ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ

ಕೊವಿಡ್ -19 ವಿರುದ್ಧದ ಭಾರತದ ಹೋರಾಟದ ಕುರಿತು ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಅವರಿಂದ ಮಾಜಿ ಅಧಿಕಾರಿಗಳೊಂದಿಗೆ ವ್ಯಾಪಕ ಸಮಾಲೋಚನೆ

Posted On: 25 APR 2020 6:37PM by PIB Bengaluru

ಕೊವಿಡ್ -19 ವಿರುದ್ಧದ ಭಾರತದ ಹೋರಾಟದ ಕುರಿತು ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಅವರಿಂದ ಮಾಜಿ ಅಧಿಕಾರಿಗಳೊಂದಿಗೆ ವ್ಯಾಪಕ ಸಮಾಲೋಚನೆ

 

ಕೇಂದ್ರ ಈಶಾನ್ಯ ಪ್ರದೇಶದ ರಾಜ್ಯಗಳ ಅಭಿವೃದ್ಧಿ (ಸ್ವತಂತ್ರ ನಿರ್ವಹಣೆ), ಪ್ರಧಾನಮಂತ್ರಿ ಕಾರ್ಯಾಲಯ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳ ಪರಿಹಾರ, ಪಿಂಚಣಿ, ಪರಮಾಣು ಶಕ್ತಿ ಮತ್ತು ಬಾಹ್ಯಾಕಾಶ ರಾಜ್ಯ ಖಾತೆ ಸಚಿವ ಡಾ.ಜಿತೇಂದ್ರಸಿಂಗ್ ಅವರು ಕೊವಿಡ್-19 ವಿರುದ್ಧ ಭಾರತದ ಹೋರಾಟದ ಕುರಿತು ಮಾಜಿ ಅಧಿಕಾರಿಗಳೊಂದಿಗೆ ವ್ಯಾಪಕ ಚರ್ಚೆಗಳನ್ನು ನಡೆಸಿದರು ಮತ್ತು ಲಾಕ್ಡೌನ್ನಂತರದ ನಿರ್ಗಮನ ಯೋಜನೆ ಮಾರ್ಗಸೂಚಿ ಸಲಹೆಗಳನ್ನು ಪರಿಶೋಧಿಸಿದರು

ನಿವೃತ್ತ ..ಎಸ್ ಅಧಿಕಾರಿಗಳಾದ ಶ್ರೀ ಸುಧೀರ್ ಭಾರ್ಗವ, ಶ್ರೀ ರಾಮ ಸುಂದರಂ, ಶ್ರೀ ರಾಕೇಶ್ ಕುಮಾರ್ ಗುಪ್ತಾ, ಶ್ರೀ ಸತ್ಯಾನಂದ ಮಿಶ್ರಾ, ಶ್ರೀ ಪಿ.ಪನ್ನೀರ್ ವೇಲ್ ಮತ್ತು ಶ್ರೀ ಕೆ.ವಿ.ಇಪನ್  ಅವರೊಂದಿಗೆ ಸಚಿವ ಡಾ.ಜಿತೇಂದ್ರ ಸಿಂಗ್ ಅವರು ಸುದೀರ್ಘ ಒಂದೂವರೆ ಗಂಟೆಗಳ ವಿಡಿಯೋಸಂವಾದ ನಡೆಸಿದರು. ಸಚಿವರ ಜೊತೆಯಲ್ಲಿ ನಿವೃತ್ತ .ಆರ್.ಎಸ್. ಅಧಿಕಾರಿಗಳು ಶ್ರೀಮತಿ ಎಂ.ಎಸ್. ಸಂಗೀತ ಗುಪ್ತಾ ಮತ್ತು ಶ್ರೀಮತಿ ಶೈಲಾ ಸಂಗ್ವಾನ್ ಅವರು ಭಾಗವಹಿಸಿ, ಕೊವಿಡ್ ಸಾಂಕ್ರಾಮಿಕ ರೋಗವನ್ನು ಪರಿಣಾಮಕಾರಿಯಾಗಿ ತಡೆಗಟ್ಟುವಲ್ಲಿ ಒಳಗೊಂಡಿರುವಲ್ಲಿ ಸರ್ಕಾರದ ಪ್ರಯತ್ನಗಳ ಬಗ್ಗೆ ವಿವರಿಸಿದರು. ಸರ್ಕಾರದ ಸಕಾಲಿಕವಾದ ಸಕ್ರಿಯ ಕ್ರಮಗಳ ಮೂಲಕ ಭಾರತವು ವಿಶ್ವದ ಅನೇಕ ಮುಂದುವರಿದ ದೇಶಗಳಿಗಿಂತ ಮುಂದಿದೆಎಂದು ಸಚಿವ ಡಾ.ಜಿತೇಂದ್ರ ಸಿಂಗ್ ಅವರು ಹೇಳಿದರು

ವಿವಿಧ ಕ್ರಮಗಳ ಮೂಲಕ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಸಾಧ್ಯವಾಗಿರುವುಕ್ಕೆ ಮತ್ತು ಯಶಸ್ವಿಯಾಗಿ ನಿಯಂತ್ರಿಸಲು ಒಳಗೊಂಡಿರುವ ಸರ್ಕಾರದ ಪ್ರಯತ್ನಗಳನ್ನು ಅಧಿಕಾರಿಗಳು ಶ್ಲಾಘಿಸಿದರು. ಲಾಕ್ ಡೌನ್ ನಂತರದ ದಿನಗಳಲ್ಲಿ ಆರ್ಥಿಕತೆಯನ್ನು ಪ್ರಾರಂಭಿಸಲು ಸಂಭವನೀಯ ನಿರ್ಗಮನ ಯೋಜನೆ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಅಧಿಕಾರಿಗಳು ಹಂಚಿಕೊಂಡರು. ವೀಡಿಯೊ-ಸಂವಾದದ ಸಮಯದಲ್ಲಿ, ಅಧಿಕಾರಿಗಳು ಲಾಕ್ಡೌನ್ ಅನ್ನು ಹಂತಹಂತವಾಗಿ ಹಿಂತೆಗೆದುಕೊಳ್ಳುವುದು, ಆಡಳಿತದಲ್ಲಿ ತಂತ್ರಜ್ಞಾನದ ಹೆಚ್ಚಿನ ಬಳಕೆ (ಉದಾ.-ಆಫೀಸ್), ವಿಟಮಿನ್-ಸಿ ಸೇವನೆಯ ಮೂಲಕ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದಕ್ಕೆ ಪ್ರಾಮುಖ್ಯತೆ, ಆರ್ಥಿಕತೆಯನ್ನು ಪ್ರಾರಂಭಿಸಲು ಹಣಕಾಸಿನ ಸಹಾಯ-ಪ್ರಚೋದನೆ, ಬಡವರಿಗೆ ಆರ್ಥಿಕ ಭದ್ರತೆ, ಶೈಕ್ಷಣಿಕ ವರ್ಷವನ್ನು ಬಳಸಿಕೊಳ್ಳಲು ಹೆಚ್ಚಿನ ಆನ್ಲೈನ್ ಕೋರ್ಸ್ಗಳು ಮತ್ತು ಪರೀಕ್ಷೆಗಳನ್ನು ಜನರಿಗೆ ಪರಿಚಯಿಸುವುದು, ವಲಸೆ ಕಾರ್ಮಿಕರಿಗೆ ಅವರ ಹುಟ್ಟೂರನ್ನು ತಲುಪಲು ಅನುಕೂಲ ಮಾಡುವುದು ಮತ್ತು ಮೇಕ್ ಇನ್ ಇಂಡಿಯಾ ಪರಿಕಲ್ಪನೆಗೆ ಪೂರಕವಾಗಿ ಸ್ಥಳೀಯವಾಗಿ ದೇಶೀಯ ಲಸಿಕೆಗಳು ಹಾಗೂ ಪರೀಕ್ಷಾ ಕಿಟ್ಗಳ ನಿರ್ಮಾಣ ಮತ್ತು  ಅಭಿವೃದ್ಧಿಪಡಿಸುವುದು ಮುಂತಾದ ಸಲಹೆಗಳನ್ನು ನೀಡಿದರು

ಅಧಿಕಾರಿಗಳು ನೀಡಿದ ಅಮೂಲ್ಯ ಸಲಹೆಗಳಿಗೆ ಸಚಿವ ಡಾ.ಜಿತೇಂದ್ರ ಸಿಂಗ್ ಅವರು ಧನ್ಯವಾದಗಳನ್ನು ತಿಳಿಸಿದರು, ಮತ್ತು "ಕೊರೊನಾ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಎಲ್ಲಾ ಭಾಗಗಳಿಂದಲೂ ಬುದ್ಧಿವಂತಿಕೆ, ಚಿಂತನೆ, ಅಭಿಪ್ರಾಯ ಮತ್ತು ಸಲಹೆಗಳನ್ನು ಪಡೆಯಲಾಗಿದೆ, ಸಾಂಕ್ರಾಮಿಕದ ವಿರುದ್ದ ಹೋರಾಟದಲ್ಲಿ ಇನ್ನೂ ಉತ್ತಮ ರೀತಿಯ ವ್ಯವಸ್ಥೆಗಳು ಮುಂದುವರಿಯಲಿವೆ' ಎಂದು ಸಚಿವ ಡಾ.ಜಿತೇಂದ್ರ ಸಿಂಗ್ ಅವರು ಹೇಳಿದರು.

***


(Release ID: 1618336) Visitor Counter : 241