ರೈಲ್ವೇ ಸಚಿವಾಲಯ
ಕೋವಿಡ್ ರೈಲ್ವೇ ತುರ್ತು ಘಟಕದಿಂದ ದಿನನಿತ್ಯ ಸುಮಾರು 13,000 ವಿಚಾರಣೆ, ಕೋರಿಕೆ ಹಾಗು ಸಲಹೆಗಳಿಗೆ ಪ್ರತಿಕ್ರಿಯೆ
Posted On:
27 APR 2020 2:30PM by PIB Bengaluru
ಕೋವಿಡ್ ರೈಲ್ವೇ ತುರ್ತು ಘಟಕದಿಂದ ದಿನನಿತ್ಯ ಸುಮಾರು 13,000 ವಿಚಾರಣೆ, ಕೋರಿಕೆ ಹಾಗು ಸಲಹೆಗಳಿಗೆ ಪ್ರತಿಕ್ರಿಯೆ
ಸಾರ್ವಜನಿಕರಿಂದ ಬಂದ ಸಲಹೆಗಳನ್ನು ಅಳವಡಿಸಿಕೊಂಡು ರೈಲ್ವೇಯಿಂದ ಪ್ರಮುಖ ಸರಕುಗಳ ಪೂರೈಕೆ
ಸಲಹೆಗಳಿಗೆ ತ್ವರಿತ ಪ್ರತಿಕ್ರಿಯೆ ಮತ್ತು ಕುಂದು ಕೊರತೆಗಳ ಪರಿಹಾರದಿಂದ ರೈಲ್ವೇಗೆ ಮೆಚ್ಚುಗೆಯ ಅಭಿನಂದನೆ
ಕೋವಿಡ್ -19 ಅಂಗವಾಗಿ ಜಾರಿಯಲ್ಲಿರುವ ಲಾಕ್ ಡೌನ್ ಅವಧಿಯಲ್ಲಿ ಭಾರತೀಯ ರೈಲ್ವೇಯು ಪ್ರಯಾಣಿಕರು ಮತ್ತು ಎಲ್ಲಾ ವಾಣಿಜ್ಯಿಕ ಗ್ರಾಹಕರ ಹಿತಾಸಕ್ತಿಗಳನ್ನು ಕಾಪಾಡಲು 360 ಡಿಗ್ರಿ ಕ್ರಮಗಳನ್ನು ಕೈಗೊಂಡು ರಾಷ್ಟ್ರೀಯ ಪೂರೈಕೆ ಸರಪಳಿಯನ್ನು ಚಲನಶೀಲವನ್ನಾಗಿಟ್ಟಿತು
ಪ್ರಯಾಣಿಕರ ಕಷ್ಟಗಳನ್ನು ನಿವಾರಿಸಲು, ಸಕಾಲದಲ್ಲಿ ಸರಕುಗಳನ್ನು ಪೂರೈಸಲು , ದೇಶಾದ್ಯಂತ ಪಾರ್ಸೆಲ್ ಗಳು ಮತ್ತು ವೈದ್ಯಕೀಯ ಪೂರೈಕೆಗಳನ್ನು ಖಾತ್ರಿಪಡಿಸಲು ರೈಲ್ವೇ ಕೈಗೊಂಡ ಉಪಕ್ರಮಗಳು ವಿವಿಧ ವರ್ಗಗಳ ಜನತೆಯಿಂದ ಮೆಚ್ಚುಗೆ ಗಳಿಸಿವೆ
ಭಾರತೀಯ ರೈಲ್ವೇಯು ಪ್ರಯಾಣಿಕರು ಮತ್ತು ಎಲ್ಲಾ ವಾಣಿಜ್ಯಿಕ ಗ್ರಾಹಕರ ಹಿತಾಸಕ್ತಿಗಳನ್ನು ಕಾಪಾಡಲು 360 ಡಿಗ್ರಿ ಕ್ರಮಗಳನ್ನು ಕೈಗೊಂಡು ರಾಷ್ಟ್ರೀಯ ಪೂರೈಕೆ ಸರಪಳಿಯನ್ನು ಚಲನಶೀಲವನ್ನಾಗಿಟ್ಟಿತು.ಕೋವಿಡ್ -19 ಪ್ರಸಾರ ನಿಯಂತ್ರಿಸಲು ,ಭಾರತೀಯ ರೈಲ್ವೇಯು ಲಾಕ್ ಡೌನ್ 1 ಮತ್ತು 2 ರಲ್ಲಿ ಪ್ರಯಾಣಿಕ ರೈಲುಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿತು.ಆದರೆ ಇದು ರೈಲ್ವೇಯ ಗ್ರಾಹಕರನ್ನು, ಪ್ರಯಾಣಿಕರನ್ನು ತಲುಪುವ ಕಾರ್ಯಾಚರಣೆ ಮಿತಿಗೊಳ್ಳಲಿಲ್ಲ. ಲಾಕ್ ಡೌನ್ ನೊಂದಿಗೆ ರೈಲ್ವೇಯು ಜನತೆಗೆ ತಕ್ಷಣಕ್ಕೆ ಉತ್ತರ ಕೊಡಲು ಒಂದು ಘಟಕ ಹೊಂದಬೇಕೆಂಬ ಭಾವನೆ ಮೊಳೆಯಿತು. ಈ ಕಾರಣದಿಂದ ಕೋವಿಡ್ ಗಾಗಿ ರೈಲ್ವೇ ತುರ್ತು ಘಟಕವನ್ನು ಸ್ಥಾಪಿಸಲಾಯಿತು.
ಕೋವಿಡ್ ಗಾಗಿ ರೈಲ್ವೇ ತುರ್ತು ಘಟಕ ಎಂಬುದು ಸಮಗ್ರ ರಾಷ್ಟ್ರ ವ್ಯಾಪೀ ಘಟಕವಾಗಿದ್ದು, ರೈಲ್ವೇ ಮಂಡಳಿಯಿಂದ ಹಿಡಿದು ವಿಭಾಗಗಳವರೆಗೆ ಸುಮಾರು 400 ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಹೊಂದಿದೆ. ಲಾಕ್ ಡೌನ್ ಅವಧಿಯಲ್ಲಿ ಈ ಘಟಕವು ಸುಮಾರು 13,000 ವಿಚಾರಣೆಗಳು, ಕೋರಿಕೆಗಳು ಮತ್ತು ಸಲಹೆಗಳನ್ನು ದಿನನಿತ್ಯ ಐದು ಸಂಪರ್ಕ ಮತ್ತು ಹಿಮ್ಮಾಹಿತಿ ವೇದಿಕೆಗಳಾದ – ಸಹಾಯವಾಣಿಗಳು 139, ಮತ್ತು 138, ಸಾಮಾಜಿಕ ಮಾಧ್ಯಮ (ವಿಶೇಷವಾಗಿ ಟ್ವಿಟರ್), ಇ-ಮೈಲ್ (railmadad@rb.railnet.gov.in) ಹಾಗು ಸಿ.ಪಿ.ಜಿ.ಆರ್.ಎ.ಎಂ.ಎಸ್. ಮೂಲಕ ನಿಭಾಯಿಸುತ್ತಿತ್ತು. ಸುಮಾರು 90% ಗೂ ಅಧಿಕ ವಿಚಾರಣೆಗಳಿಗೆ ಒಬ್ಬರಿಂದ ಒಬ್ಬರಿಗೆ ನೇರ ಆಧಾರದಲ್ಲಿ ಕರೆ ಮಾಡಿದವರ ಸ್ಥಳೀಯ ಭಾಷೆಯಲ್ಲಿ ದೂರವಾಣಿ ಮೂಲಕ ಉತ್ತರಿಸಲಾಗುತ್ತಿತ್ತು. ಇದರಿಂದಾಗಿ 24 ಗಂಟೆ ಕಾಲವೂ ಕಾರ್ಯಾಚರಿಸುವ ಭಾರತೀಯ ರೈಲ್ವೇಯ ಕೋವಿಡ್ ಗಾಗಿರುವ ತುರ್ತು ಘಟಕ ತನ್ನ ಕಿವಿಗಳನ್ನು ತಳಮಟ್ಟದವರೆಗೂ ತಲುಪುವಂತೆ ವಿಸ್ತರಿಸಿತ್ತು, ಇದರಿಂದ ರೈಲ್ವೇ ಗ್ರಾಹಕರು ಹಾಗು ಸಾಮಾನ್ಯ ನಾಗರಿಕರ ದೂರು ದುಮ್ಮಾನಗಳನ್ನು ಅದಕ್ಕೆ ಓಡು ಗಾಲಿನಲ್ಲಿ ಪರಿಹರಿಸಲು ಸಾಧ್ಯವಾಯಿತು. ಅದರ ತುರ್ತು ಪ್ರತಿಕ್ರಿಯೆಗಾಗಿ ರೈಲ್ವೇಯು ದೇಶಾದ್ಯಂತ ಮೆಚ್ಚುಗೆಯನ್ನು ಗಳಿಸಿತು.
ರೈಲ್ ಮಾ ಡ್ಯಾಡ್ ಸಹಾಯವಾಣಿ 139 ಲಾಕ್ ಡೌನಿನ ಮೊದಲ ನಾಲ್ಕು ವಾರದಲ್ಲಿ 2,30, 000 ವಿಚಾರಣೆಗಳಿಗೆ ಉತ್ತರಿಸಿದೆ. ಜೊತೆಗೆ ಇದರ ಐ.ವಿ.ಆರ್.ಎಸ್. ಸೌಲಭ್ಯವೂ ವಿಚಾರಣೆಗಳಿಗೆ ಉತ್ತರ ನೀಡಿದೆ. 138 ಮತ್ತು 139 ಕ್ಕೆ ಬಂದ ವಿಚಾರಣೆಗಳು ಹೆಚ್ಚಿನವು ರೈಲು ಸೇವೆ ಆರಂಭಕ್ಕೆ ಸಂಬಂಧಪಟ್ಟವು. ಮತ್ತು ಮರುಪಾವತಿ ನಿಯಮಗಳ ಸಡಿಲಿಕೆಗಳಿಗೆ ಸಂಬಂಧಿಸಿದವು.(ಇದನ್ನೂ ಸಾರ್ವಜನಿಕರಿಂದ ಬಂದ ಹಿಮ್ಮಾಹಿತಿ ಆಧಾರದಲ್ಲಿ ಒದಗಿಸಲಾಗಿತ್ತು.) ಈ ಕಠಿಣ ಸಮಯದಲ್ಲಿ ರೈಲ್ವೇಯ ಪ್ರಯತ್ನಗಳ ಬಗ್ಗೆ ಸಾಮಾಜಿಕ ತಾಣಗಳು ಮೆಚ್ಚುಗೆಯಿಂದ ದ ತುಂಬಿ ತುಳುಕುತ್ತಿದ್ದವು.
ಇದೇ ಅವಧಿಯಲ್ಲಿ 1,10,000 ಕರೆಗಳು ಸಹಾಯವಾಣಿ 138 ಕ್ಕೆ ಬಂದಿದ್ದವು, ಇದು ಭೂಬೇಲಿ ಹಾಕಿದ ಕರೆಗಳ ಸ್ವೀಕಾರ ವ್ಯವಸ್ಥೆಯಾಗಿತ್ತು. ಅಂದರೆ ಕರೆಗಳು ಸಮೀಪದ ರೈಲ್ವೇ ವಿಭಾಗೀಯ ನಿಯಂತ್ರಣ ಕಚೇರಿಯನ್ನು ಸಂಪರ್ಕಿಸುತ್ತಿದ್ದವು (ಇವುಗಳು ಸ್ಥಳೀಯ ಭಾಷೆ ಬಲ್ಲ ರೈಲ್ವೇ ಸಿಬ್ಬಂದಿಗಳಿಂದ ನಿರ್ವಹಿಸಲ್ಪಡುತ್ತವೆ.) ಇದು ಕರೆ ಮಾಡಿದವರಿಗೆ ಅವರು ಚೆನ್ನಾಗಿ ಮಾತನಾಡಬಲ್ಲ ಭಾಷೆಯಲ್ಲಿಯೇ ಮಾಹಿತಿಯನ್ನು ಮತ್ತು ಮಾರ್ಗದರ್ಶನವನ್ನು ಪಡೆಯುವುದಕ್ಕೆ ಸಹಾಯ ಮಾಡುತ್ತದೆ. ಈ ಹೊಸ ಅಂಶವು ರೈಲ್ವೇ ಗ್ರಾಹಕರಿಗೆ ಮಾಹಿತಿ ರವಾನೆಯನ್ನು ಸುಲಭ ಮಾಡುತ್ತದೆ ಮತ್ತು ತ್ವರಿತವಾಗಿ ಲಭಿಸುವಂತೆ ಮಾಡುತ್ತದೆ.
ಈ ಹಂತದಲ್ಲಿ ಅವಶ್ಯಕ ಸಾಮಗ್ರಿಗಳಾದ ವೈದ್ಯಕೀಯ ಪೂರೈಕೆಗಳು, ವೈದ್ಯಕೀಯ ಸಲಕರಣೆಗಳು ಮತ್ತು ಆಹಾರವನ್ನು ಪಾರ್ಸೆಲ್ ಮೂಲಕ ಕ್ಷಿಪ್ರವಾಗಿ ಮತ್ತು ಬೃಹತ್ ಪ್ರಮಾಣದಲ್ಲಿ ಸಾಗಿಸಬೇಕಾದ ಆವಶ್ಯಕತೆ ಕಂಡುಬಂದಿತು. ಮತ್ತೊಮ್ಮೆ ರೈಲ್ವೇಯು ಕ್ಷಿಪ್ರವಾಗಿ ಕಾರ್ಯಾಚರಿಸಿತು. ಅದು ವೇಳಾಪಟ್ಟಿ ನಿಗದಿತ ಪಾರ್ಸೆಲ್ ರೈಲನ್ನು ಆರಂಭಿಸಿತು. ಜೀವನಾವಶ್ಯಕ ಸಾಮಗ್ರಿಗಳು, ಜೀವ ಉಳಿಸುವ ಔಷಧಿಗಳನ್ನು ನಿಗದಿತ ಕಾಲಾವಧಿಯೊಳಗೆ ತಲುಪಿಸುವುದು ಇದರ ಗುರಿ. ಆರ್.ಎಂ.ಎಸ್. ಮತ್ತು ಇತರ ಸಾಮಗ್ರಿಗಳ ಹೊರೆಗಳು ವಿವಿಧ ಕಡೆಗಳಲ್ಲಿ ಬಾಕಿಯಾಗಿದ್ದವು, ಅವುಗಳನ್ನೆಲ್ಲ ಈಗ ಪಾರ್ಸೆಲ್ ವಿಶೇಷಗಳ ಮೂಲಕ ಸಾಗಿಸಲಾಗಿದೆ. ಈ ಕ್ರಮವನ್ನು ವ್ಯಾಪಾರೋದ್ಯಮಿಗಳು ಮತ್ತು ಸಾರ್ವಜನಿಕರೂ ಕೊಂಡಾಡಿದರು. ಓರ್ವ ವ್ಯಾಪಾರೋದ್ಯಮಿಗೆ ಬೆಂಗಳೂರು ವಿಭಾಗವು ಗಡ್ ಚಿರೋಳಿಯಿಂದ ಬೆಂಗಳೂರಿಗೆ ಅಕ್ಕಿಯನ್ನು ಸಾಗಾಟ ಮಾಡಲು ಸಹಾಯ ಮಾಡಿತು. ಮತ್ತು ದಿಲ್ಲಿ ವಿಭಾಗವು ಅಕ್ಕಿ ಪ್ಯಾಕೇಜಿಂಗ್ ವಸ್ತುಗಳನ್ನು ದಿಲ್ಲಿಯಿಂದ ತರಲು ಸಹಾಯ ಮಾಡಿತು. ಇದಕ್ಕೆ ಆ ಉದ್ಯಮಿಯ ಪ್ರತಿಕ್ರಿಯೆ “ ಸರ್ ನಾನು ನನ್ನ ಹೃದಯಸ್ಪರ್ಶೀ ಕೃತಜ್ಞತೆಗಳನ್ನು ರೈಲ್ವೇ ಸಚಿವರಿಗೆ ಸಲ್ಲಿಸುತ್ತೇನೆ. ಧನ್ಯವಾದಗಳು”
ರೈಲ್ವೇಯು ಸಾರ್ವಜನಿಕರಿಂದ ಬರುವ ಸಲಹೆಗಳನ್ನು ಆ ಸಮಯದ ಆಧಾರದಲ್ಲಿಯೇ ಸಕಾಲಿಕವಾಗಿ ಸಾಧ್ಯ ಇರುವಲ್ಲೆಲ್ಲ ಅಳವಡಿಸಿಕೊಳ್ಳುತ್ತದೆ. ಉದಾಹರಣೆಗೆ ಒಂದು ಪಾರ್ಸೆಲ್ ವಿಶೇಷ ರೈಲನ್ನು ಯಶವಂತಪುರದಿಂದ ಗುವಾಹಟಿಗೆ ಪೂರ್ವ ಕರಾವಳಿ ರೈಲ್ವೇಯು ಯೋಜಿಸಿದರೆ, ಅದಕ್ಕೆ ವಿಶಾಕಪಟ್ಟಣಂ ನಲ್ಲಿ ಯೋಜಿತ ನಿಲುಗಡೆ ಇಲ್ಲದಿರಬಹುದು. ಆದರೆ ಟ್ವಿಟರಿನಲ್ಲಿ ಸಲಹೆಗಳು ಬಂದರೆ ಅದರ ಮಾರ್ಗವನ್ನು ಬದಲಿಸಿ ಆ ನಿಲ್ದಾಣಕ್ಕೆ ಬರುವಂತೆ ಮಾಡಲಾಗುತ್ತದೆ.
ಲಾಕ್ ಡೌನ್ ಅವಧಿಯಲ್ಲಿ ಜೀವನಾವಶ್ಯಕ ಔಷಧಿಗಳನ್ನು ಖರೀದಿಸಲಾಗದ ಜನರಿಗೆ ಅವುಗಳನ್ನು ಸಾಗಾಟ ಮಾಡುವಲ್ಲಿ ರೈಲ್ವೇಯು ಪ್ರಮುಖ ಪಾತ್ರವನ್ನು ವಹಿಸಿದೆ. ಪ್ರಸ್ತುತ ಲೂಧಿಯಾನದಲ್ಲಿರುವ ಕೆನಡಾ ಮೂಲದ ಅನಿವಾಸಿಯೊಬ್ಬರು ಅವರ ಅವಶ್ಯಕ ಔಷಧಿಯನ್ನು ನಾಗಪುರದಿಂದ ಲೂಧಿಯಾನಕ್ಕೆ ಎರಡು ನಿಲ್ದಾಣಗಳ ನಡುವೆ ನೇರ ರೈಲು ಇಲ್ಲದಿದ್ದರೂ ಸಮನ್ವಯದ ಮೂಲಕ ತಲುಪಿಸುವಿಕೆಯನ್ನು ಖಾತ್ರಿಗೊಳಿಸಿದುದಕ್ಕಾಗಿ ಕೇಂದ್ರೀಯ ರೈಲ್ವೇ ಯನ್ನು ಕೊಂಡಾಡಿದ್ದಾರೆ. ಪಶ್ಚಿಮ ರೈಲ್ವೇಯು ಅವಶ್ಯಕ ಔಷಧಿಗಳನ್ನು ಅಹಮದಾಬಾದಿನಿಂದ ರಾಟ್ಲಂ ಗೆ ಸಾಗಿಸಿತು. ಇದು ಮಗುವೊಂದಕ್ಕೆ ಅದರ ಲಿವರ್ ವರ್ಗಾವಣೆಗೆ ಸಂಬಂಧಿಸಿ ತುರ್ತಾಗಿ ಬೇಕಾದ ಔಷಧಿಯಾಗಿತ್ತು. ಆ ಮಗು ಕೈಬರಹದಲ್ಲಿ ಬರೆದ ಮೆಚ್ಚುಗೆ ಪತ್ರವನ್ನು ಟ್ವಿಟರಿನಲ್ಲಿ ಅಪ್ ಲೋಡ್ ಮಾಡಲಾಗಿದ್ದು ಅದರಲ್ಲಿ “ ಈ ಸಂಕಷ್ಟದ ಸಮಯದಲ್ಲಿ ಭಾರತೀಯ ರೈಲ್ವೇಯು ಅವರ ನಾಗರಿಕರಿಗಾಗಿ ಎಲ್ಲಾ ಸವಲತ್ತುಗಳನ್ನು ಹೊಂದಿರುವುದು ನನಗೆ ಸಂತೋಷದ ಸಂಗತಿಯಾಗಿದೆ. ಭಾರತೀಯ ರೈಲ್ವೇಯು ಅತ್ಯುತ್ತಮ “ ಎಂದು ಹೇಳಲಾಗಿದೆ. ಆಟಿಸಂ ನಿಂದ ಬಳಲುತ್ತಿದ್ದ 3 ವರ್ಷದ ಮಗುವೊಂದಕ್ಕಾಗಿ ರೈಲ್ವೇಯು 20 ಲೀಟರ್ ಓಂಟೆಯ ಹಾಲನ್ನು ಜೋಧಪುರದಿಂದ ಮುಂಬಯಿಗೆ ಸಾಗಿಸಿದೆ. ಈ ಮಗುವಿಗೆ ಗಂಭೀರ ಪ್ರಮಾಣದ ಆಹಾರ ಅಲರ್ಜಿ ಇತ್ತು. ಪೂರ್ವನಿಗದಿತವಲ್ಲದ ನಿಲುಗಡೆಯನ್ನು ಈ ಹಾಲಿನ ಕಂಟೈನರ್ ನ್ನು ಒದಗಿಸುವುದಕ್ಕಾಗಿಯೇ ನೀಡಲಾಯಿತು. ಇದಕ್ಕೆ ಹಿತೈಷಿಯೊಬ್ಬರು “ಸಂಗತಿಗಳು ಹೇಗೆ ಸರಳವಾಗಿ ಜರಗುತ್ತವೆ ಎಂದು ನೋಡುವುದೇ ಒಂದು ಅಮೋಘ. ಇಚ್ಚಾ ಶಕ್ತಿ ಇದ್ದರೆ ಎಲ್ಲವನ್ನು ಸಾಧಿಸಬಹುದು, ಘಟನೆಗಳು ಸಾಧ್ಯವಾಗುವಂತೆ ಮಾಡಬಹುದು” ಎಂದು ಪ್ರತಿಕ್ರಿಯಿಸಿದರು.
***
(Release ID: 1618993)
Visitor Counter : 245
Read this release in:
Malayalam
,
English
,
Urdu
,
Marathi
,
Hindi
,
Bengali
,
Assamese
,
Punjabi
,
Gujarati
,
Odia
,
Tamil
,
Telugu