ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ
ಕೊವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು, ದೇಶದೆಲ್ಲೆಡೆ ರಾಸಾಯನಿಕಗಳು, ರಸಗೊಬ್ಬರಗಳು ಮತ್ತು ಔಷಧಿಗಳು ಲಭ್ಯವಾಗಲು ಎಲ್ಲ ಸುಧಾರಣೆಗಳು ಮತ್ತು ಪ್ರಯತ್ನಗಳನ್ನು ಮಾಡಲಾಗುತ್ತಿದೆ: ಸದಾನಂದ ಗೌಡ
Posted On:
21 APR 2020 7:08PM by PIB Bengaluru
ಕೊವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು, ದೇಶದೆಲ್ಲೆಡೆ ರಾಸಾಯನಿಕಗಳು, ರಸಗೊಬ್ಬರಗಳು ಮತ್ತು ಔಷಧಿಗಳು ಲಭ್ಯವಾಗಲು ಎಲ್ಲ ಸುಧಾರಣೆಗಳು ಮತ್ತು ಪ್ರಯತ್ನಗಳನ್ನು ಮಾಡಲಾಗುತ್ತಿದೆ: ಸದಾನಂದ ಗೌಡ
ಸಾಂಕ್ರಾಮಿಕ ರೋಗ ಕೊವಿಡ್-19 ರಿಂದ ಉದ್ಭವಿಸುತ್ತಿರುವ ಸವಾಲುಗಳನ್ನು ಎದುರಿಸಲು ತಮ್ಮ ಸಚಿವಾಲಯ ಸಾಕಷ್ಟು ಔಷಧಿಗಳು, ರಸಗೊಬ್ಬರಗಳು ಮತ್ತು ಕ್ರಿಮಿನಾಶಕ ರಾಸಾಯನಿಕಗಳ ಸಮರ್ಪಕ ಪೂರೈಕೆಯನ್ನು ಖಚಿತಪಡಿಸಲು ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವರಾದ ಶ್ರೀ ಡಿವಿ ಸದಾನಂದ ಗೌಡ ಅವರು ಹೇಳಿದ್ದಾರೆ.
ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಮತ್ತು ರೈತರಿಗೆ ರಸಗೊಬ್ಬರಗಳು, ಸಾರ್ವಜನಿಕರಿಗೆ ಔಷಧಿಗಳು ಮತ್ತು ಆರೋಗ್ಯ ಸೇವೆಗಳು ಮತ್ತು ಕ್ರಿಮಿನಾಶಕ ರಾಸಾಯನಿಕಗಳ ಸಮರ್ಪಕ ಲಭ್ಯತೆಯನ್ನು ಖಚಿತಪಡಿಸುವ ಕಾರ್ಯತಂತ್ರಗಳನ್ನು ರೂಪಿಸಲು, ತಮ್ಮ ಸಚಿವಾಲಯದಡಿಯಲ್ಲಿ ಬರುವ ರಸಗೊಬ್ಬರಗಳ ಇಲಾಖೆ, ಔಷಧಿ ಇಲಾಖೆ ಮತ್ತು ರಾಸಾಯನಿಕ ಹಾಗೂ ಪೆಟ್ರೊಕೆಮಿಕಲ್ಸ್ ಇಲಾಖೆಯ ಕಾರದಯದರ್ಶಿಗಳು ಮತ್ತು ಇತರ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿರುವುದಾಗಿ ಶ್ರೀ ಗೌಡಾ ಅವರು ತಮ್ಮ ಟ್ವೀಟ್ ಸಂದೇಶದಲ್ಲಿ ತಿಳಿಸಿದ್ದಾರೆ.
ಸಭೆಯಲ್ಲಿ ಮಾತನಾಡಿದ ಶ್ರೀ ಗೌಡ ಅವರು, ಅವಶ್ಯಕ ಸಾಮಗ್ರಿಗಳು ಯಾವುದೇ ಅಡೆತಡೆಇಲ್ಲದೇ ಸರಬರಾಜಾಗಲು, ಅಧಿಕಾರಿಗಳು ತಮ್ಮೊಳಗೆ ಮತ್ತು ಸಂಬಂಧಪಟ್ಟ ಸಚಿವಾಲಯಗಳ ಜೊತೆ ಸಂಪೂರ್ಣ ಸಮನ್ವಯತೆ ಸಾಧಿಸಬೇಕು ಎಂದು ಹೇಳಿದರು.
ಇತ್ತೀಚೆಗೆ, ರಾಸಾಯನಿಕಗಳು ಮತ್ತು ರಸಗೊಬ್ಬರಗಳ ರಾಜ್ಯ ಸಚಿವರಾದ ಶ್ರೀ ಮನ್ಸುಖ್ ಮಾನ್ಡವಿಯಾ ಅವರೂ ಸಹ ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಇಲಾಖೆಯ ಅಧಿಕಾರಿಗಳೊಂದಿಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಚರ್ಚಿಸಿದರು. ಕೊವಿಡ್-19 ಸಾಂಕ್ರಾಮಿಕ ರೋಗದ ಬಿಕ್ಕಟ್ಟಿನ ಸಮಯದಲ್ಲಿ ರಾಸಾಯನಿಕಗಳು ಮತ್ತು ಪೆಟ್ರೊಕೆಮಿಕಲ್ಸ್ ಉದ್ಯಮಗಳ ಸಮಸ್ಯೆಗಳನ್ನು ಬಗೆಹರಿಸುವ ಕುರಿತು ಈ ಸಭೆಯನ್ನು ಕರೆಯಲಾಗಿತ್ತು. ಭಾರತ “ಇಡೀ ವಿಶ್ವ ಒಂದು ಕುಟುಂಬವಿದ್ದಂತೆ ಎಂಬುದನ್ನು ನಿಜವಾಗಿಯೂ ನಂಬುತ್ತದೆ ಮತ್ತು ಭ್ರಾತೃತ್ವದ ಕಲ್ಪನೆಗೆ ಸಾಕಾರ ನೀಡುತ್ತದೆ” ಎಂದು ಶ್ರೀ ಮಾನ್ಡವಿಯಾ ತಮ್ಮ ಟ್ವೀಟ್ ಮಾಡಿದ್ದಾರೆ
ಮುಂಬರುವ ಮುಂಗಾರು ಹಂಗಾಮಿನಲ್ಲಿ ರೈತರಿಗೆ ಸಾಕಷ್ಟು ಪ್ರಮಾಣದ ರಸಗೊಬ್ಬರಗಳನ್ನು ಪೂರೈಸಲು ರಸಗೊಬ್ಬರ ಕಂಪೆನಿಗಳು ಈಗಾಗಲೇ ತಮ್ಮ ಸಂಪೂರ್ಣ ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸುತ್ತಿವೆ ಎಂದು ಸಚಿವಾಲಯ ತಿಳಿಸಿದೆ. ಹೈಡ್ರೊಕ್ಸಿಕ್ಲೋರೋಕ್ವಿನ್ ಸೇರಿದಂತೆ ಎಲ್ಲ ಅವಶ್ಯಕ ಔಷಧಿಗಳನ್ನು ಸಾಕಷ್ಟು ಪ್ರಮಾಣದಲ್ಲಿ ಉತ್ಪಾದಿಸಲು ಔಷಧಿ ಕ್ಷೇತ್ರವೂ ಸಹ ತನ್ನ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ವಿಶ್ವದಲ್ಲಿ, ಹೈಡ್ರೊಕ್ಸಿಕ್ಲೋರೋಕ್ವಿನ್ ಅನ್ನು ಬೃಹತ್ ಪ್ರಮಾಣದಲ್ಲಿ ಉತ್ಪಾದಿಸುವ ರಾಷ್ಟ್ರಗಳಲ್ಲಿ ಭಾರತವೂ ಒಂದಾಗಿದ್ದು, ಸ್ಥಳಿಯ ಬೇಡಿಕೆಯನ್ನು ಪೂರೈಸುವುದರ ಜೊತೆಗೆ ಹೆಚ್ಚುವರಿ ಔಷಧಿಯನ್ನು ವಿದೇಶಗಳಿಗೆ ರಫ್ತು ಮಾಡುತ್ತಿದೆ. ಸೋಂಕು ನಿವಾರಕ್ಕಾಗಿ ಬಳಸುವ ಅಗತ್ಯ ರಾಸಾಯನಿಕಗಳ ಉತ್ಪಾದನೆ ಮತ್ತು ಸರಬರಾಜು ಸಹ ಸಮರ್ಪಕವಾಗಿವೆ.
***
(Release ID: 1617187)
Visitor Counter : 251