ಗೃಹ ವ್ಯವಹಾರಗಳ ಸಚಿವಾಲಯ
ಕೋವಿಡ್-19 ಜಾಗತಿಕ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ದೇಶದ ವಿವಿಧ ಕಡೆಗಳಲ್ಲಿ ಸಿಲುಕಿ ಹಾಕಿಕೊಂಡಿರುವ ವಲಸೆ ಕಾರ್ಮಿಕರು ಸಹಿತ ಜನತೆಯ ಅಂತಾರಾಜ್ಯ ಸಂಚಾರಕ್ಕೆ ಕೇಂದ್ರದಿಂದ ಅನುವು
Posted On:
29 APR 2020 6:25PM by PIB Bengaluru
ಕೋವಿಡ್-19 ಜಾಗತಿಕ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ದೇಶದ ವಿವಿಧ ಕಡೆಗಳಲ್ಲಿ ಸಿಲುಕಿ ಹಾಕಿಕೊಂಡಿರುವ ವಲಸೆ ಕಾರ್ಮಿಕರು ಸಹಿತ ಜನತೆಯ ಅಂತಾರಾಜ್ಯ ಸಂಚಾರಕ್ಕೆ ಕೇಂದ್ರದಿಂದ ಅನುವು
ಕೋವಿಡ್ -19 ರ ವಿರುದ್ದ ಹೋರಾಡಲು ಲಾಕ್ ಡೌನ್ ನಿರ್ಬಂಧಗಳ ಜಾರಿಯ ಫಲವಾಗಿ ದೇಶದ ವಿವಿಧ ಪ್ರದೇಶಗಳಲ್ಲಿ ವಲಸೆ ಕಾರ್ಮಿಕರು,ಯಾತ್ರಿಕರು, ಪ್ರವಾಸಿಗರು, ವಿದ್ಯಾರ್ಥಿಗಳು ಮತ್ತು ಇತರರು ಸಿಲುಕಿ ಹಾಕಿಕೊಂಡಿದ್ದಾರೆ. ಈಗ ರಸ್ತೆ ಮೂಲಕ ಸಂಚರಿಸುವುದಕ್ಕೆ ಕೇಂದ್ರ ಸರಕಾರವು ಅವರಿಗೆ ಅನುವು ಮಾಡಿಕೊಟ್ಟಿದೆ. ಅವರಿಗೆ ಒಂದು ರಾಜ್ಯ/ ಕೇಂದ್ರಾಡಳಿತ ಪ್ರದೇಶದಿಂದ ಇನ್ನೊಂದು ರಾಜ್ಯ/ಕೇಂದ್ರಾಡಳಿತ ಪ್ರದೇಶದ ನಡುವೆ ಸಂಚಾರಕ್ಕೆ ಆಯಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಪರಸ್ಪರ ಒಪ್ಪಿದರೆ ಅವಕಾಶ ನೀಡಲಾಗುತ್ತದೆ.
ಅವರು ತಮ್ಮ ನಿಗದಿತ ಸ್ಥಳಗಳಿಗೆ ಬಂದಾಗ ಅಂತಹ ವ್ಯಕ್ತಿಗಳು ಸ್ಥಳೀಯ ಆರೋಗ್ಯಾಧಿಕಾರಿಗಳಿಂದ ತಪಾಸಣೆಗೆ ಒಳಪಟ್ಟು , ಆ ಮೌಲ್ಯಮಾಪನದಲ್ಲಿ ಆ ವ್ಯಕ್ತಿ/ ವ್ಯಕ್ತಿಗಳನ್ನು ಸಾಂಸ್ಥಿಕ ಕ್ವಾರಂಟೈನ್ ನಲ್ಲಿಡುವುದು ಅವಶ್ಯವಲ್ಲ ಎಂದು ಕಂಡು ಬಂದಲ್ಲಿ ಗೃಹ ಕ್ವಾರಂಟೈನ್ ನಲ್ಲಿಡಬಹುದು. ಅವರನ್ನು ಕಾಲ ಕಾಲಕ್ಕೆ ಆರೋಗ್ಯ ತಪಾಸಣೆಗೆ ಒಳಪಡಿಸಲಾಗುತ್ತದೆ.
ಈ ಉದ್ದೇಶಕ್ಕಾಗಿ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಇಂತಹ ವ್ಯಕ್ತಿಗಳಿಗೆ ಆರೋಗ್ಯ ಸೇತು ಆಪ್ ಬಳಸುವಂತೆ ಉತ್ತೇಜಿಸಲು ಕೋರಲಾಗುತ್ತಿದೆ. ಈ ಆಪ್ ಮೂಲಕ ಅವರ ಆರೋಗ್ಯ ಸ್ಥಿತಿಯ ಮೇಲೆ ನಿಗಾ ಇಡಬಹುದಾಗಿದೆ.
ರಾಜ್ಯಗಳಿಗೆ/ ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಲಾದ ಅಧಿಕೃತ ಮಾಹಿತಿಯ ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ
***
(Release ID: 1619547)
Visitor Counter : 261
Read this release in:
English
,
Urdu
,
Hindi
,
Marathi
,
Assamese
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam