ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್ -19 ಹೊಸ ಮಾಹಿತಿ

Posted On: 23 APR 2020 5:46PM by PIB Bengaluru

ಕೋವಿಡ್ -19 ಹೊಸ ಮಾಹಿತಿ

 

ಕೋವಿಡ್-19 ತಡೆಗಟ್ಟುವಿಕೆ, ನಿಯಂತ್ರಣ ಮತ್ತು ನಿರ್ವಹಣೆಗೆ ಹಲವಾರು ಕ್ರಮಗಳನ್ನು ಭಾರತ ಸರ್ಕಾರ ಮತ್ತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಕೈಗೊಳ್ಳುತ್ತಿವೆ. ಇವುಗಳನ್ನು ನಿಯಮಿತವಾಗಿ ಉನ್ನತ ಮಟ್ಟದಲ್ಲಿ ಪರಿಶೀಲಿಸಲಾಗುತ್ತಿದೆ ಮತ್ತು ಮೇಲ್ವಿಚಾರಣೆ ಮಾಡಲಾಗುತ್ತಿದೆ.

ಕೋವಿಡ್-19 ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ಸಾಂಕ್ರಾಮಿಕ ರೋಗಗಳ ಕಾಯ್ದೆ 1897 ಅನ್ನು ತಿದ್ದುಪಡಿ ಮಾಡುವ ಸುಗ್ರೀವಾಜ್ಞೆಯನ್ನು ಪ್ರಕಟಿಸಲಾಗಿದೆ. ಸುಗ್ರೀವಾಜ್ಞೆಯನ್ನು ಸಾಂಕ್ರಾಮಿಕ ರೋಗ (ಕಾಯಿದೆ) ಆರ್ಡಿನೆನ್ಸ್ 2020 ಎಂದು ಕರೆಯಲಾಗುತ್ತದೆ, ಇದು "ಆರೋಗ್ಯ ಸೇವಾ ಸಿಬ್ಬಂದಿಗಳ ವಿರುದ್ಧ ಯಾವುದೇ ವ್ಯಕ್ತಿಯು ಯಾವುದೇ ಹಿಂಸಾಚಾರದಲ್ಲಿ ತೊಡಗಬಾರದು ಅಥವಾ ಸಾಂಕ್ರಾಮಿಕ ಸಮಯದಲ್ಲಿ ಯಾವುದೇ ಆಸ್ತಿಗೆ ಯಾವುದೇ ನಷ್ಟ ಅಥವಾ ಹಾನಿಯನ್ನುಂಟುಮಾಡಬಾರದು" ಎಂದು ಹೇಳುತ್ತದೆ. ತಿದ್ದುಪಡಿಯು ಹಿಂಸಾಚಾರವನ್ನು ಶಿಕ್ಷೆಗೆ ಪರಿಗಣಿಸಬಹುದಾದ ಮತ್ತು ಜಾಮೀನು ರಹಿತ ಅಪರಾಧಗಳನ್ನಾಗಿ ಮಾಡುತ್ತದೆ. ಅಂತಹ ಹಿಂಸಾಚಾರದ ಆಯೋಜನೆ ಅಥವಾ ಪ್ರಚೋದನೆಗೆ ಮೂರು ತಿಂಗಳಿಂದ ಐದು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ರೂ. 50,000 / - ರಿಂದ ರೂ. 2,00,000 / - ದಂಡ. ತೀವ್ರವಾದ ನೋವನ್ನುಂಟುಮಾಡಿದಲ್ಲಿ, ಆರು ತಿಂಗಳಿನಿಂದ ಏಳು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ರೂ. 1,00,000 / - ರಿಂದ ರೂ. 5,00,000/- ರವರೆಗೆ ದಂಡ. ಹೆಚ್ಚುವರಿಯಾಗಿ, ನೊಂದವರಿಗೆ ಮತ್ತು ಆಸ್ತಿಯ ಹಾನಿ ಅಥವಾ ಉಂಟಾದ ನಷ್ಟಕ್ಕೆ ನ್ಯಾಯಯುತ ಮಾರುಕಟ್ಟೆ ಮೌಲ್ಯಕ್ಕಿಂತ ಎರಡು ಪಟ್ಟು (ನ್ಯಾಯಾಲಯವು ನಿರ್ಧರಿಸಿದಂತೆ).ಪರಿಹಾರವನ್ನು ಕೊಡುವುದೂ ಸಹ ಅಪರಾಧಿಯ ಜವಾಬ್ದಾರಿಯಾಗಿರುತ್ತದೆ

ಪ್ರಸ್ತುತ, ಕಳೆದ 28 ದಿನಗಳಲ್ಲಿ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯಲ್ಲಿ ಹೊಸ ಪ್ರಕರಣಗಳಿಲ್ಲದ 12 ಜಿಲ್ಲೆಗಳಿವೆ. ಏಪ್ರಿಲ್ 21 2020 ರಿಂದ ಹೊಸ ಎಂಟು ಜಿಲ್ಲೆಗಳನ್ನು ಸೇರಿಸಲಾಗಿದೆ. ಅವುಗಳೆಂದರೆ: ಚಿತ್ರದುರ್ಗ (ಕರ್ನಾಟಕ), ಬಿಲಾಸ್ಪುರ (ಛತ್ತೀಸ್ಗಢ), ಇಂಫಾಲ್ ವೆಸ್ಟ್ (ಮಣಿಪುರ), ಐಜಾವ್ಲ್ ವೆಸ್ಟ್ (ಮಿಜೋರಾಂ), ಭದ್ರಾಧರಿ ಕೊಥಗುಡೆಮ್ (ತೆಲಂಗಾಣ), ಪಿಲಿಭಿತ್ (ಉತ್ತರ ಪ್ರದೇಶ), ಎಸ್ಬಿಎಸ್ ನಗರ (ಪಂಜಾಬ್) ಮತ್ತು ದಕ್ಷಿಣ ಗೋವಾ (ಗೋವಾ).

 

ಅಲ್ಲದೆ, 23 ರಾಜ್ಯಗಳು / ಕೇಂದ್ರಾಡಳಿತ ಪರದೇಶಗಳ 78 ಜಿಲ್ಲೆಗಳು ಕಳೆದ 14 ದಿನಗಳಲ್ಲಿ ಯಾವುದೇ ಹೊಸ ಪ್ರಕರಣಗಳನ್ನು ವರದಿ ಮಾಡಿಲ್ಲ.

ಪ್ರಸ್ತುತ, 4,257 ಜನರನ್ನು ಗುಣಪಡಿಸಲಾಗಿದೆ ಇದರಿಂದ ಚೇತರಿಕೆಯು 19.89% ರಷ್ಟಾಗಿದೆ. ನಿನ್ನೆಯಿಂದ, ಹೊಸ 1409 ಪ್ರಕರಣಗಳ ವರದಿಯಾಗಿದೆ. ಅಲ್ಲದೆ, ಭಾರತದಲ್ಲಿ ಒಟ್ಟು ಧೃಡಪಟ್ಟ ಕೋವಿಡ್-19 ಸೋಂಕಿತರ ಸಂಖ್ಯೆ 21,393 ಆಗಿದೆ.

ಕೋವಿಡ್-19ಗೆ ಸಂಬಂಧಿತ ತಾಂತ್ರಿಕ ಸಮಸ್ಯೆಗಳು, ಮಾರ್ಗಸೂಚಿಗಳು ಮತ್ತು ಸಲಹೆಗಳ ಎಲ್ಲಾ ಅಧಿಕೃತ ಮತ್ತು ಹೊಸ ಮಾಹಿತಿಗಾಗಿ ದಯವಿಟ್ಟು ನಿಯಮಿತವಾಗಿ ಭೇಟಿ ನೀಡಿ: https://www.mohfw.gov.in

ಕೋವಿಡ್-19 ಗೆ ಸಂಬಂಧಿಸಿದ ತಾಂತ್ರಿಕ ಪ್ರಶ್ನೆಗಳನ್ನು technquery.covid19[at]gov[dot]in ಮತ್ತು ಇತರ ಪ್ರಶ್ನೆಗಳನ್ನು ಕೇಳಲು ncov2019[at]gov[dot]in ಗೆ ಇಮೇಲ್ ಮಾಡಬಹುದು.

ಕೋವಿಡ್-19 ಬಗ್ಗೆ ಯಾವುದೇ ಪ್ರಶ್ನೆಗಳಿದ್ದಲ್ಲಿ, ದಯವಿಟ್ಟು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಹಾಯವಾಣಿ ಸಂಖ್ಯೆ. : +91-11-23978046 ಅಥವಾ 1075 (ಟೋಲ್-ಫ್ರೀ). ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ಕೋವಿಡ್-19ಗೆ ಸಂಬಂಧಿಸಿದ ಸಹಾಯವಾಣಿ ಸಂಖ್ಯೆಗಳ ಪಟ್ಟಿ https://www.mohfw.gov.in/pdf/coronvavirushelplinenumber.pdf ನಲ್ಲಿಯೂ ಲಭ್ಯವಿದೆ.

***


(Release ID: 1617628) Visitor Counter : 221