ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಯಾವುದೇ ಸಚಿವಾಲಯಗಳನ್ನು ಮುಚ್ಚಲು ಸರ್ಕಾರ ಆದೇಶಿಸಿಲ್ಲ, ಅದನ್ನು ಸುಳ್ಳು ಸುದ್ದಿ ಎಂದ ಪಿಐಬಿ ಫ್ಯಾಕ್ಟ್ ಚೆಕ್ ತಂಡ
Posted On:
21 APR 2020 9:28PM by PIB Bengaluru
ಯಾವುದೇ ಸಚಿವಾಲಯಗಳನ್ನು ಮುಚ್ಚಲು ಸರ್ಕಾರ ಆದೇಶಿಸಿಲ್ಲ, ಅದನ್ನು ಸುಳ್ಳು ಸುದ್ದಿ ಎಂದ ಪಿಐಬಿ ಫ್ಯಾಕ್ಟ್ ಚೆಕ್ ತಂಡ
‘ಸೆ ನಮಸ್ತೆ’ ಎನ್ನುವ ಯಾವುದೇ ಹೆಸರಿನ ವಿಡಿಯೋ ಕಾನ್ಫರೆನ್ಸಿಂಗ್ ಆಪ್ ಗೆ ಸರ್ಕಾರದಿಂದ ಅನುಮೋದನೆ ನೀಡಿಲ್ಲ / ಆರಂಭಿಸಿಲ್ಲ
ಸುಳ್ಳು ಸುದ್ದಿ ವಿರುದ್ಧ ನಿರಂತರ ಅಭಿಯಾನ ಕೈಗೊಂಡಿರುವ ಪಿಐಬಿ ಫ್ಯಾಕ್ಟ್ ಚೆಕ್ ತಂಡ ಇಂದು ನಾನಾ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದ ಹಲವು ಸುಳ್ಳು ಸುದ್ದಿಗಳನ್ನು ಪತ್ತೆಹಚ್ಚಿದೆ.
ಪ್ರಮುಖ ವೆಬ್ ಸುದ್ದಿಜಾಲವೊಂದರಲ್ಲಿ ಭಾರತ ಸರ್ಕಾರ ಬೀಟಾ ಆವತ್ತಿಯ ‘ಸೇ ನಮಸ್ತೆ’ ಎನ್ನುವ ಹೆಸರಿನ ವಿಡಿಯೋ ಕಾನ್ಫರೆನ್ಸಿಂಗ್ ಆಪ್ ಒಂದನ್ನು ಆರಂಭಿಸಿದೆ ಮತ್ತು ಸದ್ಯದಲ್ಲೇ ಅದು ಬಿಡುಗಡೆಯಾಗಲಿದೆ ಎಂಬ ಸುದ್ದಿ ಅಪ್ ಲೋಡ್ ಆಗಿತ್ತು. ಪಿಐಬಿ ಫ್ಯಾಕ್ಟ್ ಚೆಕ್ ತಂಡ ಅದನ್ನು ಪರಿಶೀಲಿಸಿ, ಸರ್ಕಾರ ಆ ರೀತಿಯಾದ ಆಪ್ ಅನ್ನು ಆರಂಭಿಸಿಲ್ಲ ಮತ್ತು ಅಂತಹುದಕ್ಕೆ ಅನುಮೋದನೆಯನ್ನೂ ಸಹ ನೀಡಿಲ್ಲ ಎಂದು ಸ್ಪಷ್ಟಪಡಿಸಿದೆ. ಇದರ ಉದ್ದೇಶ ಜನರು ಭಾರತ ಸರ್ಕಾರದ ಅನುಮೋದನೆ ದೊರೆತಿದೆ ಎಂಬ ಭಾವನೆಯಲ್ಲಿ ಅಂತಹ ಆಪ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳಬಾರದು ಎಂಬುದಾಗಿದೆ.
https://twitter.com/PIBFactCheck/status/1252603481136877568?s=20
ಹಿಂದಿನ ಪೋಸ್ಟ್ ನಂತೆ ಇಲ್ಲೂ ಸಹ ಪುನರುಚ್ಛರಿಸಿರುವ ಫ್ಯಾಕ್ಟ್ ಚೆಕ್ ತಂಡ, ಲಾಕ್ ಡೌನ್ ಸಂದರ್ಭದಲ್ಲಿ ರೈಲ್ವೆ ಸಚಿವಾಲಯ ತನ್ನ ಸಿಬ್ಬಂದಿಯ ವೇತನ ಮತ್ತು ಪಿಂಚಣಿಯನ್ನು ಕಡಿತಗೊಳಿಸಲಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಸುದ್ದಿ ಸುಳ್ಳಿನಿಂದ ಕೂಡಿದೆ ಎಂದು ಹೇಳಿದೆ. ಪಿಐಬಿ ಫ್ಯಾಕ್ಟ್ ಚೆಕ್ ತಂಡ, ಆ ಸುದ್ದಿ ಸುಳ್ಳಿನಿಂದ ಕೂಡಿದ್ದು, ಸಚಿವಾಲಯದಿಂದ ಅಂತಹ ಯಾವುದೇ ಕಡಿತ ಕುರಿತು ಪರಿಶೀಲನೆ ನಡೆಸುತ್ತಿಲ್ಲಿ ಎಂದು ಪುನರುಚ್ಛರಿಸಿದೆ.
https://twitter.com/PIBFactCheck/status/1252541165083127813?s=20
ಸಾಮಾಜಿಕ ಮಾಧ್ಯಮದಲ್ಲಿ ಕೆಲವು ಸುದ್ದಿವಾಹಿನಿಗಳು ಭಾರತ ಸರ್ಕಾರ, ಎಲ್ಲ ಸಚಿವಾಲಯಗಳನ್ನು ಬಂದ್ ಮಾಡಲು ನಿರ್ದೇಶನ ನೀಡಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಸರ್ಕಾರದಿಂದ ಅಂತಹ ಯಾವುದೇ ನಿರ್ದೇಶನ ನೀಡಿಲ್ಲ. ಅಂತಹ ಸುದ್ದಿಯನ್ನು ಬಿತ್ತರಿಸಿದ ವಾಹಿನಿಗೆ ಸರಿಯಾದ ಮಾಹಿತಿ ನೀಡಲಾಗಿದೆ ಮತ್ತು ಆ ಚಾನಲ್ ಜವಾಬ್ದಾರಿಯುತವಾಗಿ ಆ ಸುದ್ದಿಯನ್ನು ಸರಿಪಡಿಸಿದೆ.
https://twitter.com/PIBFactCheck/status/1252468471029395456?s=20
ಪಿಐಬಿಯ ಪ್ರಾದೇಶಿಕ ವಿಭಾಗಗಳೂ ಸಹ ರಾಜ್ಯ ಮಟ್ಟದಲ್ಲಿ ಸುಳ್ಳು ಸುದ್ದಿಗಳನ್ನು ಎದುರಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಿವೆ. ಹಿಮಾಚಲಪ್ರದೇಶದ ಪ್ರಮುಖ ನ್ಯೂಸ್ ಪೋರ್ಟಲ್ ವೊಂದು ಪಂಜಾಬಿನ ಹಾಲು ಮಾರುವ ಸಮುದಾಯದವರನ್ನು ಹಿಮಾಚಲಪ್ರದೇಶದ ಪ್ರವೇಶಕ್ಕೆ ಅವಕಾಶ ನೀಡುತ್ತಿಲ್ಲ ಎಂದು ಸುದ್ದಿ ಪ್ರಕಟಿಸಿತ್ತು. ಅದಕ್ಕಾಗಿ ಆ ಸುದ್ದಿ ಸುಳ್ಳು ಎಂದು ಉನಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರ ಪತ್ರದ ಸಮೇತ ವಿಷಯವನ್ನು ಶಿಮ್ಲಾದ ಪಿಐಬಿ ಘಟಕ ಟ್ವೀಟ್ ನಲ್ಲಿ ಪ್ರಕಟಿಸಿದೆ.
https://twitter.com/PIBShimla/status/1252191586567372801?s=20
ಲಾಕ್ ಡೌನ್ ಸಂದರ್ಭದಲ್ಲಿ ಆಹಾರ ಕೊರತೆಯಿಂದಾಗಿ ಬಿಹಾರದ ಜೆಹನಾಬಾದ್ ನಲ್ಲಿ ಮಕ್ಕಳು ಕಪ್ಪೆಗಳನ್ನು ತಿನ್ನುತ್ತಿದ್ದಾರೆ ಎನ್ನುವ ದುರುದ್ದೇಶ ಪೂರಕ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದುದನ್ನು ಪಿಐಬಿ ಫ್ಯಾಕ್ಟ್ ಚೆಕ್ ತಂಡ ಪರಿಶೀಲಿಸಿ ಭೇದಿಸಿದೆ. ಜಿಲ್ಲಾ ಆಡಳಿತದಿಂದ ನಡೆಸಿದ ತನಿಖೆಯಲ್ಲಿ ಕಂಡುಬಂದಿರುವ ಅಂಶವೆಂದರೆ ಆ ಕುಟುಂಬದ ಮಕ್ಕಳಿಗೆ ಮನೆಯಲ್ಲಿ ಸಾಕಷ್ಟು ಆಹಾರ ಇತ್ತು ಎಂಬುದು.
https://twitter.com/PIBFactCheck/status/1252169585832255488?s=20
ಅದೇ ರೀತಿ ಅರುಣಾಚಲ ಪ್ರದೇಶದಲ್ಲಿ ಜನರು ಆಹಾರದ ಕೊರತೆಯಿಂದಾಗಿ ಹಾವುಗಳನ್ನು ತಿನ್ನುತ್ತಿದ್ದಾರೆ ಎಂಬು ವಿಡಿಯೋ ಹರಿದಾಡುತ್ತಿತ್ತು. ಪಿಐಬಿಯ ಗುವಾಹತಿಯ ಪ್ರಾದೇಶಿಕ ವಿಭಾಗ, ರಾಜ್ಯದಲ್ಲಿ ಮುಂದಿನ ಮೂರು ತಿಂಗಳಿಗೆ ಸಾಕಾಗುವಷ್ಟು ಆಹಾರಧಾನ್ಯವಿದೆ ಮತ್ತು ಆ ಸುದ್ದಿ ಸುಳ್ಳಿನಿಂದ ಕೂಡಿದೆ ಎಂದು ರಾಜ್ಯ ಸರ್ಕಾರವನ್ನು ಉಲ್ಲೇಖಿಸಿ ಸ್ಪಷ್ಟನೆ ನೀಡಿದೆ. ರಾಜ್ಯದಲ್ಲಿ ನಿರಂತರ ಆಹಾರ ಪೂರೈಕೆಗೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದೂ ಸಹ ಅದು ಹೇಳಿದೆ.
https://twitter.com/PIB_Guwahati/status/1252570210382602240?s=20
ಹಿನ್ನೆಲೆ :
ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಹರಿದಾಡುವುದನ್ನು ಪರಿಶೀಲಿಸಲು ಮತ್ತು ಸುಪ್ರೀಂಕೋರ್ಟ್ ನ ಅಭಿಪ್ರಾಯಗಳ ಹಿನ್ನೆಲೆಯಲ್ಲಿ ಪಿಐಬಿ, ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುವ ವದಂತಿಗಳನ್ನು ತೊಡೆದುಹಾಕಲು ವಿಶೇಷ ಘಟಕವನ್ನು ರಚಿಸಿದೆ. ‘ಪಿಐಬಿ ಫ್ಯಾಕ್ಟ್ ಚೆಕ್’ ತಂಡ ಟ್ವಿಟರ್ ಹಾಗೂ ಎಲ್ಲ ಸಾಮಾಜಿಕ ಮಾಧ್ಯಮಗಳಲ್ಲಿ ನಿರಂತರ ನಿಗಾವಹಿಸಿ, ಯಾವ ಸಂದೇಶಗಳು ಟ್ರೆಂಡಿಂಗ್ ನಲ್ಲಿವೆಯೋ ಅವುಗಳಲ್ಲಿ ಸುಳ್ಳು ಸುದ್ದಿಗಳು ಯಾವುದು ಎಂಬುದರ ಬಗ್ಗೆ ಸಮಗ್ರ ಪರಿಶೀಲನೆಯನ್ನು ನಡೆಸುವ ಕಾರ್ಯದಲ್ಲಿ ತೊಡಗಿದೆ. ಪಿಐಬಿ_ಇಂಡಿಯಾ ಅಲ್ಲದೆ, ಪಿಐಬಿಯ ಪ್ರಾದೇಶಿಕ ಘಟಕಗಳು ನಿರ್ವಹಿಸುತ್ತಿರುವ ಟ್ವಿಟರ್ ಗಳಲ್ಲಿ ಅಧಿಕೃತ ಮತ್ತು ಖಚಿತ ಸುದ್ದಿಯ ವಿವರಗಳನ್ನು ಮಾತ್ರ #PIBFactCheck ಹೆಸರಿನಲ್ಲಿ ಟ್ವಿಟರ್ ಸಮುದಾಯದ ಒಟ್ಟಾರೆ ಅನುಕೂಲಕ್ಕಾಗಿ ಪ್ರಕಟಿಸಲಾಗುತ್ತಿದೆ.
ಆಡಿಯೋ, ವಿಡಿಯೋ, ಪಠ್ಯ ಸೇರಿದಂತೆ ಯಾವುದೇ ಬಗೆಯ ಸಾಮಾಜಿಕ ಮಾಧ್ಯಮ ಸಂದೇಶಗಳನ್ನು ಯಾವುದೇ ವ್ಯಕ್ತಿ ಅದರ ಸತ್ಯಾಸತ್ಯತೆ ಮತ್ತು ಖಚಿತತೆ ಸಾಬೀತುಪಡಿಸಿಕೊಳ್ಳಲು ಪಿಐಬಿ ಫ್ಯಾಕ್ಟ್ ಚೆಕ್ ಗೆ ಸಲ್ಲಿಕೆ ಮಾಡಬಹುದು. ಅಲ್ಲದೆ ಆನ್ ಲೈನ್ ಪೋರ್ಟಲ್ ನಲ್ಲೂ https://factcheck.pib.gov.in/ ಈ ಬಗ್ಗೆ ಸಲ್ಲಿಸಬಹುದಾಗಿದೆ ಅಥವಾ ವಾಟ್ಸ್ ಅಪ್ ಸಂಖ್ಯೆ +918799711259 ಅಥವಾ ಇ-ಮೇಲ್: pibfactcheck[at]gmail[dot]com. ಗೂ ಕಳಿಸಬಹುದು. ಅದರ ವಿವರಗಳು ಪಿಐಬಿಯ ವೆಬ್ ಸೈಟ್ ನಲ್ಲೂ https://pib.gov.in ಲಭ್ಯ.
***
(Release ID: 1617178)
Visitor Counter : 291
Read this release in:
English
,
Urdu
,
Marathi
,
Hindi
,
Bengali
,
Manipuri
,
Assamese
,
Punjabi
,
Gujarati
,
Tamil
,
Telugu