ಆಯುಷ್
ಆಯುಷ್ ವಿಧಾನಗಳಿಂದ ಕೋವಿಡ್-19 ಪರಿಹಾರಗಳನ್ನು ಕಂಡುಕೊಳ್ಳಿ
Posted On:
24 APR 2020 12:10PM by PIB Bengaluru
ಆಯುಷ್ ವಿಧಾನಗಳಿಂದ ಕೋವಿಡ್-19 ಪರಿಹಾರಗಳನ್ನು ಕಂಡುಕೊಳ್ಳಿ
ಕೋವಿಡ್ – 19 ರ ಚಿಕಿತ್ಸಕ ನಿರ್ವಹಣೆ ಮತ್ತು ರೋಗನಿರೋಧಕತೆಗಾಗಿ ಆಯುಷ್ ಔಷಧಿಗಳ ಪ್ರಭಾವವನ್ನು ಮೌಲ್ಯಮಾಪನ ಮಾಡಲು ಅಲ್ಪಾವಧಿಯ ಸಂಶೋಧನಾ ಯೋಜನೆಗಳಿಗೆ ನೆರವು ನೀಡಲು ಆಯುಷ್ ಸಚಿವಾಲಯ ಕಾರ್ಯವಿಧಾನವೊಂದನ್ನು ಪ್ರಕಟಿಸಿದೆ.
ಕೋವಿಡ್ – 19 ಪ್ರಕರಣಗಳ ನಿರ್ವಹಣೆಯಲ್ಲಿ ತೊಡಗಿರುವಂಥ ಆಸ್ಪತ್ರೆಗಳು/ಶೈಕ್ಷಣಿಕ ಸಂಸ್ಥೆಗಳನ್ನು ಈ ಯೋಜನೆಯಲ್ಲಿ ಪಾಲ್ಗೊಳ್ಳುವಂತೆ ಆಮಂತ್ರಿಸಲಾಗಿದೆ. ಇದು ಬಾಹ್ಯ (ಅಂದರೆ ಆಯುಷ್ ಸಚಿವಾಲಯ ಪ್ರತಿಷ್ಠಾನದ ಹೊರಗಿನರವರಿಗೆ) ಸಂಶೋಧನಾ ವಿಭಾಗದ ಅಡಿಯಲ್ಲಿ ಬರುತ್ತದೆ. ಸಾರ್ಸ್ – ಕೋವ್ – 2 ಸೋಂಕು ಮತ್ತು ಕೋವಿಡ್ – 19 ರೋಗದ ರೋಗ ನಿರೋಧಕ ಮತ್ತು ಚಿಕಿತ್ಸಕ ನಿರ್ವಹಣೆಯಲ್ಲಿ ಆಯುಷ್ ಔಷಧಿಗಳ ಪಾತ್ರ ಮತ್ತು ಪ್ರಭಾವದ ಮೌಲ್ಯಮಾಪನ ಮಾಡಲು ಈ ಪ್ರಸ್ತಾಪಗಳು ಸಂಬಂಧಸಿರಬೇಕು.
ಸಾಂಸ್ಥಿಕ ನೈತಿಕ ಸಮೀತಿ ಐಇಸಿ ಅನುಮತಿಯೊಂದಿಗೆ ಅತಿ ಹೆಚ್ಚು 6 ತಿಂಗಳ ಅವಧಿಯ ಯೋಜನೆಯ ಪ್ರಸ್ತಾಪಗಳನ್ನು ಆಯುಷ್ ವೈದ್ಯರು, ತಾಂತ್ರಿಕ ಮಾನವ ಸಂಪನ್ಮೂಲ, ಪ್ರಯೋಗಾಲಯಗಳ ತನಿಖೆ ಮತ್ತು ಸಂಬಂಧಿಸಿದ ಆಕಸ್ಮಿಕ ಅಡೆತಡೆಗಳನ್ನು ಭರಿಸಲು ರೂ 10.00 ಲಕ್ಷದವರೆಗೆ ವೆಚ್ಚವನ್ನು ಪೂರೈಸಲು ಪರಿಗಣಿಸಲಾಗುತ್ತದೆ.
ಅರ್ಹತಾ ಮಾನದಂಡಗಳು, ಅರ್ಜಿಯನ್ನು ಸಲ್ಲಿಸುವ ವಿಧಾನ ಮತ್ತು ಅರ್ಜಿ ನಮೂನೆಯನ್ನು ಆಯುಷ್ ಸಚಿವಾಲಯದ ವೆಬ್ ಸೈಟ್ ನಲ್ಲಿ ಅಪ್ ಲೋಡ್ ಮಾಡಲಾಗಿದೆ ಅಂದರೆ ayush.gov.in. ಈ ಪುಟವನ್ನು ವೀಕ್ಷಿಸುವ ಲಿಂಕ್ ಹೀಗಿದೆ : https://main.ayush.gov.in/event/mechanism-support-short-term-research-projects-evaluating-impact-ayush-interventions-cum
ಅರ್ಜಿಗಳನ್ನು ಕೇವಲ ಮಿಂಚಂಚೆ ಮೂಲಕ ಮಾತ್ರ ಸ್ವೀಕರಿಸಲಾಗುತ್ತದೆ ಮತ್ತು ಮಿಂಚಂಚೆ: emrayushcovid19[at]gmail[dot]com.
ಅರ್ಜಿಗಳನ್ನು ಸ್ವೀಕರಿಸುವ ಕೊನೆಯ ದಿನಾಂಕ 01/05/2020.
***
(Release ID: 1618043)
Visitor Counter : 191
Read this release in:
English
,
Urdu
,
Hindi
,
Marathi
,
Assamese
,
Bengali
,
Punjabi
,
Gujarati
,
Odia
,
Tamil
,
Telugu