ನಾಗರೀಕ ವಿಮಾನಯಾನ ಸಚಿವಾಲಯ
ಕೋವಿಡ್ – 19 ರ ವಿರುದ್ಧದ ಭಾರತದ ಹೋರಾಟಕ್ಕೆ ಬೆಂಬಲ ನೀಡಲು ಲೈಫ್ ಲೈನ್ ಉಡಾನ್ ನ ಕೊರೊನಾ ಯೋಧರು ಅನಿಯಮಿತ ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಣೆಯನ್ನು ಮುಂದುವರೆಸಿದ್ದಾರೆ
Posted On:
22 APR 2020 6:01PM by PIB Bengaluru
ಕೋವಿಡ್ – 19 ರ ವಿರುದ್ಧದ ಭಾರತದ ಹೋರಾಟಕ್ಕೆ ಬೆಂಬಲ ನೀಡಲು ಲೈಫ್ ಲೈನ್ ಉಡಾನ್ ನ ಕೊರೊನಾ ಯೋಧರು ಅನಿಯಮಿತ ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಣೆಯನ್ನು ಮುಂದುವರೆಸಿದ್ದಾರೆ
ಇಲ್ಲಿವರೆಗೆ 330 ವಿಮಾನಗಳು 551 ವೈದ್ಯಕೀಯ ಸರಕು ಸಾಗಿಸಿವೆ
ಅಗತ್ಯ ವೈದ್ಯಕೀಯ ಸಾಮಗ್ರಿಗಳನ್ನು ದೇಶದ ದೂರದ ಭಾಗಗಳಿಗೆ ಸಾಗಿಸುವ ಮೂಲಕ ಕೊವಿಡ್ - 19 ರ ವಿರುದ್ಧದ
ಭಾರತದ ಹೋರಾಟಕ್ಕೆ ನೆರವು ಒದಗಿಸಲು ‘ಲೈಫ್ ಲೈನ್ ಉಡಾನ್’ ವಿಮಾನಗಳು ಎಂ ಒ ಸಿ ಎ ಮೂಲಕ
ಕಾರ್ಯನಿರ್ವಹಿಸುತ್ತಿವೆ. ಕೋವಿಡ್ – 19 ರ ವಿರುದ್ಧದ ಭಾರತದ ಹೋರಾಟಕ್ಕೆ ಬೆಂಬಲ ನೀಡಲು ಲೈಫ್ ಲೈನ್ ಉಡಾನ್ ನ ಕೊರೊನಾ ಯೋಧರು- ಅಧಿಕಾರಿಗಳು, ಸಿಬ್ಬಂದಿ ಮತ್ತು ಪ್ರಮುಖ ಪಾಲುದಾರರ ಜೊತೆಗೆ ಸ್ಥಳೀಯ ಮಟ್ಟದ ಕಾರ್ಯಕರ್ತರು ಅನಿಯಮಿತ ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಣೆಯನ್ನು ಮುಂದುವರೆಸಿದ್ದಾರೆ
ಏರ್ ಇಂಡಿಯಾ, ಅಲಯೆನ್ಸ್ ಏರ್, ಐಎಎಫ್, ಮತ್ತು ಖಾಸಗಿ ಸಂಸ್ಥೆಗಳ 330 ವಿಮಾನಗಳು ಲೈಫ್ ಲೈನ್ ಉಡಾನ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲಿ 200 ವಿಮಾನಗಳು ಏರ್ ಇಂಡಿಯಾ ಮತ್ತು ಅಲಯೆನ್ಸ್ ಏರ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಇಂದಿನವರೆಗೆ 551.79 ಟನ್ ಗಳಷ್ಟು ಸರಕುಗಳನ್ನು ಸಾಗಿಸಲಾಗಿದೆ. ಇಂದಿನವರೆಗೆ ಲೈಫ್ ಲೈನ್ ಉಡಾನ್ ವಿಮಾನಗಳು 3,27,623 ಕಿ. ಮೀ.ಗಳಿಂತ ಹೆಚ್ಚು ದೂರವನ್ನು ಕ್ರಮಿಸಿವೆ.
ತರಲಾದ ದಿನಾಂಕವಾರು ವೈದ್ಯಕೀಯ ಸರಕು ಪ್ರಮಾಣ ಕೆಳಗಿನಂತಿದೆ:
ಕ್ರಮ ಸಂಖ್ಯೆ
|
ದಿನಾಂಕ
|
ಏರ್ ಇಂಡಿಯಾ
|
ಅಲೈನ್ಸ್
|
ಐಎಎಫ್
|
ಇಂಡಿಗೊ
|
ಸ್ಪೈಸ್ ಜೆಟ್
|
ಒಟ್ಟು
|
1
|
26.3.2020
|
2
|
-
|
-
|
-
|
2
|
4
|
2
|
27.3.2020
|
4
|
9
|
1
|
-
|
-
|
14
|
3
|
28.3.2020
|
4
|
8
|
-
|
6
|
-
|
18
|
4
|
29.3.2020
|
4
|
9
|
6
|
-
|
-
|
19
|
5
|
30.3.2020
|
4
|
-
|
3
|
-
|
-
|
7
|
6
|
31.3.2020
|
9
|
2
|
1
|
-
|
-
|
12
|
7
|
01.4.2020
|
3
|
3
|
4
|
-
|
-
|
10
|
8
|
02.4.2020
|
4
|
5
|
3
|
-
|
-
|
12
|
9
|
03.4.2020
|
8
|
-
|
2
|
-
|
-
|
10
|
10
|
04.4.2020
|
4
|
3
|
2
|
-
|
-
|
9
|
11
|
05.4.2020
|
-
|
-
|
16
|
-
|
-
|
16
|
12
|
06.4.2020
|
3
|
4
|
13
|
-
|
-
|
20
|
13
|
07.4.2020
|
4
|
2
|
3
|
-
|
-
|
9
|
14
|
08.4.2020
|
3
|
-
|
3
|
-
|
-
|
6
|
15
|
09.4.2020
|
4
|
8
|
1
|
-
|
-
|
13
|
16
|
10.4.2020
|
2
|
4
|
2
|
-
|
-
|
8
|
17
|
11.4.2020
|
5
|
4
|
18
|
-
|
-
|
27
|
18
|
12.4.2020
|
2
|
2
|
-
|
-
|
-
|
4
|
19
|
13.4.2020
|
3
|
3
|
3
|
-
|
-
|
9
|
20
|
14.4.2020
|
4
|
5
|
4
|
-
|
-
|
13
|
21
|
15.4.2020
|
2
|
5
|
-
|
-
|
-
|
7
|
22
|
16.4.2020
|
9
|
-
|
6
|
-
|
-
|
15
|
23
|
17.4.2020
|
4
|
8
|
-
|
-
|
-
|
12
|
24
|
18.4.2020
|
5
|
-
|
9
|
-
|
-
|
14
|
25
|
19.4.2020
|
4
|
-
|
9
|
-
|
-
|
13
|
26
|
20.4.2020
|
8
|
4
|
3
|
-
|
-
|
15
|
27
|
21.4.2020
|
4
|
-
|
10
|
-
|
-
|
14
|
|
Total
|
112
|
88
|
122
|
6
|
2
|
330
|
ಪವನ್ ಹನ್ಸ್ ನಿಯಮಿತ ಸಂಸ್ಥೆ ಸೇರಿದಂತೆ ಹೆಲಿಕಾಪ್ಟರ್ ಸೇವೆಗಳು ಜಮ್ಮು ಮತ್ತು ಕಾಶ್ಮೀರ, ಲದಾಖ್, ದ್ವೀಪಗಳು ಮತ್ತು ಈಶಾನ್ಯ ಪ್ರದೇಶಗಳಿಗೆ ನಿರ್ಣಾಯಕ ವೈದ್ಯಕೀಯ ಸಾಮಗ್ರಿಗಳು ಮತ್ತು ರೋಗಿಗಳನ್ನು ಸಾಗಿಸಲು ಕಾರ್ಯನಿರ್ವಹಿಸುತ್ತಿವೆ. 21 ಏಪ್ರಿಲ್ 2020 ರವರೆಗೆ ಪವನ್ ಹನ್ಸ್ ಹೆಲಿಕಾಪ್ಟರ್ ಗಳು 6537 ಕಿ. ಮೀ. ಗಳ ದೂರ ಕ್ರಮಿಸಿ 1.90 ಟನ್ ಗಳಷ್ಟು ಸರಕುಗಳನ್ನು ಸಾಗಿಸಿವೆ.
ದೇಶೀಯ ಲೈಫ್ ಲೈನ್ ಉಡಾನ್ ಸಾಗಾಣೆ ಮಾಡುವ ಸರಕುಗಳಲ್ಲಿ, ಕೊವಿಡ್ - 19 ಗೆ ಸಂಬಂಧಿಸಿದ ಕಾರಕಗಳು, ಕಿಣ್ವಗಳು, ವೈದ್ಯಕೀಯ ಉಪಕರಣಗಳು, ಪರೀಕ್ಷಾ ಕಿಟ್ ಗಳು ಮತ್ತು ವೈಯಕ್ತಿಕ ರಕ್ಷಣಾ ಸಾಧನಗಳು (ಪಿಪಿಇ), ಮಾಸ್ಕ್ ಗಳು, ಕೈಗವಸುಗಳು ಮತ್ತು ಹೆಚ್ ಎಲ್ ಎಲ್ ಹಾಗೂ ಐ ಸಿ ಎಮ್ ಆರ್ ನ ಇತರ ಉಪಕರಣಗಳು; ರಾಜ್ಯ / ಕೇಂದ್ರಾಡಳಿತ ಸರ್ಕಾರಗಳಿಂದ ಮನವಿ ಪಡೆಯಲಾದ ಸರಕುಗಳು ಮತ್ತು ಅಂಚೆ ಪ್ಯಾಕೆಟ್ ಗಳು ಇತ್ಯಾದಿ ಯನ್ನೂ ಒಳಗೊಂಡಿದೆ.
ಈಶಾನ್ಯ ಪ್ರದೇಶ, ದ್ವೀಪ ಪ್ರದೇಶಗಳು ಮತ್ತು ಬೆಟ್ಟ ಪ್ರದೇಶದ ರಾಜ್ಯಗಳಿಗೆ ವಿಶೇಷ ಗಮನಹರಿಸಲಾಗಿದೆ.
ಪ್ರಮುಖವಾಗಿ ಜಮ್ಮು ಮತ್ತು ಕಾಶ್ಮೀರ, ಲದಾಖ್, ಈಶಾನ್ಯ ಮತ್ತು ಇತರ ದ್ವೀಪ ಪ್ರದೇಶಗಳಿಗಾಗಿ ಏರ್ ಇಂಡಿಯಾ ಮತ್ತು ಐಎಎಫ್ ಜಂಟಿಯಾಗಿ ಕಾರ್ಯನಿರ್ವಹಿಸುತ್ತಿವೆ.
ದೇಶೀಯ ಸರಕು ಸಾಗಿಸುವ ವಿಮಾನಯಾನ ನಿರ್ವಾಹಕರಾದ ಬ್ಲೂ ಡಾರ್ಟ್, ಸ್ಪೈಸ್ ಜೆಟ್ ಮತ್ತು ಇಂಡಿಗೊ ವಾಣಿಜ್ಯ ಆಧಾರದ ಮೇಲೆ ಕಾರ್ಗೊ ವಿಮಾನಗಳ ಹಾರಾಟ ನಿರ್ವಹಿಸುತ್ತಿವೆ. ಸ್ಪೈಸ್ ಜೆಟ್ 7,12,323 ಕಿ. ಮೀ. ದೂರವನ್ನು ಮತ್ತು 3695 ಟನ್ ಗಳಷ್ಟು ಸರಕುಗಳನ್ನು 447 ಕಾರ್ಗೊ ವಿಮಾನಗಳ ಮೂಲಕ 24 ಮಾರ್ಚ್ ರಿಂದ 21 ಏಪ್ರಿಲ್ 2020 ರ ನಡುವೆ ಸಾಗಾಟ ನಡೆಸಿತು. ಇವುಗಳಲ್ಲಿ 154 ವಿದೇಶೀ ಕಾರ್ಗೊ ವಿಮಾನಗಳಾಗಿವೆ. ಬ್ಲೂ ಡಾರ್ಟ್ 1,58,684 ಕಿ. ಮೀ. ದೂರವನ್ನು ಮತ್ತು 2573 ಟನ್ ಗಳಷ್ಟು ಸರಕುಗಳನ್ನು 160 ದೇಶೀಯ ಕಾರ್ಗೊ ವಿಮಾನಗಳ ಮೂಲಕ, 25 ಮಾರ್ಚ್ ರಿಂದ 21 ಏಪ್ರಿಲ್ 2020 ರ ನಡುವೆ ಸಾಗಾಟ ನಡೆಸಿತು. ಇಂಡಿಗೊ 42,752 ಕಿ. ಮೀ. ದೂರವನ್ನು ಮತ್ತು 84 ಟನ್ ಗಳಷ್ಟು ಸರಕುಗಳನ್ನು 35 ಕಾರ್ಗೊ ವಿಮಾನಗಳ ಮೂಲಕ 3 ರಿಂದ 21 ಏಪ್ರಿಲ್ 2020 ರ ನಡುವೆ ಸಾಗಾಟ ನಡೆಸಿತು. ಇದರಲ್ಲಿ 6 ಅಂತಾರಾಷ್ಟ್ರೀಯ ವಿಮಾನಗಳೂ ಕಾರ್ಯನಿರ್ವಹಿಸಿವೆ. ಇದರಲ್ಲಿ ಸರ್ಕಾರಕ್ಕಾಗಿ ಉಚಿತವಾಗಿ ಸಾಗಿಸಲಾದ ವೈದ್ಯಕೀಯ ಸಾಮಗ್ರಿಗಳೂ ಒಳಗೊಂಡಿವೆ.
ಅಂತಾರಾಷ್ಟ್ರೀಯ ವಲಯ –
ಔಷಧಿಗಳು, ವೈದ್ಯಕೀಯ ಉಪಕರಣಗಳು ಮತ್ತು ಕೊವಿಡ್ – 19 ಪರಿಹಾರ ಸಾಮಗ್ರಿಗಳ ಸಾಗಣೆಗೆ ಪೂರ್ವ ಏಷ್ಯಾದೊಂದಿಗೆ ಸಾಗಾಣೆಯ ಏರ್ ಬ್ರಿಡ್ಜ್ ಅನ್ನು ಸ್ಥಾಪಿಸಲಾಗಿದೆ. ತರಲಾದ ದಿನಾಂಕವಾರು ವೈದ್ಯಕೀಯ ಸರಕು ಪ್ರಮಾಣ ಕೆಳಗಿನಂತಿದೆ:
ಕ್ರಮ ಸಂಖ್ಯೆ
|
ದಿನಾಂಕ
|
ಇಂದ
|
ಪ್ರಮಣ (ಟನ್ ಗಳಲ್ಲಿ)
|
1
|
04.4.2020
|
ಶಾಂಘೈ
|
21
|
2
|
07.4.2020
|
ಹಾಂಕ್ ಕಾಂಗ್
|
06
|
3
|
09.4.2020
|
ಶಾಂಘೈ
|
22
|
4
|
10.4.2020
|
ಶಾಂಘೈ
|
18
|
5
|
11.4.2020
|
ಶಾಂಘೈ
|
18
|
6
|
12.4.2020
|
ಶಾಂಘೈ
|
24
|
7
|
14.4.2020
|
ಹಾಂಕ್ ಕಾಂಗ್
|
11
|
8
|
14.4.2020
|
ಶಾಂಘೈ
|
22
|
9
|
16.4.2020
|
ಶಾಂಘೈ
|
22
|
10
|
16.4.2020
|
ಹಾಂಕ್ ಕಾಂಗ್
|
17
|
11
|
16.4.2020
|
ಸಿಯೋಲ್
|
05
|
12
|
17.4.2020
|
ಶಾಂಘೈ
|
21
|
13
|
18.4.2020
|
ಶಾಂಘೈ
|
17
|
14
|
18.4.2020
|
ಸಿಯೋಲ್
|
14
|
15
|
18.4.2020
|
ಗ್ವಾಂಗ್ ಝು
|
04
|
16
|
19.4.2020
|
ಶಾಂಘೈ
|
19
|
17
|
20.4.2020
|
ಶಾಂಘೈ
|
26
|
18
|
21.4.2020
|
ಶಾಂಘೈ
|
19
|
19
|
21.4.2020
|
ಹಾಂಕ್ ಕಾಂಗ್
|
16
|
|
|
Total
|
322
|
ಉಡಾನ್ ಯೋಜನೆಯಡಿಯಲ್ಲಿ, ಏಪ್ರಿಲ್ 15, 2020 ರಂದು ಏರ್ ಇಂಡಿಯಾ ಎರಡನೆಯ ಹಾರಾಟವನ್ನು, ಮುಂಬೈ ಮತ್ತು ಫ್ರಾಂಕ್ ಫರ್ಟ್ ನಡುವೆ ನಡೆಸಿತು. 27 ಟನ್ ಗಳಷ್ಟು ಹಣ್ಣು ಮತ್ತು ತರಕಾರಿಗಳನ್ನು ಲಂಡನ್ ಗೆ ಸಾಗಿಸಿ, ಅಲ್ಲಿಂದ 10 ಟನ್ ಗಳಷ್ಟು ಸಾಮಾನ್ಯ ಸರಕುಗಳೊಂದಿಗೆ ಮರಳಿ ಬಂತು. ಕೃಷಿ ಉಡಾನ್ ಯೋಜನೆಯಡಿಯಲ್ಲಿ, ಏಪ್ರಿಲ್ 13, 2020 ರಂದು ಏರ್ ಇಂಡಿಯಾ ತನ್ನ ಮೊದಲ ಹಾರಾಟವನ್ನು, ಮುಂಬೈನಿಂದ ಲಂಡನ್ ಗೆ ನಡೆಸಿತು. 28.95ಟನ್ ಗಳಷ್ಟು ಆಯಾ ಋತುಮಾನದಲ್ಲಿ ಬೆಳೆಯುವ ಹಣ್ಣು ಮತ್ತು ತರಕಾರಿಗಳನ್ನು ಫ್ರಾಂಕ್ ಫರ್ಟ್ ಗೆ ಕೊಂಡೊಯ್ದು ಅಲ್ಲಿಂದ 15.6 ಟನ್ ಗಳಷ್ಟು ಸಾಮಾನ್ಯ ಸರಕುಗಳೊಂದಿಗೆ ಮರಳಿ ಬಂತು.
ಅವಶ್ಯಕತೆಗೆ ಅನುಸಾರ ತುರ್ತು ವೈದ್ಯಕೀಯ ಸಾಮಗ್ರಿಗಳನ್ನು ಇತರ ದೇಶಗಳಿಗೆ ಸರಬರಾಜು ಮಾಡಲು ಏರ್ ಇಂಡಿಯಾ ಸಮರ್ಪಿತ ವೇಳಾಪಟ್ಟಿಯ ಕಾರ್ಗೊ ವಿಮಾನಗಳ ಹಾರಾಟ ನಡೆಸಲಿದೆ. ಏಪ್ರಿಲ್ 15, 2020 ರಂದು ಏರ್ ಇಂಡಿಯಾ ಇಂಥ ಮೊದಲ ವಿಮಾನವನ್ನು ದೆಹಲಿ-ಸೆಚೆಲೆಸ್- ಮಾರಿಶಿಯಸ್-ದೆಹಲಿ ನಡುವೆ ಹಾರಾಟ ನಡೆಸಿತು.ಇದರಲ್ಲಿ ಸೆಚೆಲೆಸ್ ಗೆ 3.4 ಟನ್ ಮತ್ತು ಮಾರಿಶಿಯಸ್ ಗೆ 12.6 ಟನ್ ವೈದ್ಯಕೀಯ ಸರಕು ಸಾಗಿಸಲಾಯಿತು.
***
(Release ID: 1617555)