PIB Headquarters

ಕೋವಿಡ್-19: ಪಿ ಐ ಬಿ ದೈನಿಕ ವರದಿ

Posted On: 24 APR 2020 7:05PM by PIB Bengaluru

ಕೋವಿಡ್-19: ಪಿ  ಬಿ ದೈನಿಕ ವರದಿ

Coat of arms of India PNG images free downloadhttps://static.pib.gov.in/WriteReadData/userfiles/image/image001ZTPU.jpg

(ಕಳೆದ 24 ಗಂಟೆಗಳಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಮಾಧ್ಯಮ ಹೇಳಿಕೆಗಳು ಮತ್ತು ಪಿಐಬಿ ಮಾಡಿದ ವಾಸ್ತವದ ಪರಿಶೀಲನೆ -Fact check- ಯನ್ನು ಒಳಗೊಂಡಿದೆ)

  • ಕೋವಿಡ್ -19 ಕ್ಕೆ ಚಿಕಿತ್ಸೆ ಪಡೆಯುತ್ತಿದ್ದ  4,748  ಮಂದಿ ಗುಣಮುಖರಾಗಿದ್ದಾರೆ, ಗುಣಮುಖರಾದವರ ದರ 20.57 %
  • ನಿನ್ನೆಯಿಂದೀಚೆಗೆ 1684 ಹೊಸ  ಪ್ರಕರಣಗಳ ಹೆಚ್ಚಳವಾಗಿದೆ , ಒಟ್ಟು ದೃಢೀಕೃತ ಪ್ರಕರಣಗಳ ಸಂಖ್ಯೆ  23,077ಕ್ಕೇರಿದೆ.
  • ಇಂದಿನವರೆಗೆ , 15 ಜಿಲ್ಲೆಗಳಲ್ಲಿ ಕಳೆದ 28 ದಿನಗಳಿಂದ ಯಾವುದೇ ಹೊಸ ಪ್ರಕರಣ ವರದಿಯಾಗಿಲ್ಲ. ;80 ಜಿಲ್ಲೆಗಳಲ್ಲಿ ಕಳೆದ 14 ದಿನಗಳಿಂದ ಯಾವುದೇ ಹೊಸ ಪ್ರಕರಣ ವರದಿಯಾಗಿಲ್ಲ.
  • ಜಾಗತಿಕ ಸಾಂಕ್ರಾಮಿಕ ನಮಗೆ ಸ್ವಾವಲಂಬನೆಯ ಪಾಠವನ್ನು ಕಲಿಸಿದೆ ಎಂದು ಪ್ರಧಾನ ಮಂತ್ರಿ ಹೇಳಿಕೆ
  • ಸಿಬ್ಬಂದಿಗಳಲ್ಲಿ ಕೋವಿಡ್ -19  ಪಾಸಿಟಿವ್  ಕಂಡುಬಂದರೆ ಕಂಪೆನಿಗಳ ಸಿ...ಗಳನ್ನು ಕಾನೂನು ಪ್ರಕಾರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂಬ ಕೈಗಾರಿಕಾ ಸಂಘಟನೆಗಳ ಕಳವಳ ಹುರುಳಿಲ್ಲದ್ದು ಎಂದು ಎಂ.ಎಚ್.. ಸ್ಪಷ್ಟನೆ.
  • ಕೋವಿಡ್ -19 ಸ್ಪೋಟ ತಡೆಯಲು ಭಾರತದ ಪ್ರತಿಕ್ರಿಯಾ ಪ್ರಯತ್ನಗಳು ಪೂರ್ವತಯಾರಿ, ಮುಂಜಾಗ್ರತೆ ಮತ್ತು ಹಂತ ಹಂತವಾಗಿ  ಪರಿಸ್ಥಿತಿಯ ನಿರ್ವಹಣೆ ಮಾಡುವುದನ್ನು ಒಳಗೊಂಡಿವೆ ಎಂದು ಡಾ. ಹರ್ಷ ವರ್ಧನ ಹೇಳಿದ್ದಾರೆ.  
  • ಪರಿಸ್ಥಿತಿಯ ಮೌಲ್ಯಮಾಪನ ಮಾಡಲು ಮತ್ತು ಕೋವಿಡ್ -19 ಹರಡುವಿಕೆ ವಿರುದ್ದ ರಾಜ್ಯಗಳ ಪ್ರಯತ್ನಗಳನ್ನು ಒಗ್ಗೂಡಿಸಲು  ಇನ್ನಷ್ಟು ಅಂತರ ಸಚಿವಾಲಯ ಕೇಂದ್ರೀಯ ತಂಡಗಳ ರಚನೆ.

 

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಿಂದ ಕೋವಿಡ್ -19 ಅಪ್ ಡೇಟ್

ಇದುವರೆಗೆ ಕೋವಿಡ್ -19 ರಿಂದ 4,748 ಮಂದಿ ಗುಣಮುಖರಾಗಿದ್ದಾರೆ, ಈ ರೋಗದಿಂದ ಗುಣಮುಖರಾದವರ ದರ 20.57% . ನಿನ್ನೆಯಿಂದೀಚೆಗೆ 1684 ಹೊಸ ಪ್ರಕರಣಗಳು ವರದಿಯಾಗಿವೆ..ಒಟ್ಟು 23,077 ಜನರಿಗೆ ಕೋವಿಡ್ -19 ಇರುವುದು ದೃಢಪಟ್ಟಿದೆ , ಭಾರತದಲ್ಲಿ ಇಂದಿನವರೆಗೆ ಒಟ್ಟು 718 ಮಂದಿ ಈ ರೋಗದಿಂದ ಮೃತಪಟ್ಟ ಬಗ್ಗೆ ವರದಿಯಾಗಿದೆ. ಈ ಮೊದಲು ಪ್ರಕರಣಗಳು ದಾಖಲಾಗಿದ್ದ ದೇಶದ 15 ಜಿಲ್ಲೆಗಳಲ್ಲಿ ಕಳೆದ 28 ದಿನಗಳಿಂದ  ಯಾವುದೇ ಹೊಸ ಪ್ರಕರಣ ವರದಿಯಾಗಿಲ್ಲ. ಇದಲ್ಲದೆ 23 ರಾಜ್ಯಗಳು/ಕೇಂದ್ರಾಡಳಿತ  ಪ್ರದೇಶಗಳ 80 ಜಿಲ್ಲೆಗಳಿಂದ ಕಳೆದ 14 ದಿನಗಳಲ್ಲಿ ಯಾವುದೇ ಹೊಸ ಪ್ರಕರಣ ವರದಿಯಾಗಿಲ್ಲ. .@CovidIndiaSeva ಟ್ವಿಟರ್ ಹ್ಯಾಂಡಲ್ ತಕ್ಷಣದಲ್ಲಿ   ಸಂದರ್ಭದ  ಅಧಿಕೃತ ಆರೋಗ್ಯ ಮತ್ತು ಸಾರ್ವಜನಿಕ ಮಾಹಿತಿಯನ್ನು ತರಬೇತಿ ಪಡೆದ ತಜ್ಞರಿಂದ ಒದಗಿಸುತ್ತದೆ ಮತ್ತು ನಾಗರಿಕರ ಪ್ರಶ್ನೆಗಳಿಗೆ ತಕ್ಷಣವೇ ಉತ್ತರಗಳನ್ನು ಒದಗಿಸುತ್ತದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1617851

ಕೊರೊನಾ ಜಾಗತಿಕ ಸಾಂಕ್ರಾಮಿಕವು  ಆತ್ಮಾವಲಂಬನೆ ಮತ್ತು ಸ್ವಾವಲಂಬನೆಯ ದೊಡ್ಡ ಪಾಠವನ್ನು ಕಲಿಸಿದೆ: ಪ್ರಧಾನ ಮಂತ್ರಿ

ರಾಷ್ಟ್ರೀಯ ಪಂಚಾಯತ್ ರಾಜ್ ದಿನ 2020 ರ ಅಂಗವಾಗಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೇಶಾದ್ಯಂತ ಗ್ರಾಮಪಂಚಾಯತ್ ಗಳ ಸರಪಂಚರ ಜೊತೆ ಇಂದು ವೀಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು. ಈ ಕಾರ್ಯಕ್ರಮದಲ್ಲಿ ಅವರು ಏಕೀಕೃತ ಇ-ಗ್ರಾಮ ಸ್ವರಾಜ್ ಪೊರ್ಟಲನ್ನು ಮತ್ತು ಮೊಬೈಲ್ ಅಪ್ಲಿಕೇಶನನ್ನು ಹಾಗು ಸ್ವಾಮಿತ್ವ ಯೋಜನೆಯನ್ನು ಕಾರ್ಯಾರಂಭ ಮಾಡಿದರು. ಸರಪಂಚರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ ಅವರು ಕೊರೊನಾ ಜಾಗತಿಕ ಸಾಂಕ್ರಾಮಿಕವು  ಜನರು ಕೆಲಸ ಮಾಡುವ ಮತ್ತು ಚಿಂತಿಸುವ  ರೀತಿಯಲ್ಲಿ ಬದಲಾವಣೆ ತಂದಿದೆ ಮತ್ತು ಒಳ್ಳೆಯ ಪಾಠ ಕಲಿಸಿದೆ ಎಂದರು. ಈ ಜಾಗತಿಕ ಸಾಂಕ್ರಾಮಿಕವು ನಾವು ಸದಾ ಸ್ವಾವಲಂಬಿಯಾಗಬೇಕು ಎಂಬುದನ್ನೂ  ಕಲಿಸಿದೆ ಎಂದರು.

ವಿವರಗಳಿಗೆhttps://pib.gov.in/PressReleseDetail.aspx?PRID=1617772

ಸಿಬ್ಬಂದಿಗಳಲ್ಲಿ ಕೋವಿಡ್ -19 ಪಾಸಿಟಿವ್ ಕಂಡುಬಂದರೆ ಕಂಪೆನಿಯ ಸಿ... ವಿರುದ್ದ ಕಾನೂನು ಕ್ರಮ ಎಂಬ ಕೈಗಾರಿಕಾ ಸಂಘಟನೆಗಳ ಕಳವಳ ತಪ್ಪು ತಿಳುವಳಿಕೆಯಿಂದಾದುದು ಎಂದು ಎಂ.ಎಚ್.. ಹೇಳಿದೆ

ಮಾರ್ಗದರ್ಶಿಗಳನ್ನು ತಪ್ಪಾಗಿ ವ್ಯಾಖ್ಯಾನಿಸಲಾಗಿರುವುದರಿಂದ ಕೆಲವು ಕಳವಳಗಳು ಮಾಧ್ಯಮಗಳಲ್ಲಿ ವ್ಯಕ್ತವಾಗಿವೆ ಮತ್ತು ಕೆಲವು  ಉತ್ಪಾದನಾ ಸೌಲಭ್ಯಗಳೂ ಇದನ್ನು ವ್ಯಕ್ತ ಮಾಡಿವೆ. ಕಂಟೈನ್ ಮೆಂಟ್ ವಲಯದಿಂದ ಹೊರಗೆ ಇರುವ ಪ್ರದೇಶದಲ್ಲಿ 15.04.2020ಕ್ಕೆ ಮೊದಲು ಕಾರ್ಯಾಚರಣೆಗೆ ಅನುಮತಿಸಲ್ಪಟ್ಟಿರುವ  ಕೈಗಾರಿಕೆಗಳು ಪ್ರತ್ಯೇಕ / ಹೊಸ ಅನುಮತಿಗಳನ್ನು ಪಡೆಯುವ ಅಗತ್ಯ ಇಲ್ಲ ಎಂದು ಎಮ್.ಎಚ್.ಎ. ಸ್ಪಷ್ಟಪಡಿಸಿದೆ.

ವಿವರಗಳಿಗಾಗಿ: https://pib.gov.in/PressReleseDetail.aspx?PRID=1617635

ಕೊರೊನಾ ವೈರಸ್ ಹಾಕುವ ಎಂತಹದೇ ಸವಾಲುಗಳನ್ನು ಎದುರಿಸಲು ಸಾಕಷ್ಟು ಬಲವನ್ನು ಮತ್ತು ಸಂಪನ್ಮೂಲವನ್ನು ಭಾರತವು ಗಳಿಸಿಕೊಂಡಿದೆ :ಡಾ. ಹರ್ಷ ವರ್ಧನ್

“ಕೋವಿಡ್ -19 ಸ್ಪೋಟದ ಪರಿಣಾಮವಾಗಿ ಉದ್ಭವಿಸಿರುವ ಪರಿಸ್ಥಿತಿಯನ್ನು ನಿರ್ವಹಿಸುವಲ್ಲಿ ಭಾರತವು ಪೂರ್ವಭಾವಿಯಾಗಿ, ಪೂರ್ವ ತಯಾರಿಯ ಮತ್ತು ಹಂತ ಹಂತವಾಗಿರುವ ಪ್ರತಿಕ್ರಿಯಾತ್ಮಕ ಕ್ರಮವನ್ನು ರೂಢಿಸಿ ಕೊಂಡಿದೆ” ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಡಾ. ಹರ್ಷ ವರ್ಧನ ಅವರಿಂದು ಹೇಳಿದ್ದಾರೆ. ಕೋವಿಡ್ -19 ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಕುರಿತ  ವಿಶ್ವ ಆರೋಗ್ಯ ಸಂಘಟನೆಯ (ಡಬ್ಲ್ಯು.ಎಚ್.ಒ.) ಸದಸ್ಯ ರಾಷ್ಟ್ರಗಳ ಆರೋಗ್ಯ  ಸಚಿವರ ವರ್ಚುವಲ್ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ವಿವರಗಳಿಗೆ: https://pib.gov.in/PressReleseDetail.aspx?PRID=1617656

ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಆರೋಗ್ಯ ಸಚಿವಾಲಯ ಸೂಚನೆ: ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಕ್ಷಯ ರೋಗಿಗಳಿಗೆ ಅಡೆ ತಡೆ ಇಲ್ಲದ ಸೇವೆಯನ್ನು ಖಾತ್ರಿಗೊಳಿಸಿ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿಯ ರಾಷ್ಟ್ರೀಯ ಕ್ಷಯ ನಿರ್ಮೂಲನೆ ಕಾರ್ಯಕ್ರಮದ ಅಡಿಯಲ್ಲಿಯ ಎಲ್ಲಾ ಸೌಲಭ್ಯಗಳು ಸಾರ್ವಜನಿಕ ಹಿತಾಸಕ್ತಿಯ ಕಾರಣಕ್ಕಾಗಿ ಪೂರ್ಣವಾಗಿ ಕಾರ್ಯಾಚರಿಸುತ್ತಿರುವುದನ್ನು ಖಾತ್ರಿಪಡಿಸುವಂತೆ ತಿಳಿಸಿದೆಯಲ್ಲದೆ ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ನಡುವೆಯೂ ಕ್ಷಯ ರೋಗಿಗಳಿಗೆ ರೋಗ ಪತ್ತೆ ಮತ್ತು ಚಿಕಿತ್ಸಾ ಸೌಲಭ್ಯಗಳು ಯಾವುದೇ ಅಡೆ ತಡೆ ಇಲ್ಲದೆ ಲಭ್ಯವಾಗುತ್ತಿರಬೇಕು ಎಂದೂ ಹೇಳಿದೆ.

ವಿವರಗಳಿಗೆ : https://pib.gov.in/PressReleseDetail.aspx?PRID=1617835

ಕೋವಿಡ್ -19 ಹರಡುವಿಕೆಯನ್ನು ನಿಯಂತ್ರಿಸಲು ಮತ್ತು ಅದರ ವಿರುದ್ದ ಹೋರಾಟದ ಸರಕಾರದ ಪ್ರಯತ್ನಗಳನ್ನು ಒಗ್ಗೂಡಿಸಲು ಮತ್ತು ಪರಿಸ್ಥಿತಿಯ ಮೌಲ್ಯಮಾಪನ ಮಾಡಿಸಲು ಕೇಂದ್ರ ಸರಕಾರದಿಂದ  ಅಂತರ- ಸಚಿವಾಲಯ ಕೇಂದ್ರೀಯ ತಂಡಗಳ ರಚನೆ

ದೇಶದ ಕೆಲವೊಂದು ಜಿಲ್ಲೆಗಳಲ್ಲಿ ಲಾಕ್ ಡೌನ್ ಕ್ರಮಗಳಲ್ಲಿ ಹಲವಾರು ಉಲ್ಲಂಘನೆಗಳು ವರದಿಯಾಗಿರುವ ಕಾರಣದಿಂದ ಗಂಭೀರ ಆರೋಗ್ಯ ಅಪಾಯ ಹಾಗು ಕೋವಿಡ್ -19 ಹರಡುವ ಅಪಾಯ ಇದ್ದು, ಇದು ಸಾರ್ವಜನಿಕರ ಸಾಮಾನ್ಯ ಹಿತಾಸಕ್ತಿಗೆ ವಿರುದ್ದವಾದುದು. ಈ ಉಲ್ಲಂಘನೆ ಪ್ರಕರಣಗಳಲ್ಲಿ ಮುಂಚೂಣಿ ಆರೋಗ್ಯ ವೃತ್ತಿಪರರ ಮೇಲೆ ಹಿಂಸೆ , ಪೊಲೀಸ್ ಸಿಬ್ಬಂದಿಗಳ ಮೇಲೆ ಧಾಳಿ, ಮಾರುಕಟ್ಟೆ ಪ್ರದೇಶದಲ್ಲಿ ಸಾಮಾಜಿಕ ಅಂತರ ಉಲ್ಲಂಘನೆ ಮತ್ತು ಕ್ವಾರಂಟೈನ್ ಕೇಂದ್ರಗಳ ಸ್ಥಾಪನೆಗೆ ವಿರೋಧ, ಇತ್ಯಾದಿಗಳು ಒಳಗೊಂಡಿವೆ. ಕೇಂದ್ರವು ಗುಜರಾತಿಗೆ ಎರಡು, ತೆಲಂಗಾಣ, ತಮಿಳುನಾಡು ಮತ್ತು ಮಹಾರಾಷ್ಟ್ರಗಳಿಗೆ ತಲಾ ಒಂದೊಂದು ಅಂತರ ಸಚಿವಾಲಯ ಕೇಂದ್ರೀಯ ತಂಡಗಳನ್ನು ರಚಿಸಿದೆ. ಈ ತಂಡಗಳು ಸ್ಥಳ ಪರಿಶೀಲನೆ ಮಾಡಿ, ಪರಿಸ್ಥಿತಿಯ ಮೌಲ್ಯ ಮಾಪನ  ಮಾಡುತ್ತವೆ. ಮತ್ತು ಅವುಗಳ ಪರಿಹಾರಕ್ಕಾಗಿ ರಾಜ್ಯದ ಅಧಿಕಾರಿಗಳಿಗೆ ಅವಶ್ಯ ನಿರ್ದೇಶನ ನೀಡುತ್ತವೆ ಮತ್ತು ಜನತೆಯ ವಿಸ್ತಾರ ಹಿತಾಸಕ್ತಿಗಾಗಿ ಕೇಂದ್ರ ಸರಕಾರಕ್ಕೆ ವರದಿಯನ್ನು ಸಲ್ಲಿಸುತ್ತವೆ

ವಿವರಗಳಿಗೆ :  https://pib.gov.in/PressReleseDetail.aspx?PRID=1617834

ಪಿ.ಎಂ.ಯು.ವೈ. ಫಲಾನುಭವಿಗಳಿಗೆ ಉಚಿತ ಸಿಲಿಂಡರುಗಳ ಪೂರೈಕೆಯನ್ನು ತ್ವರಿತಗೊಳಿಸಲು .ಎಂ.ಸಿ. ಅಧಿಕಾರಿಗಳಿಗೆ ಶ್ರೀ ಧರ್ಮೇಂದ್ರ ಪ್ರಧಾನ್ ಕರೆ

ಪಿ.ಎಂ.ಯು.ವೈ. ಫಲಾನುಭವಿಗಳಿಗೆ ಉಚಿತ ಸಿಲಿಂಡರುಗಳ ಪೂರೈಕೆಯನ್ನು ತ್ವರಿತಗೊಳಿಸಲು ವ್ಯವಸ್ಥಿತವಾಗಿ ಕಾರ್ಯಾಚರಿಸುವಂತೆ ಎಲ್.ಪಿ.ಜಿ.ಸಿಲಿಂಡರ್ ಪೂರೈಕೆ ಸರಪಳಿಯಲ್ಲಿರುವ ಎಲ್ಲಾ ಭಾಗೀದಾರರು ಶ್ರದ್ಧೆಯಿಂದ ಕಾರ್ಯಾಚರಿಸುವಂತೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಹಾಗು ಉಕ್ಕು ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್ ಕರೆ ನೀಡಿದ್ದಾರೆ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಪ್ಯಾಕೇಜಿನಡಿಯಲ್ಲಿ ಕೋವಿಡ್ -19 ಸಂಬಂಧಿ ಅವ್ಯವಸ್ಥೆಗಳಲ್ಲಿ  ಬಡವರಿಗೆ ಸಹಾಯ ಮಾಡಲು 8 ಕೋಟಿಗೂ ಅಧಿಕ ಪಿ.ಎಮ್.ಯು.ವೈ ಫಲಾನುಭವಿಗಳು ಮುಂದಿನ 3 ತಿಂಗಳು 3 ಉಚಿತ ಸಿಲಿಂಡರುಗಳನ್ನು ಪಡೆಯಲು ಅರ್ಹರಾಗಿದ್ದಾರೆ.

ವಿವರಗಳಿಗೆ : https://pib.gov.in/PressReleseDetail.aspx?PRID=1617576

ಡಿ..ಆರ್./ .ಸಿ..ಆರ್ ಕೆಲಸ- ಕಾರ್ಯಗಳನ್ನು ಪರಾಮರ್ಶಿಸಿದ ಕೇಂದ್ರ ಕೃಷಿ  ಸಚಿವರು

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವರಾದ ಶ್ರೀ ನರೇಂದ್ರ ಸಿಂಗ್ ತೋಮರ್ ಅವರು ಕೃಷಿ ಸಂಶೋಧನೆ ಮತ್ತು ಶಿಕ್ಷಣ ಇಲಾಖೆ (ಡಿ.ಎ.ಆರ್.ಇ.) ಹಾಗು ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐ.ಸಿ.ಎ.ಆರ್.)  ಕೆಲಸ ಕಾರ್ಯಗಳ ಬಗ್ಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಐ.ಸಿ.ಎ.ಆರ್ ಮತ್ತು ಕೃಷಿ ವಿಜ್ಞಾನ ಕೇಂದ್ರಗಳ (ಕೆ.ವಿ.ಕೆ.ಎಸ್.) ಗಳ ಜಾಲದ ಮೂಲಕ ಗರಿಷ್ಟ ಸಂಖ್ಯೆಯ ರೈತರನ್ನು ತಲುಪಿ , ತಂತ್ರಜ್ಞಾನವನ್ನು ಅವರಿಗೆ  ಹೆಚ್ಚು ಹೆಚ್ಚು ಪ್ರಮಾಣದಲ್ಲಿ ತಲುಪಿಸುವ ಅಗತ್ಯವನ್ನು  ಅವರು ಒತ್ತಿ ಹೇಳಿದರು

ವಿವರಗಳಿಗೆ: https://pib.gov.in/PressReleseDetail.aspx?PRID=1617642

ಲಾಕ್ ಡೌನ್ ಆರಂಭದ ಬಳಿಕ ದುಪ್ಪಟ್ಟು ಕೃಷಿ ಮಾರುಕಟ್ಟೆಗಳು ಕಾರ್ಯಾಚರಿಸುತ್ತಿವೆ

ದೇಶದಲ್ಲಿರುವ 2587 ಪ್ರಮುಖ ಕೃಷಿ ಮಾರುಕಟ್ಟೆಗಳ ಪೈಕಿ ಲಾಕ್ ಡೌನ್ ಆರಂಭವಾಗುವ ಅವಧಿಯಲ್ಲಿ 26.03.2020 ರಂದು 1091 ಮಾರುಕಟ್ಟೆಗಳು ಕಾರ್ಯನಿರ್ವಹಿಸುತ್ತಿದ್ದವು, 21.04.2020 ಕ್ಕೆ ಸಂಖ್ಯೆ 2069  ಕ್ಕೇರಿದೆ. 16-3-2020 ಕ್ಕೆ ಹೋಲಿಸಿದಾಗ 21.04.2020ರಂದು ಮಂಡಿಗಳಿಗೆ ನೀರುಳ್ಳಿ, ಬಟಾಟೆ, ಟೊಮ್ಯಾಟೋದಂತಹ ತರಕಾರಿಗಳು ಬರುವ ಪ್ರಮಾಣದಲ್ಲಿ ಅನುಕ್ರಮವಾಗಿ 622 % , 167 % ಮತ್ತು 210 % ಏರಿಕೆಯಾಗಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1617594

ಧಾನ್ಯಗಳ ರೇಕ್ ಗೆ ಆಹಾರ ತುಂಬಿಸುವಲ್ಲಿ (ಲೋಡ್ ) ಮಾಡುವಲ್ಲಿ ಎಫ್.ಸಿ..ಯಿಂದ ಹೊಸ ವಿಕ್ರಮ

ಭಾರತೀಯ ಆಹಾರ ನಿಗಮ ದಿನಾಂಕ 22.04.20 ರಂದು 2.8 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯಗಳನ್ನು ಹೊತ್ತ 102 ರೈಲು ಹೊರೆ (ಲೋಡು) ಗಳ ಸಾಗಾಟ ಆರಂಭಿಸುವ ಮೂಲಕ ಹೊಸ ವಿಕ್ರಮ ಬರೆದಿದೆ. ಇದರೊಂದಿಗೆ ಲಾಕ್ ಡೌನ್ ಅವಧಿಯಲ್ಲಿ ಎಫ್.ಸಿ.ಐ. ಸಾಗಾಟ ಮಾಡಿದ ಆಹಾರ ಧಾನ್ಯಗಳ ಒಟ್ಟು ಪ್ರಮಾಣ 5 ಎಂ.ಎಂ.ಟಿ. ದಾಟಿದೆ, ದೈನಿಕ ಸರಾಸರಿ ಪ್ರಮಾಣ 1.65 ಲಕ್ಷ ಎಂ.ಟಿ. ಆಗಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1617535

ರಕ್ಷಣಾ ಸಚಿವರಿಂದ ಸಶಸ್ತ್ರ ಪಡೆಗಳ ಕೋವಿಡ್ -19 ಮತ್ತು ಕಾರ್ಯಚರಣಾ ಸಿದ್ದತಾ ಸ್ಥಿತಿಯ ಪರಾಮರ್ಶೆ

ರಕ್ಷಣಾ ಮಂತ್ರಿ ಶ್ರೀ ರಾಜ ನಾಥ್ ಸಿಂಗ್ ಅವರು  ವೀಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲಾ ಪ್ರಧಾನ ಕಮಾಂಡರುಗಳ ಜೊತೆ ಕಾರ್ಯಾಚರಣಾ ಸಿದ್ದತೆ ಮತ್ತು ಕೋವಿಡ್ -19 ಹಿನ್ನೆಲೆಯಲ್ಲಿ ಅದರ ವಿರುದ್ದ ಹೋರಾಡಲು ಕೈಗೊಂಡ ಕ್ರಮಗಳ ಬಗ್ಗೆ ಪರಾಮರ್ಶೆ ನಡೆಸಿದರು. ರಕ್ಷಣಾ ಮಂತ್ರಿ ಅವರು ತಮ್ಮ ಭಾಷಣದಲ್ಲಿ ಸ್ಥಳೀಯ ನಾಗರಿಕ ಆಡಳಿತಕ್ಕೆ ಸಶಸ್ತ್ರ ಪಡೆಗಳು ನೀಡಿರುವ ಸಹಕಾರಕ್ಕೆ ಮತ್ತು ಕೋವಿಡ್ -19 ವಿರುದ್ದ ಹೋರಾಟಕ್ಕೆ ಕೈಗೊಳ್ಳಲಾಗಿರುವ ಸಿದ್ದತಾ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಪಡೆಗಳು ಕೋವಿಡ್ -19 ವಿರುದ್ದ ಹೋರಾಡುತ್ತಿರುವಾಗ ತಮ್ಮ ಕಾರ್ಯಾಚರಣಾ ಸಿದ್ದತಾ ಸ್ಥಿತಿಯನ್ನು ಖಾತ್ರಿಗೊಳಿಸಬೇಕು ಎಂಬ ಅಭಿಪ್ರಾಯವನ್ನು ಮಂಡಿಸಿದ ರಕ್ಷಣಾ ಮಂತ್ರಿ ಅವರು ವಿರೋಧಿಗೆ ಪ್ರಸ್ತುತ ಇರುವ ಸ್ಥಿತಿಯನ್ನು ದುರುಪಯೋಗ ಪಡಿಸಿಕೊಳ್ಳಲು ಅವಕಾಶ ಕೊಡಬಾರದು ಎಂದರು.

ವಿವರಗಳಿಗೆ: https://pib.gov.in/PressReleseDetail.aspx?PRID=1617808

ಎಂ.ಎಚ್.. ಸೈನ್ ಇನ್, /ಸೈನ್ ಆಫ್ ಎಸ್..ಪಿ.ಗಳಿಂದಾಗಿ ಮುಂಬಯಿ ಬಂದರಿನಲ್ಲಿ ಜರ್ಮನ್ ಹಡಗಿನಿಂದ ಇಳಿದ 145 ಭಾರತೀಯ ಸಿಬ್ಬಂದಿಗಳು

ಗೃಹ ವ್ಯವಹಾರಗಳ ಸಚಿವಾಲಯ ಭಾರತೀಯ ನಾವಿಕರಿಗೆ  ಸೈನ್ ಇನ್ ಮತ್ತು ಸೈನ್ ಆಫ್ ಗಳಿಗಾಗಿ ಎಸ್.ಒ.ಪಿ .ಗಳನ್ನು ನೀಡಿರುವುದರಿಂದ , ಇದೇ ಮೊದಲ ಬಾರಿಗೆ ಜರ್ಮನ್ ಹಡಗಿನಿಂದ 145 ಭಾರತೀಯ ಸಿಬ್ಬಂದಿಗಳು ಮುಂಬಯಿ ಬಂದರಿನಲ್ಲಿ ಹಡಗಿನಿಂದ ಇಳಿದರು.

ವಿವರಗಳಿಗೆ: https://pib.gov.in/PressReleseDetail.aspx?PRID=1617583

ಪ್ರಧಾನ ಮಂತ್ರಿ ಮತ್ತು ಸಿಂಗಾಪುರದ ಪ್ರಧಾನ  ಮಂತ್ರಿ ಗೌರವಾನ್ವಿತ ಲೀ ಹಿಸೇನ್ಲೂಂಗ್ ನಡುವೆ ದೂರವಾಣಿ ಸಂಭಾಷಣೆ

ಉಭಯ ನಾಯಕರು ಕೋವಿಡ್ -19 ಜಾಗತಿಕ ಸಾಂಕ್ರಾಮಿಕ  ತಂದೊಡ್ಡಿರುವ ಆರೋಗ್ಯ ಮತ್ತು ಆರ್ಥಿಕ  ಸವಾಲುಗಳ ಬಗ್ಗೆ ವಿಚಾರ ವಿನಿಮಯ ಮಾಡಿದರು. ಈ ಜಾಗತಿಕ ಸಾಂಕ್ರಾಮಿಕವನ್ನು ತಡೆಯಲು ತಮ್ಮ ದೇಶಗಳಲ್ಲಿ ಕೈಗೊಂಡಿರುವ ಕ್ರಮಗಳನ್ನು ಮತ್ತು ಸಾಮಾಜಿಕ ಪರಿಣಾಮವನ್ನು ಪರಸ್ಪರ ಹಂಚಿಕೊಂಡರು. ಸಿಂಗಾಪುರಕ್ಕೆ  ವೈದ್ಯಕೀಯ ಉತ್ಪನ್ನಗಳ ಸಹಿತ ಅವಶ್ಯಕ ಸಾಮಗ್ರಿಗಳ ಪೂರೈಕೆಯನ್ನು ನಿರ್ವಹಿಸುವಲ್ಲಿ ಸಾಧ್ಯ ಇರುವ ಎಲ್ಲಾ ಬೆಂಬಲ ನೀಡುವುದಾಗಿ ಪ್ರಧಾನ ಮಂತ್ರಿ  ಶ್ರೀ ನರೇಂದ್ರ ಮೋದಿ ಅವರು ಭರವಸೆ ನೀಡಿದರು.

ವಿವರಗಳಿಗೆ : https://pib.gov.in/PressReleseDetail.aspx?PRID=1617755

ಕೋವಿಡ್ -19 ಬಿಕ್ಕಟ್ಟಿನ ಸಮಯದಲ್ಲಿ ವಾಯುಯಾನ ವೃತ್ತಿಪರರು ಮತ್ತು ಭಾಗೀದಾರರು ಸಲ್ಲಿಸಿದ ಸೇವೆಗೆ ಶ್ರೀ ಹರ್ದೀಪ್ ಸಿಂಗ್ ಪುರಿ ಶ್ಲಾಘನೆ

ನಾಗರಿಕ ವಿಮಾನ ಯಾನ ಸಹಾಯಕ (ಪ್ರಭಾರ) ಸಚಿವರು ಕೋವಿಡ್ -19 ಬಿಕ್ಕಟ್ಟಿನ ಸಮಯದಲ್ಲಿ ಜೀವ ರಕ್ಷಕ ವೈದ್ಯಕೀಯ ಮತ್ತು ಅವಶ್ಯಕ ಪೂರೈಕೆಗಳು ದೇಶಾದ್ಯಂತ ನಾಗರಿಕರಿಗೆ ಲಭ್ಯವಾಗುವಂತೆ ಮಾಡಲು ಲೈಫ್ ಲೈನ್ ಉಡಾನ್ ಮೂಲಕ ವಾಯುಯಾನ ವೃತ್ತಿಪರರು ಮತ್ತು ಭಾಗೀದಾರರು ಸಲ್ಲಿಸಿದ ಸೇವೆಯನ್ನು ಶ್ಲಾಘಿಸಿದ್ದಾರೆ. ಇಂದು ಅವರು ಮಾಡಿರುವ ಟ್ವೀಟೊಂದರಲ್ಲಿ ಶ್ರೀ ಪುರಿ ಅವರು ಲೈಫ್ ಲೈನ್ ಉಡಾನ್ ವಿಮಾನಗಳು ಇಂದಿನವರೆಗೆ 3,43,635 ಕಿಲೋ ಮೀಟರ್ ಕ್ರಮಿಸಿರುವುದನ್ನು ಹಂಚಿಕೊಂಡಿದ್ದಾರೆ. ಲೈಫ್ ಲೈನ್ ಉಡಾನ್ ಅಡಿಯಲ್ಲಿ 347 ವಿಮಾನಗಳು ಹಾರಾಟ ಮಾಡಿವೆ 591.66 ಟನ್ ಸರಕನ್ನು ಇಂದಿನವರೆಗೆ ಸಾಗಾಟ ಮಾಡಿವೆ.

ವಿವರಗಳಿಗೆ: , https://pib.gov.in/PressReleseDetail.aspx?PRID=1617848

ಕೋವಿಡ್ ವಿಶೇಷ ಡ್ರೋನ್ ಗಳ ಮೂಲಕ ವಾರಾಣಸಿಯಲ್ಲಿ ಕ್ರಿಮಿನಾಶಕ ಸಿಂಪರಣೆ

ವಾರಾಣಸಿಯಲ್ಲಿ ಡ್ರೋನ್ ಕಾರ್ಯಾಚರಣೆಗಳು ಈಗಷ್ಟೇ ಆರಂಭವಾಗಿವೆ. ಈ ತಂಡವು ಇಂತಹದೇ ಸಾಮರ್ಥ್ಯವನ್ನು ದೇಶಾದ್ಯಂತ ಇತರ ಇನ್ನಷ್ಟು ನಗರಗಳಿಗೂ ವಿಸ್ತರಿಸಲಿದೆ. ಇದು ಕೋವಿಡ್ -19 ವಿರುದ್ದದ ಹೋರಾಟದಲ್ಲಿ ನವೀನ ತಂತ್ರಜ್ಞಾನವನ್ನು ಸರಕಾರ-ಅನ್ವೇಷಕ ಸಹಯೋಗದಲ್ಲಿ ಬಳಸುವ ವಿಸ್ತಾರ ವ್ಯಾಪ್ತಿಯ ಪ್ರಯತ್ನಗಳ ಭಾಗವಾಗಿರುತ್ತದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1617537

ವಿಶ್ವ ಪುಸ್ತಕ  ಮತ್ತು ಕಾಪಿ ರೈಟ್ ದಿನದಂದು ಕೋವಿಡೋತ್ತರ ಪ್ರಕಟಣಾ ಪರಿಸ್ಥಿತಿಯ ಬಗ್ಗೆ  ವೆಬಿನಾರಿನಲ್ಲಿ  ಪಾಲ್ಗೊಂಡ ಎಚ್.ಆರ್.ಡಿ ಸಚಿವರು

ಪ್ರತಿಯೊಬ್ಬರಿಗೂ ವಿಶ್ವ ಪುಸ್ತಕ ಮತ್ತು ಕಾಪಿ ರೈಟ್  ದಿನದಂದು ಶುಭಾಶಯ ಹೇಳಿದ , ಕೇಂದ್ರ ಎಚ್.ಆರ್.ಡಿ. ಸಚಿವರು ಭಾರತವು ಜ್ಞಾನದ ಸೂಪರ್ ಪವರ್ ಎಂದು ಬಣ್ಣಿಸಿದರು. ತನ್ನ ಪ್ರಾಚೀನ ವಿಶ್ವವಿದ್ಯಾಲಯಗಳೊಂದಿಗೆ, ಪ್ರಾಚೀನ ಜ್ಞಾನ  ಮತ್ತು ಗ್ರಂಥಗಳ ಸಂಪತ್ತಿನೊಂದಿಗೆ  ಭಾರತವು ಭೂತ ಮತ್ತು ಭವಿತವ್ಯದ ನಡುವಣ ಸಂಪರ್ಕ ಕೊಂಡಿ ಮತ್ತು ಅದು ತಲೆಮಾರುಗಳ ಹಾಗು ಸಂಸ್ಕೃತಿಗಳ ಸಂಪರ್ಕ ಸೇತು ಎಂದೂ ಅವರು ಹೇಳಿದರು.

ವಿವರಗಳಿಗೆ ; https://pib.gov.in/PressReleseDetail.aspx?PRID=1617581

ವಿಶ್ವ ಪುಸ್ತಕ ದಿನದಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವ ಶ್ರೀ ರಮೇಶ್ ಪೊಖ್ರಿಯಾಲ್ ’ನಿಶಾಂಕ್’ ಅವರಿಂದ ನನ್ನ ಪುಸ್ತಕ ನನ್ನ ಸ್ನೇಹಿತ (#MyBookMyFriendcampaign )ಪ್ರಚಾರಾಂದೋಲನಕ್ಕೆ ಚಾಲನೆ.

ವಿವರಗಳಿಗೆ : https://pib.gov.in/PressReleseDetail.aspx?PRID=1617565

ಸರಕಾರ ಅನುಮತಿಸಿದ ಪ್ರದೇಶದೊಳಗೆ ಕೈಗಾರಿಕೆಗಳನ್ನು ಪುನರಾರಂಭಿಸುವಾಗ ಎಲ್ಲಾ ಆರೋಗ್ಯ ಮುಂಜಾಗರೂಕತಾ ಕ್ರಮಗಳ ಅನುಸರಣೆಯನ್ನು ಖಾತ್ರಿಪಡಿಸುವಂತೆ ಕೈಗಾರಿಕೆಗಳಿಗೆ ಶ್ರೀ ನಿತಿನ್ ಗಡ್ಕರಿ ಕರೆ

ಭಾರತ್ ಚೇಂಬರ್ ಆಫ್ ಕಾಮರ್ಸ್   ಪದಾಧಿಕಾರಿಗಳು, ವಿವಿಧ ವಲಯದ ಉದ್ಯಮಿಗಳು , ಮಾಧ್ಯಮ , ಮತ್ತು ಇತರ ಭಾಗೀದಾರರ ಜೊತೆ “ ಕೋವಿಡ್ -19 ಬಳಿಕದ ಭಾರತದಲ್ಲಿ ಸವಾಲುಗಳು ಮತ್ತು ಹೊಸ ಅವಕಾಶಗಳು” ಕುರಿತು  ವೀಡಿಯೋ ಕಾನ್ಫರೆನ್ಸ್ ಮೂಲಕ ಕೇಂದ್ರ ಎಂ.ಎಸ್.ಎಂ.ಇ. ಮತ್ತು ರಸ್ತೆ ಸಾರಿಗೆ ಹಾಗು ಹೆದ್ದಾರಿಗಳ ಸಚಿವರಾದ ಶ್ರೀ ನಿತಿನ್ ಗಡ್ಕರಿ ಅವರು ಸಂವಾದ ನಡೆಸಿದರು. ಸಂವಾದದಲ್ಲಿ ಪ್ರತಿನಿಧಿಗಳು ಎಂ.ಎಸ್.ಎಂ.ಇ. ಗಳು ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ಮಧ್ಯದಲ್ಲಿ ಎದುರಾಗುತ್ತಿರುವ ವಿವಿಧ ಸವಾಲುಗಳ ಬಗ್ಗೆ ಕಳವಳಗಳನ್ನು ವ್ಯಕ್ತಪಡಿಸಿದರು. ಜೊತೆಗೆ ಕೆಲವು ಸಲಹೆಗಳನ್ನು ನೀಡಿದರಲ್ಲದೆ , ಎಂ.ಎಸ್.ಎಂ.ಇ. ವಲಯ ಮುನ್ನಡೆಯಲು ಸರಕಾರದಿಂದ ಬೆಂಬಲ ಕೋರಿದರು.

ವಿವರಗಳಿಗೆ: https://pib.gov.in/PressReleseDetail.aspx?PRID=1617551

ಡಿ..ಪಿ.ಟಿ. ಆನ್ ಲೈನ್ ಕೊರೊನಾ ಕೋರ್ಸ್ 2,90,000 ತರಬೇತಿ ಕೋರ್ಸುಗಳನ್ನು ಒಳಗೊಂಡಿದೆ ಮತ್ತು ಆರಂಭಗೊಂಡ ಎರಡು ವಾರಗಳಲ್ಲಿ 1,83,000 ಬಳಕೆದಾರನ್ನು ಹೊಂದಿದೆ: ಡಾ. ಜಿತೇಂದ್ರ ಸಿಂಗ್

ನವೀನ ಪ್ರಯೋಗವೊಂದರಲ್ಲಿ , ಬಹುಷಃ ರೀತಿಯ ಮೊದಲನೇ ಪ್ರಯೋಗ ಎಂಬಂತೆ ಡಿ.ಒ.ಪಿ.ಟಿ.ಯು ಮುಂಚೂಣಿ ಕೊರೊನಾ ವಾರಿಯರ್ಸ್ ಗಳನ್ನು  ಕಲಿಕಾ ವೇದಿಕೆ  https://igot.gov.in.ಮೂಲಕ ಸಶಕ್ತರನ್ನಾಗಿಸುವ ಮಾದರಿಯನ್ನು ಜಾರಿಗೆ ತಂದಿದೆ. ಮುಂಚೂಣಿ ಕೊರೊನಾ ವಾರಿಯರ್ಸ್ ಗಳನ್ನು ತರಬೇತಿ ಮತ್ತು ಅಪ್ ಡೇಟ್ ಗಳೊಂದಿಗೆ ಕೋವಿಡ್ ಜಾಗತಿಕ ಸಾಂಕ್ರಾಮಿಕವನ್ನು ನಿಭಾಯಿಸಲು ಸಶಕ್ತರನ್ನಾಗಿಸುವುದು ಆನ್ ಲೈನ್ ಮಾಧ್ಯಮದ ಇರಾದೆಯಾಗಿದೆ. ಮತ್ತು ಇದು ಒಂದು ವಿಶೇಷ ಯಶೋಗಾಥೆಯಾಗಿ ಮೂಡಿ ಬಂದಿದೆ. ಬರಲಿರುವ ಸಂದರ್ಭಗಳಲ್ಲಿ ವಿವಿಧ ರೀತಿಗಳಲ್ಲಿ ಇದು ಪ್ರಕಟವಾಗಲಿದೆ, ಎಂದು ಅವರು ಹೇಳಿದರು.

ವಿವರಗಳಿಗೆ: https://pib.gov.in/PressReleseDetail.aspx?PRID=1617562

ಎಂ..ಎಸ್. (ಪಿ.ಪಿ.) ಡಾ. ಜಿತೇಂದ್ರ ಸಿಂಗ್ ಅವರಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಕೋವಿಡ್ -19 ಹೋರಾಟದ ಸಿದ್ದತಾಸ್ಥಿತಿಯ ಪರಾಮರ್ಶೆ

ಕೇಂದ್ರ ಈಶಾನ್ಯ ವಲಯ ಅಭಿವೃದ್ದಿ ಸಚಿವಾಲಯದ ಪ್ರಭಾರ ಸಹಾಯಕ ಸಚಿವರು ಮತ್ತು ಪ್ರಧಾನ ಮಂತ್ರಿ ಕಚೇರಿಯ ಎಂ.ಒ.ಎಸ್. ಆಗಿರುವ ಡಾ. ಜಿತೇಂದ್ರ ಸಿಂಗ್ ಅವರಿಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಕೋವಿಡ್ -19 ವೈರಸ್ ವಿರುದ್ದ ಹೋರಾಟದ ಸಿದ್ದತಾಸ್ಥಿತಿಯ ಬಗ್ಗೆ ಪರಾಮರ್ಶೆ ನಡೆಸಿದರು. ವೀಡಿಯೋ ಕಾನ್ಫರೆನ್ಸ್ ಮೂಲಕ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ  ಪ್ರದೇಶದ  ಹಿರಿಯ ಅಧಿಕಾರಿಗಳು, ಸರಕಾರಿ ವೈದ್ಯಕೀಯ ಸಂಸ್ಥೆಗಳ ಮತ್ತು ಕಾಲೇಜುಗಳ ಮುಖ್ಯಸ್ಥರೊಂದಿಗೆ ಪರಾಮರ್ಶೆ ನಡೆಯಿತು.

ವಿವರಗಳಿಗೆ: https://pib.gov.in/PressReleseDetail.aspx?PRID=1617733

ಭಾರತದಲ್ಲಿ ವೇತನ ಪಟ್ಟಿ ವರದಿ-ಔಪಚಾರಿಕ ಉದ್ಯೋಗ ಮುನ್ನೋಟ

ವಿವರಗಳಿಗೆ; https://pib.gov.in/PressReleseDetail.aspx?PRID=1617728

ಆಯುಷ್ ಆರೋಗ್ಯ ರಕ್ಷಣಾ ಶಿಸ್ತುಗಳಿಂದ ಕೋವಿಡ್ -19 ಕ್ಕೆ ಪರಿಹಾರಗಳ ಶೋಧ

ಕೋವಿಡ್ -19 ರ ಕ್ಲಿನಿಕಲ್  ನಿರ್ವಹಣೆಯಲ್ಲಿ ಆಯುಷ್ ಮಧ್ಯಪ್ರವೇಶ/ ಔಷಧಿಗಳ ಪರಿಣಾಮವನ್ನು ಮೌಲ್ಯಮಾಪನ ಮಾಡಲು ಅಲ್ಪಕಾಲಾವಧಿ ಸಂಶೋಧನಾ ಯೋಜನೆಗಳನ್ನು ಬೆಂಬಲಿಸುವ ವ್ಯವಸ್ಥೆಯನ್ನು ಆಯುಷ್ ಸಚಿವಾಲಯ ಘೋಷಿಸಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1617726

ಕೋವಿಡ್ -19 ಬಿಕ್ಕಟ್ಟಿನಲ್ಲಿ ಜನತೆಗೆ ಸೇವೆ ಮಾಡುವ ಅವಿಶ್ರಾಂತ ಪ್ರಯತ್ನಗಳನ್ನು ಮುಂದುವರೆಸಲು ಅಂಚೆ ಇಲಾಖೆಗೆ ಶ್ರೀ ಸಂಜಯ್ ಧೋತ್ರೆ ಕರೆ

ಲಾಕ್ ಡೌನ್ ಅವಧಿಯಲ್ಲಿ 2020ರ ಏಪ್ರಿಲ್ 20 ರವರೆಗೆ ಸುಮಾರು 1.8 ಕೋಟಿ ಅಂಚೆ ಕಚೇರಿ ಉಳಿತಾಯ ಬ್ಯಾಂಕ್ ವರ್ಗಾವಣೆಗಳನ್ನು ಮಾಡಲಾಗಿದೆ. ಒಟ್ಟು ಮೊತ್ತ 28,000 ಕೋ.ರೂ.ಗಳು , ಇದಲ್ಲದೆ 84 ಲಕ್ಷ ಸಂಖ್ಯೆಯಲ್ಲಿ 2100 ಕೋ.ರೂ.ಗಳ ಐ.ಪಿ.ಬಿ.ಪಿ ವರ್ಗಾವಣೆಗಳನ್ನು ಮಾಡಲಾಗಿದೆ. ಜೊತೆಯಲ್ಲಿ ಎ.ಟಿ.ಎಂ.ಮೂಲಕ ಒಟ್ಟು ಮೌಲ್ಯ 135 ಕೋ.ರೂ ಗಳ 4.3 ಲಕ್ಷ ವರ್ಗಾವಣೆಗಳನ್ನು ದೇಶಾದ್ಯಂತ ನಡೆಸಲಾಗಿದೆ. 300 ಕೋ.ರೂ.ಗಳ ಎ.ಇ.ಪಿ.ಎಸ್. ವರ್ಗಾವಣೆಗಳನ್ನು ಅವಧಿಯಲ್ಲಿ ನಡೆಸಲಾಗಿದೆ. 480 ಕೋ.ರೂ.ಗಳ 52 ಲಕ್ಷ ನೇರ ನಗದು ವರ್ಗಾವಣೆ ಪಾವತಿಗಳನ್ನು ಲಾಕ್ ಡೌನ್ ಅವಧಿಯಲ್ಲಿ ಮಾಡಲಾಗಿದೆ.

ವಿವರಗಳಿಗೆ: https://pib.gov.in/PressReleseDetail.aspx?PRID=1617729

 

ಪಿ.ಐ.ಬಿ. ಕ್ಷೇತ್ರ ಕಾರ್ಯಾಲಯಗಳಿಂದ ಮಾಹಿತಿ

 

  • ಚಂಡೀಗಢ : ಕೇಂದ್ರಾಡಳಿತ ಪ್ರದೇಶದ ಎಲ್ಲಾ ತರಕಾರಿ/ ಹಣ್ಣುಗಳು, ವೃತ್ತ ಪತ್ರಿಕೆಗಳು, ಬ್ರೆಡ್ ಮತ್ತು ಹಾಲು ಇತ್ಯಾದಿ ವ್ಯಾಪಾರಿಗಳನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ ಮತ್ತು ಅವಶ್ಯ ರಕ್ಷಣಾ ವ್ಯವಸ್ಥೆಗಳನ್ನು ಒದಗಿಸಲಾಗಿದೆ. ಪಿ.ಎಂ.ಜಿ.ಕೆ.ವೈ. ಅಡಿಯಲ್ಲಿ ಗೋಧಿ ಮತ್ತು ಬೇಳೆ ಕಾಳುಗಳ ವಿತರಣೆಯನ್ನು ವ್ಯವಸ್ಥೆ ಮಾಡಲಾಗಿದ್ದು, ವಿತರಣೆಯು ಸಾಮಾಜಿಕ ಅಂತರ ಕಾಪಾಡಿಕೊಂಡು  ಸಮರ್ಪಕವಾಗಿ ನಡೆಯುವುದನ್ನು ಖಾತ್ರಿಗೊಳಿಸಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಫಲಾನುಭವಿಗಳಿಗೆ ಟೋಕನ್ ಗಳನ್ನು ಮುಂಚಿತವಾಗಿಯೇ ನೀಡಿ ಗೋಧಿ ಮತ್ತು ಆಹಾರ ಧಾನ್ಯಗಳ ವಿತರಣಾ ವೇಳೆಯನ್ನು
  • ಪಂಜಾಬ್: ಕೊರೊನಾ ವೈರಸ್ ನಿಯಂತ್ರಿಸುವ ಮುಂದಿನ ಹಂತದ ಕ್ರಮವಾಗಿ ಪಂಜಾಬ್ ಸರಕಾರ ಇಂದು ರೈತರಿಗೆ ಸಲಹಾ ಸೂಚಿಯನ್ನು ಬಿಡುಗಡೆ ಮಾಡಿದೆ, ಮತ್ತು ಅದರಲ್ಲಿ ಜಾಗತಿಕ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಸುರಕ್ಷಿತ ಕೃಷಿ ಪದ್ದತಿಯನ್ನು ಅಳವಡಿಕೊಳ್ಳುವಂತೆ ಸೂಚಿಸಿದೆ. ರಾಜ್ಯದಲ್ಲಿರುವ ಎಲ್ಲಾ ಮಂಡಿಗಳಲ್ಲಿ ಗೋಧಿ ಖರೀದಿ ಪ್ರಕ್ರಿಯೆ ಸುಸೂತ್ರವಾಗಿ ನಡೆಯುವಂತೆ ಮಾಡಲುಕೋವಿಡ್ -19   ಹಿನ್ನೆಲೆಯಲ್ಲಿ ಜಾರಿಯಲ್ಲಿರುವ ಕರ್ಫ್ಯೂ ಕಾರಣದಿಂದಾಗಿ   ಪಂಜಾಬ್ ಸರಕಾರವು 3195  ಮಾಜಿ ಸೈನಿಕರನ್ನು ಆಡಳಿತದ  ಗಾರ್ಡಿಯನ್ ಗಳಾಗಿ (ಜಿ..ಜಿ.ಎಸ್.) ಮಂಡಿ ಮಂಡಳಿಯ ಸಹಾಯಕ್ಕೆ ನೇಮಿಸಿದೆ
  • ಹರ್ಯಾಣಾ: ರಮ್ಜಾನ್ ನ್ನು ಮನೆಯೊಳಗೆ ಆಚರಿಸುವಂತೆ ಮತ್ತು ಪ್ರಾರ್ಥನೆ ಸಲ್ಲಿಸುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಹರ್ಯಾಣಾ ಮುಖ್ಯಮಂತ್ರಿ ಮಸ್ಲಿಂ ಸಮುದಾಯಕ್ಕೆ ಮನವಿ ಮಾಡಿದ್ದಾರೆ. ಹಫೀಡ್  ಮತ್ತು ಹರ್ಯಾಣಾ ದಾಸ್ತಾನು ನಿಗಮಗಳು 53.48 ಕೋಟಿ ರೂಪಾಯಿಗಳನ್ನು ಏಪ್ರಿಲ್ 15 ರಿಂದ ಆರಂಭಗೊಂಡಿರುವ ಸಾಸಿವೆ ಖರೀದಿಗಾಗಿ ಕ್ವಿಂಟಾಲ್ ಒಂದರ 4425 ರೂ. ದರದಲ್ಲಿ 5618 ರೈತರ ಖಾತೆಗಳಿಗೆ ಜಮಾ ಮಾಡಿವೆ.
  • ಹಿಮಾಚಲ ಪ್ರದೇಶ: ಹಿಮಾಚಲ ಪ್ರದೇಶ ಮುಖ್ಯಮಂತ್ರಿಗಳು ಪಿ.ಪಿ.. ಕಿಟ್ ಗಳು , ಮುಖಗವಸುಗಳು ಮತ್ತು ವೆಂಟಿಲೇಟರುಗಳು ರಾಜ್ಯದ ಆಸ್ಪತ್ರೆಗಳಲ್ಲಿ ಲಭ್ಯ ಇರುವುದನ್ನು ಖಾತ್ರಿಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ರಾಜ್ಯದ ನಿವಾಸಿಗಳಿಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಆಯುಷ್ ಸಲಹೆ ಮಾಡಿರುವ ಮಾರ್ಗದರ್ಶಿಗಳನ್ನು ಅನುಸರಿಸುವಂತೆ ಮತ್ತು ಆರೋಗ್ಯ ಸೇತು ಆಪ್ ಡೌನ್ ಲೋಡ್ ಮಾಡಿಕೊಳ್ಳುವಂತೆ ಮನವಿ ಮಾಡಿದ್ದಾರೆ.
  • ಕೇರಳ ; ಕೋವಿಡ್ ಸ್ಪೋಟದ ಕಾರಣದಿಂದ  ರಾಷ್ಟ್ರ ವ್ಯಾಪೀ ಲಾಕ್ ಡೌನ್ ಜಾರಿಯಲ್ಲಿರುವಾಗ ಎನ್.ಆರ್.. ಗಳನ್ನು ವಾಪಸು ಕರೆದುಕೊಂಡು ಬರಬೇಕು ಎಂದು ತಾನು ಕೇಂದ್ರಕ್ಕೆ ಹೇಳುವುದು ಸಾಧ್ಯ ಇಲ್ಲ ಎಂದು ಕೇರಳ ಹೈಕೋರ್ಟು ಹೇಳಿದೆ. ಕೋವಿಡ್ -19 ಕ್ಕಾಗಿ ಮಂಜೆರಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 4 ತಿಂಗಳ ಮಗು ಕೋಝಿಕ್ಕೋಡ್ ಎಂ.ಸಿ.ಎಚ್. ನಲ್ಲಿ ಇಂದು ಮೃತಪಟ್ಟಿದೆ. ಇಂದು ಬೆಳಗಿನ ಜಾವ ದುಬೈ ಯಲ್ಲಿ ಇನ್ನೋರ್ವ ಕೇರಳೀಯ ಕೋವಿಡ್ ನಿಂದಾಗಿ ಮೃತಪಟ್ಟಿದ್ದಾರೆ. ನಿನ್ನೆ 10 ಹೊಸ ಪ್ರಕರಣಗಳು ವರದಿಯಾಗಿವೆ ಮತ್ತು 8 ಮಂದಿ ಗುಣಮುಖರಾಗಿದ್ದಾರೆ. ಒಟ್ಟು ಪ್ರಕರಣಗಳ ಸಂಖ್ಯೆ 447, ಗುಣಮುಖರಾದವರು 316, ಆಕ್ಟಿವ್ ಪ್ರಕರಣಗಳು 128
  • ತಮಿಳುನಾಡು: ಮುಖ್ಯಮಂತ್ರಿಗಳಿಂದ ಚೆನ್ನೈ, ಮಧುರೈ, ಮತ್ತು ಕೊಯಮುತ್ತೂರುಗಳಲ್ಲಿ 4 ದಿನಗಳ ಕಾಲ ಸಂಪೂರ್ಣ ಲಾಕ್ ಡೌನ್ ಘೋಷಣೆ; ಸೇಲಂ ಮತ್ತು ತಿರುಪ್ಪುರ್ ಗಳಲ್ಲಿ 3 ದಿನಗಳ ಲಾಕ್ ಡೌನ್ . ಚೆನ್ನೈ ಯಲ್ಲಿ ಅಮ್ಮಾ ಕ್ಯಾಂಟೀನ್ ಗಳಲ್ಲಿ ಲಾಕ್ ಡೌನ್ ಅಂತ್ಯಗೊಳ್ಳುವ ಮೇ 3 ರವರೆಗೆ ಉಚಿತ ಆಹಾರ. ಚೆನ್ನೈ ಕಾರ್ಪೋರೇಶನ್ನಿನಿಂದ ಅದರ 10 ನೇ ತರಗತಿ ವಿದ್ಯಾರ್ಥಿಗಳಿಗೆ ಆನ್ ಲೈನ್ ತರಗತಿಗಳು ಆರಂಭಗೊಳ್ಳಲಿವೆಇದುವರೆಗ್ ಒಟ್ಟು ಕೋವಿಡ್ ಪ್ರಕರಣಗಳು 1683. ಸಾವುಗಳು: 20, ಗುಣಮುಖರಾಗಿ ಬಿಡುಗಡೆಯಾದವರು ; 752
  • ಕರ್ನಾಟಕ: ಇಂದು 18 ಹೊಸ ಪ್ರಕರಣಗಳು ವರದಿಯಾಗಿವೆ. ಬೆಂಗಳೂರು 11, ಬಾಗಲಕೋಟೆ 2, ಬೆಳಗಾವಿ 2, ವಿಜಯಪುರ 1, ಚಿಕ್ಕಬಳ್ಳಾಪುರ 1, ತುಮಕೂರು 1, ಬೆಂಗಳೂರಿನಲ್ಲಿ ಎಲ್ಲಾ ಪ್ರಕರಣಗಳೂ ಪಾದರಾಯನಪುರ ಪ್ರದೇಶದವು. ಒಟ್ಟು ಪ್ರಕರಣಗಳು 463. ಇದುವರೆಗೆ 19 ಮಂದಿ ಮೃತಪಟ್ಟಿದ್ದಾರೆ ಮತ್ತು 150 ಮಂದಿ ಗುಣಮುಖರಾಗಿದ್ದಾರೆ.
  • ಆಂಧ್ರ ಪ್ರದೇಶ: ರಾಜ್ಯದಲ್ಲಿರುವ ಸುಮಾರು 1 ಕೋಟಿ ಮಹಿಳಾ ಎಸ್.ಎಚ್.ಜಿ. ಗಳಿಗೆ ಶೂನ್ಯ ಬಡ್ಡಿಯಲ್ಲಿ ಸಾಲ ನೀಡುವ ಯೋಜನೆಗೆ ಮುಖ್ಯಮಂತ್ರಿ ಚಾಲನೆ ನೀಡಿದ್ದಾರೆ. ಕಳೆದ 24 ಗಂಟೆಗಳಲ್ಲಿ 62 ಹೊಸ ಪ್ರಕರಣಗಳು ವರದಿಯಾಗಿವೆ. ಹೆಚ್ಚಿನ ಸಂಖ್ಯೆಯ ಪ್ರಕರಣಗಳು ಕರ್ನೂಲು (27 ) ಮತ್ತು ಕೃಷ್ಣಾ (14 ) ಗಳಿಂದ ವರದಿಯಾದವು. ಇದುವರೆಗೆ ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆ 955 , ಆಕ್ಟಿವ್ ಪ್ರಕರಣಗಳು 781, ಗುಣಮುಖರಾದವರು 145, ಸಾವುಗಳು- 29. ಕರ್ನೂಲು ( 261) , ಗುಂಟೂರು (206 ) ಕೃಷ್ಣಾ (102 ) ಗಳು ಪಾಸಿಟಿವ್ ಪ್ರಕರಣಗಳಲ್ಲಿ ಮುಂಚೂಣಿಯಲ್ಲಿವೆ.
  • ತೆಲಂಗಾಣ: ಜನರಲ್ಲಿ ಕೊರೊನಾವೈರಸ್ ಹರಡುವಿಕೆ ಮೌಲ್ಯಮಾಪನ ಮಾಡಲು ತೆಲಂಗಾಣದಲ್ಲಿ ತ್ವರಿತ ಪ್ರತಿಕಾಯ (ಆಂಟಿ ಬಾಡಿ) ಪರೀಕ್ಷೆಗಳನ್ನು .ಸಿ.ಎಂ.ಆರ್ ನಡೆಸಲಿದೆ ಮತ್ತು ದೇಶದಲ್ಲಿ ಅದರ ಸೋಂಕಿನ ವಿರುದ್ದ ಮೇಲುಗೈ ಸಾಧಿಸುವ ಗತಿಯನ್ನೂ ಅದು ಗಮನಿಸಲಿದೆ. ಹೈದರಾಬಾದಿನ ಕಂಪೆನಿಗೆ ಕೋವಿಡ್ -19  ರೋಗಿಗಳಿಗೆ ಇಮ್ಯುನೋಗ್ಲೋಬಿನ್ ಚಿಕಿತ್ಸೆಗಾಗಿ ಔಷಧಿಯನ್ನು ತಯಾರಿಸಲು ಕೇಂದ್ರದಿಂದ ಅನುಮತಿ ಸಿಕ್ಕಿದೆ. ತೆಲಂಗಾಣದಲ್ಲಿ ಕೋವಿಡ್ -19 ಮಾದರಿ ಸಂಗ್ರಹದ ಅಂಬುಲೆನ್ಸ್ ಸೇವೆ ಆರಂಭಗೊಂಡಿದೆ. ಇದುವರೆಗೆ ಒಟ್ಟು ಪ್ರಕರಣಗಳು : 970 , ಗುಣಮುಖರಾದವರು: 262.
  • ಅಸ್ಸಾಂ: ಅಸ್ಸಾಂನಲ್ಲಿ ಹೊಜೈ ಪೊಲೀಸರು ಕೋವಿಡ್ 19 ಸ್ಪೋಟದ ನಡುವೆಯೂ ಸಾರ್ವಜನಿಕ ಸ್ಥಳಗಳಲ್ಲಿ ಮುಖಗವಸು ಧರಿಸದೇ ಇರುವ 22 ಮಂದಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
  • ಮಿಜೋರಾಂ: ಲಾಕ್ ಡೌನ್ ನಡುವೆಯೂ ಚಾಂಫೈ ಮತ್ತು ಲೋಂಗ್ಟ್ಲೈ ಜಿಲ್ಲೆಗಳಲ್ಲಿ ತೋಟಗಾರಿಕಾ ಇಲಾಖೆಯು ರೈತರಿಗೆ ತರಕಾರಿ ಬೀಜಗಳನ್ನು ವಿತರಿಸಿದೆ.
  • ನಾಗಾಲ್ಯಾಂಡ್ ; ಹೊರಗೆ ಸಿಕ್ಕಿ  ಹಾಕಿಕೊಂಡಿರುವ ಮತ್ತು ಸದ್ಯದಲ್ಲಿಯೇ ವಾಪಸಾಗಲಿರುವ ನಾಗಾ  ವಿದ್ಯಾರ್ಥಿಗಳು ಮತ್ತು ನಾಗರಿಕರನ್ನು ಇರಿಸುವುದಕ್ಕಾಗಿ ಚುಮೌಕೆಡಿಮಾದಲ್ಲಿರುವ ಕೊಹಿಮಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕೇಂದ್ರ ಸಂಸ್ಥೆಯನ್ನು ನಿರೀಕ್ಷಣಾ ನಿಗಾ ಕೇಂದ್ರವಾಗಿ ಪರಿವರ್ತಿಸಲಾಗಿದೆ. ಪರಿಹಾರ ಪ್ಯಾಕೇಜಿಗಾಗಿ ಫಲಾನುಭವಿಗಳನ್ನು ಗುರುತಿಸಲು ಕಾರ್ಯಕಾರಿ ಮ್ಯಾಜಿಸ್ಟ್ರೇಟರ ನೇತೃತ್ವದಲ್ಲಿ ಸಮಿತಿಯನ್ನು ದಿಮಾಪುರ ಡಿ.ಸಿ. ನೇಮಕ ಮಾಡಿದ್ದಾರೆ
  • ಸಿಕ್ಕಿಂ: ಪಶ್ಚಿಮ ಜಿಲ್ಲೆಯ ರೈತರು ರಾಜ್ಯದಲ್ಲಿ ಲಾಕ್ ಡೌನ್ ಅವಧಿಯಲ್ಲಿ 150 ಮೆಟ್ರಿಕ್ ಟನ್ ತಾಜಾ ತರಕಾರಿಯನ್ನು ಪೂರೈಸಿದ್ದಾರೆ.  
  • ತ್ರಿಪುರಾ: ರಾಜ್ಯವನ್ನು ಕೊರೊನಾ ಮುಕ್ತ ಮಾಡಿರುವುದಕ್ಕೆ ಮುಖ್ಯಮಂತ್ರಿಗಳು ಎಲ್ಲಾ ಮುಂಚೂಣಿ ಕೋವಿಡ್ 19 ವಾರಿಯರ್ ಗಳಿಗೆ ಮತ್ತು ಸಾರ್ವಜನಿಕರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಕೋವಿಡ್ 19 ನಿಭಾವಣೆಗೆ ಸಾಮಾಜಿಕ ಅಂತರ ಪಾಲನೆಯ ಮಹತ್ವವನ್ನು ಅವರು ಒತ್ತಿ ಹೇಳಿದ್ದಾರೆ.
  • ಮಹಾರಾಷ್ಟ್ರ: ಒಂದೇ ದಿನದಲ್ಲಿ ಗರಿಷ್ಟ 522 ಪ್ರಕರಣಗಳು ಕಂಡು ಬಂದ ಮರುದಿನ ಮಹಾರಾಷ್ಟ್ರ ಆರೋಗ್ಯ ಇಲಾಖೆ ಅಧಿಕಾರಿಗಳು ಸಂಪರ್ಕ ಪತ್ತೆ, ಪರೀಕ್ಷೆ, ಅಪಾಯಕಾರಿ ವ್ಯಕ್ತಿಗಳ ಕ್ವಾರಂಟೈನ್ ನಿಂದಾಗಿ ನಗರದಲ್ಲಿ ಹೆಚ್ಚಿನ ಸಂಖ್ಯೆಯ ಪ್ರಕರಣಗಳ ವರದಿಗೆ ಕಾರಣ ಎಂದು ಹೇಳಿದ್ದಾರೆ. ಏಪ್ರಿಲ್ 23 ರವರೆಗೆ ಮಹಾರಾಷ್ಟ್ರವು 96,369 ಪರೀಕ್ಷೆಗಳನ್ನು ನಡೆಸಿದೆ, ಅದರಲ್ಲಿ 55,000 (ಅಥವಾ 57.07% ) ಪರೀಕ್ಷೆಗಳು ಮುಂಬಯಿಯೊಂದರಲ್ಲೇ  ನಡೆದಿವೆ. ಮತ್ತು ಇದು ನಗರವೊಂದಕ್ಕೆ ಸಂಬಂಧಿಸಿ ದೇಶದಲ್ಲಿಯೇ ಗರಿಷ್ಟ.
  • ಗುಜರಾತ್: ರಾಜ್ಯದಲ್ಲಿ ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಿಸಲು  ಗುಜರಾತ್ ಸರಕಾರ ನಿರ್ಧರಿಸಿದೆ. ಪ್ರಸ್ತುತ ರಾಜ್ಯದಲ್ಲಿ 3000 ಕ್ಕೂ ಅಧಿಕ ಮಾದರಿಗಳನ್ನು ಪರೀಕ್ಷೆ ಮಾಡಲಾಗುತ್ತದೆ. ಅದು ಹೆಚ್ಚಲಿದೆ. ಗಾಂಧಿನಗರದಲ್ಲಿಯ ಇನ್ನೊಂದು ಪ್ರಯೋಗಾಲಯಕ್ಕೆ ಕೋವಿಡ್ 19 ಮಾದರಿ ಪರಿಕ್ಷೆಗೆ .ಸಿ.ಎಂ.ಆರ್. ಅನುಮತಿ ನೀಡಿದೆ. ಇದರೊಂದಿಗೆ 15 ಸರಕಾರಿ ಮತ್ತು 5 ಖಾಸಗಿ ಪ್ರಯೋಗಾಲಯಗಳು ಗುಜರಾತಿನಲ್ಲಿ ಕೋವಿಡ್ 19 ಮಾದರಿಗಳ ಪರೀಕ್ಷೆ ನಡೆಸುತ್ತಿವೆ. ರಾಜ್ಯವು 2,624 ಕೋವಿಡ್ 19 ಪಾಸಿಟಿವ್ ಪ್ರಕರಣಗಳನ್ನು ಹೊಂದಿದೆ.
  • ರಾಜಸ್ಥಾನ: ರಾಜಸ್ಥಾನದಲ್ಲಿ ಕೋವಿಡ್ 19 ಸೋಂಕಿತ ವ್ಯಕ್ತಿಗಳ ಸಂಖ್ಯೆ 2000ಕ್ಕೆ ಏರಿದೆ. ರಾಜ್ಯದಲ್ಲಿ ಇಂದು 36 ಹೊಸ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಜೈಪುರದಲ್ಲಿ ಇಂದು  ಮತ್ತೆ 13 ಮಂದಿಯಲ್ಲಿ  ಪಾಸಿಟಿವ್ ಪತ್ತೆಯಾಗಿದ್ದು ಕೋವಿಡ್ ಪಾಸಿಟಿವ್ ವ್ಯಕ್ತಿಗಳ ಸಂಖ್ಯೆ 753 ಕ್ಕೇರಿದೆ. ಕೋಟಾದಿಂದ 18 ಹೊಸ ಪ್ರಕರಣಗಳು ವರದಿಯಾಗಿವೆ. ಒಂದು ಪ್ರಕರಣ ಭಾರತ್ ಪುರದಿಂದ ವರದಿಯಾಗಿದೆ.

***



(Release ID: 1618075) Visitor Counter : 221