ಗೃಹ ವ್ಯವಹಾರಗಳ ಸಚಿವಾಲಯ
ಕೋವಿಡ್ -19 ಹರಡುವಿಕೆ ಹಿನ್ನೆಲೆಯಲ್ಲಿ ಜಾರಿ ಮಾಡಲಾದ ಲಾಕ್ ಡೌನ್ ಪರಿಸ್ಥಿತಿಯ ಕುರಿತು ಎಂ.ಎಚ್.ಎ. ಸಮಗ್ರ ಪರಾಮರ್ಶೆ ಸಭೆ
प्रविष्टि तिथि:
29 APR 2020 9:37PM by PIB Bengaluru
ಕೋವಿಡ್ -19 ಹರಡುವಿಕೆ ಹಿನ್ನೆಲೆಯಲ್ಲಿ ಜಾರಿ ಮಾಡಲಾದ ಲಾಕ್ ಡೌನ್ ಪರಿಸ್ಥಿತಿಯ ಕುರಿತು ಎಂ.ಎಚ್.ಎ. ಸಮಗ್ರ ಪರಾಮರ್ಶೆ ಸಭೆ
ಗೃಹ ವ್ಯವಹಾರಗಳ ಸಚಿವಾಲಯವು (ಎಂ.ಎಚ್.ಎ.) ಇಂದು ಲಾಕ್ ಡೌನ್ ಪರಿಸ್ಥಿತಿಯ ಬಗ್ಗೆ ಸಮಗ್ರ ಪರಾಮರ್ಶಾ ಸಭೆ ನಡೆಸಿತು.
ಲಾಕ್ ಡೌನ್ ನಿಂದಾಗಿ ಇಂದಿನವರೆಗೆ ಪರಿಸ್ಥಿತಿಯಲ್ಲಿ ಭಾರೀ ಸುಧಾರಣೆಯಾಗಿರುವುದನ್ನು ಮತ್ತು ಪ್ರಯೋಜವಾಗಿರುವುದನ್ನು ಅದು ಗಮನಿಸಿತು.ಲಾಕ್ ಡೌನಿನ ಈ ಪ್ರಯೋಜನಗಳು ಕೈಜಾರಿ ಹೋಗದಂತೆ ಖಾತ್ರಿಪಡಿಸಲು ಲಾಕ್ ಡೌನ್ ಮಾರ್ಗದರ್ಶಿಗಳನ್ನು ಮೇ 3 ರವರೆಗೆ ಕಟ್ಟು ನಿಟ್ಟಾಗಿ ಅನುಸರಿಸಬೇಕಾಗಿದೆ.
ಕೋವಿಡ್ -19 ವಿರುದ್ದ ಹೋರಾಟದ ಹೊಸ ಮಾರ್ಗದರ್ಶಿಗಳು ಮೇ 4 ರಿಂದ ಜಾರಿಗೆ ಬರಲಿವೆ. ಇವು ಹಲವು ಜಿಲ್ಲೆಗಳಿಗೆ ಗಮನಾರ್ಹ ಸಡಿಲಿಕೆಗಳನ್ನು ಒದಗಿಸಲಿವೆ. ಈ ಬಗ್ಗೆ ವಿವರಗಳನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು.
***
(रिलीज़ आईडी: 1619580)
आगंतुक पटल : 168
इस विज्ञप्ति को इन भाषाओं में पढ़ें:
Punjabi
,
English
,
Urdu
,
Marathi
,
हिन्दी
,
Assamese
,
Bengali
,
Manipuri
,
Gujarati
,
Odia
,
Telugu