ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೇಂದ್ರ ಸಚಿವರ ತಂಡದಿಂದ ಕೊವಿಡ್-19 ನಿರ್ವಹಣಾ ಕ್ರಮ ಮತ್ತು ಪ್ರಸ್ತುತ ಸ್ಥಿತಿಗತಿಗಳ ಪರಿಶೀಲನೆ

Posted On: 25 APR 2020 3:09PM by PIB Bengaluru

ಕೇಂದ್ರ ಸಚಿವರ ತಂಡದಿಂದ ಕೊವಿಡ್-19 ನಿರ್ವಹಣಾ ಕ್ರಮ ಮತ್ತು ಪ್ರಸ್ತುತ ಸ್ಥಿತಿಗತಿಗಳ ಪರಿಶೀಲನೆ

ಕೊವಿಡ್-19 ಸಮರ್ಥವಾಗಿ ಎದುರಿಸುವಲ್ಲಿ ಎಲ್ಲರ ಸಾಮೂಹಿಕ ಪ್ರಯತ್ನಗಳನ್ನು
ಸಚಿವ ಡಾ. ಹರ್ಷ್ ವರ್ಧನ್ ಶ್ಲಾಘಿಸಿದರು

 

ಕೊವಿಡ್ -19 ಕುರಿತು ಉನ್ನತ ಮಟ್ಟದ ಕೇಂದ್ರ ಸಚಿವರ ತಂಡ (ಜಿ.ಒ.ಎಮ್) ತನ್ನ 13 ನೇ ಸಭೆಯು ಇಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷ್ ವರ್ಧನ್ ಅವರ ಅಧ್ಯಕ್ಷತೆಯಲ್ಲಿ ನಿರ್ಮಾಣ್ ಭವನದಲ್ಲಿ ಜರುಗಿತು. ಕೇಂದ್ರ ನಾಗರಿಕ ವಿಮಾನಯಾನ ಸಚಿವ ಶ್ರಿ ಹರ್ದೀಪ್ ಎಸ್.ಪುರಿ, ಕೇಂದ್ರ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್, ಕೇಂದ್ರ ಗೃಹ ರಾಜ್ಯ ಖಾತೆ ಸಚಿವ ಶ್ರೀ ಎಸ್. ನಿತ್ಯಾನಂದ ರೈ, ಕೇಂದ್ರ ನೌಕಾಯಾನ ಮತ್ತು ರಾಸಾಯನಿಕ ಮತ್ತು ರಸಗೊಬ್ಬರಗಳ ರಾಜ್ಯ ಖಾತೆ ಸಚಿವ ಶ್ರೀ ಮನ್ಸುಖ್ ಮಾಂಡವಿಯಾ ಮತ್ತು ಕೇಂದ್ರ ಆರೋಗ್ಯ, ಕುಟುಂಬ ಕಲ್ಯಾಣ ರಾಜ್ಯ ಖಾತೆ ಸಚಿವ ಶ್ರೀ ಅಶ್ವಿನಿ ಕುಮಾರ್ ಚೌಬೆ ಅವರು ಸಭೆಯಲ್ಲಿ ಉಪಸ್ಥಿತರಿದ್ದರು. ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಶ್ರೀ ಬಿಪಿನ್ ರಾವತ್, ಸಶಕ್ತ ಪಡೆ-6 ರ ಅಧ್ಯಕ್ಷ ಮತ್ತು ನೀತಿ ಆಯೋಗ ಸಿ.ಇ.ಒ. ಶ್ರೀ ಅಮಿತಾಭ್ ಕಾಂತ್ , ಸಶಕ್ತ ಗುಂಪು-2 ರ ಅಧ್ಯಕ್ಷರಾದ ಶ್ರೀ ಸಿ.ಕೆ ಮಿಶ್ರಾ (ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ), ಕಾರ್ಯದರ್ಶಿ (ಎಂ.ಎಸ್‌.ಎಂ.ಇ.) ಮತ್ತು ಸಶಕ್ತ ಗುಂಪು -4 ಅಧ್ಯಕ್ಷರಾದ ಡಾ.ಅರುಣ್ ಕೆ. ಪಾಂಡ, ಮತ್ತು ಸಶಕ್ತ ಗುಂಪು-3 ಅಧ್ಯಕ್ಷರಾದ ಶ್ರೀ ಪಿ.ಡಿ ವಘೇಲಾ ಅವರು ಸಭೆಯಲ್ಲಿ ಉಪಸ್ಥಿತರಿದ್ದರು.

ದೇಶದಲ್ಲಿ ಕೊವಿಡ್-19 ರ ಸ್ಥಿತಿಗತಿಗಳ ಜೊತೆಗೆ ದೇಶದಲ್ಲಿ ಕೊವಿಡ್-19 ರ ಸ್ಪಂದನೆ, ಪ್ರತಿಕ್ರಿಯೆ ಮತ್ತು ನಿರ್ವಹಣೆಯ ಬಗ್ಗೆ ಕೇಂದ್ರ ಸಚಿವರ ತಂಡ (ಜಿ.ಒ.ಎಮ್)ಕ್ಕೆ ಸವಿವರವಾದ ಪ್ರಸ್ತುತಿಯನ್ನು ಮಾಡಲಾಯಿತು. ಈ ದಿನದ ತನಕ ಕೊವಿಡ್-19 ರ ತಡೆಗಟ್ಟುವಿಕೆ, ನಿಯಂತ್ರಣ ಮತ್ತು ನಿರ್ವಹಣೆ ನಿಟ್ಟಿನಲ್ಲಿ ಕೇಂದ್ರ ಮತ್ತು ವಿವಿಧ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ತೆಗೆದುಕೊಂಡ ಕ್ರಮಗಳ ಬಗ್ಗೆ ಸಚಿವರ ತಂಡ (ಜಿ.ಒ.ಎಮ್) ಸವಿವರವಾದ ಚರ್ಚೆಯನ್ನು ಮಾಡಿತು. ಕೊವಿಡ್-19 ಅನ್ನು ಎದುರಿಸಲು ತಮ್ಮ ತುರ್ತು ಯೋಜನೆಗಳನ್ನು ಅನುಸರಿಸಲು ಮತ್ತು ಇನ್ನಷ್ಟು ಬಲಪಡಿಸಲು ಎಲ್ಲಾ ಜಿಲ್ಲೆಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಸಚಿವರ ತಂಡ (ಜಿ.ಒ.ಎಮ್)ಕ್ಕೆ ತಿಳಿಸಲಾಯಿತು. ಪ್ರತ್ಯೇಕ ಹಾಸಿಗೆಗಳು/ ವಾರ್ಡ್‌ಗಳು, ಪಿ.ಪಿ.ಇ.ಗಳು, ಎನ್-95 ಮುಖಕವಚಗಳು, ಔಷಧಗಳು, ವೆಂಟಿಲೇಟರ್‌ಗಳು, ಆಮ್ಲಜನಕ ಸಿಲಿಂಡರ್‌ಗಳು ಇತ್ಯಾದಿಗಳ ಸಮರ್ಪಕ ಪೂರೈಕೆ ಮತ್ತು ಬಳಕೆಯೊಂದಿಗೆ ಮೀಸಲಾದ ಕೊವಿಡ್ -19 ಆಸ್ಪತ್ರೆಗಳ ರಾಜ್ಯವಾರು ವಿವರಗಳನ್ನು ಸಚಿವರ ತಂಡ (ಜಿ.ಒ.ಎಮ್)ಕ್ಕೆ ವಿವರಿಸಲಾಯಿತು. ಮೊದಲೇ ಗುರುತಿಸಲ್ಪಟ್ಟ ದೇಶೀಯ ತಯಾರಕರು ಈಗಾಗಲೇ ಪಿ.ಪಿ.ಇ.ಗಳು, ಮುಖಕವಚಗಳು ಇತ್ಯಾದಿಗಳ ಉತ್ಪಾದನೆಯನ್ನು ಪ್ರಾರಂಭಿಸಿದ್ದಾರೆ ಮತ್ತು ಸಾಕಷ್ಟು ಪ್ರಮಾಣದಲ್ಲಿ ಅವುಗಳು ಲಭ್ಯವಿದೆ.. ಇಂದಿನ ದಿನಾಂಕದಂತೆ, ದೇಶದಲ್ಲಿ ಪ್ರತಿದಿನ 1 ಲಕ್ಷಕ್ಕೂ ಹೆಚ್ಚು ಪಿ.ಪಿ.ಇ.ಗಳು ಮತ್ತು ಎನ್-95 ಮುಖವಾಡಗಳನ್ನು ತಯಾರಿಸಲಾಗುತ್ತಿದೆ. ಪ್ರಸ್ತುತ ದೇಶದಲ್ಲಿ 104 ದೇಶೀಯ ಪಿ.ಪಿ.ಇ. ತಯಾರಿಕೆಗಳು ಮತ್ತು ಎನ್-95 ಮುಖಕವಚ ತಯಾರಿಸುವ ಮೂರು ಘಟಕಗಳಿವೆ. ಇದಲ್ಲದೆ, ದೇಶೀಯ ವೆಂಟಿಲೇಟರ್‌ಗಳ ತಯಾರಕರಿಂದ ಉತ್ಪಾದನೆಯೂ ಪ್ರಾರಂಭವಾಗಿದೆ ಮತ್ತು ಒಂಬತ್ತು ತಯಾರಕರ ಮೂಲಕ 59,000 ಕ್ಕೂ ಹೆಚ್ಚು ಪಕರಣಗಳಿಗೆ ಖರೀದಿಸುವ ಆದೇಶಗಳನ್ನು ನೀಡಲಾಗಿದೆ ಎಂಬ ವಿವರಗಳನ್ನು ಸಚಿವರ ತಂಡ (ಜಿ.ಒ.ಎಮ್)ಕ್ಕೆ ನೀಡಲಾಯಿತು.

ಹಾಟ್‌ಸ್ಪಾಟ್‌ಗಳು ಮತ್ತು ಕ್ಲಸ್ಟರ್ ನಿರ್ವಹಣೆಯ ಕಾರ್ಯತಂತ್ರದ ಜೊತೆಗೆ ದೇಶಾದ್ಯಂತ ಪರೀಕ್ಷಾ ಕಿಟ್‌ಗಳ ಲಭ್ಯತೆ ಮತ್ತು ಪರೀಕ್ಷಾ ತಂತ್ರಗಳನ್ನು ಸಚಿವರ ತಂಡ (ಜಿ.ಒ.ಎಮ್) ಪರಿಶೀಲಿಸಿದೆ. ಕೊವಿಡ್-19 ಗಾಗಿ ಪ್ರಸ್ತುತ ಪರೀಕ್ಷಿಸುತ್ತಿರುವ ಸಾರ್ವಜನಿಕ ಮತ್ತು ಖಾಸಗಿ ಲ್ಯಾಬ್‌ಗಳ ಸಂಖ್ಯೆಯ ಜೊತೆಗೆ ಈ ಲ್ಯಾಬ್‌ ಗಳ ನೆಟ್‌ವರ್ಕ್ ಮೂಲಕ ಪ್ರತಿದಿನ ನಡೆಸಲಾಗುತ್ತಿರುವ ಪರೀಕ್ಷೆಗಳ ಸಂಖ್ಯೆಯ ಬಗ್ಗೆ ಸಚಿವರ ತಂಡ (ಜಿ.ಒ.ಎಮ್)ಕ್ಕೆ ವಿವರಿಸಿದರು.

ವಿವಿಧ ಸಶಕ್ತ ಸಮಿತಿಗಳಿಗೆ ನಿಯೋಜಿಸಲಾದ ವಿವಿಧ ಕಾರ್ಯಗಳ ಬಗ್ಗೆ ಸಚಿವರ ತಂಡ (ಜಿ.ಒ.ಎಮ್) ಚರ್ಚಿಸಿತು. ಶ್ರೀ ಅಮಿತಾಬ್ ಕಾಂತ್, ಡಾ.ಅರುಣ್ ಕುಮಾರ್ ಪಾಂಡ ಮತ್ತು ಶ್ರೀ ಎಸ್. ಪ್ರದೀಪ್ ಖರೋಲಾ ಅವರಿಂದ ಸಚಿವರ ತಂಡ (ಜಿ.ಒ.ಎಮ್)ಕ್ಕೆ ಮಾಹಿತಿಗಳ ಪ್ರಸ್ತುತಿ ಮಾಡಿದರು. ವಿವಿಧ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಾದ್ಯಂತದ ವಲಸೆ ಕಾರ್ಮಿಕರಿಗೆ ಆಹಾರವನ್ನು ಒದಗಿಸುವ ಮೂಲಕ ಸುಮಾರು 92,000 ಎನ್‌.ಜಿ.ಒ.ಗಳು, ಸ್ವ-ಸಹಾಯ ಸಂಘಗಳು ಮತ್ತು ನಾಗರಿಕ ಸಮಾಜ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ ಮತ್ತು ತ್ತಮ ಕೊಡುಗೆ ನೀಡುತ್ತಿವೆ. ರಾಜ್ಯ ಸರಕಾರಗಳ ಸಹಾಯದ ಎಸ್‌.ಡಿ.ಆರ್‌.ಎಫ್. ನಿಧಿಯಿಂದ ಹಣ ಹಂಚುವ ಮೂಲಕ ಮತ್ತು ಆಹಾರ ಧಾನ್ಯಗಳನ್ನು ಸಬ್ಸಿಡಿ ವೆಚ್ಚದಲ್ಲಿ ಒದಗಿಸುತ್ತಿರುವ ಎಫ್‌.ಸಿ.ಐ ಬೆಂಬಲದಿಂದ ಈ ಎನ್‌.ಜಿ.ಒ.ಗಳನ್ನು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ

ಹೆಚ್ಚು ಅಗತ್ಯವಿರುವ ಸ್ಥಳಗಳಿಗೆ ಸಂಪನ್ಮೂಲಗಳು / ಸ್ವಯಂಸೇವಕರನ್ನು (ಕೊವಿಡ್ ಯೋಧರು) ಸಜ್ಜುಗೊಳಿಸಲು ಆರೋಗ್ಯ ಕಾರ್ಯಕರ್ತರು, ಎನ್‌.ಎಸ್‌.ಎಸ್, ಎನ್‌.ವೈ.ಕೆ, ಎನ್‌.ಸಿ.ಸಿ, ವೈದ್ಯರು ಇತ್ಯಾದಿಗಳ ರಾಷ್ಟ್ರೀಯ ಮಟ್ಟದ ಮಾಹಿತಿ ಡೇಟಾವನ್ನು ಎಲ್ಲಾ ರಾಜ್ಯಗಳು, ಜಿಲ್ಲೆಗಳು ಮತ್ತು ಇತರ ಅಧಿಕಾರಿಗಳಿಗೆ ಸಿದ್ಧಪಡಿಸಿ ಹಂಚಿಕೊಳ್ಳಲಾಗಿದೆ ಎಂದು ಸಚಿವರ ತಂಡ (ಜಿ.ಒ.ಎಮ್)ಕ್ಕೆ ತಿಳಿಸಲಾಯಿತು. ಪ್ರಸ್ತುತ 1.24 ಕೋಟಿಗಿಂತ ಹೆಚ್ಚಿನ ಡೇಟಾ ಇದೆ. ಜಾಲತಾಣದ ಡ್ಯಾಶ್‌ ಬೋರ್ಡ್‌ನಲ್ಲಿ ಮಾನವ ಸಂಪನ್ಮೂಲಗಳು ಮತ್ತು ವಿಶೇಷತೆಯ ಪ್ರಕಾರ ಹೊಸ ಗುಂಪುಗಳು ಮತ್ತು ಉಪ-ಗುಂಪುಗಳನ್ನು ಸೇರಿಸುವುದರೊಂದಿಗೆ ಇದನ್ನು ನಿರಂತರವಾಗಿ ನವೀಕರಿಸಲಾಗುತ್ತಿದೆ. ಡ್ಯಾಶ್‌ ಬೋರ್ಡ್‌ನಲ್ಲಿ ಪ್ರತಿ ಗುಂಪಿನಿಂದ ಲಭ್ಯವಿರುವ ಮಾನವ ಸಂಪನ್ಮೂಲಗಳ ಸಂಖ್ಯೆಯ ಬಗ್ಗೆ ರಾಜ್ಯ ಮತ್ತು ಜಿಲ್ಲಾವಾರು ಮಾಹಿತಿ ಇದೆ, ಜೊತೆಗೆ ಆಯಾ ರಾಜ್ಯ ಮತ್ತು ಜಿಲ್ಲಾ ನೋಡಲ್ ಅಧಿಕಾರಿಗಳ ಸಂಪರ್ಕ ವಿವರಗಳಿವೆ. ಈ ಡೇಟಾಬೇಸ್ https://covidwarriors.gov.in/default.aspx ನಲ್ಲಿ ಲಭ್ಯವಿದೆ ಮತ್ತು ಸಾಮರ್ಥ್ಯವನ್ನು ಹೆಚ್ಚಿಸುವ ಉದ್ದೇಶಕ್ಕಾಗಿ https://diksha.gov.in/igot/ ಪೋರ್ಟಲ್‌ನೊಂದಿಗೆ ಸಹ ಸಂಪರ್ಕ ಹೊಂದಿದೆ. ಈ ಕೊವಿಡ್ ಯೋಧರಿಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಜಾಲತಾಣ ಮತ್ತು ಐ.ಜಿ.ಒ.ಟಿ. ತರಬೇತಿ ಜಾಲತಾಣದಂತಹ ಆನ್‌ಲೈನ್ ಪ್ಲಾಟ್‌ ಫಾರ್ಮ್‌ಗಳ ಮೂಲಕ ತರಬೇತಿ ನೀಡಲಾಗುತ್ತಿದೆ. ಪ್ಲಾಟ್‌ ಫಾರ್ಮ್‌ನಲ್ಲಿ 53 ಕೋರ್ಸ್‌ಗಳೊಂದಿಗೆ 14 ಕೋರ್ಸ್‌ಗಳಿವೆ, ಇದರಲ್ಲಿ 113 ವೀಡಿಯೊಗಳು ಮತ್ತು 29 ಡಾಕ್ಯುಮೆಂಟ್‌ಗಳಿವೆ. ದಿನಾಂಕದಂತೆ, 10 ಲಕ್ಷಕ್ಕೂ ಹೆಚ್ಚು ಸಿಬ್ಬಂದಿಗೆ ಈಗಾಗಲೇ ತರಬೇತಿ ನೀಡಲಾಗಿದೆ.

 

ಎಲ್ಲಾ ಹಂತದ ಎಲ್ಲ ಪಾಲುದಾರರ ಸಮರ್ಪಣೆ ಮತ್ತು ಕಠಿಣ ಪರಿಶ್ರಮವನ್ನು ಡಾ. ಹರ್ಷ್ ವರ್ಧನ್ ಶ್ಲಾಘಿಸಿದರು. ರೋಗಿಗಳ ಮಾನಸಿಕ ಸಮಸ್ಯೆ ಮತ್ತು ತಾರತಮ್ಯದ ಸಮಸ್ಯೆಗಳನ್ನು ಪರಿಹರಿಸುವ ತುರ್ತು ಅಗತ್ಯದ ದೃಷ್ಟಿಯಿಂದ ಮತ್ತು ಕೊವಿಡ್-19 ನೊಂದಿಗೆ ಹೋರಾಡುವ ಆರೋಗ್ಯ ಕಾರ್ಯಕರ್ತರನ್ನು ಕಾಡುವ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು, ಸಾಂಕ್ರಾಮಿಕ ರೋಗಗಳ ಕಾಯ್ದೆ 1897 ರ ತಿದ್ದುಪಡಿಮಾಡಿ ಅತ್ಯಂತ ಕಠಿಣ ನಿಬಂಧನೆಗಳೊಂದಿಗೆ ಇತ್ತೀಚೆಗೆ ಸುಗ್ರೀವಾಜ್ಞೆಯನ್ನು ಹೊರಡಿಸಲಾಗಿದೆ ಎಂದು ಸಚಿವ ಡಾ. ಹರ್ಷ್ ವರ್ಧನ್ ಅವರು ಮಾಹಿತಿ ನೀಡಿದರು “ಇದು ಅವರ ಹೋರಾಟ ಮಾತ್ರವಲ್ಲ, ನಮ್ಮ ಸಾಮೂಹಿಕ ಪ್ರಯತ್ನ. ಅವರು ನಮ್ಮ ಮುಂಚೂಣಿಯ ಯೋಧರು ಮತ್ತು ರಾಷ್ಟ್ರವಾಗಿ, ನಾವು ಅವರ ಕೊಡುಗೆಯನ್ನು ಗೌರವಿಸುವುದಲ್ಲದೆ ಅವರ ಸುರಕ್ಷತೆ ಮತ್ತು ಘನತೆಯನ್ನು ಸಹ ರಕ್ಷಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳೋಣ”ಎಂದು ಸಚಿವ ಡಾ.ಹರ್ಷ್ ವರ್ಧನ್ ಹೇಳಿದ್ದಾರೆ.

ಈಗಿನ ಮಾಹಿತಿಯಂತೆ ಕೊವಿಡ್ ಸಾವಿನ ಪ್ರಮಾಣವು ಸುಮಾರು 3.1% ರಷ್ಟಿದೆ ಮತ್ತು ಚೇತರಿಕೆ ಪ್ರಮಾಣವು 20% ಕ್ಕಿಂತ ಹೆಚ್ಚಿದೆ, ಇದು ಜಾಗತಿಕವಾಗಿ ಹೆಚ್ಚಿನ ದೇಶಗಳಿಗಿಂತ ತುಲನಾತ್ಮಕವಾಗಿ ಬಹಳ ಉತ್ತಮವಾಗಿದೆ ಮತ್ತು ಕ್ಲಸ್ಟರ್ ನಿರ್ವಹಣೆ ನಿರ್ವಹಣೆ ಹಾಗು ಧಾರಕ ತಂತ್ರಗಳು ಜೊತೆಗೆ ದೇಶದ ಲಾಕ್‌ ಡೌನ್‌ ಸಕಾರಾತ್ಮಕ ಪರಿಣಾಮವೆಂದು ಪರಿಗಣಿಸಬಹುದು. ದೇಶದ ಸರಾಸರಿ ದ್ವಿಗುಣಗೊಳಿಸುವಿಕೆಯ ಪ್ರಮಾಣವು ಈಗಿನ ಮಾಹಿತಿಯಂತೆ 9.1 ದಿನಗಳಾಗಿದೆ ಎಂದು ಸಚಿವರ ತಂಡ (ಜಿ.ಒ.ಎಮ್) ಗಮನಿಸಿದೆ.

ಈಗಿನಂತೆ, 20.66% ರಷ್ಟು ಚೇತರಿಕೆ ದರದಿಂದ 5,062 ಜನರನ್ನು ಗುಣಪಡಿಸಲಾಗಿದೆ ಎಂದು ಸಚಿವರ ತಂಡ (ಜಿ.ಒ.ಎಮ್)ಕ್ಕೆ ತಿಳಿಸಲಾಯಿತು. ನಿನ್ನೆಯಿಂದ, 1429 ಹೊಸ ಪ್ರಕರಣಗಳ ಹೆಚ್ಚಳ ವರದಿಯಾಗಿದೆ. ಅಲ್ಲದೆ, ಒಟ್ಟು 24,506 ಜನರು ಕೊವಿಡ್-19 ಸೋಂಕಿಗೆ ಸಕಾರಾತ್ಮಕವೆಂದು ದೃಢಪಡಿಸಲಾಗಿದೆ.

ಶ್ರೀಮತಿ ಪ್ರೀತಿ ಸುಡಾನ್, ಕಾರ್ಯದರ್ಶಿ, (ಎಚ್‌.ಎಫ್‌.ಡಬ್ಲ್ಯು), ಶ್ರೀ ಎಸ್. ಹೆಚ್. ವರ್ಧನ್ ಶ್ರೀಂಗ್ಲಾ, ಕಾರ್ಯದರ್ಶಿ (ವಿದೇಶಾಂಗ ವ್ಯವಹಾರ), ಶ್ರೀಎಸ್. ರವಿ ಕಪೂರ್, ಕಾರ್ಯದರ್ಶಿ (ಜವಳಿ), ಶ್ರೀ ಪ್ರದೀಪ್ ಸಿಂಗ್ ಖರೋಲಾ, ಕಾರ್ಯದರ್ಶಿ (ನಾಗರಿಕ ವಿಮಾನಯಾನ), ಶ್ರೀ ಎಸ್. ಪಿ.ಡಿ.ವಘೇಲಾ, ಕಾರ್ಯದರ್ಶಿ (ಔಷಧ), ಶ್ರೀ ಎಸ್. ಅನುಪ್ ವಾಧವನ್, ಕಾರ್ಯದರ್ಶಿ (ವಾಣಿಜ್ಯ), ಶ್ರೀ ಎಸ್. ಸಂಜೀವ ಕುಮಾರ್, ಎಸ್‌ಪಿಎಲ್. ಕಾರ್ಯದರ್ಶಿ (ಆರೋಗ್ಯ), ಶ್ರೀ ಸಂಜಯ್ ಬಂದೋಪಾಧ್ಯಾಯ, ಹೆಚ್ಚುವರಿ ಕಾರ್ಯದರ್ಶಿ (ನೌಕಾಯಾನ), ಶ್ರೀ ದಮ್ಮು ರವಿ, ಹೆಚ್ಚುವರಿ ಕಾರ್ಯದರ್ಶಿ (ಗೃಹ ವ್ಯವಹಾರ), ಶ್ರೀ ಎಸ್. ಅನಿಲ್ ಮಲಿಕ್, ಹೆಚ್ಚುವರಿ ಕಾರ್ಯದರ್ಶಿ (ಎಂ.ಎಚ್‌.ಎ), ಶ್ರೀ ಆನಂದ್ ಸ್ವರೂಪ್, ಐ.ಜಿ (ಐ.ಟಿ.ಬಿ.ಪಿ), ಡಾ. ರಾಜೀವ್ ಗರ್ಗ್, ಡಿ.ಜಿ.ಎಚ್‌.ಎಸ್, ಸಾಂಕ್ರಾಮಿಕ ರೋಗಶಾಸ್ತ್ರ ಮತ್ತು ಸಾಂಕ್ರಾಮಿಕ ರೋಗಗಳ ವಿಭಾಗದ ಮುಖ್ಯಸ್ಥ ಡಾ.ರಾಮನ್ ಗಂಗಖೇಡ್ಕರ್, ಐ.ಸಿ.ಎಂ.ಆರ್ ಮತ್ತು ಶ್ರೀ ಎಸ್. ಲಾವ್ ಅಗರ್ವಾಲ್, ಜೆಎಸ್ (ಎಮ್.ಒ.ಹೆಚ್.ಎಫ್.ಡ್ಬ್ಲೂ.) ಜೊತೆಗೆ ಎನ್‌.ಸಿ.ಡಿ.ಸಿ, ಸೇನೆ, ಐ.ಟಿ.ಬಿ.ಪಿ, ಫಾರ್ಮಾ, ಡಿ.ಜಿ.ಸಿ.ಎ ಮತ್ತು ಟೆಕ್ಸ ಟೈಲ್ಸ್ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

 

ಕೊವಿಡ್-19 ಸಂಬಂಧಿತ ತಾಂತ್ರಿಕ ಸಮಸ್ಯೆಗಳು, ಮಾರ್ಗಸೂಚಿಗಳು ಮತ್ತು ಸಲಹೆಗಾರರ ಎಲ್ಲಾ ಅಧಿಕೃತ ಮತ್ತು ನವೀಕರಿಸಿದ ಮಾಹಿತಿಗಾಗಿ ದಯವಿಟ್ಟು ಆಗಾಗ https://www.mohfw.gov.in/. ಅನ್ನು ಭೇಟಿ ನೀಡಿ

ಕೊವಿಡ್-19 ಗೆ ಸಂಬಂಧಿಸಿದ ತಾಂತ್ರಿಕ ಪ್ರಶ್ನೆಗಳನ್ನು technicalquery.covid19[at]gov[dot]in ನಲ್ಲಿ ಮತ್ತು ncov2019[at]gov[dot]in ನಲ್ಲಿ ಇತರ ಪ್ರಶ್ನೆಗಳಿಗೆ ಇಮೈಲ್ ಮಾಡಬಹುದು, ಹಾಗೂ @CovidIndiaSeva ಗೆ ಟ್ವೀಟ್ ಮಾಡಬಹುದು, ಇದು ಬಹುತೇಕ ನೈಜ ಸಮಯದ ಪ್ರತಿಕ್ರಿಯೆಯನ್ನು ನೀಡುತ್ತದೆ.

ಕೊವಿಡ್-19 ಕುರಿತು ಯಾವುದೇ ಪ್ರಶ್ನೆಗಳಿದ್ದಲ್ಲಿ, ದಯವಿಟ್ಟು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಸಹಾಯವಾಣಿ ಸಂಖ್ಯೆ.: 011-23978046 ಅಥವಾ 1075 (ನಿಷುಲ್ಕ )

ಕೊವಿಡ್-19 ಕುರಿತು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ಸಹಾಯವಾಣಿ ಸಂಖ್ಯೆಗಳ ಪಟ್ಟಿ https://www.mohfw.gov.in/pdf/coronvavirushelplinenumber.pdf ನಲ್ಲಿಯೂ ಲಭ್ಯವಿದೆ.

***



(Release ID: 1618318) Visitor Counter : 218