ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಕೋವಿಡ್ – 19 ಹೊಸ ಮಾಹಿತಿ
Posted On:
24 APR 2020 5:32PM by PIB Bengaluru
ಕೋವಿಡ್-19 ಹೊಸ ಮಾಹಿತಿ
ಶ್ರೇಣೀಕೃತ, ಹತೋಟಿಯಲ್ಲಿಡುವ ಮತ್ತು ಸಕ್ರಿಯ ವಿಧಾನದ ಮೂಲಕ, ಕೋವಿಡ್-19 ನಿರ್ವಹಣೆಗಾಗಿ ರಾಜ್ಯ ಸರ್ಕಾರಗಳು/ ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಭಾರತ ಸರ್ಕಾರವು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ಇವುಗಳನ್ನು ನಿಯಮಿತವಾಗಿ ಉನ್ನತ ಮಟ್ಟದಲ್ಲಿ ಪರಿಶೀಲಿಸಲಾಗುತ್ತಿದೆ ಮತ್ತು ಮೇಲ್ವಿಚಾರಣೆ ಮಾಡಲಾಗುತ್ತಿದೆ.
ಸನ್ಯಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ದೇಶಾದ್ಯಂತ ಪಂಚಾಯತ್ ಮುಖ್ಯಸ್ಥ (ಸರ್ಪಂಚ) ರೊಡನೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು. ಗ್ರಾಮದ ಮುಖ್ಯಸ್ಥರುಗಳು ತಮ್ಮ ಅನುಭವಗಳನ್ನು ಮತ್ತು ಲಾಕ್ಡೌನ್ ಕ್ರಮಗಳನ್ನು ನಿರ್ವಹಿಸುವ ಪ್ರಯತ್ನಗಳನ್ನು ಹಂಚಿಕೊಂಡರು. ಬಿಕ್ಕಟ್ಟಿನ ಸಂದರ್ಭದಲ್ಲಿ ನಿಜವಾದ ಪಾಠಗಳನ್ನು ಕಲಿಯಬಹುದು ಮತ್ತು ಪ್ರಸ್ತುತ ಕಾಲವು ನಮಗೆ ಸ್ವಾವಲಂಬನೆಯ ದೊಡ್ಡ ಪಾಠವನ್ನು ಕಲಿಸಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ಉತ್ತಮ ಜಾಗರೂಕತೆಗಾಗಿ ಕೊರೊನಾ ಟ್ರ್ಯಾಕರ್ ಆ್ಯಪ್ "ಆರೋಗ್ಯ ಸೇತು" ಡೌನ್ಲೋಡ್ ಮಾಡುವಲ್ಲಿ ಅವರ ಮೂಲಸೌಕರ್ಯಗಳನ್ನು ಬಲಪಡಿಸಲು ಮತ್ತು ಜಾಗೃತಿ ಮೂಡಿಸಲು ಪ್ರಧಾನಮಂತ್ರಿಯವರು ಪಂಚಾಯತ್ಗಳಿಗೆ ಮನವಿ ಮಾಡಿದರು.
ಕೋವಿಡ್-19 ನಿರ್ವಹಣೆಗೆ ಸಿದ್ಧತೆ ಮತ್ತು ಕ್ರಮಗಳನ್ನು ಪರಿಶೀಲಿಸಲು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷ್ ವರ್ಧನ್ ಅವರು ಇಂದು ಎಲ್ಲಾ ರಾಜ್ಯಗಳ ಆರೋಗ್ಯ ಸಚಿವರು ಮತ್ತು ಆರೋಗ್ಯ ಕಾರ್ಯದರ್ಶಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಿದರು. ಇದುವರೆಗಿನ ರಾಜ್ಯಗಳ ಪ್ರಯತ್ನಕ್ಕೆ ಅವರು ಧನ್ಯವಾದಗಳನ್ನು ಅರ್ಪಿಸಿದರು ಮತ್ತು ಹೆಚ್ಚಿನ ಸಂಖ್ಯೆಯ ಪ್ರಕರಣಗಳನ್ನು ವರದಿ ಮಾಡುವ ಜಿಲ್ಲೆಗಳತ್ತ ಗಮನಹರಿಸುವಂತೆ ಅಥವಾ ಅವರ ಪ್ರಕರಣಗಳ ವೇಗವನ್ನು ದ್ವಿಗುಣಗೊಳಿಸುವ ದರವನ್ನು ಮತ್ತು ಹೆಚ್ಚಿನ ಪ್ರಕರಣಗಳ ಮರಣವನ್ನು ಗುರುತಿಸುವ ಜಿಲ್ಲೆಗಳ ಬಗ್ಗೆ ಗಮನಹರಿಸುವಂತೆ ವಿನಂತಿಸಿದರು.
ರೋಗಿಗಳು ಸಮಯೋಚಿತ ಚಿಕಿತ್ಸೆ ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಮತ್ತು ಮರಣದ ಪ್ರಮಾಣ ಕಡಿಮೆಯಾಗುವುದನ್ನು ಖಚಿತಪಡಿಸಿಕೊಳ್ಳಲು ಕಣ್ಗಾವಲು, ಮನೆ-ಮನೆಗೆ ಸಕ್ರಿಯ ಪ್ರಕರಣ ಪತ್ತೆ, ಪ್ರಕರಣಗಳ ಆರಂಭಿಕ ಗುರುತಿಸುವಿಕೆ ಮತ್ತು ಸರಿಯಾದ ಕ್ಲಿನಿಕಲ್ ನಿರ್ವಹಣೆಯತ್ತ ಗಮನಹರಿಸಬೇಕೆಂದು ಡಾ. ಹರ್ಷ್ ವರ್ಧನ್ ರಾಜ್ಯಗಳನ್ನು ಕೋರಿದರು. ಕೋವಿಡ್-19 ವಿರುದ್ಧ ಹೋರಾಡುತ್ತಿರುವ ವೈದ್ಯರು ಮತ್ತು ಇತರ ಮುಂಚೂಣಿ ಆರೋಗ್ಯ ಕಾರ್ಯಕರ್ತರಿಗೆ ಹಾಗೂ ಕೋವಿಡ್ ಹೊಂದಿರುವ ರೋಗಿಗಳು ಅಥವಾ ಚೇತರಿಸಿಕೊಂಡ ರೋಗಿಗಳ ಬಗ್ಗೆ ಆಗುತ್ತಿರುವ ನಿಂದನೆ, ತಾರತಮ್ಯದ ವಿರುದ್ಧ ಕೈಗೊಳ್ಳುತ್ತಿರುವ ಕ್ರಮಗಳನ್ನು ವೈಯಕ್ತಿಕವಾಗಿ ಪರಿಶೀಲಿಸಬೇಕು ಎಂದು ಅವರು ಆರೋಗ್ಯ ಸಚಿವರುಗಳನ್ನು ಕೋರಿದರು
ಇದಕ್ಕೂ ಮೊದಲು ಡಾ.ಹರ್ಷ್ ವರ್ಧನ್ ಅವರು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್ಒ) ಎಲ್ಲಾ ಸದಸ್ಯ ರಾಷ್ಟ್ರಗಳ ಆರೋಗ್ಯ ಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಿದರು ಮತ್ತು ಕೋವಿಡ್-19 ನಿರ್ವಹಣೆಯಲ್ಲಿ ಇದುವರೆಗಿನ ಭಾರತದ ಕಾರ್ಯವನ್ನು ಹಂಚಿಕೊಂಡರು ಮತ್ತು ಭಾರತದ ನಿರ್ವಹಣಾ ಪ್ರಯತ್ನಗಳು ಸಮುದಾಯದ ಪಾಲ್ಗೊಳ್ಳುವಿಕೆ ಮತ್ತು ನಿಯಂತ್ರಿಸುವ ಪ್ರಯತ್ನಗಳ ಅವಳಿ ತತ್ವಗಳ ಮೇಲೆ ಆಧರಿಸಿವೆ ಎಂಬುದನ್ನು ಎತ್ತಿ ತೋರಿಸಿದರು.
ಪ್ರಸ್ತುತ, ಈ ಹಿಂದೆ ಪ್ರಕರಣಗಳನ್ನು ಹೊಂದಿದ್ದ ದೇಶದ 15 ಜಿಲ್ಲೆಗಳು ಕಳೆದ 28 ದಿನಗಳಿಂದ ಯಾವುದೇ ಹೊಸ ಪ್ರಕರಣಗಳನ್ನು ವರದಿ ಮಾಡಿಲ್ಲ. ಈಗಾಗಲೇ ಗುರುತು ಮಾಡಿದ್ದ ಜಿಲ್ಲೆಗಳಲ್ಲದೆ, ಈ ಪಟ್ಟಿಗೆ ಮೂರು ಹೊಸ ಜಿಲ್ಲೆಗಳು ಸೇರಿವೆ: ಛತ್ತೀಸ್ಗಢ ದ ದುರ್ಗ್ ಮತ್ತು ರಾಜನಂದಗಾಂವ್; ಮತ್ತು ಮಧ್ಯಪ್ರದೇಶದ ಶಿವಪುರಿ.
ಇದಲ್ಲದೆ, 23 ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಂದ ಒಟ್ಟು 80 ಜಿಲ್ಲೆಗಳು ಕಳೆದ 14 ದಿನಗಳಿಂದ ಯಾವುದೇ ಹೊಸ ಪ್ರಕರಣಗಳನ್ನು ವರದಿ ಮಾಡಿಲ್ಲ.
@CovidIndiaSeva (ಕೋವಿಡ್ಇಂಡಿಸೇವಾ ) ಟ್ವಿಟರ್ ಹ್ಯಾಂಡಲ್ ನೈಜ-ಸಮಯದ ಅಧಿಕೃತ ಆರೋಗ್ಯ ಮತ್ತು ತರಬೇತಿ ಪಡೆದ ತಜ್ಞರು ಒದಗಿಸಿದ ಸಾರ್ವಜನಿಕ ಮಾಹಿತಿಯ ಮೂಲಕ ನಾಗರಿಕರ ಪ್ರಶ್ನೆಗಳಿಗೆ ಶೀಘ್ರವಾಗಿ ಉತ್ತರಿಸಲು ಸಹಾಯ ಮಾಡುತ್ತದೆ.
ಪ್ರಸ್ತುತ, 4,748 ಜನರನ್ನು ಗುಣಪಡಿಸಲಾಗಿದೆ, ಇದರಿಂದ ಚೇತರಿಕೆಯ ಪ್ರಮಾಣವು 20.57% ರಷ್ಟು ಆಗಿದೆ. ನಿನ್ನೆಯಿಂದ, ಭಾರತದಲ್ಲಿ 1684 ಹೊಸ ಪ್ರಕರಣಗಳ ವರದಿಯಾಗಿದೆ. ಅಲ್ಲದೆ, ಒಟ್ಟು ಧೃಡಪಟ್ಟ ಕೋವಿಡ್-19 ಸೋಂಕಿತರ ಸಂಖ್ಯೆ 23,077 ಆಗಿದ್ದು ಒಟ್ಟು 718 ಸಾವುಗಳು ವರದಿಯಾಗಿವೆ.
ಕೋವಿಡ್-19ಗೆ ಸಂಬಂಧಿತ ತಾಂತ್ರಿಕ ಸಮಸ್ಯೆಗಳು, ಮಾರ್ಗಸೂಚಿಗಳು ಮತ್ತು ಸಲಹೆಗಳ ಎಲ್ಲಾ ಅಧಿಕೃತ ಮತ್ತು ಹೊಸ ಮಾಹಿತಿಗಾಗಿ ದಯವಿಟ್ಟು ನಿಯಮಿತವಾಗಿ ಭೇಟಿ ನೀಡಿ: https://www.mohfw.gov.in
ಕೋವಿಡ್-19 ಗೆ ಸಂಬಂಧಿಸಿದ ತಾಂತ್ರಿಕ ಪ್ರಶ್ನೆಗಳನ್ನು technquery.covid19[at]gov[dot]in ಮತ್ತು ಇತರ ಪ್ರಶ್ನೆಗಳನ್ನು ಕೇಳಲು ncov2019[at]gov[dot]in ಗೆ ಇಮೇಲ್ ಮಾಡಬಹುದು.
ಕೋವಿಡ್-19 ಬಗ್ಗೆ ಯಾವುದೇ ಪ್ರಶ್ನೆಗಳಿದ್ದಲ್ಲಿ, ದಯವಿಟ್ಟು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಹಾಯವಾಣಿ ಸಂಖ್ಯೆ. : +91-11-23978046 ಅಥವಾ 1075 (ಟೋಲ್-ಫ್ರೀ). ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ಕೋವಿಡ್-19ಗೆ ಸಂಬಂಧಿಸಿದ ಸಹಾಯವಾಣಿ ಸಂಖ್ಯೆಗಳ ಪಟ್ಟಿ https://www.mohfw.gov.in/pdf/coronvavirushelplinenumber.pdf ನಲ್ಲಿಯೂ ಲಭ್ಯವಿದೆ.
***
(Release ID: 1618095)
Visitor Counter : 210
Read this release in:
English
,
Urdu
,
Hindi
,
Marathi
,
Assamese
,
Bengali
,
Punjabi
,
Punjabi
,
Gujarati
,
Odia
,
Tamil
,
Telugu
,
Malayalam