ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ

ದೇಶಾದ್ಯಂತ ಹೆಚ್ಚುತ್ತಿರುವ ಸರಕುಗಳ ಸಾಗಣಿಕೆಗಳನ್ನು ನಿರ್ವಹಿಸುತ್ತಿರುವ ಟ್ರಕ್/ ಲಾರಿ ಚಾಲಕರು ಮಾಡಬೇಕಾದ ಮತ್ತು ಮಾಡಬಾರದ ವಿಷಯಗಳ ಕುರಿತು ವಿವರಣೆ ನೀಡಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದಿಂದ ನೂತನ ಅನಿಮೇಷನ್ ವೀಡಿಯೊ

Posted On: 25 APR 2020 5:35PM by PIB Bengaluru

ದೇಶಾದ್ಯಂತ ಹೆಚ್ಚುತ್ತಿರುವ ಸರಕುಗಳ ಸಾಗಣಿಕೆಗಳನ್ನು ನಿರ್ವಹಿಸುತ್ತಿರುವ ಟ್ರಕ್/ ಲಾರಿ ಚಾಲಕರು ಮಾಡಬೇಕಾದ ಮತ್ತು ಮಾಡಬಾರದ ವಿಷಯಗಳ ಕುರಿತು ವಿವರಣೆ ನೀಡಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದಿಂದ ನೂತನ ನಿಮೇಷನ್ ವೀಡಿಯೊ

ಲಾಕ್ ಡೌನ್ ಸಮಯದಲ್ಲಿ ಅಗತ್ಯ ಸರಕುಗಳು ಮತ್ತು ಔಷಧಿಗಳನ್ನು ಸಾಗಿಸುತ್ತಿರುವ
ಟ್ರಕ್/ ಲಾರಿ ಚಾಲಕರನ್ನು ಗೌರವಿಸಲು ದೂರವಾಣಿ ಕರೆಗಳು

 

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಒಂದು ವಿವರಣಾತ್ಮಕ ಆನಿಮೇಷನ್ ವೀಡಿಯೊವನ್ನು ಬಿಡುಗಡೆ ಮಾಡಿದೆ, ಇದು ದೇಶಾದ್ಯಂತ ಅಗತ್ಯ ವಸ್ತುಗಳನ್ನು ಸಾಗಿಸಲು ಪ್ರವಾಸ ಮಾಡುತ್ತಿರುವ ಮತ್ತು ಸರಕು ಸಾಗಣಿಕೆಗಳನ್ನು ನಿರ್ವಹಿಸುತ್ತಿರುವ ಟ್ರಕ್/ ಲಾರಿ ಚಾಲಕರಿಗೆ ತಾವು ಮಾಡಬೇಕಾದ ಮತ್ತು ಮಾಡಬಾರದ ವಿಷಯಗಳ ವಿವರಣೆಗಳನ್ನು ಒದಗಿಸುತ್ತದೆ. ಕೊವಿಡ್-19 ಅನ್ನು ನಿಗ್ರಹಿಸಲು ಮತ್ತು ಜೀವಗಳನ್ನು ಉಳಿಸಲು ಸರ್ಕಾರವು ಲಾಕ್ಡೌನ್ ಅನ್ನು ಅನಿವಾರ್ಯವಾಗಿ ವಿಸ್ತರಿಸಬೇಕಾದ ಸನ್ನಿವೇಶದಲ್ಲಿ ದೇಶದಾದ್ಯಂತ ಅಗತ್ಯ ವಸ್ತುಗಳು ಮತ್ತು ಔಷಧಿಗಳನ್ನು ಸಾಗಿಸುವ ಮೂಲಕ ಸಾರ್ವಜಿನಕರಿಗೆ ನಮ್ಮ ಜೀವನವನ್ನು ಸರಾಗಗೊಳಿಸುವ ಕೆಲಸ ಮಾಡುತ್ತಿರುವ ಟ್ರಕ್/ ಲಾರಿ ಚಾಲಕರನ್ನು ಗೌರವಿಸಲು ಮತ್ತು ಸಹಕರಿಸುವಂತೆ ಅನಿಮೇಷನ್ ವಿಡಿಯೊ ಜನತೆಗೆ ಪ್ರೇರೇಪಿಸುತ್ತದೆ.

ಗ್ರಾಫಿಕ್ ಅನಿಮೇಷನ್ ಮೂಲಕ ಪ್ರಭಾವಶಾಲಿ ಸಂದೇಶ ರೂಪದಲ್ಲಿ ಮಾಡಬೇಕಾದ ಮತ್ತು ಮಾಡಬಾರದ ವಿಷಯಗಳ ಮಾಹಿತಿಗಳನ್ನು ವಿವರಿಸಲಾಗಿದೆ.

  • ನೋವೆಲ್ ಕೊರೊನಾವೈರಸ್ ಸೋಂಕು ಕಾಯಿಲೆ (ಕೊವಿಡ್-19)ಯಿಂದ ಸುರಕ್ಷಿತರಾಗಿರಿ
  • ಲಾಕ್ಡೌನ್ ಸಮಯದಲ್ಲಿ ಅಗತ್ಯ ವಸ್ತುಗಳು ಮತ್ತು ಔಷಧಿಗಳ ಪೂರೈಕೆ ಹಾಗೂ ಸಾಗಣಿಕೆ-ಸರಪಳಿಯನ್ನು ನಿರ್ವಹಿಸುವ ಟ್ರಕ್/ ಲಾರಿ ಚಾಲಕರನ್ನು ಗೌರವಿಸಿ ಮತ್ತು ಅವರಿಗೆ ಸಹಕರಿಸಿ
  • ನಿಮ್ಮನ್ನು ಹಾಗು ಇತರರನ್ನು ರಕ್ಷಿಸಿ ಮತ್ತು ನಿಮ್ಮ ಸ್ವಂತ ಸುರಕ್ಷತೆಗಾಗಿ ನಿಯಮಗಳನ್ನು ಅನುಸರಿಸಿ

 

ಮಾಡಬೇಕಾದದ್ದು:

  • ವೈಯಕ್ತಿಕ ನೈರ್ಮಲ್ಯವನ್ನು ಕಾಪಾಡಿಕೊಳ್ಳಿ
  • ಸಾಧ್ಯವಾದಾಗಲೆಲ್ಲಾ ಕನಿಷ್ಠ 20 ಸೆಕೆಂಡುಗಳ ಕಾಲ ನಿಮ್ಮ ಕೈಗಳನ್ನು ಸಾಬೂನು ಮತ್ತು ಶುದ್ಧ ನೀರಿನಿಂದ ತೊಳೆಯಿರಿ
  • ವಾಹನ ಚಲಾಯಿಸುವಾಗ/ ಚಾಲನೆ ಬಿಟ್ಟು ನಿರ್ಗಮಿಸುವಾಗ ಮಾಸ್ಕ್ ಧರಿಸಿ
  • ಮಾಸ್ಕ್ ಬಳಸಿದ ನಂತರ ಅದನ್ನು ಸಾಬೂನು ಮತ್ತು ಶುದ್ಧ ನೀರಿನಿಂದ ತೊಳೆದು ಒಣಗಿಸಿ
  • ನಿಮ್ಮ ವಾಹನದಲ್ಲಿ ಯಾವಾಗಲೂ ಸ್ಯಾನಿಟೈಜರ್ ಇರಿಸಿ
  • ವಾಹನ ಚಲಾಯಿಸುವಾಗ/ ಚಾಲನೆ ಬಿಟ್ಟು ನಿರ್ಗಮಿಸುವಾಗ 70% ಆಲ್ಕೋಹಾಲ್ ಆಧಾರಿತ ಹ್ಯಾಂಡ್ ಸ್ಯಾನಿಟೈಜರ್ ಬಳಸಿ
  • ನಿಯಮಗಳ ಪ್ರಕಾರ ಚಾಲಕ ಮತ್ತು ಸಹಾಯಕನನ್ನು ಹೊರತುಪಡಿಸಿ ಹೆಚ್ಚುವರಿ ಪ್ರಯಾಣಿಕರೊಂದಿಗೆ ಪ್ರಯಾಣಿಸಬೇಡಿ
  • ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಿ
  • ಚೆಕ್ ಪೋಸ್ಟ್ ಗಳು/ ಸರಕು ತುಂಬುವ-ಇಳಿಸುವ ಸ್ಥಳಗಳು/ ರೆಸ್ಟೋರೆಂಟ್ಗಳು ಇತ್ಯಾದಿಗಳಲ್ಲಿ ಜನರೊಂದಿಗೆ ನಿಕಟ ಸಂಪರ್ಕಕ್ಕೆ ಬರುವುದನ್ನು ತಪ್ಪಿಸಿ
  • ಪ್ರತಿದಿನ ನಿಮ್ಮ ವಾಹನವನ್ನು ಸ್ವಚ್ಛಗೊಳಿಸಿ

 

ಮಾಡಬಾರದು

  1. ಹರಿದ/ ಹಳೆಯ ಹಾಗೂ ಇತರರು ಬಳಸಿದ ಮಾಸ್ಕ್ ಗಳನ್ನು ಬಳಸಬೇಡಿ
  2. ನಿಮ್ಮ ವಾಹನದಲ್ಲಿ ನಿಮ್ಮೊಂದಿಗೆ ಪ್ರಯಾಣಿಸಲು ಒಂದಕ್ಕಿಂತ ಹೆಚ್ಚು ಸಹಾಯಕರಿಗೆ ಅನುಮತಿ ನೀಡಬೇಡಿ
  3. ಸಾಮಾಜಿಕ ಕೂಟಗಳನ್ನು ಮಾಡಬೇಡಿ
  4. ನಿಮ್ಮ ನೈರ್ಮಲ್ಯವನ್ನು ನಿರ್ಲಕ್ಷಿಸಬೇಡಿ

 

ಬನ್ನಿ, ನಾವೆಲ್ಲರೂ ಪರಸ್ಪರ ಒಬ್ಬರನ್ನೊಬ್ಬರು ಕಾಳಜಿಪೂರ್ವಕ ನೋಡಿಕೊಳ್ಳೋಣ ಮತ್ತು ಕೊವಿಡ್-19 ಹರಡುವುದನ್ನು ನಿಲ್ಲಿಸೋಣ.

 

ವಿಡಿಯೊವನ್ನು ವೀಕ್ಷಿಸಲು ಕ್ಲಿಕ್ ಮಾಡಿ

***



(Release ID: 1618340) Visitor Counter : 144