ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್-19 ಬಿಕ್ಕಟ್ಟಿನಲ್ಲಿ ಕ್ಷಯ ರೋಗಿಗಳ ತಡೆರಹಿತ ಆರೈಕೆಯನ್ನು ಖಚಿತಪಡಿಸಿಕೊಳ್ಳಿ: ಆರೋಗ್ಯ ಸಚಿವಾಲಯ

Posted On: 24 APR 2020 5:13PM by PIB Bengaluru

ಕೋವಿಡ್-19 ಬಿಕ್ಕಟ್ಟಿನಲ್ಲಿ ಕ್ಷಯ ರೋಗಿಗಳ ತಡೆರಹಿತ ಆರೈಕೆಯನ್ನು ಖಚಿತಪಡಿಸಿಕೊಳ್ಳಿ: ಆರೋಗ್ಯ ಸಚಿವಾಲಯ

 

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ರಾಷ್ಟ್ರೀಯ ಕ್ಷಯ ರೋಗ ನಿರ್ಮೂಲನಾ ಕಾರ್ಯಕ್ರಮ (ಎನ್.ಟಿ.ಇ.ಪಿ.) ದ ಅಡಿಯಲ್ಲಿ ಕೋವಿಡ್  - 19 ರ ಬಿಕ್ಕಟ್ಟಿನ ಹೊರತಾಗಿಯೂ ಸಾರ್ವಜನಿಕ ಹಿತದೃಷ್ಟಿಯಿಂದ ಎಲ್ಲ ಸೌಲಭ್ಯಗಳು ಸಂಪೂರ್ಣ  ಕಾರ್ಯ ನಿರ್ವಹಿಸುತ್ತಿರುವ  ಬಗ್ಗೆ ಹಾಗೂ ಕ್ಷಯ ರೋಗಿಗಳ ರೋಗ ನಿರ್ಣಯ  ಹಾಗೂ ಚಿಕಿತ್ಸೆಯು  ಯಾವುದೇ  ಅಡ್ಡಿ ಇಲ್ಲದಂತೆ ನಡೆಯುತ್ತಿರುವ  ಬಗ್ಗೆ ಖಚಿತ ಪಡಿಸಿಕೊಳ್ಳುವಂತೆ  ರಾಜ್ಯಗಳು/ ಕೇಂದ್ರಾಡಳಿತ  ಪ್ರದೇಶಗಳಿಗೆ  ಪತ್ರ  ಬರೆದಿದೆ.

ಹೊಸದಾಗಿ  ರೋಗ ನಿರ್ಣಯಿಸಲ್ಪಟ್ಟ ಅಥವಾ ಪ್ರಸ್ತುತ  ಚಿಕಿತ್ಸೆ ಪಡೆಯುತ್ತಿರುವವರೂ ಸೇರಿದಂತೆ ಎಲ್ಲ ಕ್ಷಯ  ರೋಗಿಗಳಿಗೆ  ಒಂದೇ  ಬಾರಿಗೆ  ಒಂದು  ತಿಂಗಳಿಗೆ  ಬೇಕಾಗುವ  ಪೂರ್ಣ ಔಷಧಿಗಳನ್ನು ಒದಗಿಸುವುದೂ  ಕೂಡ  ಸಮಗ್ರ ನಿರ್ದೇಶನಗಳಲ್ಲಿ ಸೇರಿದೆ. ಇದರಲ್ಲಿ ಸಾರ್ವಜನಿಕ  ಮತ್ತು ಖಾಸಗಿ ವಲಯದ  ಕ್ಷಯ ರೋಗಿಗಳೊಂದಿಗೆ, ಔಷಧಕ್ಕೆ ನಿರೋಧಕತೆಯನ್ನು ಹೊಂದಿರುವ  ಡ್ರಗ್  ರೆಸಿಸ್ಟಂಟ್ ಕ್ಷಯ ರೋಗಿಗಳು ಕೂಡ ಸೇರಿದ್ದಾರೆ. ಗುರುತಿನ ಚೀಟಿಯನ್ನು ಹೊಂದಿರುವ  ಅಥವಾ ಹೊಂದದೇ ಇರುವ ರೋಗಿಗಳು ಚಿಕಿತ್ಸೆಗೆ ಯಾವುದೇ ರೀತಿಯಲ್ಲಿ ಅಡಚಣೆ ಉಂಟಾಗದಂತೆ  ಅನುಕೂಲಕರವಾಗಿ  ಆರೋಗ್ಯ ಸೌಲಭ್ಯವನ್ನು ಪಡೆಯುತ್ತಿರುವ ಬಗ್ಗೆ ರಾಜ್ಯಗಳು/ ಕೇಂದ್ರಾಡಳಿತ  ಪ್ರದೇಶಗಳು ಖಚಿತ ಪಡಿಸಿಕೊಳ್ಳಬೇಕು.

ಇದಲ್ಲದೇ, ಒದಗಿಸಲಾಗಿರುವ  ಆರೋಗ್ಯ ಸೌಲಭ್ಯವನ್ನು ಪಡೆಯಲು  ಕ್ಷಯ ರೋಗಿಗೆ ಆಗದೇ ಇದ್ದ ಪಕ್ಷದಲ್ಲಿ, ಸಾಧ್ಯವಾದಲ್ಲೆಲ್ಲ ರೋಗಿಯ ಮನೆ ಬಾಗಿಲಿಗೆ ಔಷಧಿಗಳನ್ನು ತಲುಪಿಸುವ ಸೌಲಭ್ಯದ ವ್ಯವಸ್ಥೆ ಮಾಡಬೇಕು ಎಂದು ನಿರ್ದೇಶನಗಳು ತಿಳಿಸುತ್ತವೆ. ಕೋವಿಡ್ - 19 ರ ಬಿಕ್ಕಟ್ಟು ಮತ್ತು ಲಾಕ್ ಡೌನ್ ನಿಂದಾಗಿ ಎದುರಾಗಿರುವ ಸವಾಲುಗಳನ್ನು ಪರಿಗಣಿಸಿ, ಸಾಕಷ್ಟು ಪ್ರಮಾಣದಲ್ಲಿ ಔಷಧಿಗಳನ್ನು ಸಂಗ್ರಹಿಸಲ್ಪಟ್ಟಿರುವ  ಬಗ್ಗೆ ಮತ್ತು ಸಾಕಷ್ಟು ಔಷಧಿಗಳ  ಸರಬರಾಜು  ಲಭ್ಯವಿರುವ  ಬಗ್ಗೆ ಖಚಿತತೆ ಪಡೆದುಕೊಳ್ಳಲು  ಸಚಿವಾಲಯವು  ಆದೇಶ ಹೊರಡಿಸಿದೆ.

ರಾಜ್ಯಗಳು  ಮತ್ತು ಕೇಂದ್ರಾಡಳಿತ  ಪ್ರದೇಶಗಳಲ್ಲಿ ಕ್ಷಯ ರೋಗ ನಿರ್ಣಯ ಮತ್ತು ಚಿಕಿತ್ಸಾ ಸೇವೆಗಳು ಸಂಪೂರ್ಣವಾಗಿ ಕಾರ್ಯ ನಿರ್ವಹಿಸುತ್ತಿವೆ. ಕೋವಿಡ್ – 19 ರಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುವಂತೆ  ಹಾಗೂ ತಮಗೆ ಸೂಚಿಸಲಾಗಿರುವ ಕ್ಷಯ ರೋಗ ಚಿಕಿತ್ಸೆಯನ್ನು ಮುಂದುವರೆಸುವಂತೆ  ಕ್ಷಯ ರೋಗಿಗಳಿಗೆ  ಸಲಹೆ  ನೀಡಲಾಗಿದೆ. ಕೋವಿಡ್ - 19 ರ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ರೋಗಿಗಳ  ಹಾಗೂ  ಆರೋಗ್ಯ ಕಾರ್ಯಕರ್ತರ ಆರೋಗ್ಯವೇ ಮೊದಲ ಆದ್ಯತೆಯಾಗಿದೆ.  ಇದನ್ನು ಹೊರತುಪಡಿಸಿ, ಈ  ಬಗ್ಗೆ ರೋಗಿಗಳು ಏನಾದರೂ ತೊಂದರೆಯನ್ನು ಎದುರಿಸುತ್ತಿದ್ದರೆ ಎಲ್ಲ ಕ್ಷಯ ರೋಗಿಗಳಿಗೂ  ಟಿ.ಬಿ. ಟೋಲ್ - ಫ್ರೀ ಸಂಖ್ಯೆ  (1800-11-6666) ಯನ್ನು ಒದಗಿಸಲು ನಿರ್ದೇಶನವನ್ನು ನೀಡಲಾಗಿದೆ.

'ಸುದ್ದಿ ಮತ್ತು ಮುಖ್ಯಾಂಶಗಳು' ವಿಭಾಗದ ಅಡಿಯಲ್ಲಿ ನಿರ್ದೇಶನಗಳು/ ಸಲಹೆಗಳನ್ನು www.tbcindia.gov.in  ವೆಬ್ ಸೈಟ್ ನಲ್ಲಿ ಅಪ್ಲೋಡ್ ಮಾಡಲಾಗಿದೆ

***


(Release ID: 1618337) Visitor Counter : 225