ನಾಗರೀಕ ವಿಮಾನಯಾನ ಸಚಿವಾಲಯ

403 ಲೈಫ್‌ಲೈನ್ ಉಡಾನ್ ವಿಮಾನಗಳಿಂದ ದೇಶಾದ್ಯಂತ ಅಗತ್ಯ ಹಾಗು ವೈದ್ಯಕೀಯ ಸಾಮಗ್ರಿಗಳ ಸರಬರಾಜು

Posted On: 28 APR 2020 4:03PM by PIB Bengaluru

403 ಲೈಫ್‌ಲೈನ್ ಉಡಾನ್ ವಿಮಾನಗಳಿಂದ ದೇಶಾದ್ಯಂತ ಅಗತ್ಯ ಹಾಗು ವೈದ್ಯಕೀಯ ಸಾಮಗ್ರಿಗಳ ಸರಬರಾಜು

 

ಏರ್ ಇಂಡಿಯಾ, ಅಲೈಯನ್ಸ್ ಏರ್, ಐಎಎಫ್ ಮತ್ತು ಖಾಸಗಿ ಸರಕು ವಾಹಕಗಳಿಂದ ದೇಶೀಯ ವಲಯದಲ್ಲಿ ಲೈಫ್‌ಲೈನ್ ಉಡಾನ್ ಯೋಜನೆಯಡಿಯಲ್ಲಿ 403 ವಿಮಾನಗಳ ಸಾಗಾಟವನ್ನು ನಿರ್ವಹಿಸಲಾಗಿದೆ. ಈ ಪೈಕಿ 235 ವಿಮಾನಗಳನ್ನು ಏರ್ ಇಂಡಿಯಾ ಮತ್ತು ಅಲೈಯನ್ಸ್ ಏರ್ ನಿರ್ವಹಿಸಿವೆ. ಏಪ್ರಿಲ್ 27, 2020 ರವರೆಗೆ ದೇಶಾದ್ಯಂತದ ಜನರಿಗೆ ಸುಮಾರು 748.68 ಟನ್ ಗಳಷ್ಟು ಅಗತ್ಯ ಮತ್ತು ವೈದ್ಯಕೀಯ ಸರಬರಾಜುಗಳನ್ನು ತಲುಪಿಸಲು ಲೈಫ್‌ಲೈನ್ ಉಡಾನ್ ವಿಮಾನಗಳು 3,97, 632 ಕಿ.ಮೀ.ಕ್ರಮಿಸಿವೆ. ಕೊವಿಡ್-19 ವಿರುದ್ಧದ ಭಾರತದ ಹೊರಾಟವನ್ನು ಬೆಂಬಲಿಸಲು ಅಗತ್ಯ ವೈದ್ಯಕೀಯ ಸರಕುಗಳನ್ನು ದೇಶದ ದೂರದ ಭಾಗಗಳಿಗೆ ಸಾಗಿಸಲು ಲೈಫ್‌ಲೈನ್ ಉಡಾನ್ ವಿಮಾನಗಳನ್ನು ಕೇಂದ್ರ ನಾಗರಿಕ ವಾಯುಯಾನ ಸಚಿವಾಲಯ ನಿರ್ವಹಿಸುತ್ತಿದೆ.

ಖಾಸಗಿ ವಿಮಾನ ಆಪರೇಟರ್‌ಗಳಾದ ಸ್ಪೈಸ್‌ ಜೆಟ್, ಬ್ಲೂ ಡಾರ್ಟ್, ಇಂಡಿಗೊ ಮತ್ತು ವಿಸ್ಟಾರಾಗಳ ವಾಣಿಜ್ಯ ವಿಮಾನಯಾನದಲ್ಲಿ ಸರಕು ಹಾರಾಟ ನಡೆಸುತ್ತಿವೆ. ಸ್ಪೈಸ್ ಜೆಟ್ ಏಪ್ರಿಲ್ 27, 2020 ರವರೆಗೆ 633 ಸರಕು ವಿಮಾನಗಳನ್ನು ಬಳಸಿದೆ, 11,09, 028 ಕಿ.ಮೀ ದೂರಕ್ರಮಿಸಿದೆ, ಮತ್ತು 4,637 ಟನ್ ಸರಕುಗಳನ್ನು ಸಾಗಿಸಿದೆ. ಈ ಪೈಕಿ 228 ಅಂತಾರಾಷ್ಟ್ರೀಯ ಸರಕು ವಿಮಾನಗಳು. ಏಪ್ರಿಲ್ 27, 2020 ರವರೆಗೆ ಬ್ಲೂ ಡಾರ್ಟ್ 219 ಸರಕು ವಿಮಾನಗಳನ್ನು 2,38,928 ಕಿ.ಮೀ ದೂರ ಕ್ರಮಿಸಲು ಮತ್ತು 3,636 ಟನ್ ಸರಕುಗಳನ್ನು ಸಾಗಿಸಲು ಬಳಸಿದೆ. ಇವುಗಳಲ್ಲಿ 10 ಅಂತರರಾಷ್ಟ್ರೀಯ ಸರಕು ವಿಮಾನಗಳು. ಇಂಡಿಗೊ ಏಪ್ರಿಲ್ 27, 2020 ರವರೆಗೆ 77,996 ಕಿ.ಮೀ ದೂರವನ್ನು ಒಳಗೊಂಡಂತೆ ಮತ್ತು 185 ಟನ್ ಗಳಷ್ಟು ಸರಕುಗಳನ್ನು ಸಾಗಿಸುವ ಮತ್ತು 17 ಅಂತರರಾಷ್ಟ್ರೀಯ ವಿಮಾನಯಾನಗಳನ್ನು ಒಳಗೊಂಡಂತೆ 50 ಸರಕು ವಿಮಾನಗಳ ಸಾಗಾಟವನ್ನು ನಿರ್ವಹಿಸಿದೆ. ಸರ್ಕಾರಕ್ಕೆ ಉಚಿತವಾಗಿ ಸಾಗಿಸುವ ವೈದ್ಯಕೀಯ ಸರಬರಾಜುಗಳೂ ಇದರಲ್ಲಿ ಸೇರಿವೆ. ವಿಸ್ಟಾರಾ ಏಪ್ರಿಲ್ 27, 2020 ರವರೆಗೆ 20 ಸರಕು ವಿಮಾನಗಳ ಮೂಲಕ 20,466 ಕಿ.ಮೀ ದೂರ ಕ್ರಮಿಸಿ 113 ಟನ್ ಸರಕುಗಳನ್ನು ಸಾಗಿಸಿದೆ.

ಅಂತರರಾಷ್ಟ್ರೀಯ ವಲಯದಲ್ಲಿ, ಔಷಧಗಳು, ವೈದ್ಯಕೀಯ ಉಪಕರಣಗಳು ಮತ್ತು ಕೋವಿಡ್ -19 ಪರಿಹಾರ ಸಾಮಗ್ರಿಗಳ ಸಾಗಣೆಗೆ ಪೂರ್ವ ಏಷ್ಯಾದೊಂದಿಗೆ ಸರಕು ವಾಯು ಸಂಪರ್ಕವನ್ನು ಸ್ಥಾಪಿಸಲಾಯಿತು. ಏರ್ ಇಂಡಿಯಾ ತಂದ ವೈದ್ಯಕೀಯ ಸರಕುಗಳ ಪ್ರಮಾಣ 609 ಟನ್ ಆಗಿದೆ. ಇವುಗಳ ಜೊತೆಗೆ, ಬ್ಲೂ ಡಾರ್ಟ್ ಗುವಾಂಗ್‌ವು ದಿಂದ ಸುಮಾರು 109 ಟನ್ ವೈದ್ಯಕೀಯ ಸರಬರಾಜುಗಳನ್ನು ಏಪ್ರಿಲ್ 14 ರಿಂದ ಏಪ್ರಿಲ್ 27 , 2020 ರವರೆಗೆ ಸಾಗಿಸಿ ತಂದಿದೆ. ಏಪ್ರಿಲ್ 25, 2020ರಂದು ಬ್ಲೂ ಡಾರ್ಟ್ ಶಾಂಘೈನಿಂದ 5 ಟನ್ ವೈದ್ಯಕೀಯ ಸರಕುಗಳನ್ನು ಸಾಗಿಸಿ ತಂದಿದೆ. ಸ್ಪೈಸ್‌ಜೆಟ್ ಏಪ್ರಿಲ್ 25 - ಏಪ್ರಿಲ್ 27, 2020 ರವರೆಗೆ ಶಾಂಘೈನಿಂದ 140 ಟನ್ ವೈದ್ಯಕೀಯ ಸರಬರಾಜುಗಳನ್ನು ಸಾಗಿಸಿ ತಂದಿದೆ , ಜೊತೆಗೆ ಹಾಂಗ್ ಕಾಂಗ್ ಮತ್ತು ಸಿಂಗಾಪುರದಿಂದ 13 ಟನ್ ವೈದ್ಯಕೀಯ ಸರಬರಾಜು ಮಾಡಿದೆ.

***



(Release ID: 1619316) Visitor Counter : 171