ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಕೋವಿಡ್-19 ಹೊಸ ಮಾಹಿತಿ
Posted On:
28 APR 2020 6:32PM by PIB Bengaluru
ಕೋವಿಡ್-19 ಹೊಸ ಮಾಹಿತಿ
ಶ್ರೇಣೀಕೃತ, ಹತೋಟಿಯಲ್ಲಿಡುವ ಮತ್ತು ಸಕ್ರಿಯ ವಿಧಾನದ ಮೂಲಕ, ಕೋವಿಡ್-19ರ ತಡೆಗಟ್ಟುವಿಕೆಗೆ, ಮತ್ತು ನಿರ್ವಹಣೆಗಾಗಿ ರಾಜ್ಯ ಸರ್ಕಾರಗಳು ಹಾಗು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಭಾರತ ಸರ್ಕಾರವು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ಇವುಗಳನ್ನು ನಿಯಮಿತವಾಗಿ ಉನ್ನತ ಮಟ್ಟದಲ್ಲಿ ಪರಿಶೀಲಿಸಲಾಗುತ್ತಿದೆ ಮತ್ತು ಮೇಲ್ವಿಚಾರಣೆ ಮಾಡಲಾಗುತ್ತಿದೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಡಾ.ಹರ್ಷ್ ವರ್ಧನ್ ರವರು ಇಂದು ಜೈವಿಕ ತಂತ್ರಜ್ಞಾನ ವಿಭಾಗದ ಮತ್ತು ಅದರ 18 ಸ್ವಾಯತ್ತ ಸಂಸ್ಥೆಗಳು ಮತ್ತು ಸಾರ್ವಜನಿಕ ವಲಯದ ಉದ್ದಿಮೆಗಳ ನಿರ್ದೇಶಕರು/ ಮುಖ್ಯಸ್ಥರುಗಳೊಡನೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂಸ್ಥೆಗಳ ುನಡೆಸಿದ ಸಂಶೋಧನಾ ಕಾರ್ಯಗಳನ್ನು ಪರಿಶೀಲಿಸಿದರು. 'ಮೇಕ್ ಇನ್ ಇಂಡಿಯಾ' ಅಡಿಯಲ್ಲಿ ಕೋವಿಡ್-19 ಗಾಗಿ ಪ್ರತಿಕಾಯ ಪತ್ತೆ ಕಿಟ್ಗಳು, ನೈಜ-ಸಮಯದ ಪಿಸಿಆರ್ ಆಧಾರಿತ ಪತ್ತೆ ಕಿಟ್ಗಳು ಮತ್ತು ಲಸಿಕೆಗಳ ಅಭಿವೃದ್ಧಿಯನ್ನು ತ್ವರಿತಗೊಳಿಸಲು ಅವರು ನಿರ್ದೇಶಿಸಿದ್ದಾರೆ.
ದೆಹಲಿಯ ಕೋವಿಡ್-19 ಕಣ್ಗಾವಲಿನ ಸ್ಥಿತಿಯನ್ನು ದೆಹಲಿಯ ಲೆಫ್ಟನೆಂಟ್ ಗವರ್ನರ್ ಶ್ರೀ ಅನಿಲ್ ಬೈಜಾಲ್, ದೆಹಲಿಯ ಆರೋಗ್ಯ ಸಚಿವರಾದ ಶ್ರೀ ಸತ್ಯೇಂದರ್ ಜೈನ್, ಎಂಸಿಡಿ ಆಯುಕ್ತರು, ದೆಹಲಿ, ಕೇಂದ್ರ/ ರಾಜ್ಯದ ಎಲ್ಲಾ ಜಿಲ್ಲೆಗಳ ಡಿಸಿಪಿಗಳು ಮತ್ತು ಜಿಲ್ಲಾ ಕಣ್ಗಾವಲು ಅಧಿಕಾರಿಗಳು ಮತ್ತು ಸರ್ಕಾರಿ ಆಸ್ಪತ್ರೆಗಳ ಮುಖ್ಯಸ್ಥರು ಪಾಲ್ಗೊಂಡಿದ್ದ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಕೇಂದ್ರ ಆರೋಗ್ಯ ಸಚಿವರು ಪರಿಶೀಲಿಸಿದರು. ಪರಿಶೀಲನಾ ಸಭೆಯಲ್ಲಿ ಶ್ರೀ ರಾಜೇಶ್ ಭೂಷಣ್, ಒಎಸ್ ಡಿ (ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ), ಡಾ.ರಾಜೀವ್ ಗರ್ಗ್, ಡಿಜಿಹೆಚ್ಎಸ್ (ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ) ಮತ್ತು ಡಾ ಎಸ್ ಕೆ ಸಿಂಗ್, ನಿರ್ದೇಶಕರು, ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (ಎನ್ಸಿಡಿಸಿ) ಉಪಸ್ಥಿತರಿದ್ದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಅತ್ಯಂತ ಸೌಮ್ಯ / ಪೂರ್ವ-ರೋಗಲಕ್ಷಣದ ರೋಗಿಗಳಿಗೆ ಮನೆ ಪ್ರತ್ಯೇಕತೆಯ ಬಗ್ಗೆ ಮಾರ್ಗಸೂಚಿಗಳನ್ನು ಹೊರಡಿಸಿದೆ. ಸ್ವಯಂ-ಪ್ರತ್ಯೇಕತೆಗಾಗಿ ತಮ್ಮ ನಿವಾಸದಲ್ಲಿ ಅಗತ್ಯವಾದ ಸೌಲಭ್ಯವನ್ನು ಹೊಂದಿರುವ ರೋಗಿಗಳು ಮನೆ ಪ್ರತ್ಯೇಕತೆಯ ಆಯ್ಕೆಯನ್ನು ಹೊಂದಿರುತ್ತಾರೆ. ಈ ಮಾರ್ಗಸೂಚಿಗಳು ಏಪ್ರಿಲ್ 7, 2020 ರಂದು ಇಲಾಖೆಯು ಹೊರಡಿಸಿದ ಕೋವಿಡ್-19 ನ ಶಂಕಿತ / ದೃಢಪಡಿಸಿದ ಪ್ರಕರಣದ ಸೂಕ್ತ ನಿರ್ವಹಣೆಯ ಮಾರ್ಗಸೂಚಿಗಳಿಗೆ ಹೆಚ್ಚುವರಿಯಾಗಿ ಇರುತ್ತವೆ. ಈ ಮಾರ್ಗಸೂಚಿಗಳು ಕೊಂಡಿಯಲ್ಲಿ https://www.mohfw.gov.in/pdf/GuidelinesforHomeIsolationofverymildpresymptomaticCOVID19cases.pdf . ಲಭ್ಯವಿವೆ
ಕೋವಿಡ್-19 ಗಾಗಿ ಪ್ಲಾಸ್ಮಾ ಚಿಕಿತ್ಸೆಗೆ ಸಂಬಂಧಿಸಿದಂತೆ, ಪ್ಲಾಸ್ಮಾ ಥೆರಪಿ ಸೇರಿದಂತೆ ಕೋವಿಡ್-19 ಗೆ ಪ್ರಸ್ತುತ ಯಾವುದೇ ಅನುಮೋದಿತ ಚಿಕಿತ್ಸೆಗಳಿಲ್ಲ ಎಂದು ಐಸಿಎಂಆರ್ ಈಗಾಗಲೇ ಸ್ಪಷ್ಟಪಡಿಸಿದೆ. ಪ್ರಯೋಗಿಸಲಾಗುತ್ತಿರುವ ಅನೇಕ ಚಿಕಿತ್ಸೆಗಳಲ್ಲಿ ಇದೂ ಒಂದು. ಆದಾಗ್ಯೂ, ಇದು ಚಿಕಿತ್ಸೆಯಾಗಿ ಬೆಂಬಲಿಸಲು ಯಾವುದೇ ಪುರಾವೆಗಳಿಲ್ಲ. ಚಿಕಿತ್ಸೆಯ ಪರಿಣಾಮಕಾರಿತ್ವವನ್ನು ಮೌಲ್ಯಮಾಪನ ಮಾಡಲು ಐಸಿಎಂಆರ್ ರಾಷ್ಟ್ರೀಯ ಅಧ್ಯಯನವನ್ನು ಸಹ ಪ್ರಾರಂಭಿಸಿದೆ. ಆದಾಗ್ಯೂ, ಐಸಿಎಂಆರ್ ತನ್ನ ಅಧ್ಯಯನವನ್ನು ಮುಕ್ತಾಯಗೊಳಿಸುವವರೆಗೆ ಮತ್ತು ದೃಢವಾದ ವೈಜ್ಞಾನಿಕ ಪುರಾವೆಗಳು ಲಭ್ಯವಾಗುವವರೆಗೆ, ಇದನ್ನು ಸಂಶೋಧನೆ ಮತ್ತು ಪ್ರಯೋಗ ಉದ್ದೇಶಗಳನ್ನು ಹೊರತುಪಡಿಸಿ ಬಳಸಬಾರದು ಎಂದು ಸ್ಪಷ್ಟಪಡಿಸುವ ಅಗತ್ಯವಿದೆ. ವಾಸ್ತವವಾಗಿ, ಪ್ಲಾಸ್ಮಾ ಚಿಕಿತ್ಸೆಯ ಬಳಕೆಯು ಮಾರಣಾಂತಿಕ ತೊಡಕುಗಳನ್ನು ಹೊಂದಿರಬಹುದು. ಅಧ್ಯಯನದ ಉದ್ದೇಶಗಳಿಗೆ ಹೊರತಾಗಿ ಪ್ಲಾಸ್ಮಾ ಚಿಕಿತ್ಸೆಯ ಬಳಕೆಗಾಗಿ ಐಸಿಎಂಆರ್ ಈಗಾಗಲೇ ಈ ಬಗ್ಗೆ ವಿವರವಾದ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಪ್ರಸ್ತುತ, ಈ ಹಿಂದೆ ಪ್ರಕರಣಗಳು ವರದಿಯಾಗಿದ್ದ 17 ಜಿಲ್ಲೆಗಳಲ್ಲಿ, ಈಗ ಕಳೆದ 28 ದಿನಗಳಿಂದ ಯಾವುದೇ ಹೊಸ ಪ್ರಕರಣಗಳು ವರದಿಯಾಗಿಲ್ಲ. ಈ ಜಿಲ್ಲೆಗಳ ಸಂಖ್ಯೆಯಲ್ಲಿ 1 ಹೆಚ್ಚಾಗಿದೆ (ಎರಡು ಹೊಸ ಜಿಲ್ಲೆಗಳನ್ನು ಸೇರಿಸಲಾಗಿದೆ, ಆದರೆ ಹಿಂದಿನ ಪಟ್ಟಿಯಿಂದ ಒಂದನ್ನು ಕೈಬಿಡಲಾಗಿದೆ). ಈ ಪಟ್ಟಿಗೆ ಸೇರ್ಪಡೆಗೊಂಡ ಜಿಲ್ಲೆಗಳು ಕಾಲಿಂಪಾಂಗ್ (ಪಶ್ಚಿಮ ಬಂಗಾಳ) ಮತ್ತು ವಯನಾಡ್ (ಕೇರಳ). ಈ ಪಟ್ಟಿಯಿಂದ ತೆಗೆದುಹಾಕಲ್ಪಟ್ಟ ಜಿಲ್ಲೆ ಲಖಿಸರೈ (ಬಿಹಾರ).
ಪ್ರಸ್ತುತ, 6,868 ಜನರನ್ನು ಗುಣಪಡಿಸಲಾಗಿದೆ ಇದರಿಂದ ಚೇತರಿಕೆಯ ಪ್ರಮಾಣವು 23.3% ರಷ್ಟು ಆಗಿದೆ ಭಾರತದಲ್ಲಿ ಒಟ್ಟು ಧೃಡಪಟ್ಟ ಕೋವಿಡ್-19 ಸೋಂಕಿತರ ಸಂಖ್ಯೆಯು 29,435 ಆಗಿದೆ.
ಕೋವಿಡ್-19ಗೆ ಸಂಬಂಧಿತ ತಾಂತ್ರಿಕ ಸಮಸ್ಯೆಗಳು, ಮಾರ್ಗಸೂಚಿಗಳು ಮತ್ತು ಸಲಹೆಗಳ ಎಲ್ಲಾ ಅಧಿಕೃತ ಮತ್ತು ಹೊಸ ಮಾಹಿತಿಗಾಗಿ ದಯವಿಟ್ಟು ಇಲಾಖೆಯ ಜಾಲತಾಣಕ್ಕೆ ನಿಯಮಿತವಾಗಿ ಭೇಟಿ ನೀಡಿ: https://www.mohfw.gov.in
ಕೋವಿಡ್-19 ಗೆ ಸಂಬಂಧಿಸಿದ ತಾಂತ್ರಿಕ ಪ್ರಶ್ನೆಗಳನ್ನು technquery.covid19[at]gov[dot]in ಮತ್ತು ಇತರ ಪ್ರಶ್ನೆಗಳನ್ನು ಕೇಳಲು ncov2019[at]gov[dot]in ಗೆ ಇಮೇಲ್ ಮಾಡಬಹುದು.
ಕೋವಿಡ್-19 ಬಗ್ಗೆ ಯಾವುದೇ ಪ್ರಶ್ನೆಗಳಿದ್ದಲ್ಲಿ, ದಯವಿಟ್ಟು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಾಯವಾಣಿ ಸಂಖ್ಯೆ. : +91-11-23978046 ಅಥವಾ 1075 (ಟೋಲ್-ಫ್ರೀ). ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ಕೋವಿಡ್-19ಗೆ ಸಂಬಂಧಿಸಿದ ಸಹಾಯವಾಣಿ ಸಂಖ್ಯೆಗಳ ಪಟ್ಟಿ https://www.mohfw.gov.in/pdf/coronvavirushelplinenumber.pdf ನಲ್ಲಿಯೂ ಲಭ್ಯವಿದೆ.
***
(Release ID: 1619144)
Visitor Counter : 236
Read this release in:
English
,
Urdu
,
Hindi
,
Marathi
,
Assamese
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam