ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಕೋವಿಡ್ – 19 ಹೊಸ ಮಾಹಿತಿ
Posted On:
29 APR 2020 6:25PM by PIB Bengaluru
ಕೋವಿಡ್ – 19 ಹೊಸ ಮಾಹಿತಿ
ಶ್ರೇಣೀಕೃತ, ಹತೋಟಿಯಲ್ಲಿಡುವ ಮತ್ತು ಸಕ್ರಿಯ ವಿಧಾನದ ಮೂಲಕ, ಕೋವಿಡ್-19ರ ತಡೆಗಟ್ಟುವಿಕೆಗೆ, ಹತೋಟಿಗಾಗಿ ಮತ್ತು ನಿರ್ವಹಣೆಗಾಗಿ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಭಾರತ ಸರ್ಕಾರವು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ . ಇವುಗಳನ್ನು ನಿಯಮಿತವಾಗಿ ಉನ್ನತ ಮಟ್ಟದಲ್ಲಿ ಪರಿಶೀಲಿಸಲಾಗುತ್ತಿದೆ ಮತ್ತು ಮೇಲ್ವಿಚಾರಣೆ ಮಾಡಲಾಗುತ್ತಿದೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷ್ ವರ್ಧನ್ rವರು ಇಂದು ವಿಡಿಯೋ ಕಾನ್ಫರೆನ್ಸಿಂಗ್ (ವಿಸಿ) ಮೂಲಕ ದೇಶಾದ್ಯಂತದ ಲಯನ್ಸ್ ಕ್ಲಬ್ ಇಂಟರ್ ನ್ಯಾಷನಲ್ ಸದಸ್ಯರೊಂದಿಗೆ ಮಾತುಕತೆ ನಡೆಸಿದರು. ಲಯನ್ಸ್ ಕ್ಲಬ್ ಸದಸ್ಯರು 9.1 ರೂಪಾಯಿಗಳನ್ನು ಕೋಟಿ ಪಿಎಂ ಕೇರ್ಸ್ ನಿಧಿಗೆ ಮತ್ತು 12.5 ಕೋಟಿ ರೂಪಾಯಿಗಳನ್ನು ವಿವಿಧ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡಿರುವುಕ್ಕಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ಲಕ್ಷಾಂತರ ಜನರಿಗೆ ಊಟವನ್ನು ನೀಡುವ, ಹೆಚ್ಚು ಅಗತ್ಯವಿರುವ ವೈದ್ಯಕೀಯ ಉಪಕರಣಗಳು ಮತ್ತು ರಕ್ಷಣಾತ್ಮಕ ಸಾಧನಗಳನ್ನು ಒದಗಿಸುವ ರೂಪದಲ್ಲಿ ಅವರು ನೀಡಿದ ಕೊಡುಗೆಯನ್ನು ಸಚಿವರು ಶ್ಲಾಘಿಸಿದರು. ಕೋವಿಡ್-19 ಅನ್ನು ಎದುರಿಸುವ ಹೋರಾಟದಲ್ಲಿ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ಮತ್ತು ಮೀಸಲಾದ ಪಾಲುದಾರರೊಂದಿಗೆ ಭಾರತವು ವಿಜಯಶಾಲಿಯಾಗಿ ಹೊರಹೊಮ್ಮಲು ಸಾಧ್ಯವಾಗುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವರು ಹೇಳಿದರು.
ಆರೋಗ್ಯ ಮೂಲಸೌಕರ್ಯ ಮತ್ತು ಕೋವಿಡ್-19 ನಿರ್ವಹಣೆಗೆ ಸಂಬಂಧಿಸಿದ ಇತರ ವಿವಿಧ ಅಂಶಗಳನ್ನು ಚರ್ಚಿಸಲು ರಾಜ್ಯ ಮತ್ತು ಜಿಲ್ಲೆಗಳ ಪ್ರತಿನಿಧಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ (ವಿಸಿ) ನಡೆದ ಸಭೆಯ ಅಧ್ಯಕ್ಷತೆಯನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರ್ಯದರ್ಶಿ ಪ್ರೀತಿ ಸುದನ್ ವಹಿಸಿದ್ದರು. ಜಿಐಎಸ್ ಡ್ಯಾಶ್ಬೋರ್ಡ್, ಕೋವಿಡ್ -19 ಪೋರ್ಟಲ್ ಮತ್ತು ಮೀಸಲಾದ ಆರ್ಟಿ-ಪಿಸಿಆರ್ ರೆಫರಲ್ ಆ್ಯಪ್ನ ಕಾರ್ಯಚಟುವಟಿಕೆಯನ್ನು ಸಭೆಯಲ್ಲಿ ಚರ್ಚಿಸಲಾಯಿತು. ಸರ್ಕಾರದ ಕೋವಿಡ್ ತಡೆಗಟ್ಟುವ ಪ್ರಯತ್ನಗಳಿಗೆ ಸಹಾಯ ಮಾಡುವ ಸ್ವಯಂ ಮೌಲ್ಯಮಾಪನ ಸಾಧನವಾಗಿರುವ ಆರೋಗ್ಯ ಸೇತು ಆ್ಯಪ್ ಬಳಕೆಗೆ ಹೆಚ್ಚಿನ ಪ್ರಚಾರವನ್ನು ಮಾಡಬೇಕೆಂದು ಅವರು ರಾಜ್ಯಗಳನ್ನು ಒತ್ತಾಯಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರ್ಯದರ್ಶಿಯವರು ಕೋವಿಡ್ ನ ಹೊರತಾದ ಇತರ ಅಗತ್ಯ ವೈದ್ಯಕೀಯ ಆರೈಕೆಯನ್ನು ನಿರ್ಲಕ್ಷಿಸಬಾರದು ಎಂದು ಒತ್ತಿ ಹೇಳಿದರು. ಡಯಾಲಿಸಿಸ್, ಕ್ಯಾನ್ಸರ್ ಚಿಕಿತ್ಸೆ, ಮಧುಮೇಹಿಗಳು, ಗರ್ಭಿಣಿಯರು ಮತ್ತು ಹೃದಯ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಆರೈಕೆಯ ಅಗತ್ಯವಿರುವ ರೋಗಿಗಳಿಗೆ ಸಾಕಷ್ಟು ಆರೈಕೆಯನ್ನು ನೀಡಬೇಕು ಎಂದು ಪುನರುಚ್ಚರಿಸಲಾಯಿತು. ಜನರ ಸಾಮೀಪ್ಯದಲ್ಲಿರುವ ಸೇವೆಗಳು ಕಾರ್ಯಸಮರ್ಥವಾಗಿರುವುದನ್ನು ಮತ್ತು ಸೋಂಕುರಹಿತವಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕೆಂದು ರಾಜ್ಯಗಳಿಗೆ ಒತ್ತಾಯಿಸಲಾಯಿತು.
ಕೋವಿಡ್ -19 ಪ್ರಕರಣಗಳ ನಿರ್ವಹಣೆ ಕುರಿತು ಮಾತನಾಡಿದ ಡಾ. ಬಲರಾಮ್ ಭಾರ್ಗವ, ಕಾರ್ಯದರ್ಶಿ (ಡಿಎಚ್ಆರ್) ಮತ್ತು ಡಿಜಿ (ಐಸಿಎಂಆರ್) ಮಾದರಿಗಳ ಸಂಗ್ರಹ ಮತ್ತು ಅದರ ಜೊತೆಗಿನ ಫಾರ್ಮ್ಗಳನ್ನು ಭರ್ತಿ ಮಾಡುವಲ್ಲಿನ ಸೂಕ್ಷ್ಮತೆಯ ಮಹತ್ವವನ್ನು ಒತ್ತಿ ಹೇಳಿದರು. ಆರ್ಟಿ-ಪಿಸಿಆರ್ ಆ್ಯಪ್ ಅನ್ನು ಕಾರ್ಯಸಮರ್ಥಗೊಳಿಸಲಾಗಿದೆ ಮತ್ತು ಅದನ್ನು ತಕ್ಷಣವೇ ಬಳಸಬೇಕಾಗಿದೆ ಎಂದು ರಾಜ್ಯಗಳಿಗೆ ತಿಳಿಸಲಾಯಿತು.
ಈವರೆಗೆ ಒಟ್ಟು 7695 ಜನರನ್ನು ಗುಣಪಡಿಸಲಾಗಿದೆ. ಇದು ನಮ್ಮ ಒಟ್ಟು ಚೇತರಿಕೆಯ ಪ್ರಮಾಣವನ್ನು 24.5%ರಷ್ಟನ್ನಾಗಿ ಮಾಡಿದೆ. ದೃಢಪಡಿಸಿದ ಒಟ್ಟು ಪ್ರಕರಣಗಳ ಸಂಖ್ಯೆ ಈಗ 31,332 ಆಗಿದೆ.
ಕೋವಿಡ್-19ಗೆ ಸಂಬಂಧಿತ ತಾಂತ್ರಿಕ ಸಮಸ್ಯೆಗಳು, ಮಾರ್ಗಸೂಚಿಗಳು ಮತ್ತು ಸಲಹೆಗಳ ಎಲ್ಲಾ ಅಧಿಕೃತ ಮತ್ತು ಹೊಸ ಮಾಹಿತಿಗಾಗಿ ದಯವಿಟ್ಟು ಇಲಾಖೆಯ ಜಾಲತಾಣಕ್ಕೆ ನಿಯಮಿತವಾಗಿ ಭೇಟಿ ನೀಡಿ: https://www.mohfw.gov.in
ಕೋವಿಡ್-19 ಗೆ ಸಂಬಂಧಿಸಿದ ತಾಂತ್ರಿಕ ಪ್ರಶ್ನೆಗಳನ್ನು technquery.covid19[at]gov[dot]in, ಇತರ ಪ್ರಶ್ನೆಗಳನ್ನು ಕೇಳಲು ncov2019[at]gov[dot]in ಗೆ ಇಮೇಲ್ ಮಾಡಬಹುದು ಮತ್ರು @CovidIndiaSeva ಗೆ ಟ್ವೀಟ್ ಮಾಡಬಹುದು.
ಕೋವಿಡ್-19 ಬಗ್ಗೆ ಯಾವುದೇ ಪ್ರಶ್ನೆಗಳಿದ್ದಲ್ಲಿ, ದಯವಿಟ್ಟು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಾಯವಾಣಿ ಸಂಖ್ಯೆ: +91-11-23978046 ಅಥವಾ 1075 (ಟೋಲ್-ಫ್ರೀ). ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ಕೋವಿಡ್-19ಗೆ ಸಂಬಂಧಿಸಿದ ಸಹಾಯವಾಣಿ ಸಂಖ್ಯೆಗಳ ಪಟ್ಟಿ https://www.mohfw.gov.in/pdf/coronvavirushelplinenumber.pdf ನಲ್ಲಿಯೂ ಲಭ್ಯವಿದೆ.
***
(Release ID: 1619537)
Visitor Counter : 197
Read this release in:
English
,
Urdu
,
Hindi
,
Marathi
,
Assamese
,
Bengali
,
Punjabi
,
Gujarati
,
Odia
,
Tamil
,
Telugu
,
Malayalam