ರೈಲ್ವೇ ಸಚಿವಾಲಯ

ಖಾಸಗಿ ಆಹಾರ ಧಾನ್ಯಗಳ (ಪಿ.ಎಫ್‌.ಜಿ) ಸರಕು ಸಾಗಣೆ ಲಾಕ್‌ಡೌನ್ ಅವಧಿಯಲ್ಲಿ ಬಹಳಷ್ಟು ಹೆಚ್ಚಳ

Posted On: 29 APR 2020 5:51PM by PIB Bengaluru

ಖಾಸಗಿ ಆಹಾರ ಧಾನ್ಯಗಳ (ಪಿ.ಎಫ್‌.ಜಿ) ಸರಕು ಸಾಗಣೆ ಕಳೆದ ವರ್ಷಕ್ಕೆ ಹೋಲಿಸಿದರೆ ಲಾಕ್‌ಡೌನ್ ಅವಧಿಯಲ್ಲಿ ಬಹಳಷ್ಟು ಹೆಚ್ಚಳ

ಕಳೆದ ವರ್ಷ ಮಾರ್ಚ್ 25 ರಿಂದ ಏಪ್ರಿಲ್ 28, 2020 ರವರೆಗಿನ ಅವಧಿಯ ಸುಮಾರು 6.62 ಲಕ್ಷ ಟನ್ (243 ರೇಕ್) ಗೆ ಹೋಲಿಸಿದರೆ ಲಾಕ್ ಡೌನ್ ಅವಧಿಯಲ್ಲಿ ಭಾರತೀಯ ರೈಲ್ವೆ 7.75 ಲಕ್ಷ ಟನ್ (303 ರೇಕ್) ಗಿಂತಲೂ ಹೆಚ್ಚು ಸರಕು ಸಾಗಿಸಿದೆ

ಭಾರತೀಯ ರೈಲ್ವೆ ಆಹಾರ ಧಾನ್ಯಗಳಂತಹ ಕೃಷಿ ಉತ್ಪನ್ನಗಳನ್ನು ಸಮಯಕ್ಕೆ ಸರಿಯಾಗಿ ತೆಗೆದುಕೊಳ್ಳಲಾಗುತ್ತಿದೆ
ಹಾಗು ನಿರಂತರ ಪೂರೈಕೆ ಸರಪಳಿಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ

 

 

ಕೊವಿಡ್-19 ಕಾರಣದಿಂದಾಗಿ ರಾಷ್ಟ್ರವ್ಯಾಪಿ ಲಾಕ್ ಡೌನ್ ಸಮಯದಲ್ಲಿ ಭಾರತೀಯ ರೈಲ್ವೆ ತನ್ನ ಸರಕು ಮತ್ತು ಪಾರ್ಸೆಲ್ ಸೇವೆಗಳ ಮೂಲಕ ದೇಶಾದ್ಯಂತ ಆಹಾರ ಧಾನ್ಯದಂತಹ ಅಗತ್ಯ ವಸ್ತುಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ತನ್ನ ಪ್ರಯತ್ನವನ್ನು ಮುಂದುವರೆಸಿದೆ.

ಎಲ್ಲಾ ಭಾರತೀಯರ ಮನೆಗಳ ಅಡಿಗೆಮನೆಗಳು ತೊಂದರೆಯಿಲ್ಲದೆ ಸಾಮಾನ್ಯ ರೀತಿಯಲ್ಲಿ ಕಾರ್ಯನಿರ್ವಹಿಸುಲು ಪೂರಕವಾಗಿ ಮಾರ್ಚ್ 25 ರಿಂದ ಏಪ್ರಿಲ್ 28, 2020 ರವರೆಗಿನ ಲಾಕ್‌ಡೌನ್ ಅವಧಿಯಲ್ಲಿ, ದೇಶಾದ್ಯಂತ 7.75 ಲಕ್ಷ ಟನ್‌ಗಿಂತ ಹೆಚ್ಚು (303 ರೇಕ್‌ಗಳು) ಖಾಸಗಿ ಆಹಾರ ಧಾನ್ಯಗಳ (ಪಿಎಫ್‌ಜಿ) ಸರಕುಗಳನ್ನು ಲೋಡ್ ಭಾರತೀಯ ರೈಲ್ವೆ ಮಾಡಿ ಸಾಗಾಟ ಮಾಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಸುಮಾರು 6.62 ಲಕ್ಷ ಟನ್ (243 ರೇಕ್) ಸರಕು ಸಾಗಣೆ ಕಾರ್ಯ ನಡೆದಿದೆ. ಖಾಸಗಿ ಆಹಾರ ಧಾನ್ಯಗಳ (ಪಿಎಫ್‌ಜಿ) ಸರಕು ಸಾಗಣೆ ಕಾರ್ಯದಲ್ಲಿ ಆಂಧ್ರಪ್ರದೇಶ, ಬಿಹಾರ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ತಮಿಳುನಾಡು ಪ್ರಮುಖ ರಾಜ್ಯಗಳಾಗಿವೆ.

ಭಾರತೀಯ ರೈಲ್ವೆ ಆಹಾರ ಧಾನ್ಯಗಳಂತಹ ಕೃಷಿ ಉತ್ಪನ್ನಗಳನ್ನು ಸಮಯಕ್ಕೆ ಸರಿಯಾಗಿ ತೆಗೆದುಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿವೆ. ಮತ್ತು ಕೊವಿಡ್-19 ಕಾರಣದಿಂದಾಗಿ ರಾಷ್ಟ್ರವ್ಯಾಪಿ ಲಾಕ್ ಡೌನ್ ಸಮಯದಲ್ಲಿ ಸಮಯೋಚಿತ ಪೂರೈಕೆಯನ್ನು ಖಚಿತಪಡಿಸುತ್ತದೆ. ಲಾಕ್‌ಡೌನ್ ಅವಧಿಯಲ್ಲಿ ಈ ಅಗತ್ಯ ವಸ್ತುಗಳ ಲೋಡಿಂಗ್, ಸಾಗಣೆ ಮತ್ತು ಇಳಿಸುವಿಕೆಯು ಪೂರ್ಣ ಪ್ರಗತಿಯಲ್ಲಿದೆ.

ಲಾಕ್‌ಡೌನ್ ಪ್ರಾರಂಭವಾದಾಗಿನಿಂದ ಹಣ್ಣುಗಳು, ತರಕಾರಿಗಳು, ಹಾಲು ಮತ್ತು ಡೈರಿ ಉತ್ಪನ್ನಗಳು ಮತ್ತು ಕೃಷಿ ಉದ್ದೇಶಕ್ಕಾಗಿ ಬೀಜಗಳು ಸೇರಿದಂತೆ ಹಾಳಾಗುವ ಸರಕುಗಳ ಸಾಗಾಟದ ಮಾರ್ಗಗಳನ್ನು ಭಾರತೀಯ ರೈಲ್ವೆ ನ ವಿಶೇಷ ಪಾರ್ಸೆಲ್ ರೈಲುಗಳು ಗುರುತಿಸಿದೆ. ಬೇಡಿಕೆ ಕಡಿಮೆ ಇರುವ ಆ ಮಾರ್ಗಗಳಲ್ಲಿಯೂ ಸಹ ರೈಲುಗಳನ್ನು ಓಡಿಸಲಾಗುತ್ತಿದೆ, ಇದರಿಂದಾಗಿ ದೇಶದ ಯಾವುದೇ ಭಾಗವು ಸಂಪರ್ಕರಹಿತವಾಗುವುದಿಲ್ಲ ಹಾಗೂ ಎಲ್ಲಾ ಕಾರ್ಯಸಾಧ್ಯ ಸ್ಥಳಗಳಲ್ಲಿ ರೈಲುಗಳಿಗೆ ಮಾರ್ಗ-ನಿಲುಗಡೆಗಳನ್ನು ನೀಡಲಾಗಿದೆ, ಇದರಿಂದಾಗಿ ಪಾರ್ಸೆಲ್‌ಗಳನ್ನು ಗರಿಷ್ಠವಾಗಿ ಪೂರೈಕೆ ಮಾಡಲು ಸಾದ್ಯವಾಗಿದೆ.

***(Release ID: 1619722) Visitor Counter : 152