಇಳಿಸಲು ಉದ್ಯಮದಿಂದ ಸಲಹೆಗಳನ್ನು ಕೇಳುವುದು ಇದರ ಉದ್ದೇಶವಾಗಿತ್ತು.

ವಿವರಗಳಿಗೆhttps://pib.gov.in/PressReleseDetail.aspx?PRID=1619578

ಮನೆ ಖರೀದಿದಾರರ ಮತ್ತು ಎಲ್ಲಾ ರಿಯಲ್ ಎಸ್ಟೇಟ್ ಕೈಗಾರಿಕೆಗಳ ಭಾಗೀದಾರರ ಹಿತ ರಕ್ಷಿಸಲು ಎಂ..ಎಚ್.ಯು.. ಯು ಶೀಘ್ರವೇ ವಿಶೇಷ ಕ್ರಮಗಳ ಬಗ್ಗೆ ಸಲಹಾ ಸೂಚಿ ಹೊರಡಿಸಲಿದೆ

ರೇರಾ ಅಡಿಯಲ್ಲಿ ಸ್ಥಾಪಿಸಲಾದ ಕೇಂದ್ರೀಯ ಸಲಹಾ ಮಂಡಳಿಯ ತುರ್ತು ಸಭೆ ಎಂ.ಒ.ಎಚ್.ಯು.ಎ. ಸಹಾಯಕ ಸಚಿವ (ಪ್ರಭಾರ) ಶ್ರೀ ಹರ್ದೀಪ್ ಎಸ್. ಪುರಿ ಅವರ ಅಧ್ಯಕ್ಷತೆಯಲ್ಲಿ ವೆಬಿನಾರ್ ಮೂಲಕ ನಡೆಯಿತು. ಕೋವಿಡ್ -19 ಜಾಗತಿಕ ಸಾಂಕ್ರಾಮಿಕ ಮತ್ತು ಆ ಬಳಿಕ ಜಾರಿಯಲ್ಲಿರುವ ರಾಷ್ಟ್ರವ್ಯಾಪ್ತಿ ಲಾಕ್ ಡೌನ್ ನಿಂದಾಗಿ ರಿಯಲ್ ಎಸ್ಟೇಟ್ ವಲಯದ ಮೇಲಾಗಿರುವ ಪರಿಣಮವನ್ನು ಮತ್ತು ರೇರಾ ಅಡಿಯಲ್ಲಿರುವ  ಪ್ರಸ್ತಾವನೆಗಳ ಅನ್ವಯ “ಫೋರ್ಸ್ ಮೆಶರ್ “ ಎಂದು ಪರಿಗಣಿಸುವ ಬಗ್ಗೆ ಚರ್ಚಿಸಲಾಯಿತು. ವಿವರವಾದ ಚರ್ಚೆಯ ಬಳಿಕ ವಸತಿ ಸಚಿವರು ಪಾಲ್ಗೊಂಡ ಎಲ್ಲರಿಗೂ ಭಾಗೀದಾರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಎಂ.ಒ.ಎಚ್.ಯು.ಎ.ಯು ಶೀಘ್ರವೇ ಎಲ್ಲಾ ರೇರಾ/ ರಾಜ್ಯಗಳಿಗೆ ಸಲಹಾಸೂಚಿಯನ್ನು ಹೊರಡಿಸಲಿದೆ ಎಂದು ಹೇಳಿದ ಸಚಿವರು ಮನೆ ಖರೀದಿದಾರರ ಹಿತ ಕಾಯಲು ವಿಶೇಷ ಕ್ರಮ ಕೈಗೊಳ್ಳಬೇಕಾದ ಅಗತ್ಯವನ್ನು ಮತ್ತು ಇದು ಇತರ ರಿಯಲ್ ಎಸ್ಟೇಟ್ ಉದ್ಯಮದ ಭಾಗೀದಾರರ ಹಿತ ರಕ್ಷಣೆಗೆ ಕ್ರಮಗಳನ್ನು ಅಡಕಗೊಂಡಿರುತ್ತದೆ ಎಂದೂ ಹೇಳಿದರು.

ವಿವರಗಳಿಗೆhttps://pib.gov.in/PressReleseDetail.aspx?PRID=1619359

ಜನೌಷಧಿ ಕೇಂದ್ರಗಳನ್ನು ತಲುಪಲು 3,25,000 ಕ್ಕೂ ಅಧಿಕ ಜನರಿಂದ ಜನೌಷಧಿಸುಗಮಮೊಬೈಲ್ ಆಪ್ ಬಳಕೆ

ಕೋವಿಡ್ -19 ಬಿಕ್ಕಟ್ಟಿನಿಂದ ರಾಷ್ಟ್ರವ್ಯಾಪ್ತಿಯಲ್ಲಿ ಜಾರಿಯಲ್ಲಿರುವ ಲಾಕ್ ಡೌನ್ ನಡುವೆ ಜನೌಷಧಿಸುಗಮ ಮೊಬೈಲ್ ಆಪ್ ಜನತೆಗೆ ಅವರ ಹತ್ತಿರದ ಪ್ರಧಾನ ಮಂತ್ರಿ ಜನೌಷಧಿ  ಕೇಂದ್ರಗಳನ್ನು (ಪಿ.ಎಂ.ಜೆ.ಎ.ಕೆ.) ಗುರುತಿಸಲು ಮತ್ತು ಕೈಗೆಟಕುವ ದರದಲ್ಲಿ ಜೆನೆರಿಕ್ ಔಷಧಿಯ ಲಭ್ಯತೆಯನ್ನು ತಿಳಿದುಕೊಳ್ಳಲು ಸಹಾಯ ಮಾಡುತ್ತಿದೆ. 3,25,000 ಕ್ಕೂ ಅಧಿಕ ಜನರು ಜನೌಷಧಿ ಸುಗಮ ಮೊಬೈಲ್ ಅಪ್ ಬಳಸಿ ಅದರಿಂದ ಅನೇಕ ಪ್ರಯೋಜನ ಪಡೆಯುತ್ತಿದ್ದಾರೆ.

ವಿವರಗಳಿಗೆhttps://pib.gov.in/PressReleseDetail.aspx?PRID=1619495

https://static.pib.gov.in/WriteReadData/userfiles/image/IMG-20200429-WA00367VX1.jpg

ಜಮ್ಮು ಕಾಶ್ಮೀರ, ಲಡಾಖ್, ಮತ್ತು ಈಶಾನ್ಯ ವಲಯಗಳಲ್ಲಿ ಕೋವಿಡ್ ಪರಿಸ್ಥಿತಿಯ ಕುರಿತು ಮಾಜಿ ಸೇನಾ ಜನರಲ್ ಗಳು ಮತ್ತು ಏರ್ ಮಾರ್ಷಲ್ ಗಳ ಜೊತೆ ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ವೀಡಿಯೋ ಕಾನ್ಫರೆನ್ಸ್.

ವಿವರಗಳಿಗೆhttps://pib.gov.in/PressReleseDetail.aspx?PRID=1619328

ಉದ್ಯೋಗ ಜನಕಗ್ರಾಮೀಣ ವಸತಿ, ಮೂಲ ಸೌಕರ್ಯ ಅಭಿವೃದ್ದಿ ಮತ್ತು ಗ್ರಾಮೀಣ ಜೀವನೋಪಾಯ ಬಲಪಡಿಸುವುದಕ್ಕೆ ಸಂಬಂಧಿಸಿದ ಗ್ರಾಮೀಣಾಭಿವೃದ್ದಿ ಯೋಜನೆಗಳನ್ನು ಹುಮ್ಮಸ್ಸಿನಿಂದ ಜಾರಿಗೆ ತರುವಂತೆ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವರು ರಾಜ್ಯಗಳನ್ನು ಕೋರಿದ್ದಾರೆ

ರಾಜ್ಯ ಗ್ರಾಮೀಣಾಭಿವೃದ್ದಿ ಸಚಿವರ ಜೊತೆ ವೀಡಿಯೋ ಕಾನ್ಫರೆನ್ಸ್ ನಡೆಸಿದ ಶ್ರೀ ನರೇಂದ್ರ ಸಿಂಗ್ ತೋಮರ್ ಅವರು ಎಂ.ಜಿ.ನರೇಗಾ ಅಡಿಯಲ್ಲಿ ಆದ್ಯತೆಗಳು ಜಲ ಸಂರಕ್ಷಣೆ, ಅಂತರ್ಜಲ ಮರುಪೂರಣ ಮತ್ತು ನೀರಾವರಿ ಸೌಲಭ್ಯ ಗಳತ್ತ ಇರುತ್ತವೆ. ಪಿ.ಎಂ.ಜಿ.ಕೆಎಸ್.ವೈ. ಅಡಿಯಲ್ಲಿ ಆದ್ಯತೆಗಳು ಮಂಜೂರಾದ ರಸ್ತೆ ಯೋಜನೆಗಳಲ್ಲಿ ತಕ್ಷಣವೇ ಕಾಮಗಾರಿಗಳನ್ನು ನೀಡುವಿಕೆ ಮತ್ತು ಬಾಕಿ ಇರುವ ರಸ್ತೆ ಯೋಜನೆಗಳನ್ನು ಆರಂಭಿಸುವುದರಲ್ಲಿದೆ. ಪಿ.ಎಂ.ಎ.ಜಿ.ವೈ. (ಜಿ) ಅಡಿಯಲ್ಲಿ 2.21 ಕೋಟಿ ಮನೆಗಳನ್ನು ಮಂಜೂರು ಮಾಡಲಾಗಿದ್ದು,ಇವುಗಳಲ್ಲಿ 1 ಕೋಟಿ 86 ಸಾವಿರ ಮನೆಗಳು ಈಗಾಗಲೇ ಪೂರ್ಣಗೊಂಡಿವೆ ಎಂದರು.

ವಿವರಗಳಿಗೆhttps://pib.gov.in/PressReleseDetail.aspx?PRID=1619389

ದೇಶಾದ್ಯಂತ ತಮ್ಮ ವಲಯಗಳಲ್ಲಿ ಮತ್ತು ಅದರಿಂದಾಚೆಗೂ ಆವಶ್ಯಕತೆ ಇರುವವರಿಗೆ ಆಹಾರ, ಸ್ಯಾನಿಟೈಸರ್, ಮುಖಗವಸು ಇತ್ಯಾದಿಗಳನ್ನು ಒದಗಿಸಿ ಸಹಾಯ ಮಾಡಿದ ಸಿ.ಎಸ್..ಆರ್.

ಸಿ.ಎಸ್.ಐ.ಆರ್ ಪ್ರಯೋಗಾಲಯಗಳಾದ- ಸಿ.ಎಸ್.ಐ.ಆರ್- ಸಿ.ಎಫ್.ಟಿ.ಆರ್.ಐ., ಮೈಸೂರು, ಸಿ.ಎಸ್.ಐ.ಆರ್.-ಐ.ಎಚ್.ಬಿ.ಟಿ., ಪಾಲಂಪುರ, ಸಿ.ಎಸ್.ಐ.ಆರ್_ ಐ.ಎಂ.ಎಂ.ಟಿ. ಭ್ವನೇಶ್ವರ , ಸಿ.ಎಸ್.ಐ.ಆರ್-ಸಿ.ಐ.ಎಂ.ಎಫ್. ಆರ್ ಧನಾಬಾದ್ ಮತ್ತು ಸಿ.ಎಸ್.ಐ.ಆರ್.-ಐ.ಐ.ಪಿ- ಡೆಹ್ರಾಡೂನ್ ಗಳು ವಲಸೆ ಕಾರ್ಮಿಕರಿಗೆ, ರೋಗಿಗಳಿಗೆ , ಆರೋಗ್ಯ ಕಾರ್ಯಕರ್ತರಿಗೆ, ಪೊಲೀಸರು ಮತ್ತು ಇತರರಿಗೆ ಕೋವಿಡ್ -19 ರ ಅವಧಿಯಲ್ಲಿ ರೆಡಿ ಟು ಈಟ್ ಆಹಾರ ಒದಗಿಸಿವೆ.

ವಿವರಗಳಿಗೆhttps://pib.gov.in/PressReleseDetail.aspx?PRID=1619541

ಜಿ..ಎಸ್. ಡ್ಯಾಶ್ ಬೋರ್ಡ್ ಬಳಸಿ ಆಗ್ರಾ ಸ್ಮಾರ್ಟ್ ಸಿಟಿಯಿಂದ ಕೋವಿಡ್ -19 ಹಾಟ್ ಸ್ಪಾಟ್ ಗಳ ಮೇಲೆ ನಿಗಾ

ವಿವರಗಳಿಗೆhttps://pib.gov.in/PressReleseDetail.aspx?PRID=1619520

 

ಪಿ.ಐ.ಬಿ. ಕ್ಷೇತ್ರ ಕಾರ್ಯಾಲಯಗಳಿಂದ ಮಾಹಿತಿ

  • ಚಂಡೀಗಢ: ಕೊರೊನಾ ಸೋಂಕಿನ ಪ್ರಕರಣಗಳು ಸತತ ಏರುತ್ತಿರುವ ಬಗ್ಗೆ ಚಂಡೀಗಢ ಆಡಳಿತಾಧಿಕಾರಿಗಳು ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ. ಬಾಪು ಧಾಮ್ ಕಾಲನಿ ಸೆಕ್ಟರ್ 30 –ಬಿ ಮತ್ತು ಕಾಚಿ ಕಾಲನಿಗಳಂತಹ ರೋಗ ಬಾಧಿತ ಪ್ರದೇಶಗಳಲ್ಲಿ ತೀವ್ರ ಪ್ರಮಾಣದಲ್ಲಿ ತಪಾಸಣೆ ಮತ್ತು ಪರೀಕ್ಷೆಗಳನ್ನು ನಡೆಸುವಂತೆ ಅವರು ನಿರ್ದೇಶನ ನೀಡಿದ್ದಾರೆ. ಬಾಪು ಧಾಮ ಕಾಲನಿಯ ಬಾಧಿತ ಪ್ರದೇಶ ವ್ಯಾಪ್ತಿಯನ್ನು ಮತ್ತೆ 2500 ಜನರು ಒಳಗೊಳ್ಳುವಂತೆ ವಿಸ್ತರಿಸಲಾಗುವುದು, ಇದರಿಂದ ಕೊರೊನಾ ನಿಯಂತ್ರಣಕ್ಕೆ ಹೆಚ್ಚಿನ ಪರಿಣಮಕಾರಿ ದಕ್ಷತೆ ಲಭಿಸಲಿದೆ.
  • ಪಂಜಾಬ್: ಮೇ 3 ಬಳಿಕ ಎರಡು ವಾರ ರಾಜ್ಯದಲ್ಲಿ ಕರ್ಫ್ಯೂ ವಿಸ್ತರಿಸುವುದಾಗಿ ಮುಖ್ಯಮಂತ್ರಿ ಘೋಷಿಸಿದ್ದಾರೆ. ಕೋವಿಡ್ -19 ಶಿಷ್ಟಾಚಾರದ ಪ್ರಕಾರ ಅವುಗಳಿಗೆ ಬದ್ದವಾಗಿ ಕೆಂಪು ಮತ್ತು ನಿರ್ಬಂಧಿತ ವಲಯಗಳಲ್ಲದ ಪ್ರದೇಶಗಳಲ್ಲಿ ಲಾಕ್ ಡೌನ್ ನಿರ್ಬಂಧಗಳಲಿ ಸಡಿಲಿಕೆ ಮಾಡಲು ಕ್ರಮ ಕೈಗೊಂಡ ಬಳಿಕ ಅವರು ಈ ವಿಷಯ ತಿಳಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಸ್ವಚ್ಚತೆ ಕಾಪಾಡುವಿಕೆ , ಅಂಗಡಿಗಳಲ್ಲಿ ಕ್ರಿಮಿನಾಶಗೊಳಿಸುವಿಕೆ, ಮತ್ತು ಅಲ್ಲಿ ಕೆಲಸ ಮಾಡುವ ಕೆಲಸಗಾರರ ಸ್ವಚ್ಚತೆ ಬಗ್ಗೆ ಹೊಸ ಸಲಹಾ ಸೂಚಿಯನ್ನು ಬಿಡುಗಡೆ ಮಾಡಿದೆ. ಮತ್ತು ಇದನ್ನು ಕಾರ್ಯಾಚರಿಸಲು ಅನುಮತಿಸಲಾಗಿರುವ ಎಲ್ಲಾ ಅಂಗಡಿಗಳಲ್ಲು ಕಡ್ಡಾಯವಾಗಿ ಅನುಸರಿಸಬೇಕು ಎಂದು ಹೇಳಿದೆ. ಈ ಮಾರ್ಗದರ್ಶಿಗಳು ಹೇಳಿರುವ ಮಾನದಂಡಗಳ ಅನ್ವಯ ಕಾರ್ಯಾಚರಣಾ ಪ್ರಕ್ರಿಯೆಗಳು ನಡೆಯಬೇಕು ಎಂದು ಸರಕಾರ ಹೇಳಿದೆ.
  • ಹರ್ಯಾಣಾ: ಏಪ್ರಿಲ್ ತಿಂಗಳಲ್ಲಿ ಸಿಬ್ಬಂದಿಗಳ ವೇತನವನ್ನು ತಡೆಹಿಡಿಯುವಂತೆ ಹಣಕಾಸು ಇಲಾಖೆಯು ಯಾವುದೇ ಸುತ್ತೋಲೆ ಹೊರಡಿಸಿಲ್ಲ. ಸಾಮಾಜಿಕ ಮಾಧ್ಯಮದಲ್ಲಿ ಹರಡುತ್ತಿರುವ ಈ ಸುಳ್ಳು ಸುದ್ದಿಯ ಬಗ್ಗೆ ಹರ್ಯಾಣಾ ಸರಕಾರವು ಸ್ಪಷ್ಟೀಕರಣ ನೀಡಿದೆ. ಕೋವಿಡ್ -19 ರ ಈ ಸಂಕಷ್ಟದ ಸಮಯದಲ್ಲಿಯೂ ಕೂಡಾ ರಾಜ್ಯ ಸರಕಾರವು ಅವಶ್ಯ ಇರುವಲ್ಲೆಲ್ಲ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಬದ್ದವಾಗಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. 12,500 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಈಗಾಗಲೇ ಪ್ರಗತಿಯಲ್ಲಿದೆ ಎಂದಿರುವ ಅವರು ಲಿಖಿತ ಪರೀಕ್ಷೆಯ ಬಳಿಕ ಫಲಿತಾಂಶಗಳನ್ನು ಲಾಕ್ ಡೌನ್ ನಂತರ ಪ್ರಕಟಿಸಲಾಗುವುದು ಎಂದಿದ್ದಾರೆ.
  • ಹಿಮಾಚಲ ಪ್ರದೇಶ: ಅಡೆತಡೆರಹಿತವಾಗಿ ಕಚ್ಚಾ ಸಾಮಗ್ರಿ ಪೂರೈಕೆ ಸಹಿತ ಕೈಗಾರಿಕಾ ಘಟಕಗಳನ್ನು ಸುಸೂತ್ರವಾಗಿ ನಡೆಸಲು ಸರಕಾರ ಸಾಧ್ಯ ಇರುವ ಎಲ್ಲಾ ನೆರವನ್ನೂ ನೀಡಲು ಬದ್ದವಾಗಿದೆ ಎಂದು ಮುಖ್ಯಮಂತ್ರಿಗಳು ಕೈಗಾರಿಕೋದ್ಯಮಿಗಳಿಗೆ ಭರವಸೆ ನೀಡಿದ್ದಾರೆ. ತಮ್ಮ ಕಾರ್ಖಾನೆಗಳಲ್ಲಿ ಸಾಮಾಜಿಕ ಅಂತರವನ್ನು ಸಮರ್ಪಕವಾಗಿ ಕಾಪಾಡುವಂತೆ ಅವರು ಕೈಗಾರಿಕೋದ್ಯಮಿಗಳನ್ನು ಕೋರಿದ್ದಾರೆ. ಕೇಂದ್ರ ಸರಕಾರವು 2020 ಏಪ್ರಿಲ್ ತಿಂಗಳಲ್ಲಿ ರಾಜ್ಯ ಸರಕಾರಕ್ಕೆ 1899 ಕೋ.ರೂ.ಗಳನ್ನು ಕಂದಾಯ ಕೊರತೆ ಅನುದಾನ, ಜಿ.ಎಸ್.ಟಿ. ಕೊರತೆ ಪರಿಹಾರ, ಕೇಂದ್ರೀಯ ತೆರಿಗೆಗಳಲ್ಲಿ ಹಿಮಾಚಲದ ಪಾಲು, ಎಂ.ಜಿ. ನರೇಗಾ ಮೊತ್ತ, ಎನ್.ಎಚ್.ಎಂ. ಕಾರ್ಯಕ್ರಮ, ವಿಪತ್ತು ಪರಿಹಾರ ಮೊತ್ತ ಮತ್ತು ಇ.ವಿ.ಪಿ.ಯಾಗಿ ನೀಡಿದೆ. ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವು ರಾಜ್ಯಗಳಿಗೆ  ನೆರವನ್ನು 60 ಶೇಖಡಾದಷ್ಟು ಹೆಚ್ಚಿಸಿದೆ. ಇದು ಕೊರೊನಾವೈರಸ್ ಸಾಂಕ್ರಾಮಿಕವನ್ನು ಸಮರ್ಥವಾಗಿ ನಿಭಾಯಿಸಲು ಹಿಮಾಚಲ ಪ್ರದೇಶಕ್ಕೆ ಸಹಾಯ ಮಾಡಲಿದೆ.
  • ಕೇರಳ; ಕೆಲವು ಪಾಸಿಟಿವ್ ಪ್ರಕರಣಗಳು ವರದಿಯಾದ  ನಂತರ ತಿರುವನಂತಪುರದ ಎರಡು ಸ್ಥಳಗಳಲ್ಲಿ ಕಠಿಣ ನಿರ್ಬಂಧಗಳನ್ನು ಜಾರಿ ಮಾಡಲಾಗಿದೆ ಮತ್ತು ಮೂರು ಆಸ್ಪತ್ರೆಗಳ ವೈದ್ಯಕೀಯ ಸಿಬ್ಬಂದಿಗಳನ್ನು ನಿಗಾದಲ್ಲಿರಿಸಲಾಗಿದೆ. ಪಾಲಕ್ಕಾಡಿನಲ್ಲಿ 5 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಕೊಲ್ಲಿಯಲ್ಲಿ ಮತ್ತೆ 4  ಮಂದಿ ಕೋವಿಡ್ -19 ತಗಲಿ ಮೃತಪಟ್ಟಿದ್ದಾರೆ. ಕುವೈಟ್ ನಲ್ಲಿ ಇಬ್ಬರು ಮತ್ತು ಅಬುದಾಬಿಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಸರಕಾರಿ ನೌಕರರ ವೇತನ ಕಡಿತ ಸುಗ್ರೀವಾಜ್ಞೆಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ವೇತನವನ್ನು ಮೊದಲು ಆರೋಗ್ಯ ಸಿಬ್ಬಂದಿಗಳಿಗೆ ಮತ್ತು ಪೊಲೀಸರಿಗೆ ನೀಡಲಾಗುವುದು . ನಿನ್ನೆಯವರೆಗೆ ಒಟ್ಟು ಪ್ರಕರಣಗಳು: 495, ಆಕ್ಟಿವ್ ಪ್ರಕರಣಗಳು: 123. ಬಿಡುಗಡೆಗೊಂಡವರು 369, ಸಾವಿನ ಸಂಖ್ಯೆ ;4.
  • ತಮಿಳುನಾಡು: ಚೆನ್ನೈಯ ವಿವಿಧ ಪ್ರದೇಶಗಳಲ್ಲಿ ಕ್ರಿಮಿನಾಶಕ ಸಿಂಪರಣೆ ಕರ್ತವ್ಯದಲ್ಲಿದ್ದ ಅಗ್ನಿ ಶಾಮಕ ಮತ್ತು ಪರಿಹಾರ ಇಲಾಖೆಯ ಮೂವರು ಸಿಬ್ಬಂದಿಗಳು ಕೊರೊನಾ ಪಾಸಿಟಿವ್ ಆಗಿದ್ದಾರೆ. ಹಾಟ್ ಸ್ಪಾಟ್ ವಿಲ್ಲುಪುರಂನಿಂದ ಹಸಿರುವಲಯ ಕೃಷ್ಣಗಿರಿಗೆ ತೆರಳಿದ್ದ ಸರಕಾರಿ ವೈದ್ಯರು ಕರ್ತವ್ಯದಿಂದ ಮರಳುವಾಗ ಪಾಸಿಟಿವ್ ಆಗಿದ್ದಾರೆ. ವಿಲ್ಲುಪುರಂ ಮತ್ತು ಕೃಷ್ಣಗಿರಿಯಲ್ಲಿ ಅವರು ತಂಗಿದ್ದ ಪ್ರದೇಶಗಳನ್ನು ಮುಚ್ಚಲಾಗಿದೆ. ಕೋವಿಡೋತ್ತರ ಕಾಲದಲ್ಲಿ ವಿದೇಶಿ ಕೈಗಾರಿಕೆಗಳನ್ನು ಆಕರ್ಷಿಸಲು ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ವಿಶೇಷ ಕಾರ್ಯಪಡೆಯನ್ನು ರಚಿಸಲಾಗಿದೆ. ನಿನ್ನೆಯವರೆಗೆ ಒಟ್ಟು ಪ್ರಕರಣಗಳು 2162, ಆಕ್ಟಿವ್ ಪ್ರಕರಣಗಳು; 922, ಸಾವುಗಳು ;27, ಗುಣಮುಖರಾಗಿ ಬಿಡುಗಡೆಯಾದವರು 1210, ಗರಿಷ್ಟ ಪ್ರಕರಣಗಳು ಚೆನ್ನೈಯಿಂದ 768.
  • ಕರ್ನಾಟಕ: ಇಂದು ಇದುವರೆಗೆ 22 ಹೊಸ ಪ್ರಕರಣಗಳು ದೃಢಪಟ್ಟಿವೆ. ಬೆಳಗಾವಿ 14, ಬೆಂಗಳೂರು 3, ವಿಜಯಪುರ 2, ಮತ್ತು ದಾವಣಗೆರೆ, ದಕ್ಷಿಣ ಕನ್ನಡ  ಮತ್ತು ತುಮಕೂರುಗಳಲ್ಲಿ ತಲಾ 1 ಪ್ರಕರಣಗಳು. ಒಟ್ಟು ಪ್ರಕರಣಗಳು 557. ಇದುವರೆಗೆ 21 ಮಂದಿ ಮೃತಪಟ್ಟಿದ್ದಾರೆ ಮತ್ತು 223 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ರಾಜ್ಯ ಸಂಪುಟವು ಮೇ 3 ರ ಬಳಿಕ  ಕೆಲವು ಮಾನದಂಡಗಳ ಸಡಿಲಿಕೆಗಳಿಗೆ ಸಂಬಂಧಿಸಿ ಕೇಂದ್ರದ ನಿರ್ಧಾರವನ್ನು ಅನುಸರಿಸಲು ನಿರ್ಧರಿಸಿದೆ.ಮೇ 3 ರ ಬಳಿಕ ಕೈಗಾರಿಕಾ ಚಟುವಟಿಕೆಗಳಿಗೆ ರಾಜ್ಯಾದ್ಯಂತ ಅನುಮತಿ ಕೊಡುವ ಬಗ್ಗೆಯೂ  ಆ ಬಳಿಕವೇ ತೀರ್ಮಾನವಾಗಲಿದೆ.
  • ಆಂಧ್ರಪ್ರದೇಶ: ಸುಮಾರು 21.55 ಲಕ್ಷ ಕುಟುಂಬಗಳಿಗೆ ಉಚಿತ ಪಡಿತರ ಲಭಿಸಲಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳ ನಿರ್ಧಾರವನ್ನು ಅನುಸರಿಸಿ ಲಾಕ್ ಡೌನೋತ್ತರ ಅವಧಿಯಲ್ಲಿ ಭಕ್ತಾದಿಗಳಿಗೆ ದರ್ಶನದ ಅವಕಾಶವನ್ನು ಟಿ.ಟಿ.ಡಿ.ಯು ಒದಗಿಸಲಿದೆ. 71 ಹೊಸ ಪ್ರಕರಣಗಳು ವರದಿಯಾಗಿವೆ. 34 ಮಂದಿ ಬಿಡುಗಡೆಯಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 6497 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಒಟ್ಟು ಪ್ರಕರಣಗಳ ಸಂಖ್ಯೆ 1403 ಕ್ಕೇರಿದೆ. ಆಕ್ಟಿವ್ ಪ್ರಕರಣಗಳು 1051, ಗುಣಮುಖರಾದವರು 321. ಸಾವುಗಳು: 31. ಪ್ರಕರಣಗಳ ಸಂಖ್ಯೆ ಹೆಚ್ಚಳಕ್ಕೆ ಪರೀಕ್ಷೆಗಳ ಪ್ರಮಾಣದಲ್ಲಾದ ಹೆಚ್ಚಳವೂ ಕಾರಣ. ಪಾಸಿಟಿವ್ ಪ್ರಕರಣಗಳಲ್ಲಿ  ಮುಂಚೂಣಿಯಲ್ಲಿರುವ ಜಿಲ್ಲೆಗಳು ;ಕರ್ನೂಲು ( 386) , ಗುಂಟೂರು (287 ), ಕೃಷ್ಣಾ (246 ) , ನೆಲ್ಲೂರು (84 ), ಚಿತ್ತೂರು (80 ) 
  • ತೆಲಂಗಾಣ: ಲಾಕ್ ಡೌನ್ ಹಿನ್ನೆಲೆಯಲ್ಲಿ ಉದ್ಭವಿಸಿರುವ ಸಾರಿಗೆ ಬಿಕ್ಕಟ್ಟು ಹೈದರಾಬಾದ್ ಮತ್ತು ತೆಲಂಗಾಣಾಕ್ಕೆ ಅವಶ್ಯಕ ವಸ್ತುಗಳ ಪೂರೈಕೆ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ. ಹೈದರಾಬಾದಿನ ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆ (ಟಿ..ಎಫ್.ಆರ್.) ಮತ್ತು ಇ.ಎಸ್..ಸಿ. ಅಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜು, ಹೈದರಾಬಾದ್ ಗಳು ತ್ವರಿತ ಪರೀಕ್ಷಾ ಕಿಟ್ ಗಳನ್ನು ಅಭಿವೃದ್ದಿಪಡಿಸುವುದಕ್ಕೆ ತಿಳುವಳಿಕಾ ಒಡಂಬಡಿಕೆಗೆ ಅಂಕಿತ ಹಾಕಿವೆ. ಪುದುಚೇರಿಯು ತೆಲಂಗಾಣದಿಂದ 2 ಲಕ್ಷ ಪಿ.ಪಿ.. ಕಿಟ್ ಗಳಿಗೆ ಕೋರಿಕೆ ಮಂಡಿಸಿದೆ. ನಿನ್ನೆಯವರೆಗೆ ಒಟ್ಟು ಪ್ರಕರಣಗಳು: 1016, ಆಕ್ಟಿವ್ ಪ್ರಕರಣಗಳು:582 ಗುಣಮುಖರಾದವರು: 409 , ಸಾವುಗಳು: 25.
  • ಅರುಣಾಚಲ ಪ್ರದೇಶ: ಅರುಣಾಚಲ ಪ್ರದೇಶದ  ಇತರ ಜಿಲ್ಲೆಗಳ 300 ಮಂದಿ ಇಟಾನಗರದಲ್ಲಿ ಸಿಲುಕಿ ಹಾಕಿಕೊಂಡಿದ್ದು, ಅವರಿಗೆ ಮನೆಗಳಿಗೆ ತೆರಳಲು ಅನುಮತಿ ನೀಡಲಾಗಿದೆ.ಅವರು ಲಾಕ್ ಡೌನ್ ಶಿಷ್ಟಾಚಾರಗಳನ್ನು ಪಾಲಿಸಿದ ಬಳಿಕ ಬಸ್ಸುಗಳಲ್ಲಿ ತೆರಳುವರು.
  • ಅಸ್ಸಾಂ: ಅಸ್ಸಾಂನ ಬೊಂಗೈಗಾಂ ಜಿಲ್ಲೆಯಲ್ಲಿ ಮತ್ತೆ 4 ಕೋವಿಡ್ 19 ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಸಚಿವ ಶ್ರೀ ಹಿಮಂತ ಬಿಸ್ವಾ ಸರ್ಮಾ ಟ್ವೀಟ್ ಮಾಡಿದ್ದಾರೆ. ಇದರಿಂದ ಅಸ್ಸಾಂ ನಲ್ಲಿ ಕೋವಿಡ್ -19 ಪ್ರಕರಣಗಳ ಸಂಖ್ಯೆ 41 ಕ್ಕೇರಿದೆ.
  • ಮೇಘಾಲಯ: ಶಿಲ್ಲಾಂಗಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇನ್ನೆರಡು ಪಾಸಿಟಿವ್ ಪ್ರಕರಣಗಳ ವರದಿ ನೆಗೆಟಿವ್ ಆಗಿದೆ. ಅವರನ್ನು ಮತ್ತೆ 24 ಗಂಟೆಗಳ ಬಳಿಕ ಶಿಷ್ಟಾಚಾರದಂತೆ ಪರೀಕ್ಷೆ ನಡೆಸಿದ ಬಳಿಕ ಗುಣಮುಖರಾಗಿರುವರೆಂದು ಪ್ರಕಟಿಸಲಾಗುತ್ತದೆ
  • ಮಣಿಪುರ: ಬೇರೆ ರಾಜ್ಯಗಳಲ್ಲಿ ಸಿಕ್ಕಿ ಹಾಕಿಕೊಂಡಿರುವ ಮಣಿಪುರಿಗಳು ರಾಜ್ಯಕ್ಕೆ ಮರಳಿ ಬರುವ ಸಂಭವದ ಹಿನ್ನೆಲೆಯಲ್ಲಿ ಕ್ವಾರಂಟೈನ್ ಸೌಲಭ್ಯಗಳು ಮತ್ತು ಇತರ ಸವಲತ್ತುಗಳ ಸಿದ್ದತಾಸ್ಥಿತಿಯ  ಬಗ್ಗೆ ಮುಖ್ಯಮಂತ್ರಿಗಳು ಎಲ್ಲಾ ಜಿಲ್ಲಾಧಿಕಾರಿಗಳ ಜೊತೆ ವೀಡಿಯೋ ಕಾನ್ಫರೆನ್ಸ್ ನಡೆಸಿದರು.
  • ಮಿಜೋರಾಂ: ಪಿ.ಎಂ.ಕಿಸಾನ್ ಯೋಜನೆಯ ಲಾಭ ಪಡೆಯಲು 92201 ರೈತರಿಗೆ ಅನುಮೋದನೆ ನೀಡಲಾಗಿದೆ. ಇವರಲ್ಲಿ 66108 ಮಂದಿ ಲಾಕ್ ಡೌನ್ ನಡುವೆ ವಿಶೇಷ ಹಣಕಾಸು ನೆರವಿನಡಿ ಸಹಾಯ ಪಡೆದಿದ್ದಾರೆ.
  • ನಾಗಾಲ್ಯಾಂಡ್: ಕೊಹಿಮಾದಲ್ಲಿ ಕೊರೊನಾ ವೈರಸ್ ಸ್ಪೋಟದಿಂದಾಗಿ 10 ಮತ್ತು 12 ನೇ ತರಗತಿಯ ಪರೀಕ್ಷಾ ಫಲಿತಾಂಶಗಳು ವಿಳಂಬಗೊಂಡಿವೆ. ಫಲಿತಾಂಶಗಳು ಮೇ ಅಂತ್ಯದೊಳಗೆ ಪ್ರಕಟಗೊಳ್ಳುವ ನಿರೀಕ್ಷೆ  ಇದೆ.
  • ಸಿಕ್ಕಿಂ: ಭಾರತ ಸರಕಾರದ ಗೃಹ ವ್ಯವಹಾರಗಳ ಸಚಿವಾಲಯ ಹೊರಡಿಸಿರುವ ಹೊಸ ಮಾರ್ಗದರ್ಶಿಗಳ ಅನ್ವಯ ರಾಜ್ಯ ಸರಕಾರದ ಕಾರ್ಯ ಯೋಜನೆಯನ್ನು ಪರಾಮರ್ಶಿಸಲು ಮುಖ್ಯಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ರಾಜ್ಯ ಮಟ್ಟದ ಕಾರ್ಯ ಪಡೆ ಸಭೆ ನಡೆಯಿತು.
  • ತ್ರಿಪುರಾ: ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡಿರುವುದಕ್ಕಾಗಿ ಅಗರ್ತಾಲಾ ಮುನ್ಸಿಪಲ್ ಕಾರ್ಪೋರೇಶನ್ನಿಗೆ ಮುಖ್ಯಮಂತ್ರಿಗಳು ಕೃತಜ್ಞತೆ ಸಲ್ಲಿಸಿದ್ದಾರೆ. ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ನಡುವೆ ನೈರ್ಮಲ್ಯ ಕಾಪಾಡುವಲ್ಲಿ ಅವರ ಸೇವೆಯನ್ನು ಕೊಂಡಾಡಿದ್ದಾರೆ.
  • ಮಹಾರಾಷ್ಟ್ರ: 597 ಹೊಸ ಪ್ರಕರಣಗಳು ವರದಿಯಾಗುವುದರೊಂದಿಗೆ ಕೋವಿಡ್ -19 ಪಾಸಿಟಿವ್ ಪ್ರಕರಣಗಳ ಸಂಖ್ಯೆ 9,915 ಕ್ಕೇರಿದೆ. ಒಟ್ಟು 1,539 ಮಂದಿ ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಮೃತಪಟ್ಟವರ ಸಂಖ್ಯೆ 432. ಮುಂಬಯಿ ಗರಿಷ್ಟ ಸಂಖ್ಯೆಯಲ್ಲಿ ಪ್ರಕರಣಗಳು ವರದಿಯಾದ ನಗರವಾಗಿದೆ. ಇಲ್ಲಿ ಪ್ರಕರಣಗಳ ಸಂಖ್ಯೆ 3,096. ನಾಸಿಕ್ ಜಿಲ್ಲೆಯ ಮಾಲೇಗಾಂವ್ ಹೊಸ ಕೋವಿಡ್ -19 ರ ಹಾಟ್ ಸ್ಪಾಟ್ ಆಗಿ ಮೂಡಿ ಬಂದಿದೆ.
  • ಗುಜರಾತ್ : ಇಂದು ಬೆಳಿಗ್ಗೆ ವೇಳೆಗೆ ಹೊಸ 308 ಪ್ರಕರಣಗಳು ವರದಿಯಾಗಿದ್ದು, ಗುಜರಾತಿನ ಒಟ್ಟು ಪ್ರಕರಣಗಳ ಸಂಖ್ಯೆ 4,000 ದ ಗಡಿ ದಾಟಿ 4,082 ಕ್ಕೆ ತಲುಪಿದೆ. ಇದುವರೆಗೆ 527 ಮಂದಿ ಗುಣಮುಖರಾಗಿದ್ದಾರೆ, ರಾಜ್ಯದಲ್ಲಿ ಮೃತಪಟ್ಟವರ ಸಂಖ್ಯೆ 197.  ಕೇಂದ್ರ ಸರಕಾರವು ವೈದ್ಯಕೀಯ ಶಿಷ್ಟಾಚಾರ ಅನುಸರಿಸಬೇಕೆಂಬ ಶರತ್ತಿನ ಮೇಲೆ , ವಲಸೆ ಕಾರ್ಮಿಕರ ಸಂಚಾರಕ್ಕೆ ಅನುಮತಿ ನೀಡಿದ್ದು, ಗುಜರಾತಿನಲ್ಲಿರುವ ಲಕ್ಷಾಂತರ ವಲಸೆ ಕಾರ್ಮಿಕರು ಅವರವರ ತವರು ರಾಜ್ಯಗಳಿಗೆ ಹೊರಡಲು ತಯಾರಾಗುತ್ತಿದ್ದಾರೆ.
  • ರಾಜಸ್ಥಾನ: ರಾಜ್ಯದಲ್ಲಿ 86 ಹೊಸ ಕೊರೊನಾ ವೈರಸ್ ಪ್ರಕರಣಗಳು  ಪತ್ತೆಯಾಗಿವೆ. ಇದರಿಂದ ರಾಜ್ಯದಲ್ಲಿ ಒಟ್ಟು ಕೋವಿಡ್ -19 ಪ್ರಕರಣಗಳ ಸಂಖ್ಯೆ 2,524 ಕ್ಕೇರಿದೆ. ಈ ವೈರಸ್ಸಿನಿಂದಾಗಿ ರಾಜ್ಯದಲ್ಲಿ 57 ಸಾವುಗಳು ಸಂಭವಿಸಿವೆ. ಇದುವರೆಗೆ 827 ರೋಗಿಗಳು ಗುಣಮುಖರಾಗಿದ್ದಾರೆ. ಕೊರೊನಾ ಸಂಕಷ್ಟದಲ್ಲಿ ಜೋಧಪುರ ಜಿಲ್ಲೆಯಲ್ಲಿ ಅತ್ಯಂತ ಉದಾರತೆಯ ಪ್ರಕರಣ ವರದಿಯಾಗಿದೆ. ಉಮ್ಮೇದ್ ನಗರ್ ನ ರಾಂ ನಿವಾಸ್ ಮಂಡಾ ತಮ್ಮ ಜೀವಮಾನದ ಉಳಿಕೆಯಾದ 50 ಲಕ್ಷ ರೂಪಾಯಿಗಳನ್ನು ಬಡವರು ಮತ್ತು ಹಸಿವಿನಿಂದ ಇರುವವರಿಗೆ ಆಹಾರ ಒದಗಿಸಲು ದೇಣಿಗೆಯಾಗಿ ನೀಡಿದ್ದಾರೆ. ಅವರು 83 ಗ್ರಾಮ ಪಂಚಾಯತಿಗಳ 8,500 ಕುಟುಂಬಗಳಿಗೆ ಪಡಿತರ ಕಿಟ್ ಗಳನ್ನು ನೀಡಿದ್ದಾರೆ.
  • ಮಧ್ಯಪ್ರದೇಶ: ಮಧ್ಯಪ್ರದೇಶದಲ್ಲಿ ವರದಿಯಾದ ಕೋವಿಡ್ 19 ಪಾಸಿಟಿವ್ ಪ್ರಕರಣಗಳ ಸಂಖ್ಯೆ 2,561ಕ್ಕೆ ಜಿಗಿದಿದೆ. ಇವರಲ್ಲಿ 461 ಜನರು ಗುಣಮುಖರಾಗಿದ್ದಾರೆ. 129 ಮಂದಿ ಮೃತಪಟ್ಟಿದ್ದಾರೆ.
  • ಛತ್ತೀಸ್ ಗಢ: ಇಂದಿನವರೆಗೆ , ರಾಜ್ಯವು ಬರೇ 4 ಕೋವಿಡ್ 19 ಪ್ರಕರಣಗಳನ್ನು ಹೊಂದಿದೆ. ಇದುವರೆಗೆ ವರದಿಯಾದ 38 ಪ್ರಕರಣಗಳಲ್ಲಿ 34 ಮಂದಿ ಗುಣಮುಖರಾಗಿದ್ದಾರೆ.
  • ಗೋವಾ: ಒಟ್ಟು 7 ಪ್ರಕರಣಗಳು ವರದಿಯಾಗಿದ್ದ ಗೋವಾದಲ್ಲಿ ಈಗ ಯಾವುದೇ ಕೋವಿಡ್ -19 ಆಕ್ಟಿವ್ ರೋಗಿಗಳು ಇಲ್ಲ.

ಪಿ.ಐ.ಬಿ. ವಾಸ್ತವ ಪರಿಶೀಲನೆ

 


(Release ID: 1619986) Visitor Counter : 261