ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ

ಕೋವಿಡ್ -19 ಬಿಕ್ಕಟ್ಟಿನ ಸಂದರ್ಭದಲ್ಲಿ ದಣಿವರಿಯದ ನಿರಂತರ ಜನ ಸೇವೆ ಮುಂದುವರಿಸಲು ಶ್ರೀ ಸಂಜಯ್ ಧೋತ್ರೆ ಅಂಚೆ ಇಲಾಖೆಯನ್ನು ಕೋರಿದರು

Posted On: 24 APR 2020 12:19PM by PIB Bengaluru

ಕೋವಿಡ್ -19 ಬಿಕ್ಕಟ್ಟಿನ ಸಂದರ್ಭದಲ್ಲಿ ದಣಿವರಿಯದ ನಿರಂತರ ಜನ ಸೇವೆ ಮುಂದುವರಿಸಲು ಶ್ರೀ ಸಂಜಯ್ ಧೋತ್ರೆ ಅಂಚೆ ಇಲಾಖೆಯನ್ನು ಕೋರಿದರು

300 ಕೋಟಿ ರೂಪಾಯಿ ಮೌಲ್ಯದ 15 ಲಕ್ಷಕ್ಕೂ ಹೆಚ್ಚು ಎಇಪಿಎಸ್ ವಹಿವಾಟುಗಳನ್ನು ಲಾಕ್ ಡೌನ್ ಅವಧಿಯಲ್ಲಿ ನಡೆಸಲಾಗಿದೆ

 

ಕೋವಿಡ್ -19 ಲಾಕ್ಡೌನ್ ಸಂದರ್ಭದಲ್ಲಿ ಅಂಚೆ ಇಲಾಖೆ ಕೈಗೊಂಡ ಉಪಕ್ರಮಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಪರಿಶೀಲಿಸಿದ ರಾಜ್ಯ ಸಂವಹನ ಮತ್ತು ಮಾನವ ಸಂಪನ್ಮೂಲ ಸಚಿವ ಶ್ರೀ ಸಂಜಯ್ ಧೋತ್ರೆ. ಸಚಿವರು ಅಂಚೆ ಇಲಾಖೆಯು ಕೈಗೊಂಡ ವಿವಿಧ ಕ್ರಮಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು ಮತ್ತು ಸಾಮಾಜಿಕ ಅಂತರವನ್ನು ಗಮನಿಸುತ್ತಾ ರಾಷ್ಟ್ರ ಸೇವೆಯಲ್ಲಿ ತಮ್ಮನ್ನು ತಾವು ಹೆಚ್ಚು ತೊಡಗಿಸಿಕೊಳ್ಳುವಂತೆ ಅಂಚೆ ಇಲಾಖೆಗೆ ಸೂಚಿಸಿದರು.

ಪೋಸ್ಟ್ಇಲಾಖೆಯ ದೃಢವಾದ ವಿತರಣಾ ವ್ಯವಸ್ಥೆಯನ್ನು ಬಳಸಿಕೊಳ್ಳಲು ಅನೇಕ ಸರ್ಕಾರಿ ಇಲಾಖೆಗಳಿಗೆ ಅಗತ್ಯವಿರಬಹುದು ಮತ್ತು ಅಂತರ ಇಲಾಖಾ ಸಮನ್ವಯವು ಹುದ್ದೆಗಳಿಗೆ ಹೊಸ ಅವಕಾಶವನ್ನು ನೀಡುತ್ತದೆ ಎಂದು ಶ್ರೀ ಸಂಜಯ್ ಧೋತ್ರೆ ಹೇಳಿದರು. ಎಇಪಿಎಸ್ (ಆಧಾರ್ ಸಕ್ರಿಯಗೊಳಿಸಿದ ಪಾವತಿ ವ್ಯವಸ್ಥೆ ) ಅನ್ನು ಅಂಚೆ ಇಲಾಖೆಯಿಂದ ವ್ಯಾಪಕವಾಗಿ ಜನಪ್ರಿಯಗೊಳಿಸಬೇಕು ಮತ್ತು ಅಂಚೆ ವಿಭಾಗಗಳ ವಿಭಾಗೀಯ ಮುಖ್ಯಸ್ಥರು ನಗದನ್ನು ಮನೆ ಬಾಗಿಲಿಗೆ ತಲುಪಿಸಲು ಜಿಲ್ಲಾಧಿಕಾರಿಗಳು ಮತ್ತು ರಾಜ್ಯ ಆಡಳಿತಗಳೊಂದಿಗೆ ಸಮನ್ವಯ ಸಾಧಿಸಬಹುದು ಎಂದು ಸಚಿವರು ಒತ್ತಿ ಹೇಳಿದರು.

ನಿಯಂತ್ರಣ ವಲಯವನ್ನು ಹೊರತುಪಡಿಸಿ ದೇಶಾದ್ಯಂತ ಹೆಚ್ಚಿನ ಅಂಚೆ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ ಮತ್ತು ಸೇವೆಗಳನ್ನು ನೀಡುತ್ತಿವೆ ಎಂದು ಸಚಿವರಿಗೆ ತಿಳಿಸಲಾಯಿತು. ಔಷಧಿಗಳು, ಕೋವಿಡ್-19 ಪರೀಕ್ಷಾ ಕಿಟ್ಗಳು, ಮುಖಗವಸುಗಳು, ಸ್ಯಾನಿಟೈಜರ್ಗಳು, ಪಿಪಿಇಗಳು ಮತ್ತು ವೆಂಟಿಲೇಟರ್ಗಳು ಮತ್ತು ಡಿಫಿಬ್ರಿಲೇಟರ್ಗಳು, ವೈದ್ಯಕೀಯ ಉಪಕರಣಗಳು ಸೇರಿದಂತೆ ಅಗತ್ಯ ವಸ್ತುಗಳನ್ನು ತಲುಪಿಸಲು ವಿಶೇಷ ಆದ್ಯತೆ ನೀಡಲಾಗುತ್ತಿದೆ.

20 ಏಪ್ರಿಲ್ 2020 ರವರೆಗಿನ ಲಾಕ್ಡೌನ್ ಅವಧಿಯಲ್ಲಿ ರೂ.28000 ಕೋಟಿ ರೂಪಾಯಿಗಳ ಸುಮಾರು 1.8 ಕೋಟಿ ಅಂಚೆ ಕಚೇರಿ ಉಳಿತಾಯ ಬ್ಯಾಂಕುಗಳ ವಹಿವಾಟನ್ನು ಜೊತೆಗೆ 2100 ಕೋಟಿ ರೂಪಾಯಿಗಳ 84 ಲಕ್ಷ ಐಪಿಪಿಬಿ ವಹಿವಾಟಿನ್ನು ನಡೆಸಿದೆ. ಇದಲ್ಲದೆ, ದೇಶಾದ್ಯಂತ 135 ಕೋಟಿ ರೂಪಾಯಿಗಳ 4.3 ಲಕ್ಷ ಎಟಿಎಂ ವಹಿವಾಟು ನಡೆದಿದೆ.

ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕಿನ ಆಧಾರ್ ಸಕ್ರಿಯಗೊಳಿಸಿದ ಪಾವತಿ ವ್ಯವಸ್ಥೆ (ಎಇಪಿಎಸ್), ಯಾವುದೇ ನಿಗದಿತ ಬ್ಯಾಂಕುಗಳಲ್ಲಿರುವ ಖಾತೆಗಳಿಂದ ಮನೆ ಬಾಗಿಲಲ್ಲೇ ಹಣವನ್ನು ಹಿಂಪಡೆಯಲು ಅನುವು ಮಾಡಿಕೊಡುತ್ತದೆ.

ಅವಧಿಯಲ್ಲಿ 300 ಕೋಟಿ ರೂಪಾಯಿಗಳ 15 ಲಕ್ಷ ಎಇಪಿಎಸ್ ವಹಿವಾಟುಗಳನ್ನು ನಡೆದಿವೆ. 480 ಕೋಟಿ ರೂಪಾಯಿಗಳ ಸುಮಾರು 52 ಲಕ್ಷ ಡೈರೆಕ್ಟ್ ಬೆನಿಫಿಟ್ ವರ್ಗಾವಣೆ ಪಾವತಿಗಳನ್ನು ಲಾಕ್ ಡೌನ್ ಅವಧಿಯಲ್ಲಿ ಮಾಡಲಾಗಿವೆ. ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಜನರನ್ನು ಸೇರಿಸಿ ಹಳೆಯ, ವಿಶೇಷಚೇತನರು ಮತ್ತು ಪಿಂಚಣಿದಾರರಿಗೆ ಆಧಾರ್ ಸಕ್ರಿಯಗೊಂಡ ಪಾವತಿ ವ್ಯವಸ್ಥೆಯು ಹೆಚ್ಚಿನ ಸಹಾಯ ಮಾಡಿದೆ.

ಶ್ರೀ ಸಂಜಯ್ ಧೋತ್ರೆಯವರಿಗೆ ಗ್ರಾಹಕರಿಗೆ ಅಗತ್ಯ ವಸ್ತುಗಳನ್ನು ತಲುಪಿಸಲು ವಿಶೇಷ ಅಂತರರಾಜ್ಯ ಮತ್ತು ರಾಜ್ಯದೊಳಗಿನ ಅಂಚೆ ವ್ಯವಸ್ಥೆಗಳ ಬಗ್ಗೆ ತಿಳಿಸಲಾಯಿತು. ಅಗತ್ಯ ವಸ್ತುಗಳ ಸಮಯೋಚಿತ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ಇಂಡಿಯಾ ಪೋಸ್ಟ್ ಸರಕು ವಿಮಾನಗಳು, ಪಾರ್ಸೆಲ್ ರೈಲುಗಳು ಮತ್ತು ತನ್ನದೇ ಆದ ರೆಡ್ ಮೇಲ್ ಮೋಟಾರ್ ವ್ಯಾನ್ಗಳು ಮತ್ತು ರಸ್ತೆ ಸಾರಿಗೆ ಜಾಲಗಳನ್ನು ಬಳಸುತ್ತಿದೆ. ಲಾಕ್ಡೌನ್ ಸಮಯದಲ್ಲಿ ಔಷಧಿಗಳನ್ನು ಕಳುಹಿಸಲು ಮತ್ತು ಸ್ವೀಕರಿಸಲು ಯಾರೂ ತೊಂದರೆ ಅನುಭವಿಸದಂತೆ ಅಂಚೆ ಇಲಾಖೆಯ ಎಲ್ಲ ಉದ್ಯೋಗಿಗಳಿಗೆ ತಿಳಿಸಲಾಗಿದೆ. ಗುಜರಾತ್, ಉತ್ತರ ಪ್ರದೇಶ, ಕೇರಳ, ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳದಂತಹ ಹಲವಾರು ರಾಜ್ಯದ ಅಂಚೆ ಘಟಕಗಳು ಭಾರತೀಯ ಔಷಧ ತಯಾರಕರ ಸಂಘ, ಆರೋಗ್ಯ ಸೇವೆಗಳ ಮಹಾನಿರ್ದೇಶಕರು, ಆನ್ಲೈನ್ ಔಷಧೀಯ ಕಂಪನಿಗಳು ಮತ್ತು ಕೋವಿಡ್-19 ಪರೀಕ್ಷಾ ಕಿಟ್ಗಳ ಪೂರೈಕೆದಾರರೊಂದಿಗೆ ಒಪ್ಪಂದ ಮಾಡಿಕೊಂಡಿವೆ.

ದೇಶದ ವಿವಿಧ ಭಾಗಗಳಲ್ಲಿ ಅವಶ್ಯಕತೆಗಳಿಗೆ ಅನುಗುಣವಾಗಿ ಮೂಲ ಅಂಚೆ ಸೇವೆಗಳನ್ನು ಒದಗಿಸಲು ಕಾರ್ಯನಿರ್ವಹಿಸುತ್ತಿರುವ ಪೋಸ್ಟ್ ಆಫಿಸ್ ಆನ್ ವೀಲ್ಸ್ ಬಗ್ಗೆ ಸಚಿವರಿಗೆ ಹೆಚ್ಚಿನ ಮಾಹಿತಿ ನೀಡಲಾಯಿತು. ಸ್ವಯಂಪ್ರೇರಿತ ಕೊಡುಗೆಗಳ ಮೂಲಕ ಮತ್ತು ಸಾರಿಗೆ ಸೇವೆಗಳನ್ನು ಒದಗಿಸಲು ಸರ್ಕಾರೇತರ ಸಂಸ್ಥೆಗಳು ಮತ್ತು ಜಿಲ್ಲಾಡಳಿತದೊಂದಿಗೆ ಸಹಭಾಗಿತ್ವದಿಂದ ಅಂಚೆ ಇಲಾಖೆಯಿಂದ ಬಡವರಿಗೆ ಆಹಾರ ಮತ್ತು ಒಣ ಪಡಿತರವನ್ನು ಸರಬರಾಜು ಮಾಡಲಾಗುತ್ತಿದೆ. ಅಂಚೆ ನೌಕರರು, ನೈರ್ಮಲ್ಯ ಕಾರ್ಮಿಕರು ಮತ್ತು ಸಾರ್ವಜನಿಕರಿಗೆ ಹಂಚಲು ಕೆಲವು ವಲಯಗಳು ಮುಖಗವಸುಗಳನ್ನು ಹೊಲಿಯುವುದನ್ನು ನಡೆಸುತ್ತಿವೆ.

ಕೆಲವು ವಲಯಗಳು ಕೈಗೊಂಡ ವಿವಿಧ ವೈಯಕ್ತಿಕ ಉಪಕ್ರಮಗಳ ಬಗ್ಗೆ ಸಚಿವರಿಗೆ ಮತ್ತಷ್ಟು ಮಾಹಿತಿ ನೀಡಲಾಯಿತು. ಉದಾಹರಣೆಗೆ, ರತ್ನಗಿರಿಯಲ್ಲಿ ಇಲಾಖೆಯು ಮಾವಿನ ರೈತರಿಗೆ ತಮ್ಮ ಹೊಲಗಳಿಂದ ಉತ್ಪತ್ತಿಯಾಗುವ ಮಾವಿನಕಾಯಿ ತೆಗೆದುಕೊಳ್ಳುವುದು ಮತ್ತು ಗಮ್ಯಸ್ಥಾನ ಸ್ಥಳಗಳಲ್ಲಿ ಲೋಡ್ ಮಾಡುವುದು, ಸಾರಿಗೆ ಮತ್ತು ಇಳಿಸುವಿಕೆ ಸೇರಿದಂತೆ ಸಾಗಾಣಿಕೆಯ ಸೇವೆಗಳನ್ನು ಒದಗಿಸುತ್ತಿದೆ. ಕರ್ನಾಟಕದಲ್ಲಿ ರೈತರಿಗೆ ನಗರದೊಳಗೆ ತಲುಪಿಸಲು ಬೆಂಗಳೂರು ಜಿಪಿಒನಲ್ಲಿ ಮಾವಿನ ಪೆಟ್ಟಿಗೆಗಳನ್ನು ಕಾಯ್ದಿರಿಸುವ ಸೌಲಭ್ಯವನ್ನು ಒದಗಿಸಲಾಗಿದೆ. ಎಲ್ಲಾ ವಿತರಣೆಗಳನ್ನು ಸಮಯದೊಳಗೆ ಮಾಡಲಾಗುತ್ತಿದೆ. 17 ಏಪ್ರಿಲ್ 2020 ರಂದು ಕರ್ನಾಟಕ ಸರ್ಕಲ್ ಆಫ್ ಇಂಡಿಯಾ ಕಚೇರಿಯು ಪೋಸ್ಟ್ ಲಾಕ್ ಡೌನ್ ಆಗಿರುವುದರಿಂದ ಮನೆಗಳಿಂದ ಹೊರಬರಲು ಸಾಧ್ಯವಾಗದ ಜನರ ಅನುಕೂಲಕ್ಕಾಗಿ ದ್ವಿಭಾಷಾ ವೆಬ್ ಅಪ್ಲಿಕೇಶನ್ ಆಂಚೆ ಮಿತ್ರಅನ್ನು ಪ್ರಾರಂಭಿಸಿತು.

ಹರಿಯಾಣ ವೃತ್ತದ ಮಾಹಿತಿ ತಂತ್ರಜ್ಞಾನ ತಂಡ ಅಭಿವೃದ್ಧಿಪಡಿಸಿದ 'ಡಾಕ್ ಮಿತ್ರ' ಆ್ಯಪ್ ಅನ್ನು ಹರಿಯಾಣ ಸರ್ಕಾರದ ಪೋರ್ಟಲ್ನೊಂದಿಗೆ ಏಪ್ರಿಲ್ 21 ರಂದು ಹರಿಯಾಣ ಮುಖ್ಯಮಂತ್ರಿಯವರು ಚಾಲನೆ ನೀಡಿದರು. ಪೋರ್ಟಲ್ ಉದ್ದೇಶ ಬ್ಯಾಂಕುಗಳಲ್ಲಿನ ಜನಸಮೂಹ ನಿರ್ವಹಣೆ ಮತ್ತು ಜನರು ತಮ್ಮ ಹಣವನ್ನು ಅಂಚೆ ಕಛೇರಿಗಳಿಂದ ಎಇಪಿಎಸ್ ಮೂಲಕ ಪಡೆಯಲು ಆಯ್ಕೆಯನ್ನು ನೀಡುತ್ತದೆ. ಪೋರ್ಟಲ್ ಮೂಲಕ ಅಪ್ಲಿಕೇಶನ್ನಲ್ಲಿ ಈಗಾಗಲೇ 310 ವಿನಂತಿಗಳನ್ನು ಸ್ವೀಕರಿಸಲಾಗಿದೆ.

ಸಹಾಯವಾಣಿ ಸಂಖ್ಯೆಗಳನ್ನು ಸಾರ್ವಜನಿಕರಲ್ಲಿ ವ್ಯಾಪಕವಾಗಿ ಪ್ರಸಾರ ಮಾಡುವಂತೆ ಸಚಿವರು ವಿವಿಧ ವಲಯಗಳು/ ರಾಜ್ಯ ಘಟಕಗಳನ್ನು ಕೇಳಿದರು, ಇದರಿಂದ ಅವರು ಸೇವೆಗಳನ್ನು ಸುಲಭವಾಗಿ ಪಡೆಯಬಹುದು. ಪ್ರತಿಯೊಬ್ಬರೂ ವಿಶೇಷವಾಗಿ ಕ್ಷೇತ್ರದಲ್ಲಿರುವ ಸಿಬ್ಬಂದಿಗಳು ಮುಖಗವಸುಗಳು, ಸ್ಯಾನಿಟೈಜರ್ಗಳು ಮತ್ತು ಸಾಮಾಜಿಕ ಅಂತರದ ಮಾನದಂಡಗಳಂತಹ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಮತ್ತು ಹಿರಿಯ ಅಧಿಕಾರಿಗಳು ಅಂಚೆ ಪೇದೆಗಳ ಆರೈಕೆ ಮತ್ತು ಪ್ರೇರೇಪಣೆಯ ಕಡೆಗೆ ಗಮನ ಹರಿಸಬೇಕು ಎಂದು ತಿಳಿಸಿದರು.

***


(Release ID: 1618014) Visitor Counter : 308