ನಾಗರೀಕ ವಿಮಾನಯಾನ ಸಚಿವಾಲಯ

ಕೋವಿಡ್ -19 ಲಾಕ್‌ಡೌನ್ ಸಮಯದಲ್ಲಿ "ಲೈಫ್‌ ಲೈನ್ ಉಡಾನ್ " ಸೇವೆ ಮೂಲಕ ದೇಶಾದ್ಯಂತ 684 ಟನ್‌ಗಳಷ್ಟು ಅಗತ್ಯ ಮತ್ತು ವೈದ್ಯಕೀಯ ಸರಕು ಪೂರೈಕೆ

Posted On: 26 APR 2020 7:32PM by PIB Bengaluru

ಕೋವಿಡ್ -19 ಲಾಕ್ಡೌನ್ ಸಮಯದಲ್ಲಿ "ಲೈಫ್ಲೈನ್ ಉಡಾನ್ " ಸೇವೆ ಮೂಲಕ ದೇಶಾದ್ಯಂತ 684 ಟನ್ಗಳಷ್ಟು ಅಗತ್ಯ ಮತ್ತು ವೈದ್ಯಕೀಯ ಸರಕು ಪೂರೈಕೆ

 

ಕೊವಿಡ್-19 ವಿರುದ್ಧದ ಭಾರತದ ಹೋರಾಟವನ್ನು ಬೆಂಬಲಿಸುವ ನಿಟ್ಟಿನಲ್ಲಿ ಅಗತ್ಯ ವೈದ್ಯಕೀಯ ಸರಕುಗಳನ್ನು ದೇಶದ ದೂರದ ಭಾಗಗಳಿಗೆ ಸಾಗಿಸಲು ಕೇಂದ್ರ ನಾಗರಿಕ ವಾಯುಯಾನ ಸಚಿವಾಲಯ ತನ್ನಲೈಫ್ಲೈನ್ ಉಡಾನ್ವಿಮಾನ ಸೇವೆಗಳನ್ನು ಉಪಯೋಗಿಸುತ್ತಿದೆ. "ಲೈಫ್ಲೈನ್ ಉಡಾನ್ " ವಿಮಾನ ಸೇವೆಯಡಿಯಲ್ಲಿ ಏರ್ ಇಂಡಿಯಾ, ಅಲೈಯನ್ಸ್ ಏರ್, ಐಎಎಫ್ ಮತ್ತು ಖಾಸಗಿ ವಾಹಕಗಳು ಸೇರಿದಂತೆ ಒಟ್ಟು 383 ವಿಮಾನಗಳು ಕಾರ್ಯ ನಿರ್ವಹಿಸಿವೆ. ಪೈಕಿ 223 ವಿಮಾನಗಳನ್ನು ಏರ್ ಇಂಡಿಯಾ ಮತ್ತು ಅಲೈಯನ್ಸ್ ಏರ್ ನಿರ್ವಹಿಸಿವೆ. ಲೈಫ್ಲೈನ್ ಉಡಾನ್ ವಿಮಾನ ಮೂಲಕ ಇಲ್ಲಿಯವರೆಗೆ ಸುಮಾರು 684.08 ಟನ್. ಸರಕು ಸಾಗಿಸಲಾಗಿದೆ ಹಾಗೂ ಸುಮಾರು 3,76,952 ಕಿ.ಮೀ. ವೈಮಾನಿಕ ದೂರವನ್ನು ಕ್ರಮಿಸಿದೆ.

2020 ಏಪ್ರಿಲ್ 25 ರವರೆಗೆ ಪವನ್ ಹ್ಯಾನ್ಸ್ ಹೆಲಿಕಾಪ್ಟರ್ ಗಳು ಒಟ್ಟು 1.99 ಟನ್ ಸರಕುಗಳನ್ನು ಸುಮಾರು 6,885 ಕಿ.ಮೀ.ದೂರ ಸಾಗಾಟ ಮಾಡಿದೆ ಜಮ್ಮು ಮತ್ತು ಕಾಶ್ಮೀರ, ಲಡಾಖ್, ದ್ವೀಪಗಳು ಮತ್ತು ಈಶಾನ್ಯ ಪ್ರದೇಶಗಳಿಗೆ ನಿರ್ಣಾಯಕ ವೈದ್ಯಕೀಯ ಸರಕು ಮತ್ತು ರೋಗಿಗಳನ್ನು ಪವನ್ ಹ್ಯಾನ್ಸ್ ಲಿಮಿಟೆಡ್ ಸೇರಿದಂತೆ ಹೆಲಿಕಾಪ್ಟರ್ ಸೇವೆಗಳು ಸಾಗಿಸುತ್ತಿವೆ. ಈಶಾನ್ಯ ರಾಜ್ಯಗಳ ಪ್ರದೇಶಗಳು, ದ್ವೀಪ ಪ್ರದೇಶಗಳು ಮತ್ತು ಬೆಟ್ಟ ರಾಜ್ಯಗಳ ವಿವಿಧ ಪ್ರದೇಶಗಳಲ್ಲಿ ಸೇವೆಗಾಗಿ ಹೆಲಿಕಾಪ್ಟರ್ ಗಳನ್ನು ವಿಶೇಷವಾಗಿ ಬಳಸಲಾಗಿದೆ.

ಏರ್ ಇಂಡಿಯಾ ಮತ್ತು ..ಎಫ್ ಮುಖ್ಯವಾಗಿ ಜಮ್ಮು ಮತ್ತು ಕಾಶ್ಮೀರ, ಲಡಾಕ್, ಈಶಾನ್ಯ ಮತ್ತು ಇತರ ದ್ವೀಪ ಪ್ರದೇಶಗಳಿಗೆ ಸಾಗಿಸಲು ಸಹಕರಿಸಿದವು.

ದೇಶದೊಳಗಿನ ಕಾರ್ಗೋ ಆಪರೇಟರ್ಗಳಾದ ಸ್ಪೈಸ್ಜೆಟ್, ಬ್ಲೂ ಡಾರ್ಟ್ ಮತ್ತು ಇಂಡಿಗೊ ವಾಣಿಜ್ಯ ಆಧಾರದ ಮೇಲೆ ತಮ್ಮ ಸರಕು ವಿಮಾನಗಳನ್ನು ನಿರ್ವಹಿಸುತ್ತಿವೆ. ಮಾರ್ಚ್ 24 ರಿಂದ 25 ಏಪ್ರಿಲ್, 2020 ಅವಧಿಯಲ್ಲಿ ಸ್ಪೈಸ್ಜೆಟ್ 4246 ಟನ್ ಸರಕುಗಳನ್ನು ಸಾಗಿಸುವ 579 ಸರಕು ಹಾರಾಟಗಳ ಮೂಲಕ 10,12,586 ಕಿ.ಮೀ ದೂರವನ್ನು ಕ್ರಮಿಸಿದೆ. ಪೈಕಿ 208 ಅಂತಾರಾಷ್ಟ್ರೀಯ ಸರಕು ವಿಮಾನಗಳು. ಮಾರ್ಚ್ 25 ರಿಂದ ಏಪ್ರಿಲ್ 25,2020 ರವರೆಗೆ ಬ್ಲೂ ಡಾರ್ಟ್ 207 ಸರಕು ಹಾರಾಟ ಮೂಲಕ 3,399 ಟನ್ ಸರಕುಗಳನ್ನು ಹೊತ್ತು 2,19,978 ಕಿ.ಮೀ ದೂರ ಸಾಗಿಸಿತು. ಇವುಗಳಲ್ಲಿ 9 ಅಂತರರಾಷ್ಟ್ರೀಯ ಸರಕು ವಿಮಾನಯಾನಗಳಾಗಿವೆ. ಏಪ್ರಿಲ್ 03-25, 2020 ಅವಧಿಯಲ್ಲಿ ಇಂಡಿಗೊ ಸುಮಾರು 167 ಟನ್ ಸರಕುಗಳನ್ನು 72 ಸರಕು ವಿಮಾನಗಳಲ್ಲಿ 72,222 ಕಿ.ಮೀ ದೂರ ಸಾಗಿಸಲು ಕ್ರಮಿಸಿದೆ, ಮತ್ತು 15 ಅಂತರರಾಷ್ಟ್ರೀಯ ವಿಮಾನಗಳನ್ನು ಒಳಗೊಂಡಿದೆ. ಸರ್ಕಾರಕ್ಕೆ ಉಚಿತವಾಗಿ ಸಾಗಿಸುವ ವೈದ್ಯಕೀಯ ಸರಬರಾಜುಗಳೂ ಇದರಲ್ಲಿ ಸೇರಿವೆ. ಏಪ್ರಿಲ್ 19-25,2029 ಅವಧಿಯಲ್ಲಿ ವಿಸ್ಟಾರಾ, ಸುಮಾರು 82 ಟನ್ ಸರಕುಗಳನ್ನು 12 ಸರಕು ವಿಮಾನ ಹಾರಾಟ ಮೂಲಕ 16,952 ಕಿ.ಮೀ ದೂರ ಸಾಗಿಸಿದೆ.

ಅಂತರರಾಷ್ಟ್ರೀಯ ವಲಯದಲ್ಲಿ, ಔಷಧಗಳು, ವೈದ್ಯಕೀಯ ಉಪಕರಣಗಳು ಮತ್ತು ಕೋವಿಡ್ -19 ಪರಿಹಾರ ಸಾಮಗ್ರಿಗಳ ಸಾಗಣೆಗೆ ಪೂರ್ವ ಏಷ್ಯಾದೊಂದಿಗೆ ಸರಕು ವಾಯು ಸಂಪರ್ಕವನ್ನು ಸ್ಥಾಪಿಸಲಾಗಿದೆ. ಏಪ್ರಿಲ್ 25, 2020 ರವರೆಗೆ, ಏರ್ ಇಂಡಿಯಾ ಸಾಗಾಟ ಮಾಡಿದ ವೈದ್ಯಕೀಯ ಸರಕುಗಳ ಪ್ರಮಾಣ 554 ಟನ್ ಆಗಿದೆ.

ಮೇಲಿನವುಗಳ ಜೊತೆಗೆ, ಏಪ್ರಿಲ್ 14 ರಿಂದ ಏಪ್ರಿಲ್ 25,2020 ರವರೆಗೆ ಬ್ಲೂ ಡಾರ್ಟ್ ಗುವಾಂಗ್ದಿಂದ ಸುಮಾರು 90 ಟನ್ ವೈದ್ಯಕೀಯ ಸರಬರಾಜುಗಳನ್ನು ಸಾಗಾಟ ಮಾಡಿದೆ. ಏಪ್ರಿಲ್ 25 ,2020ರಂದು ಬ್ಲೂ ಡಾರ್ಟ್ ಶಾಂಘೈನಿಂದ 5 ಟನ್ ವೈದ್ಯಕೀಯ ಸರಕುಗಳನ್ನು ಸಾಗಾಟ ಮಾಡಿದೆ. ಏಪ್ರಿಲ್ 25,2020 ರವರೆಗೆ ಸ್ಪೈಸ್ಜೆಟ್ 124 ಟನ್ ಗಳಷ್ಟು ಶಾಂಘೈನಿಂದ ವೈದ್ಯಕೀಯ ಸರಬರಾಜು ಮತ್ತು ಹಾಂಗ್ ಕಾಂಗ್ ಮತ್ತು ಸಿಂಗಾಪುರದಿಂದ 13 ಟನ್ ವೈದ್ಯಕೀಯ ಸರಬರಾಜು ಸಾಗಾಟ ಮಾಡಿದೆ.

***



(Release ID: 1618837) Visitor Counter : 206