ರೈಲ್ವೇ ಸಚಿವಾಲಯ

ಕೋವಿಡ್‍ ಬಿಕ್ಕಟ್ಟಿನಲ್ಲಿ ಭಾರತೀಯ ರೈಲ್ವೆ ಸರಕು ಸಾಗಣೆಗೆ ಉತ್ತೇಜನ ಕ್ರಮಗಳ ಘೋಷಣೆ

Posted On: 22 APR 2020 5:00PM by PIB Bengaluru

ಕೋವಿಡ್ಬಿಕ್ಕಟ್ಟಿನಲ್ಲಿ ಭಾರತೀಯ ರೈಲ್ವೆ ಸರಕು ಸಾಗಣೆಗೆ ಉತ್ತೇಜನ ಕ್ರಮಗಳ ಘೋಷಣೆ

24.03.2020ರಿಂದ 30.04.2020ರವರೆಗೆ ಖಾಲಿ ಬೋಗಿಗಳ ಹಾಗೂ ಖಾಲಿ ಫ್ಲಾಟ್ ವೇಗನ್ಗಳ ಸಾಗಣೆಗೆ ಯಾವುದೇ ಸಾಕಣೆ ವೆಚ್ಚವಿರುವುದಿಲ್ಲ

ಗ್ರಾಹಕರು ಗೂಡ್ಸ್ ಷೆಡ್ಗೆ ನೇರವಾಗಿ ಭೇಟಿ ನೀಡುವ ಬದಲಾಗಿ ಹೆಚ್ಚಿನ ಗ್ರಾಹಕರು ತಮ್ಮ ಬೇಡಿಕೆಗಳನ್ನು ವಿದ್ಯುನ್ಮಾನವಾಗಿಯೇ ನೊಂದಾಯಿಸಿಕೊಳ್ಳಬಹುದು ಹಾಗೂ ರೈಲ್ವೆಯಿಂದ ರಸೀದಿಯನ್ನೂ ಪಡೆಯಬಹುದು. ಇದು ಗ್ರಾಹಕರಿಗೆ ಹೆಚ್ಚು ಅನುಕೂಲಕರ ಹಾಗೂ ವೇಗವಾಗಿ ಸೇವೆ ನೀಡುತ್ತದೆ

ಗ್ರಾಹಕರು ವಿದ್ಯುನ್ಮಾನ ರಸೀದಿಯನ್ನು ಪಡೆಯಲು ಸಾಧ್ಯವಾಗದಿದ್ದಲ್ಲಿ, ಅವರು ರೈಲ್ವೆ ಇನ್ವಾಯ್ಸ್ (ರೈಲ್ವೆ ರಸೀದಿ) ಅನ್ನು ಸಲ್ಲಿಸದೇ, ಪರ್ಯಾಯ ವಿಧಾನಗಳನ್ನು ಅನುಸರಿಸಿ ಗಮ್ಯ ಸ್ಥಾನದಲ್ಲಿ ವಿತರಿತ ಸರಕುಗಳನ್ನು ಪಡೆದುಕೊಳ್ಳಬಹುದು

ಅತ್ಯಗತ್ಯ ಸಾಮಗ್ರಿಗಳನ್ನು ಲೋಡ್ ಮಾಡುವುದನ್ನು ಬೆಂಬಲಿಸುವ ಉದ್ದೇಶದಿಂದ ಬಿ.ಸಿ.ಎನ್.ಎಚ್.ಎಲ್. ಕನಿಷ್ಠ ಸಂಖ್ಯೆಯನ್ನು (ಆಹಾರ ಧಾನ್ಯಗಳು, ಕೃಷಿ ಉತ್ಪನ್ನಗಳು ಇವೇ ಮೊದಲಾದ ಸಾಮಗ್ರಿಗಳ ಸಾಕಣೆಗೆ ಮುಚ್ಚಲ್ಪಟ್ಟ ವೇಗನ್ಗಳನ್ನು ಬಳಸಲಾಗುತ್ತದೆ) ರೈಲ್ವೆ ಲೋಡ್ ದರಗಳನ್ನು ಪಡೆಯಲು 57ರಿಂದ 42 ವೇಗನ್ಗಳಿಗೆ ಪ್ರಸ್ತುತ ಇಳಿಸಲಾಗಿದೆ

ಉದ್ಯಮವನ್ನು ಉತ್ತೇಜಿಸಲು ಕನಿಷ್ಠ ರೇಕ್, ಟೂ ಪಾಯಿಂಟ್ ರೇಕ್ ಕ್ರಮಿಸುವ ದೂರಕ್ಕೆ ಸಂಬಂಧಿಸಿದ ನಿಯಮಗಳನ್ನು ಸಡಿಲಿಸಲಾಗಿದೆ

ಪ್ರೋತ್ಸಾಹ ಕ್ರಮಗಳು ಸ್ಪರ್ಧಾತ್ಮಕ ಬೆಲೆಗಳನ್ನು ಹೆಚ್ಚಿಸುವಲ್ಲಿ ಹಾಗೂ ಆರ್ಥಿಕತೆಯನ್ನು ಉತ್ತೇಜಿಸಲು ವ್ಯಾಪಾರ ಕೈಗೊಳ್ಳುವುದನ್ನು ಸುಲಭಗೊಳಿಸುವ ನಿರೀಕ್ಷೆ ಇದೆ.

 

ಕೋವಿಡ್-19 ವಿಷಮ ಸನ್ನಿವೇಶವನ್ನು ಪರಿಗಣಿಸಿ, ಭಾರತೀಯ ರೈಲ್ವೆಯು ಸರಕು ಸಾಗಣೆಯಲ್ಲಿ ಗ್ರಾಹಕರಿಗೆ ಉತ್ತೇಜನ ಕ್ರಮಗಳನ್ನು ಘೋಷಿಸಿದೆ. ಉತ್ತೇಜನಗಳು ದೇಶದ ರಫ್ತಿಗೆ ಸಹಾಯ ಮಾಡುವುದರಿಂದ ಆರ್ಥಿಕತೆಯನ್ನು ಹೆಚ್ಚಿಸುವುದೆಂದು ನಿರೀಕ್ಷಿಸಲಾಗುತ್ತಿದೆ. ಉತ್ತೇಜನವು ಗ್ರಾಹಕರು ನೇರವಾಗಿ ಗೂಡ್ಸ್ ಷೆಡ್ಗೆ ಹೋಗಿ ನೊಂದಾಯಿಸಿಕೊಳ್ಳುವ ಬದಲಾಗಿ ಸರಕುಗಳ ಬೇಡಿಕೆಯನ್ನು ವಿದ್ಯುನ್ಮಾನದ ಮುಖಾಂತರವಾಗಿ ತಮ್ಮ ಸರಕುಗಳ ಬೇಡಿಕೆಯನ್ನು ನೊಂದಾಯಿಸಿಕೊಳ್ಳುವಂತೆ ಮಾಡುತ್ತದೆ. ಹೀಗಾಗಿ ಇದು ಹೆಚ್ಚು ಅನುಕೂಲಕರವಾದ, ವೇಗವಾದ ಹಾಗೂ ಪಾರದರ್ಶಕ ಪ್ರಕ್ರಿಯೆ ಆಗಿದೆ.

1. ಡೆಮ್ಯುರೇಜ್, ವಾರ್ಫೇಜ್ ಹಾಗೂ ಇತರೆ ಪೂರಕ ಶುಲ್ಕಗಳನ್ನು ವಿಧಿಸದಿರುವುದು

ನಿಗದಿತ ಉಚಿತ ಅವಧಿ ಮುಗಿದ ನಂತರ ಡೆಮ್ಯುರೇಜ್, ವಾರ್ಫೇಜ್, ಸ್ಟ್ಯಾಕಿಂಗ್, ಸ್ಟೇಬ್ಲಿಂಗ್ ಶುಲ್ಕಗಳನ್ನು ವಿಧಿಸಲಾಗುತ್ತದೆ. ಸರಕು ಸಾಗಣೆಯ ಗಾಹಕರಿಗೆ ಅನುಕೂಲ ಮಾಡಿಕೊಡÀಲು ಹಾಗೂ ಕೋವಿಡ್ ಬಿಕ್ಕಟ್ಟನ್ನು ಗಮನದಲ್ಲಿ ಇರಿಸಿಕೊಂಡು ಅತ್ಯಗತ್ಯ ಸರಕುಗಳ ಸಾಗಾಣೆಗೆ ಸಂಪರ್ಕ ಬೆಂಬಲವನ್ನು ಒದಗಿಸಲು, ಪ್ರಾಧಿಕಾರವು ಸರಕು ಅಥವಾ ಪಾರ್ಸೆಲ್ ಸಾಗಣೆÉ ಸನ್ನಿವೇಶದಲ್ಲಿ ಫೋರ್ಸ್ ಮೇಜ್ಯುರ್, ಡೆಮ್ಯುರೇಜ್, ವಾರ್ಫೇಜ್, ಸ್ಟ್ಯಾಕಿಂಗ್, ಸ್ಟ್ಯಾಬ್ಲಿಂಗ್ ಶುಲ್ಕಗಳನ್ನು ವಿಧಿಸುವುದಿಲ್ಲ ಎಂದು ನಿರ್ಧರಿಸಿದೆ. ಅದರಂತೆ ಡಿಟೆನ್ಷನ್ ಶುಲ್ಕ ಹಾಗೂ ಗ್ರೌಂಡ್ ಯುಸೇಜ್ ಶುಲ್ಕವು ಬೋಗಿಗಳ ಸಾಗಣೆÉಗೆ ತಗುಲುವುದಿಲ್ಲ. ಎಲ್ಲ ಮಾರ್ಗಸೂಚಿಗಳು 22.03.2020ರಿಂದ 03.05.2020ರವರೆಗೆ ಅನ್ವಯವಾಗುತ್ತವೆ.

2. ಸರಕು ಸಾಗಣೆದಾರರು, ಕಬ್ಬಿಣ ಮತ್ತು ಉಕ್ಕು, ಕಬ್ಬಿಣದ ಅದಿರು ಹಾಗೂ ಉಪ್ಪಿನ ಸಾಗಣೆÉ ಸಂದರ್ಭದಲ್ಲಿ ಬೇಡಿಕೆಯ ವಿದ್ಯುನ್ಮಾನ ನೊಂದಣಿಯನ್ನು (-ಆರ್.ಡಿ) ಹಾಗೂ ರೈಲ್ವೆ ರಸೀದಿಯ ವಿದ್ಯುನ್ಮಾನ ಪ್ರಸಾರವನ್ನು (ಇಟಿ-ಆರ್.ಆರ್) ಅನ್ನು ವಿಸ್ತರಿಸುವುದು.

ಬೇಡಿಕೆಯ ವಿದ್ಯುನ್ಮಾನ ನೋಂದಣಿಯು (-ಆರ್.ಡಿ.) ಗ್ರಾಹಕರು ನೇರವಾಗಿ ಗೂಡ್ಸ್ ಷೆಡ್ಗೆ ಹೋಗಿ ನೊಂದಾಯಿಸಿಕೊಳ್ಳುವ ಬದಲಾಗಿ ಸರಕುಗಳ ಬೇಡಿಕೆಯನ್ನು ವಿದ್ಯುನ್ಮಾನದ ಮುಖಾಂತರವಾಗಿ ತಮ್ಮ ಸರಕುಗಳ ಬೇಡಿಕೆಯನ್ನು ನೊಂದಾಯಿಸಿಕೊಳ್ಳುವ ಸೌಲಭ್ಯವನ್ನು ಒದಗಿಸುತ್ತದೆ. ಹೀಗಾಗಿ ಇದು ಸರಳವಾದ, ಅನುಕೂಲಕರವಾದ, ವೇಗವಾದ ಹಾಗೂ ಪಾರದರ್ಶಕ ಪ್ರಕ್ರಿಯೆ ಆಗಿದೆ.

ರೈಲ್ವೆ ರಸೀದಿಯ ವಿದ್ಯುನ್ಮಾನ ಪ್ರಸಾರವು (ಇಟಿ-ಆರ್.ಆರ್) ಕಾಗದ ರಹಿತ ವಹಿವಾಟು ವ್ಯವಸ್ಥೆಗಿಂತ ಮೇಲಿನ ಹಂತದ್ದಾಗಿದೆ. ಇಲ್ಲಿ ರೈಲ್ವೆ ರಸೀದಿಯನ್ನು ವಿದ್ಯುನ್ಮಾನವಾಗಿ ರಚಿಸಲಾಗುತ್ತದೆ ಹಾಗೂ ಗ್ರಾಹಕರಿಗೆ ಎಫ್...ಎಸ್. ಮೂಲಕ ವಿದ್ಯುನ್ಮಾನವಾಗಿಯೇ ತಲುಪಿಸಲಾಗುತ್ತದೆ ಹಾಗೂ .ಟಿ-ಆರ್.ಆರ್. ಅನ್ನು -ಸರೆಂಡರ್ ಮಾಡುವ ಮೂಲಕವೇ ಸರಕುಗಳ ವಿತರಣೆಯನ್ನು ಮಾಡಲಾಗುತ್ತದೆ. ಸರಕು ಸಾಗಣೆದಾರರು, ಕಬ್ಬಿಣ ಮತ್ತು ಉಕ್ಕು, ಕಬ್ಬಿಣದ ಅದಿರು ಹಾಗೂ ಉಪ್ಪಿನ ಸಾಗಣೆÉ ಸಂದರ್ಭದಲ್ಲಿ -ಆರ್.ಡಿ ಹಾಗೂ ಇಟಿ-ಆರ್.ಆರ್ ಪ್ರಯೋಜನಗಳನ್ನು ವಿಸ್ತರಿಸುವ ಕುರಿತಾಗಿ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ಇದು ಗ್ರಾಹಕರು ಗೂಡ್ಸ್ ಷೆಡ್ಗೆ ಬೇಡಿಕೆಯ ನೊಂದಣಿಗಾಗಿ, ಆರ್.ಆರ್./ ಇನ್ವಾಯ್ಸ್ ಅನ್ನು ಸ್ವೀಕರಿಸುವುದಕ್ಕಾಗಿ ಹಾಗೂ ಸರಕುಗಳನ್ನು ಪಡೆದುಕೊಳ್ಳಲು ಪ್ರಯಾಣಿಸುವ ಅಗತ್ಯತೆಯನ್ನು ನಿವಾರಿಸುತ್ತದೆ.

3. ರೈಲ್ವೆ ರಸೀದಿ (ಆರ್.ಆರ್.) ಇಲ್ಲದಿದ್ದ ಪಕ್ಷದಲ್ಲಿ ಸರಕುಗಳ ವಿತರಣೆ.

ಎಷ್ಟು ಸಾಧ್ಯವೋ ಅಷ್ಟರ ಮಟ್ಟಿಗೆ .ಟಿ.-ಆರ್.ಆರ್.ಗಳನ್ನು ಆಯ್ದುಕೊಳ್ಳಲು ಗ್ರಾಹಕರನ್ನು ಪ್ರೋತ್ಸಾಹಿಸಲಾಗುತ್ತಿದೆ, ಇದರಿಂದ ಗಮ್ಯ ಸ್ಥಾನಗಳಲ್ಲಿ ಸರಕುಗಳನ್ನು ಪಡೆದುಕೊಳ್ಳಲು ಅಸಲು ಕಾಗದದ ಆರ್.ಆರ್. ಗಳನ್ನು ತೆಗೆದುಕೊಂಡು ಹೋಗಬೇಕಾಗಿಲ್ಲ.

ಈಗಾಗಲೇ ಗ್ರಾಹಕರು ತಮ್ಮ ಸರಕುಗಳನ್ನು ಕಾಗದದ ಆರ್.ಆರ್. ಮೂಲಕ ಕಾಯ್ದಿರಿಸಿದ್ದರೆ, ನಂತರದ ಅಸ್ತಿತ್ವದಲ್ಲಿರುವ ನಿಯಮಗಳ ಪ್ರಕಾರ ಗ್ರಾಹಕರು ಮೂಲ ನಿಲ್ದಾಣದಲ್ಲಿ ಸರಕಿನ ಬಟವಾಡೆಯ ಕುರಿತು ಆರ್.ಆರ್ / ರೈಲ್ವೆ ಇನ್ವಾಯ್ಸ್ ಅನ್ನು ಪಡೆಯುತ್ತಾರೆ. ಗಮ್ಯ ಸ್ಥಾನದಲ್ಲಿ ಸರಕನ್ನು ಪಡೆಯಲು ಮೂಲ ಆರ್.ಆರ್. ಅನ್ನು ಸಲ್ಲಿಸಬೇಕಾಗಿರುತ್ತದೆ. ಅಥವಾ ಆರ್.ಆರ್. ಲಭ್ಯವಿಲ್ಲದಿದ್ದಲ್ಲಿ ಗಮ್ಯ ಸ್ಥಾನದÀಲ್ಲಿ ರವಾನೆದಾರರಿಂದ ಮೊಹರುಹಾಕಿದ ಭದ್ರತಾ ಟಿಪ್ಪಣಿಯನ್ನು ಸಲ್ಲಿಸಿದಾಗ ಸರಕನ್ನು ವಿತರಣೆ ಮಾಡಲಾಗುತ್ತದೆ.

ಆದರೆ ದೇಶದಾದ್ಯಂತ ಲಾಕ್ಡೌನ್ ವಿಧಿಸಿರುವ ಕಾರಣದಿಂದ, ಗ್ರಾಹಕರಿಗೆ ಮೂಲಸ್ಥಾನದಿಂದ ಗಮ್ಯ ಸ್ಥಾನಕ್ಕೆ ಆರ್. ಆರ್. ಅನ್ನು ಕಳುಹಿಸುವುದು ಕಷ್ಟಕರವಾಗುತ್ತದೆ. ಹಾಗಾಗಿ, ಸರಕು ಸಾಗಣೆಯ ಗ್ರಾಹಕರಿಗೆ ಅನುಕೂಲ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಎಷ್ಟು ಸಾಧ್ಯವೋ ಅಷ್ಟರ ಮಟ್ಟಿಗೆ . ಟಿ. ಆರ್. ಆರ್. ಗಳನ್ನು ವಿತರಣೆ ಮಾಡಲು ನಿರ್ಧರಿಸಲಾಗಿದೆ. ಇದರಿಂದ . ಟಿ. ಆರ್. ಆರ್. ಗಳ - ಸರೆಂಡರ್ನಿಂದಾಗಿ ವಿತರಣೆ ಮಾಡಬಹುದು.

ಸಾಮಾನ್ಯವಾದ . ಟಿ. ಆರ್. ಆರ್.ಗಳ (ಕಾಗದದ ಆರ್.ಆರ್.ಗಳು) ಇದ್ದ ಪಕ್ಷದಲ್ಲಿ ಸರಕನ್ನು ಕಳುಹಿಸುವವರು ಸಾಕಣೆದಾರರು / ಸ್ವೀಕರಿಸುವವರ ಹೆಸರು, ಹುದ್ದೆ, ಆಧಾರ್, ಪಾನ್, ಜಿ. ಎಸ್. ಟಿ. ಇನ್. ಎನ್. ಗಳಂತಹ ವಿವರಗಳನ್ನು ಮೂಲ ನಿಲ್ದಾಣದಲ್ಲಿ ಒದಗಿಸುತ್ತಾರೆ. ಇದನ್ನು ವಾಣಿಜ್ಯ ನಿಯಂತ್ರಣದ ಮೂಲಕ ಗಮ್ಯ ಸ್ಥಾನಕ್ಕೆ ತಲುಪಿಸಲಾಗುತ್ತದೆ. ಟಿ. ಎಂ. ಎಸ್. ನಲ್ಲಿ ವಿವರಗಳನ್ನು ಪರಿಶೀಲಿಸಿ ಹಾಗೂ ಬಳಿಕ ಉಂಟಾಗುವ ಯಾವುದೇ ವಿಚಾರಕ್ಕೆ ಅವರೇ ಜವಾಬ್ದಾರಿ ಎನ್ನುವ ಮೊಹರಿಲ್ಲದ ಭದ್ರತಾ ಟಿಪ್ಪಣಿಯನ್ನು ಮತ್ತು ಆರ್.ಆರ್. ಫ್ಯಾಕ್ಸ್ / ಸ್ಕ್ಯಾನ್ / ನಕಲನ್ನು ಪಡೆದು ನಂತರ ಸರಕನ್ನು ವಿತರಿಸಲಾಗುತ್ತದೆ.

ಇದಲ್ಲದೇ ಸ್ವಯಂ ಆರ್. ಆರ್. (ಸಾಗಣೆದಾರರು ಹಾಗೂ ರವಾನೆದಾರರು ಒಬ್ಬರೇ ಆಗಿದ್ದಲ್ಲಿ) ಒರಿಜಿನೇಟಿಂಗ್ ವಿಭಾಗವು ಸಾಗಣೆದಾರರಿಂದ ಗಮ್ಯ ಸ್ಥಾನದಲ್ಲಿ ಆರ್.ಆರ್. ವಿತರಣೆ ಪಡೆದುಕೊಳ್ಳುವÀ ರವಾನೆದಾರರ ಹೆಸರನ್ನು ಸಮರ್ಪಕವಾಗಿ ದಾಖಲಿಸಿದ ಬಳಿಕ ಮೂಲ ಆರ್. ಆರ್. ಅನ್ನು ಹಿಂತಿರುಗಿಸುತ್ತದೆ. ಆರ್. ಆರ್. ಅನ್ನು ನೊಂದಣಿ ವಿಭಾಗದ ವಾಣಿಜ್ಯ ನಿಯಂತ್ರಣವು ಸ್ಕ್ಯಾನ್ ಮಾಡುತ್ತದೆ ಹಾಗೂ ಪ್ರಾಧಿಕಾರದ ಪತ್ರದಲ್ಲಿನ ಉಲ್ಲೇಖದಲ್ಲಿ ತಿಳಿಸಿರುವಂತೆ ಮೇಲ್ ಮೂಲಕವಾಗಿ ಹೆಸರು, ಪಾನ್, ಆಧಾರ್ ಮತ್ತು ಜಿ.ಎಸ್.ಟಿ..ಎನ್.ಗಳ ವಿವರಗಳನ್ನು ನಮೂದಿಸಿ ಕಳುಹಿಸಲಾಗುತ್ತದೆ. ಗಮ್ಯ ನಿಲ್ದಾಣವು ಎಲ್ಲ ಮಾಹಿತಿಗಳನ್ನು ಪರಿಶೀಲಿಸುತ್ತದೆ ಮತ್ತು ಭೌತಿಕವಾಗಿ ಸಿಸ್ಟಂ ವಿತರಣೆಯ ಮೇಲೂ ಪ್ರಭಾವ ಬೀರುತ್ತದೆ. ಲಾಕ್ಡೌನ್ ಮುಕ್ತಾಯದ ಬಳಿಕ ಮೂಲ ವಿಭಾಗದಲ್ಲಿ ಇರಿಸಲಾದ ಮೂಲ ಆರ್.ಆರ್. ಅನ್ನು ಗಮ್ಯ ಸ್ಥಾನದಲ್ಲಿನ ವಿಭಾಗಕ್ಕೆ ಲೆಕ್ಕಪತ್ರದ ಕಾರಣಕ್ಕಾಗಿ ಕಳುಹಿಸಲಾಗುತ್ತದೆ. ಎರಡೂ ಬದಿಗಳಲ್ಲಿನ ಹಿರಿಯ ಡಿ.ಸಿ.ಎಂ.ಗಳು ಇದನ್ನು ನಿರ್ವಹಿಸಬೇಕು. ಮೂಲ ವಿಭಾಗದಲ್ಲಿ ನೋ ಕ್ಲೇಮ್ಸ್ಘೋಷಣೆಯನ್ನು ಫೋರ್ಸ್ ಮೇಜ್ಯೂರ್ ಅಡಿಯಲ್ಲಿ ಕಾರ್ಯವಿಧಾನವಾಗಿ ಪಡೆಯಬೇಕು. ಎಲ್ಲ ಮಾರ್ಗಸೂಚಿಗಳು 03.05.2020 ರವರೆಗೂ ಮಾನ್ಯವಾಗಿರುತ್ತದೆ.

4. ಬೋಗಿ ಸಾಗಣೆಯನ್ನು ಉತ್ತೇಜಿಸಲು ನೀತಿ ಕ್ರಮ : ಭಾರತೀಯ ರೈಲ್ವೆಯು ಬಹಳ ಹಿಂದಿನಿಂದಲೂ ಸರಕು ಸಾಗಣೆÉಯಲ್ಲಿನ ವೈವಿಧ್ಯತೆಯನ್ನು ಗುರುತಿಸಿದೆ ಹಾಗೂ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಅಂದರೆ ಕಲ್ಲಿದ್ದಲ್ಲು, ಕಬ್ಬಿಣದ ಅದಿರು ಮೊದಲಾದ ಬೃಹತ್ ಸರಕುಗಳ ಜೊತೆಯಾಗಿ ಸಾಂಪ್ರದಾಯಿಕವಲ್ಲದ ಸರಕನ್ನೂ ಕೂಡ ಸಾಗಿಸುವುದು. ನಿಟ್ಟಿನಲ್ಲಿ ಇತ್ತೀಚಿಗೆ ಕೈಗೊಂಡ ಹಲವು ಹಂತಗಳು ಕೆಳಕಂಡಂತಿವೆ.

. ಖಾಲಿ ಬೋಗಿಗಳ ಹಾಗೂ ಖಾಲಿ ಫ್ಲಾಟ್ ವೇಗನ್ಗಳ ಸಾಗಣೆಗೆ ಯಾವುದೇ ಸಾಕಣೆ ವೆಚ್ಚವಿರುವುದಿಲ್ಲ.

ಭಾರತೀಯ ರೈಲ್ವೆಯು ಖಾಲಿ ಬೋಗಿಗಳನ್ನು ಹಾಗೂ ಖಾಲಿ ಫ್ಲಾಟ್ ವೇಗನ್ಗಳನ್ನು ಸಾಗಿಸಲು ಪ್ರತ್ಯೇಕ ಸಾಕಣೆ ತೆರಿಗೆಯನ್ನು ವಿಧಿಸುತ್ತದೆಬೋಗಿ ದಟ್ಟನೆಯಲ್ಲಿ ಹೆಚ್ಚಿನ ಇಂಟರ್-ಮೋಡಲ್ ಅನ್ನು ಪಡೆಯುವುದನ್ನು ದೃಷ್ಟಿಯಲ್ಲಿ ಇರಿಸಿಕೊಂಡು 01.01.2019ರಿಂದ ಜಾರಿಗೆ ಬರುವಂತೆ 25%ರಷ್ಟು ರಿಯಾಯಿತಿಯನ್ನು ನೀಡಲಾಯಿತು.

ಪ್ರಸ್ತುತ ಕೋವಿಡ್-19 ಕಾರಣದಿಂದಾಗಿ ಫೋರ್ಸ್ ಮೆಜ್ಯೂರ್ ಅನ್ನು ಗಮನದಲ್ಲಿ ಇರಿಸಿಕೊಂಡು, ಪ್ರಾಧಿಕಾರವು 24.03.2020 ರಿಂದ 30.04.2020 ರವರೆಗೆ ಖಾಲಿ ಬೋಗಿಗಳು ಹಾಗೂ ಖಾಲಿ ಫ್ಲಾಟ್ ವೇಗನ್ಗಳ ಸಾಗಣೆಗೆ ಯಾವುದೇ ಸಾಕಣೆ ವೆಚ್ಚವನ್ನು ವಿಧಿಸಬಾರದು ಎಂದು ನಿರ್ಧರಿಸಿದೆ. ಇದು .ಆರ್.ಗೆ ಅಷ್ಟೇ ಅಲ್ಲದೇ ರಫ್ತಿಗೆ ಸಹಾಯ ಮಾಡುವ ಮೂಲಕ ಆರ್ಥಿಕತೆಗೆ ಉತ್ತೇಜನ ನೀಡುತ್ತದೆ ಎಂದು ನಿರೀಕ್ಷೆ ಮಾಡಲಾಗಿದೆ.

ಬಿ. ಬೋಗಿ ಸಾಗಣೆಗೆ ಹಬ್ ಮತ್ತು ಸ್ಪೋಕ್ ಸಿಸ್ಟಮ್ ಅಡಿಯಲ್ಲಿ ಸಡಿಲಿಕೆ

ಒಂದೆಡೆಯಿಂದ ಮತ್ತೊಂದೆಡೆಗೆ ಸರಕುಗಳನ್ನು ಸಾಗಿಸುವಾಗ ಮಧ್ಯೆ ವಿರಾಮ / ಮಾರ್ಗದ ನಡುವೆ ಸಾಗಿಸುವುದಕ್ಕೆ ರೈಲ್ವೆ ಟೆಲಿಸ್ಕೋಪಿಕ್ ದರದ ಪ್ರಯೋಜನವನ್ನು ನೀಡುತ್ತದೆ. ಇದನ್ನು ಹಬ್ ಮತ್ತು ಸ್ಪೋಕ್ ಸಿಸ್ಟಂ ಎಂದು ಕರೆಯಲಾಗುತ್ತದೆ. ಪ್ರಸ್ತುತ ಅಸ್ತಿತ್ವದಲ್ಲಿರುವ ಮಾರ್ಗಸೂಚಿಗಳ ಅಡಿಯಲ್ಲಿಮಧ್ಯಂತರ ಸಾರಿಗೆ ವಿರಾಮವು ಐದು ದಿನಗಳಿಗೆ ಸೀಮಿತವಾಗಿದೆ. ಕೊರೋನಾ ವೈರಸ್ನಿಂದಾಗಿ ಸರಕನ್ನು ತೆರವುಗೊಳಿಸುವಲ್ಲಿ ಆಗುತ್ತಿರುವ ವಿಳಂಬದಿಂದ .ಸಿ.ಡಿ. ಗಳಿಗೆ ತೊಂದರೆ ಆಗುತ್ತಿರುವುದನ್ನು ಗಮನದಲ್ಲಿ ಇರಿಸಿಕೊಂಡು, ಪ್ರಾಧಿಕಾರವು 16.04.2020ರಿಂದ 30.05.2020ರವರೆಗೆ ಟೆಲಿಸ್ಕೋಪಿಕ್ ದರದ ಪ್ರಯೋಜನವನ್ನು ಪಡೆಯಲು ಮಿತಿಯನ್ನು ಐದು ದಿನಗಳಿಂದ ಹದಿನೈದು ದಿನಗಳಿಗೆ ಸಡಿಲಗೊಳಿಸಲು ನಿರ್ಧರಿಸಿದೆ.

5. ಸರಕು ಸಾಕಣೆಯಲ್ಲಿನ ಸಡಿಲಿಕೆ:

ರೈಲ್ವೆಯು ನಿಗದಿತ ದೂರಕ್ಕಿಂದ ಕಡಿಮೆ ರೇಕ್ಸ್, ಎರಡು ಪಾಯಿಂಟ್ಗಳಲ್ಲಿನ ರೇಕ್ಸ್, ಎರಡು ಗಮ್ಯ ಸ್ಥಾನಗಳಲ್ಲಿನ ರೇಕ್ಸ್ ಮೊದಲಾದವುಗಳನ್ನು ನೊಂದಣಿ ಮಾಡ ಬಯಸುವ ಗ್ರಾಹಕರಿಗೆ ಉತ್ಪನ್ನಗಳ ಸಾರಿಗೆ / ಯೋಜನೆಗಳನ್ನು ಹೊಂದಿದೆ. ಇವುಗಳ ಕಾರ್ಯಾಚರಣೆಯನ್ನು ಅತ್ಯುತ್ತಮವಾಗಿಸಲು ದೂರ ನಿರ್ಬಂಧದಂತಹ ಹಲವು ನಿಗದಿತ ಷರತ್ತುಗಳ ಜೊತೆಗೆ ಒದಗಿಸಲಾಗುತ್ತದೆ. ಕೋವಿಡ್ ಸಮಯದಲ್ಲಿ ಕೆಳಕಂಡ ಸಡಿಲಿಕೆಗಳನ್ನು ನೀಡಲಾಗಿದೆ.

. ಅಂತರ ವಲಯ ಸಾಗಣೆÉಗಾಗಿ ಕನಿಷ್ಠ ರೇಕ್ಗೆ ದೂರ ನಿರ್ಬಂಧವು 600 ಕಿ.ಮೀ. ಆಗಿತ್ತು, ಅದನ್ನು 1000 ಕಿ.ಮೀ. ಗಳಿಗೆ ಹೆಚ್ಚಿಸಲಾಗಿದೆ. ಈಗ ಅಂತರ ವಲಯ ಹಾಗೂ ಸ್ಥಳೀಯ ವಲಯದ ಸಾಗಣೆÉಗಾಗಿ 1500 ಕಿ.ಮೀಗಳಿಗೆ ಅನುಮತಿ ನೀಡಲಾಗಿದೆ.

. ಅದರಂತೆಯೆ, ಎರಡು ಸ್ಥಾನಗಳಲ್ಲಿ ಅಂದರೆ ಎರಡು ಲೋಡಿಂಗ್ ಪಾಯಿಂಟ್ಗಳಲ್ಲಿನ ರೇಕ್ಗಳು ಅಕಾದಲ್ಲಿ 200 ಕಿ.ಮೀ.ಗಿಂತ ಹಾಗೂ ಬಿಡುವಿಲ್ಲದ ಸಮಯದಲ್ಲಿ 400 ಕಿ.ಮೀ.ಗಳಿಗಿಂತ ಹೆಚ್ಚಿನ ದೂರ ಇರಬಾರದು ಎಂಬ ದೂರ ನಿರ್ಬಂಧವಿತ್ತು. ಇದು ರೇಕ್ಸ್ಗಳ ಅತ್ಯುತ್ತಮ ಬಳಕೆಯನ್ನು ಖಚಿತಪಡಿಸುತ್ತದೆ. ಯಾವುದೇ ಕಾಲವನ್ನು ಪರಿಗಣಿಸದೇ ಲೋಡಿಂಗ್ ಪಾಯಿಂಟ್ಗಳ ನಡುವಿನ ದೂರವನ್ನು 500 ಕಿ.ಮೀ. ಗಳವರೆಗೆ ಅನುಮತಿಸಲು ದೂರ ನಿರ್ಬಂಧವನ್ನು ಸಡಿಲಿಸಲಾಗಿದೆ.

. ಇದಲ್ಲದೆ ರೈಲ್ವೆಯ ಲೋಡ್ ಪ್ರಯೋಜನವನ್ನು ಪಡೆಯಲು ನಿಗದಿಗೊಳಿಸಿದ ಸಂಖ್ಯೆಯಲ್ಲಿ ವೇಗನ್ಗಳನ್ನು ಲೋಡ್ ಮಾಡಲೇಬೇಕು. ನಿಗದಿತ ವೇಗನ್ಗಳ ಸಂಖ್ಯೆಗಿಂತ ಕಡಿಮೆ ಸಂಖ್ಯೆಯ ವೇಗನ್ಗಳನ್ನು ಕಾಯ್ದಿರಿಸಿದರೆ, ಸ್ವಲ್ಪ ಹೆಚ್ಚಾಗಿರುವ ವೇಗನ್ - ಲೋಡ್ ದರಗಳು ಅನ್ವಯಿಸುತ್ತವೆ.

ಇದರಲ್ಲಿ ಆಹಾರಧಾನ್ಯಗಳು, ಈರುಳ್ಳಿ ಮೊದಲಾದ ಕೃಷಿ ಉತ್ಪನ್ನಗಳಂತಹ ಚೀಲಗಳಲ್ಲಿ ತುಂಬಿದ ಸರಕುಗಳಿಗೆ ಮುಖ್ಯವಾಗಿ ಬಳಸುವ ಮುಚ್ಚಲ್ಪಟ್ಟ ವೇಗನ್ಗಳ ಒಂದು ವಿಧವಾದ ಬಿ.ಸಿ.ಎನ್.ಎಚ್.ಎಲ್. ವೇಗನ್ಗಳಿಗೆ ಸಡಿಲಿಕೆಯನ್ನು ನೀಡಲಾಗಿದೆಅತ್ಯಗತ್ಯ ಸಾಮಗ್ರಿಗಳನ್ನು ಲೋಡ್ ಮಾಡುವುದನ್ನು ಬೆಂಬಲಿಸುವ ಉದ್ದೇಶದಿಂದ ವೇಗನ್ಗಳನ್ನು ಲೋಡ್ ಮಾಡುವ ಕನಿಷ್ಠ ಸಂಖ್ಯೆಯನ್ನು ಪ್ರಸ್ತುತ 57ರಿಂದ 42 ವೇಗನ್ಗಳಿಗೆ ರೈಲ್ವೆ ಲೋಡ್ ದರಗಳ ಪ್ರಯೋಜನವನ್ನು ಪಡೆಯಲು ಇಳಿಸಲಾಗಿದೆ.

ಪ್ಯಾರಾ 5ರಲ್ಲಿನ ಎಲ್ಲ ಸಡಿಲಿಕೆಗಳು 30.09.2020 ರವರೆಗೆ ಮಾನ್ಯವಾಗಿರುತ್ತದೆ.

***



(Release ID: 1617579) Visitor Counter : 215