ರೈಲ್ವೇ ಸಚಿವಾಲಯ

ಕೋವಿಡ್ ಕರ್ತವ್ಯದಲ್ಲಿರುವ ದೆಹಲಿ ಪೊಲೀಸ್ ಸಿಬ್ಬಂದಿಗೆ ದಿನಕ್ಕೆ ಹತ್ತು ಸಾವಿರ ಕುಡಿಯುವ ನೀರಿನ ಬಾಟಲ್ ಗಳನ್ನು ಒದಗಿಸಲು ರೈಲ್ವೆ ವ್ಯವಸ್ಥೆ ಮಾಡಿದೆ

Posted On: 21 APR 2020 3:31PM by PIB Bengaluru

ಕೋವಿಡ್ ಕರ್ತವ್ಯದಲ್ಲಿರುವ ದೆಹಲಿ ಪೊಲೀಸ್ ಸಿಬ್ಬಂದಿಗೆ ದಿನಕ್ಕೆ ಹತ್ತು ಸಾವಿರ ಕುಡಿಯುವ ನೀರಿನ ಬಾಟಲ್ ಗಳನ್ನು ಒದಗಿಸಲು ರೈಲ್ವೆ ವ್ಯವಸ್ಥೆ ಮಾಡಿದೆ

ಬೇಸಿಗೆಯಲ್ಲಿ ಉಷ್ಣತೆಯು ಹೆಚ್ಚಾದಂತೆ, ಭಾರತೀಯ ರೈಲ್ವೆಯು ತನ್ನ ಸಂಸ್ಥೆ ಐಆರ್ಸಿಟಿಸಿಯ ಸಹಾಯದಿಂದ ರಸ್ತೆ ನಾಕಾಬಂದಿಯಲ್ಲಿ ಮತ್ತು ಇತರ ಸ್ಥಳಗಳಲ್ಲಿ ಕೋವಿಡ್ ವಿರುದ್ಧದ ಹೋರಾಟದಲ್ಲಿ ಕಾರ್ಯ ನಿರ್ವಹಿಸಿರುವ ಪೊಲೀಸರಿಗೆ ರೈಲ್ ನೀರ್ ನೀರಿನ ಬಾಟಲಿಗಳನ್ನು ಒದಗಿಸಲು ಪ್ರಾರಂಭಿಸಿದೆ

ಇಲ್ಲಿಯವರೆಗೆ ಐವತ್ತು ಸಾವಿರ ಕ್ಕೂ ಹೆಚ್ಚು ಬಾಟಲಿಗಳನ್ನು ವಿತರಿಸಲಾಗಿದೆ; ಮೇ 3 ರವರೆಗೆ ಮುಂದುವರಿಸಲು ವ್ಯವಸ್ಥೆ ಮಾಡಲಾಗಿದೆ

 

ಭಾರತೀಯ ರೈಲ್ವೆ ಸಂಸ್ಥೆಗಳಾದ ಐಆರ್ಸಿಟಿಸಿ, ಆರ್ಪಿಎಫ್, ವಲಯ ರೈಲ್ವೆ ಮತ್ತು ಇತರರ ಸಹಾಯದಿಂದ ಕೋವಿಡ್ ವಿರುದ್ಧದ ಹೋರಾಟದ ರೈಲ್ವೆಯ ಬದ್ಧತೆಯಂತೆ ದಣಿವರಿಯಿಲ್ಲದೆ ಕೆಲಸ ಮಾಡಿದೆ.

ಕೋವಿಡ್-19 ವಿರುದ್ಧದ ಯುದ್ಧದಲ್ಲಿ ಬೀದಿಗಿಳಿದಿದ್ದ ದೆಹಲಿ ಪೊಲೀಸ್ ಸಿಬ್ಬಂದಿಗೆ ಇತ್ತೀಚೆಗೆ ದಿನಕ್ಕೆ ಹತ್ತು ಸಾವಿರ ಕುಡಿಯವ ನೀರಿನ ಬಾಟಲಿಗಳನ್ನು ನೀಡಲು ಪ್ರಾರಂಭಿಸಿದೆ. ಇಲ್ಲಿಯವರೆಗೆ ಐವತ್ತು ಸಾವಿರ ಕುಡಿಯುವ ನೀರಿನ ಬಾಟಲಿಗಳನ್ನು ವಿತರಿಸಲಾಗಿದೆ.

ಬೇಸಿಗೆಯ ಬಿರುಬಿಸಿಲನ್ನು ಮತ್ತು ಕಠಿಣ ಪರಿಸ್ಥಿತಿಗಳನ್ನು ಎದುರಿಸಿ, ಪೊಲೀಸ್ ಸಿಬ್ಬಂಧಿಯವರು ಹಗಲೂ ರಾತ್ರಿ ಕೆಲಸ ಮಾಡುತ್ತಿದ್ದಾರೆ, ಅಗತ್ಯವಿರುವಂತೆ ಲಾಕ್ ಡೌನ್ ಅನ್ನು ಕಾರ್ಯಗತಗೊಳಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳುವುದು ಮಾತ್ರವಲ್ಲದೆ ಸವಾಲಿನ ಸಂದರ್ಭಗಳಲ್ಲಿ ವಿವಿಧ ಸ್ಥಳಗಳಲ್ಲಿ ವೈದ್ಯರು ಮತ್ತು ಅರೆವೈದ್ಯರೊಂದಿಗೆ ಹೋಗುತ್ತಾರೆ.

ಪೊಲೀಸರಂತಹ ಮುಂಚೂಣಿ ಯೋಧರನ್ನು ಬೆಂಬಲಿಸುವುದು ದಣಿವರಿಯದ ಸಿಬ್ಬಂಧಿಗಳಿಗೆ ನೀಡುವ ಗೌರವದ ಸಂಕೇತವಾಗಿದೆ ಅದಲ್ಲದೆ ಕೋವಿಡ್ 19 ಅನ್ನು ಎದುರಿಸುವಲ್ಲಿ ದೇಶದ ಪ್ರಯತ್ನಗಳಿಗೆ ಪೂರಕವಾಗಿ ಭಾರತೀಯ ರೈಲ್ವೆಯ ಸ್ವಾಭಾವಿಕ ಪ್ರಯತ್ನಗಳಾಗಿದೆ .

ಉಪಕ್ರಮದಡಿಯಲ್ಲಿ ಭಾರತೀಯ ರೈಲ್ವೆಯು ತನ್ನ ಸಂಸ್ಥೆ ಐಆರ್ಸಿಟಿಸಿ ಸಹಾಯದಿಂದ ನವದೆಹಲಿಯಲ್ಲಿ ದಿನಕ್ಕೆ 10000 ರೈಲ್ ನೀರ್ ನೀರಿನ ಬಾಟಲಿಗಳನ್ನು 16.04.2020 ರಿಂದ ಉಚಿತವಾಗಿ ವಿತರಿಸಲು ಪ್ರಾರಂಭಿಸಿದೆ. ಹತ್ತು ಸಾವಿರ ರೈಲ್ ನೀರ್ ನೀರಿನ ಬಾಟಲಿಗಳು ತಲಾ ಒಂದು ಲೀಟರ್ ನದಾಗಿವೆ. ಅವುಗಳನ್ನು ನಂಗ್ಲೋಯಿಯಲ್ಲಿರುವ ರೈಲ್ ನೀರ್ ಸ್ಥಾವರದಿಂದ ತರಲಾಗುತ್ತದೆ. ಇಲ್ಲಿಯವರೆಗೆ ಐವತ್ತು ಸಾವಿರ ಕ್ಕೂ ಹೆಚ್ಚು ಬಾಟಲಿಗಳನ್ನು ವಿತರಿಸಲಾಗಿದೆ.

ಕೋವಿಡ್-19 ಕಾರಣದಿಂದಾಗಿ ಬೀಗ ಹಾಕಿದ ನಂತರ ಭಾರತೀಯ ರೈಲ್ವೆಯು ನಿಸ್ವಾರ್ಥದಿಂದ ಮತ್ತು ಸ್ವಯಂಪ್ರೇರಣೆಯಿಂದ ಅಗತ್ಯವಿರುವವರಿಗೆ ಬಿಸಿಯೂಟವನ್ನು ನೀಡುತ್ತಿದೆ ಎನ್ನುವುದನ್ನು ಗಮನಿಸಬಹುದು. ರೈಲ್ವೆಯ ಬೃಹತ್ ಬಿಸಯೂಟವನ್ನು ಕಾಗದದ ತಟ್ಟೆಗಳೊಂದಿಗೆ ಊಟಕ್ಕೆ ಮತ್ತು ಐಆರ್ಸಿಟಿಸಿ ಅಡಿಗೆಮನೆ, ಆರ್ಪಿಎಫ್ ಸಂಪನ್ಮೂಲಗಳು ಮತ್ತು ಸರ್ಕಾರೇತರ ಕೊಡುಗೆಗಳ ಮೂಲಕ ಭೋಜನಕ್ಕೆ ಆಹಾರ ಪ್ಯಾಕೆಟ್ಗಳನ್ನು ಒದಗಿಸುತ್ತಿದೆ. ಕೋವಿಡ್-19 ಕಾರಣದಿಂದಾಗಿ ಲಾಕ್ಡೌನ್ ಸಮಯದಲ್ಲಿ ಭಾರತೀಯ ರೈಲ್ವೆಯು ಉಚಿತ ಬಿಸಿಯೂಟದ ವಿತರಣೆಯು ನಿನ್ನೆ ಎರಡು ದಶಲಕ್ಷವನ್ನು ದಾಟಿದೆ.

***(Release ID: 1617043) Visitor Counter : 112