ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಿ ಹಾಗೂ ಕೆನಡಾ ಪ್ರಧಾನಮಂತ್ರಿ ನಡುವೆ ದೂರವಾಣಿ ಸಂಭಾಷಣೆ

Posted On: 28 APR 2020 9:49PM by PIB Bengaluru

ಪ್ರಧಾನಿ ಹಾಗೂ ಕೆನಡಾ ಪ್ರಧಾನಮಂತ್ರಿ ನಡುವೆ ದೂರವಾಣಿ ಸಂಭಾಷಣೆ

 

ಪ್ರಧಾನಮಂತ್ರಿಯವರು ಇಂದು ಕೆನಡಾದ ಪ್ರಧಾನಮಂತ್ರಿ ಘನತೆವೆತ್ತ ಜಸ್ಟಿನ್ ಟ್ರುಡೇರು ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದರು.

ಇಬ್ಬರೂ ನಾಯಕರು, ಕೋವಿಡ್ -19 ಮಹಾಮಾರಿಯ ಹಿನ್ನೆಲೆಯಲ್ಲಿ ಉದ್ಭವಿಸಿರುವ ಜಾಗತಿಕ ಪರಿಸ್ಥಿತಿಯ ಕುರಿತಂತೆ ಚರ್ಚಿಸಿದರು. ಇಬ್ಬರೂ ನಾಯಕರು ಸಂಶೋಧನಾ ಚಟುವಟಿಕೆಯಲ್ಲಿನ ಸಹಯೋಗ, ಪೂರೈಕೆ ಸರಪಣಿಯ ನಿರ್ವಹಣೆ, ಜಾಗತಿಕ ಏಕಮತ್ಯ ಮತ್ತು ಸಹಯೋಗದ ಮಹತ್ವಕ್ಕೆ ಸಮ್ಮತಿ ವ್ಯಕ್ತಪಡಿಸಿದರು.

ಕೆನಡಾದಲ್ಲಿರುವ ಭಾರತೀಯ ಪ್ರಜೆಗಳು ಅದರಲ್ಲೂ ಭಾರತೀಯ ವಿದ್ಯಾರ್ಥಿಗಳಿಗೆ ನೀಡಿದ ಬೆಂಬಲ ಮತ್ತು ನೆರವಿಗಾಗಿ ಕೆನಡಾದ ಪ್ರಧಾನಮಂತ್ರಿಯವರಿಗೆ ಪ್ರಧಾನಿ ಧನ್ಯವಾದ ಅರ್ಪಿಸಿದರು. ಪ್ರಧಾನಮಂತ್ರಿ ಟ್ರುಡೇರು ಅವರು, ಭಾರತದಲ್ಲಿರುವ ಕೆನಡಾ ಪ್ರಜೆಗಳಿಗೆ ಭಾರತ ಸರ್ಕಾರ ನೀಡಿರುವ ಬೆಂಬಲಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕೆನಡಾ ಸೇರಿದಂತೆ ವಿಶ್ವದ ನಾಗರಿಕರಿಗೆ ನೆರವಾಗಲು ಭಾರತದ ಉತ್ತಮ ದಕ್ಷತೆಯ ಔಷಧ ವಲಯದಲ್ಲಿನ ಉತ್ಪಾದಕ ಸಾಮರ್ಥ್ಯವು ನಿರಂತರ ಲಭ್ಯವಿರುತ್ತದೆ ಎಂಬ ಭರವಸೆಯನ್ನು ಪ್ರಧಾನಿ ನೀಡಿದರು.

ಇಬ್ಬರೂ ನಾಯಕರು ಭಾರತ ಮತ್ತು ಕೆನಡಾ ನಡುವಿನ ಪಾಲುದಾರಿಕೆ ಅದರಲ್ಲೂ ಕೋವಿಡ್ 19ಗೆ ಚಿಕಿತ್ಸಕ ಪರಿಹಾರ ಅಥವಾ ಲಸಿಕೆಯ ಸಂಶೋಧನೆಯ ಗುರಿಯೊಂದಿಗೆ ಸಂಶೋಧನೆ ಮತ್ತು ತಂತ್ರಜ್ಞಾನದ ಸಹಯೋಗವು ಸಾಂಕ್ರಾಮಿಕದ ವಿರುದ್ಧದ ಹೋರಾಟದ ಜಾಗತಿಕ ಪ್ರಯತ್ನಗಳಿಗೆ ಅಪಾರ ಕೊಡುಗೆ ನೀಡಲಿದೆ ಎಂಬುದಕ್ಕೆ ಸಮ್ಮತಿ ಸೂಚಿಸಿದರು.

***(Release ID: 1619155) Visitor Counter : 208