ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ
ನವದೆಹಲಿಯಲ್ಲಿ ಕೇಂದ್ರ ಮಾನವ ಸಂಪನ್ಮೂಲ ಸಚಿವರು ಹಿರಿಯ ಪ್ರಾಥಮಿಕ ಹಂತಕ್ಕೆ ಪರ್ಯಾಯ ಶೈಕ್ಷಣಿಕ ಕ್ಯಾಲೆಂಡರ್ ಬಿಡುಗಡೆ ಮಾಡಿದರು
Posted On:
23 APR 2020 1:39PM by PIB Bengaluru
ನವದೆಹಲಿಯಲ್ಲಿ ಕೇಂದ್ರ ಮಾನವ ಸಂಪನ್ಮೂಲ ಸಚಿವರು ಹಿರಿಯ ಪ್ರಾಥಮಿಕ ಹಂತಕ್ಕೆ ಪರ್ಯಾಯ ಶೈಕ್ಷಣಿಕ ಕ್ಯಾಲೆಂಡರ್ ಬಿಡುಗಡೆ ಮಾಡಿದರು
16 ಏಪ್ರಿಲ್ 2020 ರಂದು ಕೇಂದ್ರ ಮಾನವ ಸಂಪನ್ಮೂಲ ಸಚಿವರು ಪ್ರಾಥಮಿಕ ಹಂತಕ್ಕೆ ಪರ್ಯಾಯ ಶೈಕ್ಷಣಿಕ ಕ್ಯಾಲೆಂಡರ್ ಬಿಡುಗಡೆ ಮಾಡಿದ್ದರು
ಕೋವಿಡ್ – 19 ರಿಂದಾಗಿ ಮನೆಯಲ್ಲಿಯೇ ಉಳಿದ ವಿದ್ಯಾರ್ಥಿಗಳನ್ನು ತಮ್ಮ ಪೋಷಕರು ಮತ್ತು ಶಿಕ್ಷಕರ ಸಹಾಯದಿಂದ ಅರ್ಥಪೂರ್ಣವಾಗಿ ಶೈಕ್ಷಣಿಕ ಚಟುವಟಿಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಲು ಪ್ರಾಥಮಿಕ ಮತ್ತು ಉನ್ನತ ಪ್ರಾಥಮಿಕ ಹಂತಗಳಿಗೆ (ವರ್ಗ vi ರಿಂದ viii) ಪರ್ಯಾಯ ಶೈಕ್ಷಣಿಕ ಕ್ಯಾಲೆಂಡರ್ ನ್ನು ಎಂ ಹೆಚ್ ಆರ್ ಡಿ ಮಾರ್ಗದರ್ಶನದಲ್ಲಿ ಎನ್ ಸಿ ಇ ಆರ್ ಟಿ ಸಿದ್ಧಪಡಿಸಿದೆ.
ಇಂದು ನವದೆಹಲಿಯಲ್ಲಿ ಉನ್ನತ ಪ್ರಾಥಮಿಕ ಹಂತಕ್ಕೆ ಪರ್ಯಾಯ ಶೈಕ್ಷಣಿಕ ಕ್ಯಾಲೆಂಡರ್ ಅನ್ನು ಕೇಂದ್ರ ಮಾನವ ಸಂಪನ್ಮೂಲ ಸಚಿವರಾದ ಶ್ರೀ ರಮೇಶ್ ಪೋಖ್ರಿಯಾಲ್ ನಿಶಾಂಕ್ ಬಿಡುಗಡೆ ಮಾಡಿದ್ದಾರೆ. 16 ಏಪ್ರೀಲ್ 2020 ರಂದು ಪ್ರಾಥಮಿಕ ಹಂತಕ್ಕೆ ಪರ್ಯಾಯ ಶೈಕ್ಷಣಿಕ ಕ್ಯಾಲೆಂಡರ್ ನ್ನು ಬಿಡುಗಡೆ ಮಾಡಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಪೋಖ್ರಿಯಾಲ್ ಈ ಕ್ಯಾಲೆಂಡರ್ ವಿನೋದಮಯವಾಗಿ, ಆಸಕ್ತಿಕರ ರೀತಿಯಲ್ಲಿ ಶಿಕ್ಷಣವನ್ನು ಒದಗಿಸಲು ಲಭ್ಯವಿರುವ ವಿವಿಧ ತಾಂತ್ರಿಕ ಪರಿಕರಗಳು ಮತ್ತು ಸಾಮಾಜಿಕ ಮಾಧ್ಯಮ ಟೂಲ್ ಗಳನ್ನು ಬಳಸಲು ಶಿಕ್ಷಕರಿಗೆ ಮಾರ್ಗಸೂಚಿಗಳನ್ನು ಒದಗಿಸುತ್ತದೆ. ಇವನ್ನು ಕಲಿಕೆದಾರರು, ಪೋಷಕರು ಮತ್ತು ಶಿಕ್ಷಕರು ಮನೆಯಲ್ಲಿದ್ದುಕೊಂಡೇ ಬಳಸಿಕೊಳ್ಳಬಹುದಾಗಿದೆ. ಆದಾಗ್ಯೂ ಮೊಬೈಲ್, ರೇಡಿಯೋ, ಟೆಲಿವಿಷನ್, ಎಸ್ ಎಂ ಎಸ್, ಮತ್ತು ವಿವಿಧ ಸಾಮಾಜಿಕ ಜಾಲತಾಣಗಳಂಥ ಟೂಲ್ಸ್ ಗಳ ಲಭ್ಯತೆಯ ವಿವಿಧ ಹಂತಗಳನ್ನು ಗಣನೆಗೆ ತೆಗೆದುಕೊಂಡಿದೆ. ನಮ್ಮಲ್ಲಿ ಬಹಳಷ್ಟು ಜನರ ಬಳಿ ಮೊಬೈಲ್ ನಲ್ಲಿ ಇಂಟರ್ ನೆಟ್ ಇಲ್ಲದಿರುವುದು ಅಥವಾ ವಾಟ್ಸ್ ಆಪ್, ಟ್ವಿಟ್ಟರ್, ಗೂಗಲ್ ಮುಂತಾದ ವಿವಿಧ ಸಾಮಾಜಿಕ ಮಾಧ್ಯಮಗಳ ಟೂಲ್ಸ್ ಬಳಸಲು ಬಹಳಷ್ಟು ಜನರಿಗೆ ಸಾಧ್ಯವಾಗಲಿಕ್ಕಿಲ್ಲ ಎಂಬುದೂ ಸತ್ಯ ಎಂದು ಅವರು ಹೇಳಿದರು. ಮೊಬೈಲ್ ಫೋನ್ ಗೆ ಎಸ್ ಎಂ ಎಸ್ ಅಥವಾ ಧ್ವನಿ ಸಂದೇಶದ ಮೂಲಕ ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವಂತೆ ಈ ಕ್ಯಾಲೆಂಡರ್ ಶಿಕ್ಷಕರಿಗೆ ಮಾರ್ಗದರ್ಶನ ನೀಡುತ್ತದೆ. ಈ ಕ್ಯಾಲೆಂಡರ್ ನ್ನು ಅಳವಡಿಸಿಕೊಳ್ಳಲು ಪೋಷಕರು ಪ್ರಾಥಮಿಕ ಶಾಲಾ ಮಕ್ಕಳಿಗೆ ಸಹಾಯ ಮಾಡುವಂತೆ ಅಪೇಕ್ಷಿಸಲಾಗಿದೆ.
ಶೀಘ್ರದಲ್ಲೇ ಉಳಿದ ತರಗತಿಗಳ ಅಂದರೆ IX ರಿಂದ XII ವರ್ಗಗಳ ವಿಷಯಗಳನ್ನು ಈ ಕ್ಯಾಲೆಂಡರ್ ಅಡಿಯಲ್ಲಿ ತರಲಾಗುವುದು ಎಂದು ಸಚಿವರು ತಿಳಿಸಿದ್ದಾರೆ. ದಿವ್ಯಾಂಗ ಮಕ್ಕಳೂ (ವಿಶೇಷ ಸೌಲಭ್ಯದ ಅವಶ್ಯಕತೆ ಇರುವ ಮಕ್ಕಳು) ಸೇರಿದಂತೆ ಎಲ್ಲ ಮಕ್ಕಳ ಅವಶ್ಯಕತೆಗಳನ್ನು ಈ ಕ್ಯಾಲೆಂಡರ್ ಪೂರೈಸುತ್ತದೆ – ಇದರಲ್ಲಿ ಧ್ವನಿ ಪುಸ್ತಕಗಳು, ರೇಡಿಯೋ ಕಾರ್ಯಕ್ರಮಗಳು, ವಿಡಿಯೋ ಕಾರ್ಯಕ್ರಮಗಳ ಲಿಂಕ್ ಗಳನ್ನು ಸೇರಿಸಲಾಗಿರುತ್ತದೆ.
ಪಠ್ಯಕ್ರಮ ಅಥವಾ ಪಠ್ಯಪುಸ್ತಕದಿಂದ ತೆಗೆದುಕೊಳ್ಳಲಾದ ಥೀಮ್/ಅಧ್ಯಾಯಕ್ಕೆ ಸಂಬಂಧಿಸಿದಂತೆ ಆಸಕ್ತಿಕರ ಮತ್ತು ಸವಾಲಿನ ಚಟುವಟಿಕೆಗಳನ್ನು ಒಳಗೊಂಡ ವಾರದ ಯೋಜನೆಯನ್ನು ಈ ಕ್ಯಾಲೆಂಡರ್ ಒಳಗೊಂಡಿರುತ್ತದೆ. ಎಲ್ಲಕ್ಕಿಂತ ಪ್ರಮುಖವಾಗಿ ಕಲಿಕೆಯ ಫಲಿತಾಂಶಗಳೊಂದಿಗೆ ವಿಷಯಗಳನ್ನು ಜೋಡಿಸುತ್ತದೆ. ಕಲಿಕೆಯ ಫಲಿತಾಂಶಗಳೊಂದಿಗೆ ವಿಷಯಗಳನ್ನು ಜೋಡಿಸುವ ಉದ್ದೇಶವೇನೆಂದರೆ ಶಿಕ್ಷಕರು/ಪೋಷಕರಿಗೆ ಮಕ್ಕಳ ಕಲಿಕೆಯ ಪ್ರಗತಿಯನ್ನು ಗುರುತಿಸಲು ಅನುಕೂಲವಾಗುವಂತೆ ಮಾಡುವುದು ಮತ್ತು ಕಲಿಕೆಯ ಹಂತವನ್ನು ಪಠ್ಯಪುಸ್ತಕಗಳಿಗೂ ಮೀರಿ ಕೊಂಡೊಯ್ಯುವುದಾಗಿದೆ. ಈ ಕ್ಯಾಲೆಂಡರ್ ನಲ್ಲಿ ನೀಡಲಾದ ಚಟುವಟಿಕೆಗಳು ಕಲಿಕೆಯ ಫಲಿತಾಂಶಗಳ ಮೇಲೆ ಹೆಚ್ಚು ಕೇಂದ್ರೀಕರಿಸುತ್ತವೆ ಮತ್ತು ಮಕ್ಕಳು ತಮ್ಮ ರಾಜ್ಯಗಳಲ್ಲಿ ಅಥವಾ ಕೇಂದ್ರಾಡಳಿತ ಪ್ರದೇಶಗಳಲ್ಲಿ ಬಳಸುವ ಪಠ್ಯ ಪುಸ್ತಕಗಳೂ ಸೇರಿದಂತೆ ಯಾವುದೇ ಸಂಪನ್ಮೂಲಗಳಿಂದ ಇದನ್ನು ಸಾಧಿಸಬಹುದಾಗಿದೆ.
ಕಲಾ ಶಿಕ್ಷಣ, ದೈಹಿಕ ವ್ಯಾಯಾಮಗಳು, ಯೋಗ, ವೃತ್ತಿಪರ ಕೌಶಲ್ಯಗಳು,ಮುಂತಾದ ಪ್ರಾಯೋಗಿಕ ಚಟುವಟಿಕೆಗಳ ಕಲಿಕೆಗಳನ್ನು ಕೂಡಾ ಇದು ಒಳಗೊಂಡಿರುತ್ತದೆ. ಕೋಷ್ಟಕ ರೂಪದಲ್ಲಿ ವರ್ಗವಾರು ಮತ್ತು ವಿಷಯವಾರು ಚಟುವಟಿಕೆಗಳನ್ನು ಈ ಕ್ಯಾಲೆಂಡರ್ ಒಳಗೊಂಡಿರುತ್ತದೆ. ಈ ಕ್ಯಾಲೆಂಡರ್ ಹಿಂದಿ, ಇಂಗ್ಲೀಷ್, ಉರ್ದು, ಮತ್ತು ಸಂಸ್ಕೃತ ಭಾಷೆ ಹೀಗೆ ನಾಲ್ಕು ಭಾಷೆಗಳಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ಒಳಗೊಂಡಿರುತ್ತದೆ. ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಒತ್ತಡ ಹಾಗೂ ಆತಂಕವನ್ನು ಕಡಿಮೆ ಮಾಡುವ ತಂತ್ರಗಳಿಗೂ ಕ್ಯಾಲೆಂಡರ್ ನಲ್ಲಿ ಅವಕಾಶ ಕಲ್ಪಿಸಲಾಗಿದೆ. ಭಾರತ ಸರ್ಕಾರದ ಇ ಪಾಠಶಾಲಾ, ಎನ್ ಆರ್ ಒ ಇ ಆರ್ ಮತ್ತು ದಿಕ್ಷಾ ಪೋರ್ಟಲ್ ಗಳಲ್ಲಿ ಅಧ್ಯಾಯವಾರು ಇ – ವಿಷಯಗಳ ಲಿಂಕ್ ಗಳನ್ನು ಕ್ಯಾಲೆಂಡರ್ ಒಳಗೊಂಡಿದೆ.
ಕೊಟ್ಟಿರುವ ಎಲ್ಲ ಚಟುವಟಿಕೆಗಳು ಸಲಹಾ ರೂಪಿಯಾಗಿದ್ದು, ಸೂಚಿತ ಅಥವಾ ಅದೇ ಅನುಕ್ರಮ ಕಡ್ಡಾಯವಲ್ಲ. ಶಿಕ್ಷಕರು ಹಾಗೂ ಪೋಷಕರು ಸಾಂದರ್ಭಿಕವಾಗಿ ಮತ್ತು ಅನುಕ್ರಮವನ್ನು ಅನುಸರಿಸದೇ ವಿದ್ಯಾರ್ಥಿಗಳು ಆಸಕ್ತಿ ತೋರುವ ಚಟುವಟಿಕೆಗಳನ್ನು ಕೈಗೊಳ್ಳಬಹುದಾಗಿದೆ.
ಸ್ವಯಂ ಪ್ರಭಾ (ಕಿಶೋರ್ ಮಂಚ್) ಟಿವಿ ಚಾನೆಲ್ ಮೂಲಕ ವಿದ್ಯಾರ್ಥಿಗಳು ಶಿಕ್ಷಕರು ಹಾಗೂ ಪೋಷಕರೊಂದಿಗೆ ಈಗಾಗಲೇ ನೇರ ಚರ್ಚಾತ್ಮಕ ಅವಧಿಗಳನ್ನು ಎನ್ ಸಿ ಇ ಆರ್ ಟಿ ಆರಂಭಿಸಿದೆ. (ಇದು ಉಚಿತ ಡಿಟಿಹೆಚ್ ಚಾನೆಲ್ 128 ನಲ್ಲಿ, ಡಿಶ್ ಟಿವಿ ಚಾನೆಲ್ # 950, ಸನ್ ಡೈರೆಕ್ಟ್ #793, ಜಿಯೊ ಟಿವಿ, ಟಾಟಾ ಸ್ಕೈ #756, ಏರ್ ಟೆಲ್ ಚಾನೆಲ್ #440, ವಿಡಿಯೊಕಾನ್ ಚಾನೆಲ್ # 477 ನಲ್ಲಿ ಲಭ್ಯ)
ಕಿಶೋರ್ ಮಂಚ್ ಆಪ್ ನ್ನು ( ಪ್ಲೆ ಸ್ಟೋರ್ ನಿಂದ ಡೌನ್ ಲೋಡ್ ಮಾಡಿಕೊಳ್ಳಬಹುದು) ಮತ್ತು ಯುಟ್ಯೂಬ್ ಲೈವ್ (ಎನ್ ಸಿ ಇ ಆರ್ ಟಿ ಅಧಿಕೃತ ಚಾನೆಲ್) ಸೋಮವಾರದಿಂದ ಶನಿವಾರದವರೆಗೆ ಪ್ರತಿದಿನ ಈ ತರಗತಿಗಳು ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆವರೆಗೆ ಪ್ರಾಥಮಿಕ ವರ್ಗಗಳಿಗೆ ಮತ್ತು ಮಧ್ಯಾಹ್ನ 2 ರಿಂದ ಸಂಜೆ 4 ರವರೆಗೆ ಉನ್ನತ ಪ್ರಾಥಮಿಕ ವರ್ಗಗಳಿಗೆ ತರಗತಿಗಳ ಕಾರ್ಯಕ್ರಮ ಪ್ರಸಾರ ಮಾಡಲಾಗುತ್ತಿದೆ. ವೀಕ್ಷಕರೊಂದಿಗೆ ಚರ್ಚಿಸುವುದಲ್ಲದೆ ಈ ಕಾರ್ಯಕ್ರಮಗಳಲ್ಲಿ ವಿಷಯ ಬೋಧನೆ ಜೊತೆಗೆ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತದೆ. ಎಸ್ ಸಿ ಇ ಆರ್ ಟಿ ಗಳು/ಎಸ್ ಐ ಇ ಗಳು, ಶಿಕ್ಷಣ ನಿರ್ದೇಶನಾಲಯಗಳು, ಕೇಂದ್ರೀಯ ವಿದ್ಯಾಲಯ ಸಂಘಟನೆ, ನವೋದಯ ವಿದ್ಯಾಲಯ ಸಮೀತಿ, ಸಿ ಬಿ ಎಸ್ ಇ, ರಾಜ್ಯ ಶಾಲಾ ಶಿಕ್ಷಣ ಮಂಡಳಿ ಉಂತಾದವುಗಳೊಂದಿಗೆ ವಿಡಿಯೊ ಕಾನ್ಫೆರೆನ್ಸಿಂಗ್ ನಡೆಸುವುದು ಕೂಡಾ ಈ ಕ್ಯಾಲೆಂಡರ್ ಒಳಗೊಂಡಿದೆ
ಈ ಕ್ಯಾಲೆಂಡರ್ ನಮ್ಮ ವಿದ್ಯಾರ್ಥಿಗಳು, ಶಿಕ್ಷಕರು, ಶಾಲಾ ಪ್ರಾಂಶುಪಾಲರು ಮತ್ತು ಪೋಷಕರಿಗೆ ಆನ್ ಲೈನ್ ಬೋಧನೆ – ಕಲಿಕೆಯ ಸಂಪನ್ಮೂಲವನ್ನು ಬಳಸಿಕೊಂಡು ಕೋವಿಡ್ – 19 ನ್ನು ಎದುರಿಸಲು ಸಕಾರಾತ್ಮಕ ಮಾರ್ಗಗಳನ್ನು ಕಂಡುಕೊಳ್ಳಲು ನೆರವಾಗುತ್ತದೆ ಮತ್ತು ಮನೆಯಿಂದಲೇ ಶಾಲಾ ಶಿಕ್ಷಣವನ್ನು ಪಡೆಯುವ ಮೂಲಕ ಕಲಿಕೆಯ ಫಲಿತವನ್ನು ಹೆಚ್ಚಿಸುತ್ತದೆ.
Click here for Alternative Academic Calendar for upper primary stage in English
Click here for Alternative Academic Calendar for upper primary stage in Hindi
***
(Release ID: 1617776)
Visitor Counter : 255
Read this release in:
English
,
Urdu
,
Marathi
,
Hindi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam