ನೌಕಾ ಸಚಿವಾಲಯ

ಭಾರತದ ಬಂದರುಗಳಲ್ಲಿ ಸಿಬ್ಬಂದಿ ಬದಲಾವಣೆಯ ಬಗ್ಗೆ ವಿವಿಧ ಸಂಘಗಳೊಂದಿಗೆ ಶ್ರೀ ಮನ್ಸುಖ್ ಮಾಂಡವಿಯಾ ಸಂವಾದ

Posted On: 28 APR 2020 1:30PM by PIB Bengaluru

ಭಾರತದ ಬಂದರುಗಳಲ್ಲಿ ಸಿಬ್ಬಂದಿ ಬದಲಾವಣೆಯ ಬಗ್ಗೆ ವಿವಿಧ ಸಂಘಗಳೊಂದಿಗೆ ಶ್ರೀ ಮನ್ಸುಖ್ ಮಾಂಡವಿಯಾ ಸಂವಾದ

ಪರಿಸ್ಥಿತಿ ಅನುಕೂಲಕರವಾದಂತೆ ಸಿಲುಕಿಕೊಂಡಿರುವ ಭಾರತೀಯ ಸಮುದ್ರಯಾನಕಾರರನ್ನು ಶೀಘ್ರವಾಗಿ ಸ್ಥಳಾಂತರಿಸುವುದಾಗಿ ಶ್ರೀ ಮನ್ಸುಖ್ ಮಾಂಡವಿಯಾ ಭರವಸೆ

 

ಭಾರತೀಯ ಬಂದರುಗಳಲ್ಲಿ ಸಿಬ್ಬಂದಿ ಬದಲಾವಣೆಯ ಬಗ್ಗೆ ಹಾಗೂ ಹಡಗು ಲೈನರ್‌ಗಳು, ಶಿಪ್ಪಿಂಗ್ ಕಂಪನಿಗಳು, ಮೆರಿಟೈಮ್ ಸಂಘಗಳು, ನೌಕಾ ಒಕ್ಕೂಟಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಶಿಪ್ಪಿಂಗ್ ಕೇಂದ್ರ ನೌಕಾಯಾ ರಾಜ್ಯ ಸಚಿವ (ಸ್ವ/ನಿ) ಶ್ರೀ ಮನ್ಸುಖ್ ಮಂದಾವಿಯಾ ಅವರು ಸಂವಹನ ನಡೆಸಿದರು ಮತ್ತು ಕೆಲಸ ಮಾಡುತ್ತಿರುವ ಅಂತರರಾಷ್ಟ್ರೀಯ ಗಡಿಯಲ್ಲಿ ಸಿಲುಕಿಕೊಂಡಿರುವ ಭಾರತೀಯ ನೌಕೆಗಳ ಸಮುದ್ರಯಾನಕಾರರ ಪರಿಸ್ಥಿತಿಯನ್ನು ಮರುಪರಿಶೀಲಿಸಿದರು

ವಿದೇಶದಲ್ಲಿ ಸಿಲುಕಿರುವ ಭಾರತೀಯ ಸಮುದ್ರಯಾನಕಾರರ ಸ್ಥಳಾಂತರಿಸುವ ಯೋಜನೆಗಾಗಿ, ಸಿಲುಕಿರುವವರ ವಿವರಗಳನ್ನು ಒದಗಿಸುವಂತೆ ಸಚಿವ ಶ್ರೀ ಮಾಂಡವಿಯಾ ಅವರು ನಿರ್ದೇಶನ ನೀಡಿದರು. ಪರಿಸ್ಥಿತಿ ಅನುಕೂಲಕರವಾದಾಗ ಸಿಕ್ಕಿಬಿದ್ದ ಭಾರತೀಯ ನೌಕಾ ಉದ್ಯೋಗಿಗಳನ್ನು ಶೀಘ್ರವಾಗಿ ಸ್ಥಳಾಂತರಿಸುವಂತೆ ವ್ಯವಸ್ಥೆ ಮಾಡಲಾಗುವುದು ಎಂದು ವಿವಿಧ ಸಂಘಗಳಿಗೆ ಸಚಿವ ಶ್ರೀ ಮಾಂಡವಿಯಾ ಭರವಸೆ ನೀಡಿದರು. ಸುಗಮ ಪೂರೈಕೆ ಸರಪಳಿ ಆಂದೋಲನಕ್ಕೆ ಸಮುದ್ರಯಾನಗಾರರ ಮಹತ್ವವನ್ನು ಸಚಿವ ಶ್ರೀ ಮಾಂಡವಿಯಾ ಒಪ್ಪಿಕೊಂಡರು. ಈ ನಿರ್ಣಾಯಕ ಮತ್ತು ಪರೀಕ್ಷಾ ಕಾಲದಲ್ಲಿ ಅವರ ಕಾರ್ಯವನ್ನು ಶ್ಲಾಘಿಸಿದರು ಮತ್ತು ನೌಕಾ ಉದ್ಯೋಗಿಗಳು / ಸಮುದ್ರಯಾನಗಾರರು ಎದುರಿಸುತ್ತಿರುವ ಸವಾಲುಗಳನ್ನು ಸಚಿವ ಶ್ರೀ ಮಾಂಡವಿಯಾ ಅವರು ಒಪ್ಪಿಕೊಂಡರು.

ಭಾರತೀಯ ಬಂದರುಗಳಲ್ಲಿ ನೌಕಾ ಸಿಬ್ಬಂದಿಗಳಿಗೆ ಹಾಜರಿಗಾಗಿ ಸೈನ್ ಆನ್ ಮತ್ತು ಸೈನ್ ಆಫ್ ಪ್ರಕ್ರಿಯೆಯನ್ನು ಸರಾಗಗೊಳಿಸುವಂತೆ ನೌಕಾಯಾನ ಸಚಿವಾಲಯದ ಅಧಿಕಾರಿಗಳಿಗೆ ಸಚಿವ ಶ್ರೀ ಮಾಂಡವಿಯಾ ನಿರ್ದೇಶನ ನೀಡಿದರು.

ಭಾರತೀಯ ರಾಷ್ಟ್ರೀಯ ಹಡಗು ಮಾಲೀಕರ ಸಂಘ (ಐಎನ್‌ಎಸ್‌ಎ), ಮ್ಯಾರಿಟೈಮ್ ಅಸೋಸಿಯೇಶನ್ ಆಫ್ ನೇಷನ್ವೈಡ್ ಶಿಪ್ಪಿಂಗ್ ಏಜೆನ್ಸಿಗಳು - ಭಾರತ (ಮಾನ್ಸಾ), ನ್ಯಾಷನಲ್ ಯೂನಿಯನ್ ಆಫ್ ಸೀಫರರ್ಸ್ ಆಫ್ ಇಂಡಿಯಾ (ಎನ್‌ಯುಎಸ್‌ಐ), ದಿ ಇಂಡಿಯನ್ ಮ್ಯಾರಿಟೈಮ್ ಫೌಂಡೇಶನ್ (ಐಎಂಎಫ್), ದಿ ಮ್ಯಾರಿಟೈಮ್ ಯೂನಿಯನ್ ಆಫ್ ಇಂಡಿಯಾ (ಎಂಯುಐ), ದಿ ಮ್ಯಾರಿಟೈಮ್ ಅಸೋಸಿಯೇಶನ್ ಆಫ್ ಶಿಪ್ ಮಾಲೀಕರ ಹಡಗು ವ್ಯವಸ್ಥಾಪಕರು ಮತ್ತು ಏಜೆಂಟರು (ಮಾಸ್ಸಾ) ಇತ್ಯಾದಿ. ವಿವಿಧ ಸಂಘಟನೆಗಳ ಪದಾಧಿಕಾರಿಗಳು ವೀಡಿಯೊ ಸಮ್ಮೇಳನದಲ್ಲಿ ಭಾಗವಹಿಸಿದರು.

***



(Release ID: 1619075) Visitor Counter : 198