PIB Headquarters
ಕೋವಿಡ್-19: ಪಿ ಐ ಬಿ ದೈನಿಕ ವರದಿ
Posted On:
23 APR 2020 7:04PM by PIB Bengaluru
ಕೋವಿಡ್-19: ಪಿ ಐ ಬಿ ದೈನಿಕ ವರದಿ
(ಕಳೆದ 24 ಗಂಟೆಗಳಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಮಾಧ್ಯಮ ಹೇಳಿಕೆಗಳು ಮತ್ತು ಪಿಐಬಿ ಮಾಡಿದ ವಾಸ್ತವದ ಪರಿಶೀಲನೆ -Fact check- ಯನ್ನು ಒಳಗೊಂಡಿದೆ)
- ಇದುವರೆಗೆ ದೇಶದಲ್ಲಿ 21,393 ಕೋವಿಡ್ -19 ದೃಢೀಕೃತ ಪ್ರಕರಣಗಳು ವರದಿಯಾಗಿವೆ, ನಿನ್ನೆಯಿಂದೀಚೆಗೆ 1409 ಪ್ರಕರಣಗಳು, 4257 ಮಂದಿ ಗುಣಮುಖ.
- ಕಳೆದ 14 ದಿನಗಳಿಂದ 78 ಜಿಲ್ಲೆಗಳಲ್ಲಿ ಯಾವುದೇ ಹೊಸ ಪ್ರಕರಣ ವರದಿಯಾಗಿಲ್ಲ.
- ಕೋವಿಡ್-19 ರ ಅವಧಿಯಲ್ಲಿ ಹಿಂಸಾಚಾರದಿಂದ ಆರೋಗ್ಯ ಸೇವಾ ಸಿಬ್ಬಂದಿಯನ್ನು ಮತ್ತು ಆಸ್ತಿಯನ್ನು ರಕ್ಷಿಸಲು ಸುಗ್ರೀವಾಜ್ಞೆ.
- ಪಿ.ಎಂ.ಜಿ.ಕೆ. ಪ್ಯಾಕೇಜಿನಡಿಯಲ್ಲಿ 33 ಕೋಟಿಗೂ ಅಧಿಕ ಬಡ ಜನರಿಗೆ ರೂ. 31,235 ಕೋಟಿ ಹಣಕಾಸು ನೆರವು.
- ನಾಳೆ ಗ್ರಾಮ ಪಂಚಾಯತ್ ಗಳ ಜೊತೆ ಪ್ರಧಾನ ಮಂತ್ರಿ ಸಂವಾದ.
- ಕೋವಿಡ್ -19 ಮಾದರಿ ಪರೀಕ್ಷಿಸುವ ಸಂಚಾರಿ ಪ್ರಯೋಗಾಲಯಕ್ಕೆ ರಕ್ಷಣಾ ಸಚಿವರಿಂದ ಚಾಲನೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಿಂದ ಕೋವಿಡ್ -19 ಅಪ್ ಡೇಟ್
ಇದುವರೆಗೆ 4257 ಮಂದಿ ಗುಣಮುಖರಾಗಿದ್ದಾರೆ, ಗುಣಮುಖರಾದವರ ದರ 19.89 % . ನಿನ್ನೆಯಿಂದೀಚೆಗೆ , ಹೊಸ ಪ್ರಕರಣಗಳಲ್ಲಿ 1409 ಹೆಚ್ಚಳ ವರದಿಯಾಗಿದೆ. ಭಾರತದಲ್ಲಿ ಒಟ್ಟು 21,393 ಜನರಿಗೆ ಕೋವಿಡ್ -19 ಪಾಸಿಟಿವ್ ಇರುವುದು ದೃಢಪಟ್ಟಿದೆ. 23 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ 78 ಜಿಲ್ಲೆಗಳಲ್ಲಿ ಕಳೆದ 14 ದಿನಗಳಲ್ಲಿ ಯಾವುದೇ ಹೊಸ ಪ್ರಕರಣಗಳು ವರದಿಯಾಗಿಲ್ಲ.
ವಿವರಗಳಿಗೆ: https://pib.gov.in/PressReleseDetail.aspx?PRID=1617628
ಕೋವಿಡ್-19 ಜಾಗತಿಕ ಸೋಂಕಿನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಸಾಂಕ್ರಾಮಿಕ ರೋಗಗಳ ಕಾಯ್ದೆ 1897 ಕ್ಕೆ ತಿದ್ದುಪಡಿಗಾಗಿ ಸುಗ್ರೀವಾಜ್ಞೆ
2020ರ ಏಪ್ರಿಲ್ 22 ರಂದು ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಸಾಂಕ್ರಾಮಿಕ ರೋಗಗಳ ಕಾಯ್ದೆ 1897 ಕ್ಕೆ ತಿದ್ದುಪಡಿಗಾಗಿ ಸುಗ್ರೀವಾಜ್ಞೆ ಹೊರಡಿಸಲು ಅನುಮೋದನೆ ನೀಡಲಾಗಿದೆ. ಸಾಂಕ್ರಾಮಿಕದ ಅವಧಿಯಲ್ಲಿ ಹಿಂಸಾಚಾರದಿಂದ ಆರೋಗ್ಯ ರಕ್ಷಣಾ ಸೇವಾ ಸಿಬ್ಬಂದಿಗಳು , ಅವರು ಜೀವಿಸುವ ಮತ್ತು ಕಾರ್ಯನಿರ್ವಹಿಸುವ ಆಸ್ತಿಗಳು ಸಹಿತ ರಕ್ಷಣೆಗೆ ಈ ಕ್ರಮಕ್ಕೆ ಸರಕಾರ ಮುಂದಾಗಿದೆ. ಸುಗ್ರೀವಾಜ್ಞೆ ಜಾರಿಗೆ ರಾಷ್ಟ್ರಪತಿಗಳು ತಮ್ಮ ಅಂಗೀಕಾರ ನೀಡಿದ್ದಾರೆ. ಸುಗ್ರೀವಾಜ್ಞೆಯು ಇಂತಹ ಹಿಂಸಾ ಕೃತ್ಯಗಳು ಜಾಮೀನಿಲ್ಲದ ಅಪರಾಧಗಳಾಗಿ ಪರಿಗಣಿಸಲ್ಪಡುತ್ತವೆ ಮತ್ತು ಸಾಂಕ್ರಾಮಿಕಕ್ಕೆ ಸಂಬಂಧಿಸಿ ಆರೋಗ್ಯ ರಕ್ಷಣಾ ಸೇವಾ ಸಿಬ್ಬಂದಿ ನೇರ ಹಿತಾಸಕ್ತಿ ಹೊಂದಿದ್ದರೆ ಆರೋಗ್ಯ ರಕ್ಷಣಾ ಸೇವೆಯ ಸಿಬ್ಬಂದಿಯ ಗಾಯಗಳಿಗೆ ಅಥವಾ ಆಸ್ತಿಗೆ ಹಾನಿ ಯಾ ನಷ್ಟ ಉಂಟುಮಾಡಿದ್ದರೆ ಆಗ ಪರಿಹಾರವನ್ನೂ ಇದು ಒಳಗೊಳ್ಳುತ್ತದೆ.
ವಿವರಗಳಿಗೆ: https://pib.gov.in/PressReleseDetail.aspx?PRID=1617327
ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಪ್ಯಾಕೇಜ್: ಇದುವರೆಗಿನ ಪ್ರಗತಿ
ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಪ್ಯಾಕೇಜ್ ಅಡಿಯಲ್ಲಿ 33 ಕೋಟಿ ಬಡ ಜನರಿಗೆ 31,235 ಕೋ.ರೂ. ಹಣಕಾಸು ಸಹಾಯ ಲಭಿಸಿದೆ. 20.05 ಕೋಟಿ ಮಹಿಳಾ ಜನ್ ಧನ್ ಖಾತೆಗಳಿಗೆ 10,025 ಕೋ.ರೂ.ಗಳನ್ನು ವಿತರಿಸಲಾಗಿದೆ. 2.82 ಕೋಟಿ ವೃದ್ದರಿಗೆ, ವಿಧವೆಯರಿಗೆ ಮತ್ತು ಅಂಗವಿಕಲರಿಗೆ 1405 ಕೋಟಿ ರೂಪಾಯಿ ವಿತರಿಸಲಾಗಿದೆ.ಪಿ.ಎಂ.-ಕಿಸಾನ್ ಯೋಜನೆಯ ಮೊದಲ ಕಂತು: 8 ಕೋಟಿ ರೈತರಿಗೆ 16,146 ಕೋ.ರೂ.ಗಳನ್ನು ವರ್ಗಾಯಿಸಲಾಗಿದೆ. 162 ಕೋ.ರೂ.ಗಳನ್ನು 68,775 ಸಂಸ್ಥೆಗಳಿಗೆ ಇ.ಪಿ.ಎಫ್. ದೇಣಿಗೆಯಾಗಿ ವರ್ಗಾಯಿಸಲಾಗಿದೆ. ಇದರಿಂದ 10.6 ಲಕ್ಷ ಸಿಬ್ಬಂದಿಗಳಿಗೆ ಪ್ರಯೋಜನವಾಗಲಿದೆ. 2.17 ಕೋಟಿ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರು 3497 ಕೋ.ರೂ. ಮೊತ್ತದ ಹಣಕಾಸು ಬೆಂಬಲ ಪಡೆದಿದ್ದಾರೆ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನಾ: 39.27 ಕೋಟಿ ಫಲಾನುಭವಿಗಳಿಗೆ ಆಹಾರ ಧಾನ್ಯಗಳ ಉಚಿತ ಪಡಿತರ ವಿತರಿಸಲಾಗಿದೆ. 1,09,227 ಎಂ.ಟಿ. ಬೇಳೆ ಕಾಳುಗಳನ್ನು ವಿವಿಧ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ರವಾನಿಸಲಾಗಿದೆ. ಪ್ರಧಾನ ಮಂತ್ರಿ ಉಜ್ವಲಾ ಯೋಜನಾ ಅಡಿಯಲ್ಲಿ 2.66 ಕೋಟಿ ಉಚಿತ ಎಲ್.ಪಿ.ಜಿ. ಸಿಲಿಂಡರುಗಳನ್ನು ಪೂರೈಸಲಾಗಿದೆ.
ಏಪ್ರಿಲ್ 24 ರಂದು ದೇಶಾದ್ಯಂತ ಗ್ರಾಮ ಪಂಚಾಯತ್ ಗಳ ಜೊತೆ ಪ್ರಧಾನ ಮಂತ್ರಿ ಸಂವಾದ
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2020ರ ಏಪ್ರಿಲ್ 24, ಶುಕ್ರವಾರದಂದು ದೇಶಾದ್ಯಂತ ವಿವಿಧ ಗ್ರಾಮ ಪಂಚಾಯತುಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ದಿನವನ್ನು ವಾರ್ಷಿಕವಾಗಿ ರಾಷ್ಟ್ರೀಯ ಪಂಚಾಯತ್ ರಾಜ್ ದಿನವನ್ನಾಗಿ ಆಚರಿಸಲಾಗುತ್ತದೆ. ದೇಶವು ಲಾಕ್ ಡೌನ್ ಮೂಲಕ ಸಾಮಾಜಿಕ ಅಂತರವನ್ನು ಪಾಲಿಸುತ್ತಿರುವಾಗ , ಪ್ರಧಾನ ಮಂತ್ರಿ ಅವರು ವೀಡಿಯೋ ಕಾನ್ಫರೆನ್ಸ್ ಮೂಲಕ ವಿವಿಧ ಭಾಗೀದಾರರ ಜೊತೆ ಸಂವಾದ ಮಾಡುವರು.
ವಿವರಗಳಿಗೆ: https://pib.gov.in/PressReleseDetail.aspx?PRID=1617550
ಪ್ರಧಾನ ಮಂತ್ರಿ ಮತ್ತು ಐರ್ಲೆಂಡ್ ಪ್ರಧಾನ ಮಂತ್ರಿ ನಡುವೆ ದೂರವಾಣಿ ಮಾತುಕತೆ
ಪ್ರಧಾನ ಮಂತ್ರಿ ಅವರು ಇಂದು ದೂರವಾಣಿ ಮೂಲಕ ಐರ್ಲೆಂಡ್ ಪ್ರಧಾನ ಮಂತ್ರಿ ಗೌರವಾನ್ವಿತ ಡಾ. ಲಿಯೋ ವರಾಡ್ಕರ್ ಅವರ ಜೊತೆ ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ಪರಿಸ್ಥಿತಿ ಮತ್ತು ಉಭಯ ದೇಶಗಳು ಅದರ ಆರೋಗ್ಯ ಮತ್ತು ಆರ್ಥಿಕ ಪರಿಣಾಮಗಳನ್ನು ನಿಯಂತ್ರಿಸಲು ಕೈಗೊಳ್ಲಲಾಗುತ್ತಿರುವ ಕ್ರಮಗಳ ಬಗ್ಗೆ ಚರ್ಚಿಸಿದರು. ಪ್ರಧಾನ ಮಂತ್ರಿ ವರಾಡ್ಕರ್ ಅವರು ಭಾರತೀಯ ಮೂಲದ ವೈದ್ಯರು ಮತ್ತು ದಾದಿಯರು ಐರ್ಲೆಂಡಿನಲ್ಲಿ ಈ ಸೋಂಕಿನ ವಿರುದ್ದ ಹೋರಾಟದಲ್ಲಿ ವಹಿಸಿರುವ ಪಾತ್ರವನ್ನು ಶ್ಲಾಘಿಸಿದರು.
ವಿವರಗಳಿಗೆ: https://pib.gov.in/PressReleseDetail.aspx?PRID=1617346
ಎಂ.ಎಸ್.ಪಿ.ಯಲ್ಲಿ ಬೇಳೆ ಕಾಳುಗಳು ಮತ್ತು ತೈಲ ಬೀಜಗಳನ್ನು ಖರೀದಿಸುವಿಕೆ ಪ್ರಸ್ತುತ 2020 ರ ರಾಬಿ ಹಂಗಾಮಿನಲ್ಲಿ 20 ರಾಜ್ಯಗಳಲ್ಲಿ ಪ್ರಗತಿಯಲ್ಲಿದೆ
1,67,570.95 ಮೆಟ್ರಿಕ್ ಟನ್ನಿನಷ್ಟು ಬೇಳೆ ಕಾಳುಗಳು ಮತ್ತು 1,11,638.52 ಎಂ.ಟಿ.ಯಷ್ಟು ತೈಲ ಬೀಜಗಳನ್ನು ನಫ಼್ಹೀಡ್ ಮತ್ತು ಎಫ್.ಸಿ.ಐ.ಗಳು ಖರೀದಿಸುತ್ತಿವೆ. ಒಟ್ಟು ಮೌಲ್ಯ 1313 ಕೋ.ರೂ.ಗಳಾಗಿದ್ದು, ಇದರಿಂದ 1,74,284 ರೈತರಿಗೆ ಪ್ರಯೋಜನವಾಗಿದೆ. ಅವಶ್ಯಕ ಸರಕುಗಳು, ಮತ್ತು ಹಣ್ಣುಗಳು ಹಾಗು ತರಕಾರಿಗಳ ದರ ಮತ್ತು ಪೂರೈಕೆ ಮೇಲೆ ನಿಗಾ ಇರಿಸಲು ಹಾಗು ಈಶಾನ್ಯ ವಲಯದಲ್ಲಿ ಅಂತಾರಾಜ್ಯ ಸಾಗಾಟದ ಮೇಲೆ ನಿಗಾ ಇಡಲು ಪ್ರತ್ಯೇಕ ಘಟಕವನ್ನು ತೆರೆಯಲಾಗಿದೆ.
ವಿವರಗಳಿಗೆ: https://pib.gov.in/PressReleseDetail.aspx?PRID=1617654
ಕೋವಿಡ್-19 ಮಾದರಿಗಳ ಪರೀಕ್ಷೆಗೆ ಡಿ.ಆರ್.ಡಿ.ಒ ಅಭಿವೃದ್ದಿಪಡಿಸಿದ ಸಂಚಾರಿ ಪ್ರಯೋಗಾಲಯಕ್ಕೆ ರಕ್ಷಣಾ ಸಚಿವರಿಂದ ಚಾಲನೆ
ಈ ಸಂಚಾರಿ ಪ್ರಯೋಗಾಲಯವು ಕೋವಿಡ್ -19 ಪತ್ತೆ ಮಾಡಲು ಮತ್ತು ಔಷದಿ ಸ್ಕ್ರೀನಿಂಗ್ ಗಾಗಿ ವೈರಸ್ ಕಲ್ಚರ್ ಮಾಡಲು, ಪ್ಲಾಸ್ಮಾ ಆಧಾರಿತ ಚಿಕಿತ್ಸೆಗೆ, ಕೋವಿಡ್ -19 ರ ರೋಗಿಗಳಿಗೆ ಭಾರತೀಯ ಜನಸಮುದಾಯಕ್ಕೆ ನಿರ್ದಿಷ್ಟವಾದ ಕ್ಲಿನಿಕಲ್ ಪರೀಕ್ಷೆಗಾಗಿ ಲಸಿಕೆ ಅಭಿವೃದ್ದಿಗೆ ಸಮಗ್ರ ರೋಗ ನಿರೋಧಕ ಶಕ್ತಿಯನ್ನು ರೂಪಿಸುವುದಕ್ಕೆ ಸಹಾಯವಾಗಬಲ್ಲದು. ಈ ಪ್ರಯೋಗಾಲಯವು ದಿನಕ್ಕೆ 1000-2000 ಮಾದರಿಗಳನ್ನು ಪರೀಕ್ಷಿಸಬಲ್ಲದು. ಈ ಪ್ರಯೋಗಾಲಯವನ್ನು ದೇಶದ ಎಲ್ಲಿ ಬೇಕಾದರೂ ಅವಶ್ಯಕತೆಗೆ ಅನುಗುಣವಾಗಿ ಸ್ಥಿರಗೊಳಿಸಬಹುದು.
ರಾಷ್ಟ್ರ ವ್ಯಾಪೀ ಲಾಕ್ ಡೌನ್ ನಲ್ಲಿ ಮುನ್ಸಿಪಲ್ ವ್ಯಾಪ್ತಿಯ ಹೊರಗೆ ವಿದ್ಯುತ್ ಯೋಜನೆಗಳ ನಿರ್ಮಾಣ ಚಟುವಟಿಕೆಗಳಿಗೆ ಅವಕಾಶ ನೀಡುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಇಂಧನ ಸಚಿವಾಲಯದ ಸಲಹೆ
ಕೋವಿಡ್ -19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ರಾಷ್ಟ್ರ ವ್ಯಾಪೀ ಜಾರಿಯಲ್ಲಿರುವ ಲಾಕ್ ಡೌನ್ ಅವಧಿಯಲ್ಲಿ ಮುನ್ಸಿಪಲ್ ವ್ಯಾಪ್ತಿಯ ಹೊರಗೆ ವಿದ್ಯುತ್ ಯೋಜನೆಗಳ ನಿರ್ಮಾಣ ಚಟುವಟಿಕೆಗಳಿಗೆ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯವು 15.04.2020. ರಂದು ಹೊರಡಿಸಿದ ಮಾರ್ಗದರ್ಶಿಗಳ ಅನ್ವಯ ಅವಕಾಶ ನೀಡುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಇಂಧನ ಸಚಿವಾಲಯದ ಸಲಹೆ ಮಾಡಿದೆ. ಕೋವಿಡ್ -19 ನಿಯಂತ್ರಣಕ್ಕೆ ರೂಪಿಸಲಾಗಿರುವ ಆರೋಗ್ಯ ಶಿಷ್ಟಾಚಾರಗಳನ್ನು ಅನುಸರಿಸಿ ಈ ಕಾರ್ಯಚಟುವಟಿಕೆಗಳಿಗೆ ಅನುಮತಿ ನೀಡಬಹುದಾಗಿದೆ.
ವಿವರಗಳಿಗೆ: https://pib.gov.in/PressReleseDetail.aspx?PRID=1617432
ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವರಿಂದ ಹಿರಿಯ ಪ್ರಾಥಮಿಕ ಹಂತದ ಪರ್ಯಾಯ ಶೈಕ್ಷಣಿಕ ಕ್ಯಾಲೆಂಡರ್ ಬಿಡುಗಡೆ
ಕೋವಿಡ್ -19 ರ ಕಾರಣಕ್ಕಾಗಿ ಮನೆಯಲ್ಲಿರುವ ವಿದ್ಯಾರ್ಥಿಗಳನ್ನು ಮನೆಯಲ್ಲಿ ಅವರ ಪೋಷಕರು ಮತ್ತು ಶಿಕ್ಷಕರ ಸಹಾಯದಿಂದ ಶೈಕ್ಷಣಿಕ ಚಟುವಟಿಕೆಗಳ ಮೂಲಕ ಅರ್ಥ ಪೂರ್ಣವಾಗಿ ತೊಡಗಿಸಿಕೊಳ್ಳುವಂತೆ ಮಾಡಲು ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಹಂತದ (6 ನೇ ತರಗತಿಯಿಂದ 8 ನೇ ತರಗತಿಯವರೆಗೆ) ಪರ್ಯಾಯ ಶೈಕ್ಷಣಿಕ ವೇಳಾಪಟ್ಟಿ (ಕ್ಯಾಲೆಂಡರ್ ) ಯನ್ನು ಎನ್.ಸಿ.ಇ.ಆರ್.ಟಿ. ಯು ಎಂ.ಎಚ್.ಆರ್.ಡಿಯ. ಮಾರ್ಗದರ್ಶಿಗಳ ಅನ್ವಯ ರೂಪಿಸಿದೆ.
ವಿವರಗಳಿಗಾಗಿ: https://pib.gov.in/PressReleseDetail.aspx?PRID=1617408
ದೇಶದಲ್ಲಿ ಔಷದಿ ಉತ್ಪಾದನೆಯನ್ನು ಒಗ್ಗೂಡಿಸಲು ಔಷಧಿ ತಯಾರಿಕಾ ಸಂಸ್ಥೆಗಳಿಗೆ ಸಹಾಯ ಮಾಡುವಂತೆ ರಾಜ್ಯ ಔಷಧಿ ನಿಯಂತ್ರಕರಿಗೆ ಫಾರ್ಮಾ ಕಾರ್ಯದರ್ಶಿ ಕೋರಿಕೆ
ಕೋವಿಡ್ -19 ಚಿಕಿತ್ಸೆ ನಿರ್ವಹಣೆಗೆ ಅಗತ್ಯ ಇರುವ ಅವಶ್ಯ ಔಷಧಿಗಳು ಮತ್ತು ವೈದ್ಯಕೀಯ ಸಲಕರಣೆಗಳ ಲಭ್ಯತೆಯನ್ನು ಖಾತ್ರಿಪಡಿಸುವಂತೆ ರಾಜ್ಯ ಔಷಧ ನಿಯಂತ್ರಕರನ್ನು ಕೋರಲಾಗಿದೆ. ಎಲ್ಲಾ ಮಟ್ಟದಲ್ಲಿಯೂ ಸಾಕಷ್ಟು ದಾಸ್ತಾನು ಯಾವುದೇ ಅಡೆ ತಡೆ ಇಲ್ಲದೆ ಲಭ್ಯವಾಗುವಂತೆ ಮಾಡಲು ಪೂರ್ಣ ಉತ್ಪಾದನಾ ಸಾಮರ್ಥ್ಯ ಬಳಕೆಯಾಗುವುದನ್ನು ಖಾತ್ರಿಪಡಿಸಬೇಕು ಎಂದೂ ಅವರನ್ನು ಕೋರಲಾಗಿದೆ.
2020 ರ ಏಪ್ರಿಲ್ 22ರಂದು 112 ರೇಕ್ ಗಳಿಗೆ 3.13 ಲಕ್ಷ ಟನ್ನುಗಳಷ್ಟು ಆಹಾರ ಧಾನ್ಯಗಳನ್ನು ತುಂಬುವ (ಲೋಡ್ ಮಾಡುವ ) ಮೂಲಕ ದಾಖಲೆ ಮಾಡಿದ ಭಾರತೀಯ ರೈಲ್ವೇ
ಭಾರತೀಯ ರೈಲ್ವೇಯು ಕೃಷಿ ಉತ್ಪನ್ನಗಳಾದ ಆಹಾರಧಾನ್ಯಗಳನ್ನು ಸಕಾಲದಲ್ಲಿ ತುಂಬಿಕೊಂಡು ರಾಷ್ಟ್ರವ್ಯಾಪೀ ಸಾಗಾಟ ಮಾಡುವ ತನ್ನ ಪ್ರಯತ್ನಗಳನ್ನು ಮುಂದುವರೆಸಿದೆ. ದಿನಾಂಕ 01.04.2020 ರಿಂದ 22.04.2020 ರ ವರೆಗೆ ಭಾರತೀಯ ರೈಲ್ವೇಯು ಒಟ್ಟು ತುಂಬಲಾದ ಮತ್ತು ಸಾಗಾಟ ಮಾಡಲಾದ ಒಟ್ಟು ಆಹಾರ ಧಾನ್ಯಗಳ ಪ್ರಮಾಣ 4.58 ಮಿಲಿಯನ್ ಟನ್. ಕಳೆದ ವರ್ಷದ ಇದೇ ಅವಧಿಗೆ ಈ ಪ್ರಮಾಣ 1.82 ಮಿಲಿಯನ್ ಟನ್ನುಗಳಷ್ಟಾಗಿತ್ತು.
ಭಾರತದ ಕೋವಿಡ್ -19 ವಿರುದ್ದ ಯುದ್ದವನ್ನು ಬೆಂಬಲಿಸಲು ಲೈಫ್ ಲೈನ್ ಉಡಾನಿನ ವಾರಿಯರ್ ಗಳು ಅಪರಿಮಿತ ಶಕ್ತಿಯೊಂದಿಗೆ ಕೆಲಸ ಮುಂದುವರೆಸಿದ್ದಾರೆ
ಏರಿಂಡಿಯಾ, ಅಲಯೆನ್ಸ್ ಏರ್, ಐ.ಎ.ಎಫ್. ಮತ್ತು ಖಾಸಗಿ ಕ್ಯಾರಿಯರ್ ಗಳ 330 ವಿಮಾನಗಳು ಲೈಫ್ ಲೈನ್ ಉಡಾನ್ ಅಡಿಯಲ್ಲಿ ಕಾರ್ಯಾಚರಿಸುತ್ತಿವೆ. ಇವುಗಳಲ್ಲಿ 200 ವಿಮಾನಗಳನ್ನು ಏರಿಂಡಿಯಾ ಮತ್ತು ಅಲಯೆನ್ಸ್ ಏರ್ ಗಳು ನಿರ್ವಹಿಸುತ್ತಿವೆ. ಇಂದಿನವರೆಗೆ 551.79 ಟನ್ನಿನಷ್ಟು ಸರಕನ್ನು ಸಾಗಾಟ ಮಾಡಲಾಗಿದೆ. ಇಂದಿನವರೆಗೆ ಲೈಫ್ ಲೈನ್ ಉಡಾನ್ ವಿಮಾನಗಳು ಕ್ರಮಿಸಿದ ವಾಯು ದೂರ 3,27,623 ಕಿಲೋ ಮೀಟರಿಗೂ ಅಧಿಕ.
ವಿವರಗಳಿಗೆ: https://pib.gov.in/PressReleseDetail.aspx?PRID=1617555
“ಭಾರತವನ್ನು ಎಲ್ಲರನ್ನೂ ಒಳಗೊಳ್ಳುವ ಪ್ರವಾಸೀ ತಾಣವನ್ನಾಗಿಸುವ “ ಕುರಿತಂತೆ ಪ್ರವಾಸೋದ್ಯಮ ಸಚಿವಾಲಯ ದೇಕೋ ಅಪ್ನಾ ದೇಶ್ ಸರಣಿಯಲ್ಲಿ 6 ನೇ ವೆಬಿನಾರ್ ಸಂಘಟಿಸಿತ್ತು
ಈ ವೆಬಿನಾರ್ ಗಳ ಉದ್ದೇಶ ಭಾರತದ ವಿವಿಧ ಅಷ್ಟೊಂದು ಪ್ರಖ್ಯಾತವಲ್ಲದ ತಾಣಗಳನ್ನು ಮತ್ತು ಪ್ರಖ್ಯಾತವಾದ ತಾಣಗಳ ಬಗೆಗೆ ಹೆಚ್ಚು ಗೊತ್ತಿಲ್ಲದ ಅಂಶಗಳನ್ನು ಪ್ರಚುರ ಪಡಿಸಿ ಜಾಗೃತಿ ಮೂಡಿಸುವುದು ಮತ್ತು ವಿವಿಧ ಪ್ರವಾಸೀ ತಾಣಗಳನ್ನು ಪ್ರಚುರಪಡಿಸುವುದಾಗಿದೆ. ಇದರ ಜೊತೆಗೆ ವಿಷಯವಾರು ವೆಬಿನಾರುಗಳನ್ನು ಎಲ್ಲರಿಗೂ ಲಭ್ಯವಾಗುವ ಪ್ರವಾಸೋದ್ಯಮ ಕುರಿತಂತೆಯೂ ಆಯೋಜಿಸಲಾಗುತ್ತಿದೆ. ಈ ಸರಣಿಯ ಆರನೇ ವೆಬಿನಾರ್ “ ಭಾರತವನ್ನು ಎಲ್ಲರನ್ನೂ ಒಳಗೊಳ್ಳುವ ಪ್ರವಾಸೀ ತಾಣವಾಗಿಸುವ “ ಕುರಿತಂತೆ 2020 ರ ಏಪ್ರಿಲ್ 22 ರಂದು ನಡೆಯಿತು.
ಪ್ರವಾಸೋದ್ಯಮ ಸಚಿವಾಲಯವು ದೇಖೋ ಅಪ್ನಾದೇಶ್ ವೆಬಿನಾರ್ ಸರಣಿಯಲ್ಲಿ ವಾರಾಣಸಿಯಲ್ಲಿ ಫೋಟೊವಾಕಿಂಗ್ (Photowalking®) ಕುರಿತಂತೆ 7 ನೇ ವೆಬಿನಾರ್ ಆಯೋಜಿಸಿತ್ತು
ಟೆಲಿಕಾಂ ಇಲಾಖೆಯಿಂದ ಉಚಿತ ಅಂತರ್ಜಾಲದ ವ್ಯವಸ್ಥೆ ಇಲ್ಲ
ಟೆಲಿಕಾಂ ಇಲಾಖೆಯು 2020 ರ ಮೇ 3 ರವರೆಗೆ ಎಲ್ಲಾ ಬಳಕೆದಾರರಿಗೆ ಉಚಿತ ಅಂತರ್ಜಾಲ ನೀಡುವ ಪ್ರಸ್ತಾಪ ಹೊಂದಿಲ್ಲ ಎಂದು ಪ್ರೆಸ್ ಇನ್ ಫಾರ್ಮೇಶನ್ ಬ್ಯೂರೋ ದ ವಸ್ತು ಸ್ಥಿತಿ ತಪಾಸಣಾ ಘಟಕವು ತನ್ನ ಟ್ವೀಟ್ ನಲ್ಲಿ ಸ್ಪಷ್ಟಪಡಿಸಿದೆ. ಪ್ರಸಾರದಲ್ಲಿರುವ ಈ ಸುಳ್ಳು ಸುದ್ದಿಯಲ್ಲಿ ಇಲಾಖೆಯು ಎಲ್ಲರಿಗೂ ಮನೆಯಿಂದಲೇ ಕಾರ್ಯ ನಿರ್ವಹಿಸಲು ಅನುಕೂಲವಾಗುವಂತೆ ಉಚಿತ ಅಂತರ್ಜಾಲವನ್ನು ನೀಡುತ್ತದೆ ಮತ್ತು ಕೊಟ್ಟಿರುವ ಕೊಂಡಿಯನ್ನು ಕ್ಲಿಕ್ ಮಾಡಿದರೆ ಅದನ್ನು ಪಡೆಯಬಹುದು ಎಂದು ಹೇಳಲಾಗಿತ್ತು.
ವಿವರಗಳಿಗೆ: https://pib.gov.in/PressReleseDetail.aspx?PRID=1617632
ಕೋವಿಡ್ -19 ರೋಗಿಗಳಿಗೆ ಪೋಷಕಾಂಶ ಸಮೃದ್ದ ಆಹಾರ ತಯಾರಿಸುವ ಮತ್ತು ಪೂರೈಸುವ ಮೂಲಕ ಕೋವಿಡ್ -19 ರ ವಿರುದ್ದದ ಹೋರಾಟಕ್ಕೆ ಐ.ಐ.ಎಫ್.ಪಿ.ಟಿ .ಬೆಂಬಲ
ತಮಿಳು ನಾಡಿನ ತಂಜಾವೂರು ವೈದ್ಯಕೀಯ ಕಾಲೇಜಿನಲ್ಲಿ ಕೋವಿಡ್ ಜಾಗತಿಕ ಸಾಂಕ್ರಾಮಿಕಕ್ಕೆ ಚಿಕಿತ್ಸೆ ಪಡೆದು ಗುಣಮುಖರಾಗಿರುವ ಮತ್ತು ವೈದ್ಯಕೀಯ ನಿಗಾದಲ್ಲಿರುವ ಕೋವಿಡ್ -19 ರೋಗಿಗಳಿಗೆ ಪೋಷಕಾಂಶಯುಕ್ತ ಆಹಾರಗಳನ್ನು ಭಾರತೀಯ ಆಹಾರ ಸಂಸ್ಕರಣಾ ತಂತ್ರಜ್ಞಾನ ಸಂಸ್ಥೆಯು ತಯಾರಿಸುತ್ತಿದೆ.
ವಿವರಗಳಿಗೆ: https://pib.gov.in/PressReleseDetail.aspx?PRID=1617474
ತಮಿಳುನಾಡಿನ ರೇಷ್ಮೆ ಕೃಷಿಕರ ರಕ್ಷಣೆಗೆ ಬಂದ ಕೆ.ವಿ.ಐ.ಸಿ.
ಮಾರಕ ಕೊರೊನಾವೈರಸ್ ವಿರುದ್ದ ದೇಶವೇ ಹೋರಾಟ ನಿರತವಾಗಿರುವಾಗ ,ಎಂ.ಎಸ್.ಎಂ.ಇ. ಸಚಿವಾಲಯದಡಿಯಲ್ಲಿ ಕಾರ್ಯನಿರ್ವಹಿಸುವ ಸ್ವಾಯತ್ತ ಮಂಡಳಿಯಾದ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗವು (ಕೆ.ವಿ.ಐ.ಸಿ.) ತಮಿಳುನಾಡಿನ ಖಾದಿ ಸಂಸ್ಥೆಗಳ (ಕೆ.ಐ.ಎಸ್.) ಜೊತೆಗೂಡಿ ರೇಷ್ಮೆ ಕೃಷಿಕರಿಂದ ರೇಷ್ಮೆ ಗೂಡು ಖರೀದಿ ಮಾಡುವ ಮೂಲಕ ಮತ್ತೊಮ್ಮೆ ತನ್ನ ಜವಾಬ್ದಾರಿಯನ್ನು ಮೆರೆದಿದೆ.
ಕೋವಿಡ್ -19 ವಿರುದ್ದ ಹೋರಾಡಲು ಫರಿದಾಬಾದ್ ಜಿಲ್ಲಾ ಆಡಳಿತದಿಂದ ವಿವಿಧ ಉಪಕ್ರಮಗಳು; ನಿಗಾವಹಿಸಲು ಮತ್ತು ಹರಡುವಿಕೆ ನಿಯಂತ್ರಿಸಲು ತಂತ್ರಜ್ಞಾನ ಬಳಕೆ
ವಿವರಗಳಿಗೆ: https://pib.gov.in/PressReleseDetail.aspx?PRID=1617197
ಬೆಳ್ಳುಳ್ಳಿ ತೈಲ ಬಳಸಿ ಕೋವಿಡ್ -19 ವಿರೋಧಿ ಔಷಧಿ ತಯಾರಿಸಲು ವಿಜ್ಞಾನಿಗಳು ಕಾರ್ಯನಿರತ
ಮೊಹಾಲಿಯಲ್ಲಿರುವ ಜೈವಿಕ ತಂತ್ರಜ್ಞಾನದ ನವೀನ ಮತ್ತು ಆನ್ವಯಿಕ ಜೈವಿಕಸಂಸ್ಕರಣಾ ಕೇಂದ್ರ (ಡಿ.ಬಿ.ಟಿ-ಸಿ.ಐ.ಎ.ಬಿ.) ಯು ಈಗ ಇಡೀಯ ಜಗತ್ತನ್ನೇ ಬಾಧಿಸುತ್ತಿರುವ ಮಾರಕ ಕೋವಿಡ್ -19 ಸೋಂಕನ್ನು ತಡೆಯಲು, ಪತ್ತೆ ಹಚ್ಚಲು ಮತ್ತು ಗುಣಪಡಿಸುವ ಉತ್ಪಾದನೆಗಳನ್ನು ತಯಾರಿಸುವ ಉದ್ದೇಶದ ಸಂಶೋಧನಾ ಗುಚ್ಚಗಳನ್ನು ಯೋಜಿಸಿದೆ.
ವಿವರಗಳಿಗೆ: https://pib.gov.in/PressReleseDetail.aspx?PRID=1617606
ಕೋವಿಡ್-19 ಹರಡುವಿಕೆಯನ್ನು ನಿಯಂತ್ರಿಸುವುದಕ್ಕಾಗಿ ದೇಹದೊಳಗಿನ ರೋಗ ನಿರೋಧಕ ಶಕ್ತಿಯನ್ನು ವೃದ್ದಿಸುವ ಅನುಮೋದಿಸಲ್ಪಟ್ಟ ರೋಗ ನಿಧಾನ ಮಾದರಿ Sepsivac®, ಯನ್ನು ಅಭಿವೃದ್ದಿಪಡಿಸಲು ಮತ್ತು ಕೋವಿಡ್ -19 ರೋಗಿಗಳನ್ನು ತ್ವರಿತವಾಗಿ ಗುಣಮುಖರನ್ನಾಗಿ ಮಾಡಲು ಸಿ.ಎಸ್.ಐ.ಆರ್. ನಿರ್ಧಾರ
ವಿವರಗಳಿಗೆ: https://pib.gov.in/PressReleseDetail.aspx?PRID=1617623
ಪಿಐಬಿ ಕ್ಷೇತ್ರ ಕಚೇರಿಗಳ ವರದಿಗಳು
- ಕೇರಳ: ಅಮೆರಿಕ, ಯು.ಕೆ. ಮತ್ತು ಕೊಲ್ಲಿ ರಾಷ್ಟ್ರಗಳಲ್ಲಿ ಮತ್ತೆ ಮೂರು ಮಂದಿ ಕೇರಳದವರು ಮೃತಪಟ್ಟಿದ್ದಾರೆ. ಒಟ್ಟು 40 ಮಂದಿ ಕೇರಳೀಯರು ವಿದೇಶಗಳಲ್ಲಿ ಈ ಜಾಗತಿಕ ಸಾಂಕ್ರಾಮಿಕಕ್ಕೆ ಬಲಿಯಾಗಿದ್ದಾರೆ. ಕೊಲ್ಲಂನ ಕುಲತ್ತಪುಜಾ ಗ್ರಾಮದ ಎಲ್ಲಾ 36 ಸಂಪರ್ಕಗಳನ್ನು ಕ್ವಾರಂಟೈನ್ ಮಾಡಲಾಗಿರುವುದರಿಂದ ಸಮುದಾಯ ಹರಡುವಿಕೆಯ ಸಾಧ್ಯತೆ ಇಲ್ಲ. 11 ಹೊಸ ಪ್ರಕರಣಗಳು ನಿನ್ನೆ ವರದಿಯಾಗಿವೆ. ಒಟ್ಟು ಪ್ರಕರಣಗಳು 437. ಆಕ್ಟಿವ್ ಪ್ರಕರಣಗಳು-127
- ತಮಿಳುನಾಡು: ಕಳೆದ 10 ದಿನಗಳಲ್ಲಿ ಪುದುಚೇರಿಯಲ್ಲಿ ಯಾವುದೇ ಹೊಸ ಕೋವಿಡ್ -19 ಪ್ರಕರಣ ವರದಿಯಾಗಿಲ್ಲ. ಧರ್ಮಪುರಿಯಲ್ಲಿ ಮೊದಲ ಪಾಸಿಟಿವ್ ಪ್ರಕರಣ ವರದಿಯಾಗಿದೆ. ಚೆನ್ನೈಯಿಂದ 30 ರಕ್ಷಣಾ ವಿಮಾನಗಳಲ್ಲಿ ನೂರಾರು ವಿದೇಶೀಯರು ಮನೆಗಳಿಗೆ ಮರಳಿದ್ದಾರೆ. ಚೆನ್ನೈ ಮಹಾನಗರ ಪಾಲಿಕೆಯ ಟೆಲಿ ಸಮಾಲೋಚನಾ ಸೇವೆ ದಿನನಿತ್ಯ 300 ಕರೆಗಳನ್ನು ಸ್ವೀಕರಿಸುತ್ತಿದೆ. ನಿನ್ನೆ 33 ಹೊಸ ಪ್ರಕರಣಗಳು.ಒಟ್ಟು ಪ್ರಕರಣಗಳು: 1629. ಸಾವಿನ ಸಂಖ್ಯೆ: 18, ಗುಣಮುಖರಾಗಿ ಬಿಡುಗಡೆಗೊಂಡವರು 662.
- ಕರ್ನಾಟಕ: ಕೋವಿಡ್ -19 ರ ಹಿನ್ನೆಲೆಯಲ್ಲಿ ವೈದ್ಯರ ವೇತನ ಏರಿಸಲು ರಾಜ್ಯದ ನಿರ್ಧಾರ. ಆರೋಗ್ಯ ಕಾರ್ಯಕರ್ತರನ್ನು ರಕ್ಷಿಸಲು ರಾಜ್ಯದಿಂದ ಸುಗ್ರೀವಾಜ್ಞೆ . ಲಾಕ್ ಡೌನ್ ನಿರ್ಬಂಧಗಳಲ್ಲಿ ಸಡಿಲಿಕೆ. ಕ್ಲಿನಿಕ್ ಗಳು, ಐ.ಟಿ. ಕಂಪೆನಿಗಳು ಅವಶ್ಯಕ ಸಿಬ್ಬಂದಿಗಳೊಂದಿಗೆ ಕಾರ್ಯಾರಂಭ. ಇಂದು 16 ಹೊಸ ಪ್ರಕರಣಗಳು ದೃಢಪಟ್ಟಿವೆ. ಬೆಂಗಳೂರು 9, ಮಂಡ್ಯ 2, ವಿಜಯಪುರ 2, ಒಟ್ಟು ಪ್ರಕರಣಗಳು -443. ಗುಣಮುಖರಾದವರು 141, ಸಾವುಗಳು-17.
- ಆಂಧ್ರ ಪ್ರದೇಶ: ಪವಿತ್ರ ತಿಂಗಳು ರಮ್ಜಾನ್ ನಲ್ಲಿ ಮನೆಯಲ್ಲೇ ಉಳಿದು ಪ್ರಾರ್ಥನೆಗಳನ್ನು ಸಲ್ಲಿಸಲು ಮುಸಲ್ಮಾನರಿಗೆ ರಾಜ್ಯಪಾಲರ ಮನವಿ. ಪರೀಕ್ಷೆಗಳನ್ನು ಹೆಚ್ಚಿಸಲಾಗಿದ್ದು, ಕಳೆದ 24 ಗಂಟೆಗಳಲ್ಲಿ 80 ಹೊಸ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆ 893. ಆಕ್ಟಿವ್ ಪ್ರಕರಣಗಳು-725. ಗುಣಮುಖರಾದವರು 141, ಸಾವಿನ ಸಂಖ್ಯೆ 27. ಪಾಸಿಟಿವ್ ಪ್ರಕರಣಗಳಲ್ಲಿ ಮುಂಚೂಣಿಯಲ್ಲಿರುವ ಜಿಲ್ಲೆಗಳು : ಕರ್ನೂಲು (234 ) . ಗುಂಟೂರು (195 ) , ಕೃಷ್ಣಾ (88 ), ಚಿತ್ತೂರು (73 ) ನೆಲ್ಲೂರು (67 ),ಕಡಪ (51 ), ಪ್ರಕಾಸಂ ( 50)
- ತೆಲಂಗಾಣ: ಎಲ್ಲಾ ಜಿಲ್ಲೆಗಳಲ್ಲಿ ಒಟ್ಟು ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಗಮನಾರ್ಹ ಇಳಿಕೆಯಾಗಿದೆ. ಹೈದರಾಬಾದಿನ ಹಳೆಯ ನಗರದಲ್ಲಿ ಮಾತ್ರ ಏರಿಕೆ ಕಾಣುತ್ತಿದೆ. ಸುಮಾರು 5 ಲಕ್ಷಕ್ಕೂ ಅಧಿಕ ಬಿಳಿ ಪಡಿತರ ಕಾರ್ಡುದಾರರಿಗೆ 1,500 ರೂ. ಹಣಕಾಸು ನೆರವು ಇನ್ನಷ್ಟೇ ಬರಬೇಕಾಗಿದೆ. ; 5.26 ಲಕ್ಷ ಕಾರ್ಡ್ ದಾರರಿಗೆ ಬ್ಯಾಂಕ್ ಖಾತೆ ಸಂಖ್ಯೆಗಳ ಸಮಸ್ಯೆ ಇದ್ದು, ರಾಜ್ಯವು ಅಂಚೆ ಇಲಾಖೆಯ ಮೂಲಕ ಅವರನ್ನು ತಲುಪಲು ಪ್ರಯತ್ನಿಸುತ್ತಿದೆ. ಒಟ್ಟು ಪ್ರಕರಣಗಳ ಸಂಖ್ಯೆ 943 ತಲುಪಿದೆ, ಆಕ್ಟಿವ್ ಪ್ರಕರಣಗಳು 725
- ಅರುಣಾಚಲ ಪ್ರದೇಶ: ರಾಜ್ಯಕ್ಕೆ ಮರಳುವವರಿಗಾಗಿ ಕ್ವಾರಂಟೈನ್ ಸೌಲಭ್ಯಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ರಾಜ್ಯ ಸರಕಾರ ಘೋಷಿಸಿದೆ.
- ಅಸ್ಸಾಂ: 2019-2020 ರ ಶೈಕ್ಷಣಿಕ ವರ್ಷದಲ್ಲಿ ಎಚ್.ಎಸ್. ಮೊದಲ ವರ್ಷದ ವಿದ್ಯಾರ್ಥಿಗಳನ್ನು 2020-2021 ರ ಶೈಕ್ಷಣಿಕ ವರ್ಷದಲ್ಲಿ ಎಚ್.ಎಸ್. ಎರಡನೆ ವರ್ಷಕ್ಕೆ ತೇರ್ಗಡೆ ಮಾಡಲಾಗುವುದು ಎಂದು ಹೈಯರ್ ಸೆಕೆಂಡರಿ ಶಿಕ್ಷಣ ಮಂಡಳಿಯು ಘೋಷಿಸಿದೆ.
- ಮಣಿಪುರ: ಮಣಿಪುರದಲ್ಲಿ , ಭಾರತ- ಮ್ಯಾನ್ಮಾರ್ ಗಡಿಯಲ್ಲಿ ಬೇಲಿ ಹಾಕುವ ಕಾರ್ಯ ತ್ವರಿತಗೊಳಿಸಲಾಗಿದೆ ಮತ್ತು ಕೋವಿಡ್ -19 ಹಿನ್ನೆಲೆಯಲ್ಲಿ ನಿಗಾವನ್ನು ತೀವ್ರಗೊಳಿಸಲಾಗಿದೆ.
- ಮಿಜೋರಾಂ: ಪೋಲಿಸ್ ಪತ್ನಿಯರ ಸಂಘಟನೆಯು ಕೋವಿಡ್ -19 ಕ್ಕಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ರೂಪಾಯಿ 5 ಕೋಟಿ ಗಳನ್ನು ದೇಣಿಗೆ ನೀಡಿದೆ. ಮತ್ತು ಐಜವಾಲಾದಲ್ಲಿಯ ಕರ್ತವ್ಯ ನಿರತ ಸಿಬ್ಬಂದಿಗಾಗಿ 600 ಮುಖಗವಸುಗಳನ್ನು ಒದಗಿಸಿದೆ.
- ನಾಗಾಲ್ಯಾಂಡ್: ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಆಹಾರ ದಾಸ್ತಾನು, ಇಂಧನ ಮತ್ತು ಔಷಧಿಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯ ಇದೆ ಎಂದು ರಾಜ್ಯ ಗೃಹ ಆಯುಕ್ತರು ಹೇಳಿದ್ದಾರೆ.
- ನಾಗಾಲ್ಯಾಂಡ್: ಕೊಹಿಮಾದಲ್ಲಿ ಜೈವಿಕ ಸುರಕ್ಷಾ ಪ್ರಯೋಗಾಲಯ-3 (ಬಿ.ಎಸ್.ಎಲ್.-೩) ವನ್ನು ಸ್ಥಾಪಿಸಲಾಗುತ್ತಿದೆ.
- ಸಿಕ್ಕಿಂ: ರಾಜ್ಯದಲ್ಲಿಯ ಪ್ರತಿಯೊಬ್ಬ ನಾಗರಿಕರೂ ಮತ್ತು ರಾಜ್ಯದಲ್ಲಿ ಪ್ರವಾಸ ಮಾಡುವ ಪ್ರತಿಯೊಬ್ಬ ನಾಗರಿಕರೂ ಆರೋಗ್ಯಸೇತು ಮೊಬೈಲ್ ಆಪ್ ಡೌನ್ ಲೋಡ್ ಮಾಡುವುದನ್ನು ಅಗತ್ಯ ಮಾಡುವ ಕ್ರಮಕ್ಕೆ ರಾಜ್ಯ ಸರಕಾರ ಮುಂದಾಗಲಿದೆ
- ತ್ರಿಪುರಾ: ಮುಖ್ಯ ಮಂತ್ರಿ ಬಿಪ್ಲಾಬ್ ಕುಮಾರ್ ದೇಬ್ ಅವರು ಆಲಿಕಲ್ಲು ಮಳೆಯಿಂದ ಸಂತ್ರಸ್ತರಾಗಿರುವ ಜನರ ಪರಿಹಾರ ಶಿಬಿರಗಳಿಗೆ ಭೇಟಿ ನೀಡಿದರು ಮತ್ತು ಅವರಿಗೆ ಸಾಧ್ಯ ಇರುವ ಎಲ್ಲಾ ನೆರವನ್ನೂ ಸಾಧ್ಯವಾದಷ್ಟು ತ್ವರಿತವಾಗಿ ಒದಗಿಸುವ ಭರವಸೆ ನೀಡಿದರು.
- ಚಂಡೀಗಢ: ವೈದ್ಯಕೀಯ ಕಾಲೇಜುಗಳ ಇಂಟರ್ನಿಗಳಿಗೆ ಕೊಡ ಮಾಡಲಾಗುತ್ತಿದ್ದ ದೈನಿಕ 300 ರೂ. ಗಳ ಶಿಷ್ಯ ವೇತನವನ್ನು ರೂಪಾಯಿ 600 ಕ್ಕೆ ಏರಿಸಲು ನಿರ್ಧರಿಸಲಾಗಿದೆ. ಇದರಿಂದ ಕೋವಿಡ್ -19 ವಿರುದ್ದ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ವಿದ್ಯಾರ್ಥಿಗಳು 2020 ರ ಏಪ್ರಿಲ್ 1 ರಿಂದ ಜಾರಿಗೆ ಬರುವಂತೆ ತಿಂಗಳಿಗೆ 18 ಸಾವಿರ ರೂಪಾಯಿ ಪಡೆಯಲಿದ್ದಾರೆ. 24,000 ಕುಟುಂಬಗಳಿಗೆ ಪಿ.ಎಂ.ಜಿ.ಕೆ.ಎ.ವೈ. ಅಡಿಯಲ್ಲಿ ಗೋಧಿ ಮತ್ತು ಬೇಳೆ ಕಾಳುಗಳನ್ನು ವಿತರಿಸಲಾಗಿದೆ. ನಗರದ ವಿವಿಧ ಕಡೆಗಳಲ್ಲಿ 1,43,694 ಬೇಯಿಸಿದ ಆಹಾರ ಪ್ಯಾಕೆಟುಗಳನ್ನು ಅವಶ್ಯಕತೆ ಇದ್ದವರಿಗೆ ವಿತರಿಸಲಾಗಿದೆ. 1.77 ಲಕ್ಷ ಆರೋಗ್ಯ ಸೇತು ಅಪ್ಲಿಕೇಶನುಗಳನ್ನು ಈ ಕೇಂದ್ರಾಡಳಿತ ಪ್ರದೇಶದಲ್ಲಿ ಡೌನ್ ಲೋಡ್ ಮಾಡಿಕೊಳ್ಳಲಾಗಿದೆ.
- ಪಂಜಾಬ್: ಪಂಜಾಬ್ 50 ವಿಶೇಷ ರೈಲುಗಳ ಮೂಲಕ ಇತರ ರಾಜ್ಯಗಳಿಗೆ 1.25 ಲಕ್ಷ ಮೆಟ್ರಿಕ್ ಟನ್ನಿನಷ್ಟು ಅಕ್ಕಿ ಮತ್ತು ಗೋಧಿಯನ್ನು ಕಳುಹಿಸಿಕೊಟ್ಟಿದೆ. ಸರಕಾರಿ ಏಜೆನ್ಸಿಗಳು ಮತ್ತು ಖಾಸಗಿ ವ್ಯಾಪಾರಿಗಳು ಪಂಜಾಬಿನಲ್ಲಿ 4,36,406 ಮೆಟ್ರಿಕ್ ಟನ್ನಿನಷ್ಟು ಗೋಧಿಯನ್ನು ಖರೀದಿಯ 7 ದಿನ ಖರೀದಿ ಮಾಡಿದ್ದಾರೆ. 1,797ಎಂ.ಟಿ.ಯಷ್ಟನ್ನು ಖಾಸಗಿ ವ್ಯಾಪಾರಿಗಳು ಖರೀದಿಸಿದ್ದಾರೆ. ಪಂಜಾಬ್ ಜಾರಿಗೆ ತಂದಿರುವ ಕಠಿಣ ಲಾಕ್ ಡೌನ್ ಕ್ರಮಗಳಿಗಾಗಿ ಭಾರತೀಯ ವೈದ್ಯಕೀಯ ಅಸೋಸಿಯೇಶನ್ (ಐ.ಎಂ.ಎ.) ರಾಜ್ಯ ಆರೋಗ್ಯ ಇಲಾಖೆಯನ್ನು ಶ್ಲಾಘಿಸಿದೆ. ಕಂಟೈನ್ ಮೆಂಟ್ ವ್ಯೂಹ, ಪರೀಕ್ಷೆ ಮತ್ತು ಸೂಕ್ತ ಗುರುತಿಸುವಿಕೆ ಮೂಲಕ ಕೋವಿಡ್ -19 ಬೆದರಿಕೆಯನ್ನು ಆರೋಗ್ಯ ಇಲಾಖೆಯು ಮುನ್ನುಗ್ಗಿ ಎದುರಿಸುತ್ತಿರುವುದಕ್ಕಾಗಿ ಈ ಮೆಚ್ಚುಗೆ ಸಂದಿದೆ.
- ಹರ್ಯಾಣ: ಕೊಯಿಲು ಸುಸೂತ್ರವಾಗಿ ನಡೆಯಲು ಸರಕಾರವು ಲಾಕ್ ಡೌನ್ ನಿರ್ಬಂಧಗಳನ್ನು ಇನ್ನಷ್ಟು ಸಡಿಲಿಕೆ ಮಾಡಿರುವುದರಿಂದ ಹರ್ಯಾಣಾದಲ್ಲಿ ಕೃಷಿ ಉಪಕರಣಗಳಿಗೆ ಸಂಬಂಧಿಸಿದ ಕಾರ್ಯಾಗಾರಗಳು (ವರ್ಕ್ ಶಾಪ್ ) ತೆರೆದಿವೆ. ಮುಖ್ಯಮಂತ್ರಿ ಶ್ರೀ ಮನೋಹರ ಲಾಲ್ ಖಟ್ಟರ್ ಅವರು ಬ್ಯಾಂಕ್ ಗ್ರಾಹಕರು ಸೇವೆಗಳನ್ನು ಪಡೆಯಲು ಅನುಕೂಲ ಮಾಡಿಕೊಡುವ ಜಾಲತಾಣವನ್ನು ಕಾರ್ಯಾರಂಭಗೊಳಿಸಿದರು
- ಹಿಮಾಚಲ ಪ್ರದೇಶ: ಕೃಷಿ ಉತ್ಪನ್ನಗಳನ್ನು ಕೊಯಿಲು ಮಾಡುವಾಗ ರೈತರಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಅವರಲ್ಲಿ ಅರಿವು ಮೂಡಿಸಬೇಕು ಎಂದು ಮುಖ್ಯಮಂತ್ರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಕೊರೊನಾ ಸಾಂಕ್ರಾಮಿಕ ನಿಭಾಯಿಸಲು ಆದ್ಯತೆ ನೀಡುವಂತೆ ಜೊತೆಗೆ ಸಾರ್ವಜನಿಕರ ಅನುಕೂಲತೆಗಳನ್ನೂ ಖಾತ್ರಿಪಡಿಸುವಂತೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
- ಮಹಾರಾಷ್ಟ್ರ: ಮಹಾರಾಷ್ಟ್ರದಲ್ಲಿ ಹೊಸದಾಗಿ 431 ಕೊರೊನಾವೈರಸ್ ಪಾಸಿಟಿವ್ ಪ್ರಕರಣಗಳು ವರದಿಯಾಗುವುದರೊಂದಿಗೆ ರಾಜ್ಯದಲ್ಲಿ ಇಂದು ಕೋವಿಡ್ -19 ದೃಢೀಕೃತ ಪ್ರಕರಣಗಳ ಒಟ್ಟು ಸಂಖ್ಯೆ 5,652 ಕ್ಕೇರಿತು. ಇಂದಿನವರೆಗೆ ಒಟ್ಟು ಸೋಂಕಿತರಲ್ಲಿ 789 ಮಂದಿ ಗುಣಮುಖರಾಗಿದ್ದಾರೆ ಮತ್ತು 269 ಮಂದಿ ಮೃತಪಟ್ಟಿದ್ದಾರೆ. ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೋಪೆ ಮಹಾರಾಷ್ಟ್ರದಲ್ಲಿ ಕೊರೊನಾ ಹಾಟ್ ಸ್ಪಾಟ್ ಗಳ ಸಂಖ್ಯೆ 14 ರಿಂದ 5 ಕ್ಕೆ ಇಳಿಕೆಯಾಗಿದೆ ಮತ್ತು ರಾಜ್ಯದಲ್ಲಿ ಪ್ರಕರಣಗಳ ದುಪ್ಪಟ್ಟಾಗುವಿಕೆ ಈ ತಿಂಗಳ ಮೊದಲಿಗೆ ಇದ್ದ 3.1 ದಿನಗಳಿಂದ 7.01 ದಿನಗಳಿಗೆ ಸುಧಾರಿಸಿದೆ ಎಂದಿದ್ದಾರೆ.
- ಗುಜರಾತ್: ಗುಜರಾತಿನಲ್ಲಿ 135 ಹೊಸ ಕೊರೊನಾವೈರಸ್ ಪ್ರಕರಣಗಳು ವರದಿಯಾಗಿವೆ. ಇದರಿಂದ ಒಟ್ಟು ಪ್ರಕರಣಗಳ ಸಂಖ್ಯೆ 2,407 ಕ್ಕೆ ತಲುಪಿದೆ. ದೇಶದಲ್ಲಿ ಕೋವಿಡ್ -19 ರೋಗಿಗಳು ಗುಣಮುಖರಾಗುವ ದರ 19 ಶೇಕಡಾ ಇದ್ದರೆ ಗುಜರಾತಿನಲ್ಲಿ ಕನಿಷ್ಟ ಗುಣಮುಖ ದರ 6.3 ಶೇಕಡಾದಷ್ಟಿದೆ. ಮಹಾರಾಷ್ಟ್ರದಲ್ಲಿರುವಂತೆ ಗುಜಾರಾತಿನಲ್ಲಿ ಕೂಡಾ ಸಾವಿನ ದರ ಗರಿಷ್ಟ.
- ರಾಜಸ್ಥಾನ: ರಾಜಸ್ಥಾನದಲ್ಲಿ ಒಟ್ಟು ಕೋವಿಡ್ -19 ಪ್ರಕರಣಗಳ ಸಂಖ್ಯೆ 1,935 ಕ್ಕೆ ಜಿಗಿದಿದೆ. ಇಂದು 47 ಹೊಸ ಪ್ರಕರಣಗಳು ವರದಿಯಾಗಿವೆ. ಹೊಸ ಪ್ರಕರಣಗಳಲ್ಲಿ 20 ಪ್ರಕರಣಗಳು ಜೋಧಪುರದವು, 12 ಜೈಪುರದವು ಮತ್ತು 10 ನಾಗೌರ್ ನವು.
***
(Release ID: 1617731)
Visitor Counter : 354
Read this release in:
English
,
Urdu
,
Hindi
,
Marathi
,
Assamese
,
Bengali
,
Manipuri
,
Punjabi
,
Gujarati
,
Tamil
,
Telugu
,
Malayalam