ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್-19 ಹೊಸಮಾಹಿತಿ

Posted On: 21 APR 2020 5:47PM by PIB Bengaluru

ಕೋವಿಡ್-19 ಹೊಸಮಾಹಿತಿ

 

ದೇಶದಲ್ಲಿ ಕೋವಿಡ್-19 ತಡೆಗಟ್ಟುವಿಕೆ, ಹತೋಟಿ ಮತ್ತು ನಿರ್ವಹಣೆಗೆ ರಾಜ್ಯ ಸರ್ಕಾರಗಳು/ ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಭಾರತ ಸರ್ಕಾರವು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ಇವುಗಳನ್ನು ನಿಯಮಿತವಾಗಿ ಉನ್ನತ ಮಟ್ಟದಲ್ಲಿ ಪರಿಶೀಲಿಸಲಾಗುತ್ತಿದೆ ಮತ್ತು ಮೇಲ್ವಿಚಾರಣೆ ಮಾಡಲಾಗುತ್ತಿದೆ.

ರಕ್ತ ಬ್ಯಾಂಕ್ಗಳಲ್ಲಿ ರಕ್ತದ ಸಮರ್ಪಕ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷ್ ವರ್ಧನ್ ಎಲ್ಲಾ ರಾಜ್ಯ/  ಕೇಂದ್ರಾಡಳಿತ ಪ್ರದೇಶಗಳ ಗಳ ಆರೋಗ್ಯ ಇಲಾಖೆಗಳಿಗೆ ಪತ್ರ ಬರೆದಿದ್ದಾರೆ. ವಿಶೇಷವಾಗಿ, ಥಲಸ್ಸೆಮಿಯಾ, ಸಿಕಲ್ ಸೆಲ್ ರಕ್ತಹೀನತೆ ಮತ್ತು ಹಿಮೋಫಿಲಿಯಾದಂತಹ ರಕ್ತದ ಕಾಯಿಲೆಗಳೊಂದಿಗೆ ನಿಯಮಿತವಾಗಿ ರಕ್ತ ವರ್ಗಾವಣೆಯ ಅಗತ್ಯವಿರುವ ಜನರಿಗೆ.  ಆನ್ಲೈನ್ ಪೋರ್ಟಲ್ 'ಇ-ರಕ್ತಕೋಶ್' ಅನ್ನು ಪ್ರತಿ ರಕ್ತ ಗುಂಪಿನ ಪ್ರಸ್ತುತ ಲಭ್ಯತೆಯ ನೈಜ-ಸಮಯದ ಸ್ಥಿತಿಯ ಮೇಲ್ವಿಚಾರಣೆಗೆ ಬಳಸಬೇಕಾಗುತ್ತದೆ ಎಂದು ಅವರು ಹೇಳಿದರು.  ಕೋವಿಡ್-19 ನಿರ್ವಹಣೆಯ ಸಹಯೋಗದ ವಿಧಾನದ ಭಾಗವಾಗಿ, ಭಾರತೀಯ ರೆಡ್ಕ್ರಾಸ್ ರಕ್ತ ಸೇವೆಗಳಿಗಾಗಿ ದೆಹಲಿಯಲ್ಲಿ 24X7 ನಿಯಂತ್ರಣ ಕೊಠಡಿಯನ್ನು ಪ್ರಾರಂಭಿಸಿದೆ. ಸಂಖ್ಯೆಗಳು: 011-23359379, 93199 82104, 93199 82105.

ಅಧಿಕಾರಯುಕ್ತ ಸಮಿತಿ - 4, ಇದನ್ನು ಆಗ್ಮೆಂಟ್ ಮಾನವ ಸಂಪನ್ಮೂಲ ಮತ್ತು ಸಾಮರ್ಥ್ಯ ವೃದ್ಧಿಗೆ ವಹಿಸಲಾಗಿದ್ದು ಇದು ಕೊರೊನಾ ಯೋದರ (ಕೊರೊನಾ ವಾರಿಯರ್ಸ್) ಡ್ಯಾಶ್ ಬೋರ್ಡನ್ನು ಅಭಿವೃದ್ಧಿಗೊಳಿಸಿದೆ. ಇದರಲ್ಲಿ   ಎಂಬಿಬಿಎಸ್ ವೈದ್ಯರು, ಆಯುಷ್ ವೈದ್ಯರು, ದಾದಿಯರು, ಆಶಾ ಅಂಗನವಾಡಿ ಕಾರ್ಮಿಕರು, ಪಿಎಂಕೆವಿವೈ, ಡಿಡಿಯು ಜಿಕೆವೈ, ಡೇ-ಎನ್‌ಯುಎಲ್‌ಎಂನಂತಹ ಭಾರತದ ವಿವಿಧ ಯೋಜನೆಗಳ ಅಡಿಯಲ್ಲಿ ತರಬೇತಿ ಪಡೆದ ಆರೋಗ್ಯ ಕಾರ್ಯಕರ್ತರು ಮತ್ತು ಎನ್‌ಸಿಸಿ, ಎನ್‌ವೈಕೆಎಸ್, ಎನ್‌ಎಸ್‌ಎಸ್, ಮಾಜಿ ಸೈನಿಕರುಆರೋಗ್ಯ ಸ್ವಯಂಸೇವಕರು. ಮುಂತಾದ ಮುಂಚೂಣಿ ಕೆಲಸಗಾರರು ಸೇರಿದಂತೆ 20 ವಿಭಾಗಗಳಿಗೆ (49 ಉಪ ವಿಭಾಗಗಳೊಂದಿಗೆ) ಮಾನವ ಸಂಪನ್ಮೂಲಗಳ ದತ್ತಾಂಶವನ್ನು ಒಳಗೊಂಡಿದೆ.  ಪ್ರಸ್ತುತ 1.24 ಕೋಟಿಗಿಂತ ಹೆಚ್ಚಿನ ದತ್ತಾಂಶ (ಡೇಟಾ) ಇದೆ. ಡ್ಯಾಶ್‌ಬೋರ್ಡ್‌ನಲ್ಲಿ ಮಾನವ ಸಂಪನ್ಮೂಲಗಳು ಮತ್ತು ವಿಶೇಷತೆಯ ಪ್ರಕಾರ ಹೊಸ ಗುಂಪುಗಳು ಮತ್ತು ಉಪ ಗುಂಪುಗಳನ್ನು ಸೇರಿಸುವುದರೊಂದಿಗೆ ಇದನ್ನು ನಿರಂತರವಾಗಿ ನವೀಕರಿಸಲಾಗುತ್ತಿದೆ. ಡ್ಯಾಶ್‌ಬೋರ್ಡ್‌ನಲ್ಲಿ ಪ್ರತಿ ಗುಂಪಿನಿಂದ ಲಭ್ಯವಿರುವ ಮಾನವ ಸಂಪನ್ಮೂಲಗಳ ಸಂಖ್ಯೆಯ ಬಗ್ಗೆ ರಾಜ್ಯ ಮತ್ತು ಜಿಲ್ಲಾವಾರು ಮಾಹಿತಿಯಿದ್ದು, ಆಯಾ ರಾಜ್ಯ ಮತ್ತು ಜಿಲ್ಲಾ ನೋಡಲ್ ಅಧಿಕಾರಿಗಳ ಸಂಪರ್ಕ ವಿವರಗಳಿವೆ.

ಯಾವುದೇ ಸಾಧನದ ಮೂಲಕ (ಮೊಬೈಲ್/ ಲ್ಯಾಪ್ಟಾಪ್/ ಡೆಸ್ಕ್ಟಾಪ್) ಪಡೆದುಕೊಳ್ಳಬಹುದಾದ ತರಬೇತಿ ಸಾಮಗ್ರಿ / ಮಾಡ್ಯೂಲ್ಗಳ ಆನ್ಸೈಟ್ ವಿತರಣೆಯನ್ನು ವೇದಿಕೆ ಒದಗಿಸುತ್ತದೆ. ವೇದಿಕೆ (ಪ್ಲಾಟ್ಫಾರ್ಮ್‌) ಯಲ್ಲಿ 53 ಕೋರ್ಸ್ಗಳೊಂದಿಗೆ 14 ಕೋರ್ಸ್ಗಳಿವೆ, ಇದರಲ್ಲಿ 113 ವೀಡಿಯೊಗಳು ಮತ್ತು 29 ಡಾಕ್ಯುಮೆಂಟ್ಗಳಿವೆ.

ಪ್ರಸ್ತುತ, 15 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳಲ್ಲಿ 14995 ಆಯುಷ್ ವೃತ್ತಿಪರರನ್ನು ನಿಯೋಜಿಸಲಾಗಿದ್ದು, 16 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳಲ್ಲಿ 68 ಜಿಲ್ಲೆಗಳಲ್ಲಿ 3492 ಎನ್ಸಿಸಿ ಕೆಡೆಟ್ಗಳು ಮತ್ತು 553 ಎನ್ಸಿಸಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 47000 ಕ್ಕೂ ಹೆಚ್ಚು ಕೆಡೆಟ್ಗಳು ಈಗಾಗಲೇ ತರಬೇತಿಗಾಗಿ ದಾಖಲಾಗಿದ್ದಾರೆ ಮತ್ತು ನಿಯೋಜನೆಗೆ ಲಭ್ಯವಿರುತ್ತಾರೆ. ಅಲ್ಲದೆ, 1,80,000 ಮಾಜಿ ಸೈನಿಕರನ್ನು ಸೈನಿಕ್ ಮಂಡಳಿಗಳು ನಿಯೋಜನೆಗಾಗಿ ಗುರುತಿಸಿವೆ. ಭಾರತೀಯ ರೆಡ್ಕ್ರಾಸ್ 40,000 ಕ್ಕೂ ಹೆಚ್ಚು ಸ್ವಯಂಸೇವಕರು ದೇಶದ 550 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಕೋವಿಡ್- 19 ಸಂಬಂಧಿತ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ್ಯಂತ ಎನ್ ವೈ ಕೆಎಸ್ ಮತ್ತು ಎನ್ಎಸ್ಎಸ್ ಸ್ವಯಂಸೇವಕರ 27 ಲಕ್ಷ ಸ್ವಯಂಸೇವಕರು ನಾಗರಿಕ ಅಧಿಕಾರಿಗಳೊಂದಿಗೆ ಕೋವಿಡ್-19 ಸಂಬಂಧಿತ ಚಟುವಟಿಕೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

ಕೆಲವು ಆರೋಗ್ಯ ಕಾರ್ಯಕರ್ತರು ಸೋಂಕು ತಗುಲಿ ಪಾಸಿಟಿವ್ ಆದ್ದರಿಂದ ಆಸ್ಪತ್ರೆಗಳು ಮುಚ್ಚಲ್ಪಟ್ಟ ನಿದರ್ಶನಗಳು ಮತ್ತು ಕೆಲವು ರೋಗಿಗಳು ಕೋವಿಡ್ ಗಲ್ಲದ ಆಸ್ಪತ್ರೆಗಳಲ್ಲಿ ಸಂಬಂಧವಿಲ್ಲದ ಖಾಯಿಲೆಗೆ ದಾಖಲಾಗಿದ್ದರೆ, ಕೋವಿಡ್ ಅಲ್ಲದ ಆರೋಗ್ಯ ಸೌಲಭ್ಯ ಕೇಂದ್ರದಲ್ಲಿ ಇಂತಹ ಪ್ರಕರಣಗಳನ್ನು ಪತ್ತೆಹಚ್ಚುವಲ್ಲಿ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಆರೋಗ್ಯ ಸಚಿವಾಲಯ ಹೊರಡಿಸಿದೆ. ಮಾರ್ಗಸೂಚಿಗಳು ಇಲ್ಲಿ ಲಭ್ಯವಾಗುತ್ತವೆ:

https://www.mohfw.gov.in/pdf/GuidelinestobefollowedondetectionofsuspectorconfirmedCOVID19case.pdf

ಆಸ್ಪತ್ರೆಗಳಲ್ಲಿನ ಇಂತಹ ಸಮಸ್ಯೆಗಳನ್ನು ಮೇಲ್ವಿಚಾರಣೆ ಮಾಡುವ ಜವಾಬ್ದಾರಿಯನ್ನು ಆಸ್ಪತ್ರೆಗಳ ಸೋಂಕು ನಿಯಂತ್ರಣ ಸಮಿತಿಗೆ ವಹಿಸಲಾಗಿದೆ. ಆರೋಗ್ಯ ಕಾರ್ಯಕರ್ತರು ಸೋಂಕು ತಡೆಗಟ್ಟುವಿಕೆ ಮತ್ತು ನಿಯಂತ್ರಣ ಮಾರ್ಗಸೂಚಿಗಳ ಬಗ್ಗೆ ತರಬೇತಿ ಪಡೆದಿರುತ್ತಾರೆ ಎನ್ನುವುದನ್ನು ಸಮಿತಿ ಖಚಿತಪಡಿಸುತ್ತದೆ. ಅನುಸರಿಸಬೇಕಾದ ಕೆಲವು ಮಾರ್ಗಸೂಚಿಗಳು ಹೀಗಿವೆ:

 

· ಪ್ರಕರಣದ ಬಗ್ಗೆ ಸ್ಥಳೀಯ ಆರೋಗ್ಯ ಅಧಿಕಾರಿಗಳಿಗೆ ತಿಳಿಸಿ ಮತ್ತು ಕೋವಿಡ್-19 ಗಾಗಿ ರೋಗಿಯನ್ನು ಪ್ರತ್ಯೇಕವಾಗಿ ಚಿಕಿತ್ಸೆಗಾಗಿ ವರ್ಗಾಯಿಸಬೇಕು.

· ಅಂತಹ ರೋಗಿಗಳಗೆ ಮಾಸ್ಕ್ ಹಾಕಬೇಕು ಮತ್ತು ಮೀಸಲಾದ ಆರೋಗ್ಯ ಕಾರ್ಯಕರ್ತರು ಮಾತ್ರ ಸರಿಯಾದ ಮುನ್ನೆಚ್ಚರಿಕೆಗಳನ್ನು ಅನುಸರಿಸಿ ಪ್ರಕರಣದಲ್ಲಿ ಕಾರ್ಯನಿರ್ವಹಿಸಬೇಕು.

· ಕ್ಲಿನಿಕಲ್ ಸ್ಥಿತಿಯ ಪ್ರಕಾರ, ಮುನ್ನೆಚ್ಚರಿಕೆಗಳನ್ನು ಅನುಸರಿಸಿ ರೋಗಿಯನ್ನು ಮೀಸಲಾದ ಕೋವಿಡ್ ಸೌಲಭ್ಯಕ್ಕೆ ವರ್ಗಾಯಿಸತಕ್ಕದ್ದು.

· ಸೌಲಭ್ಯವನ್ನು ಸೋಂಕುರಹಿತಗೊಳಿಸತಕ್ಕದ್ದು.

· ರೋಗಿಯ ಎಲ್ಲಾ ಸಂಪರ್ಕವನ್ನು ನಿರ್ಬಂಧಿಸಿ ಕ್ವಾರಂಟೈನ್ ಮಾಡಬೇಕು ಮತ್ತು ಹಲವು ದಿನಗಳವರೆಗೆ ಅನುಸರಿಸಬೇಕು

· ಎಲ್ಲಾ ನಿಕಟ ಸಂಪರ್ಕದ ವ್ಯಕ್ತಿಗಳನ್ನು ಎಚ್ಸಿಕ್ಯುನಲ್ಲಿ 7 ವಾರಗಳ ಅವಧಿಗೆ ಎಚ್ಸಿಕ್ಯೂನ ವ್ಯತಿರಿಕ್ತ ಲಕ್ಷಣಗಳನ್ನು ಗಮನದಲ್ಲಿರಿಸಿಕೊಳ್ಳಬೇಕು.

ತೀವ್ರ ಅನಾರೋಗ್ಯಕ್ಕೊಳಗಾದ ಕೋವಿಡ್-19 ರೋಗಿಗಳಲ್ಲಿ ಮರಣ ಪ್ರಮಾಣವನ್ನು ಕಡಿಮೆ ಮಾಡಲು ಔಷಧದ ಪರಿಣಾಮಕಾರಿತ್ವವನ್ನು ಮೌಲ್ಯಮಾಪನ ಮಾಡಲು ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (ಸಿಎಸ್ಐಆರ್), ನಿರ್ದಿಷ್ಟವಲ್ಲದ, ಬ್ಲೈಂಡೆಡ್, ಟು ಆರ್ಮ್ಸ್, ಸಕ್ರಿಯ ಕಂಪೇರೇಟರ್ ಕಂಟ್ರೋಲ್ಡ್ ಕ್ಲಿನಿಕಲ್ ಪ್ರಯೋಗವನ್ನು ಪ್ರಾರಂಭಿಸುತ್ತಿದೆ. ಕೋವಿಡ್-19 ಮತ್ತು ಗ್ರಾಂ- ನೆಗಟಿವ್ ಸೆಪ್ಸಿಸ್ ನಿಂದ ಬಳಲುತ್ತಿರುವ ರೋಗಿಗಳ ವೈದ್ಯಕೀಯ ಗುಣಲಕ್ಷಣಗಳ ನಡುವಿನ ಸಾಮ್ಯತೆಯನ್ನು ಗಮನದಲ್ಲಿಟ್ಟುಕೊಂಡು, ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಪ್ರಯೋಗವನ್ನು ಅನುಮೋದಿಸಿದೆ ಮತ್ತು ಇದು ಶೀಘ್ರದಲ್ಲೇ ಅನೇಕ ಆಸ್ಪತ್ರೆಗಳಲ್ಲಿ ಪ್ರಾರಂಭವಾಗಲಿದೆ.

ಆರೋಗ್ಯಸೇವೆಯ ಸವಾಲುಗಳನ್ನು ಎದುರಿಸಲು ವೈದ್ಯಕೀಯ ಸಲಕರಣೆಗಳ ರೋಗನಿರ್ಣಯ, ಚಿಕಿತ್ಸಕ,ಔಷಧಗಳು ಮತ್ತು ಲಸಿಕೆಗಳ ಅಭಿವೃದ್ಧಿಯನ್ನು ಬೆಂಬಲಿಸಲು ಜೈವಿಕ ತಂತ್ರಜ್ಞಾನ ಇಲಾಖೆಯು ಕೋವಿಡ್-19 ಒಕ್ಕೂಟದಲ್ಲಿ ಅರ್ಜಿಗಳನ್ನು ಆಹ್ವಾನಿಸಿದೆ. ಕೆಳಗಿನವುಗಳಿಗಾಗಿ ಬಹುಮುಖಿ ವಿಧಾನವನ್ನು ಅಳವಡಿಸಿಕೊಳ್ಳಲಾಗುತ್ತಿದೆ:

· ವಿವಿಧ ವೇದಿಕೆಗಳನ್ನು ಮತ್ತು ಅಭಿವೃದ್ಧಿಯ ವಿವಿಧ ಹಂತಗಳನ್ನು ಬಳಸುವ ಲಸಿಕೆಗಳನ್ನು ರಾಷ್ಟ್ರೀಯ ಬಯೋಫಾರ್ಮಾ ಮಿಷನ್ ಅಡಿಯಲ್ಲಿ ವೇಗವಾಗಿ ಪತ್ತೆಹಚ್ಚಲಾಗುತ್ತಿದೆ.

· ಅಸ್ತಿತ್ವದಲ್ಲಿರುವ ಲಸಿಕೆಗಳು ಮತ್ತು ಹೊಸ ಲಸಿಕೆಗಳನ್ನು ಪುನರಾವರ್ತಿಸಲು ಧನಸಹಾಯವನ್ನು ಶಿಫಾರಸು ಮಾಡಲಾಗಿದೆ

· ಕೋವಿಡ್-19 ವಿರುದ್ಧ ಡಿಎನ್ ಲಸಿಕೆ ಅಭಿವೃದ್ಧಿಗೆ ಬೆಂಬಲ ನೀಡಲಾಗುತ್ತಿದೆ, - ನಿಷ್ಕ್ರಿಯಗೊಳಿಸಿದ ರೇಬೀಸ್ ವೆಕ್ಟರ್ ಅನ್ನು ಬಳಸುವ ಲಸಿಕೆಗಳು, ಪುನರ್ಸಂಯೋಜಕ ಬಿಸಿಜಿ ಲಸಿಕೆಯ ಹಂತ -3ನೆಯ ಮಾನವ ಕ್ಲಿನಿಕಲ್ ಪ್ರಯೋಗಗಳು.

· ಆಣ್ವಿಕ ಮತ್ತು ಕ್ಷಿಪ್ರ ರೋಗನಿರ್ಣಯ ಕಿಟ್ಗಳ ಸ್ಥಳೀಯ ಉತ್ಪಾದನೆಗೆ ಸಹ ಬೆಂಬಲ ನೀಡಲಾಗುತ್ತಿದೆ.

ಮಾಹೇ (ಪುದುಚೇರಿ), ಕೊಡಗು (ಕರ್ನಾಟಕ), ಪೌರಿ ಗರ್ವಾಲ್ (ಉತ್ತರಾಖಂಡ್) ಮತ್ತು ಪ್ರತಾಪಗಢ (ರಾಜಸ್ಥಾನ) ನಾಲ್ಕು ಜಿಲ್ಲೆಗಳಲ್ಲಿ ಕಳೆದ 28 ದಿನಗಳಲ್ಲಿ ಯಾವುದೇ ಹೊಸ ಪ್ರಕರಣಗಳು ವರದಿಯಾಗಿಲ್ಲ. ಕಳೆದ 14 ದಿನಗಳಲ್ಲಿ ಯಾವುದೇ ಹೊಸ ಪ್ರಕರಣಗಳು ವರದಿಯಾಗಿಲ್ಲದ 23 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಂದ 61 ಹೆಚ್ಚುವರಿ ಜಿಲ್ಲೆಗಳಿವೆ. ಪಟ್ಟಿಯಲ್ಲಿ ನಾಲ್ಕು ಹೊಸ ಜಿಲ್ಲೆಗಳನ್ನು ಸೇರಿಸಲಾಗಿದೆ: ಲಾತೂರ್, ಉಸ್ಮಾನಾಬಾದ್, ಹಿಂಗೋಲಿ ಮತ್ತು ಮಹಾರಾಷ್ಟ್ರದ ವಾಶಿಮ್.

ದೇಶದಲ್ಲಿ ಒಟ್ಟು ಕೋವಿಡ್-19 18,601 ಪ್ರಕರಣಗಳು ವರದಿಯಾಗಿವೆ. 3252 ವ್ಯಕ್ತಿಗಳು ಅಂದರೆ ಒಟ್ಟು ಪ್ರಕರಣಗಳಲ್ಲಿ 17.48% ಗುಣಮುಖರಾಗಿದ್ದಾರೆ / ಚೇತರಿಸಿಕೊಂಡ ನಂತರ ಬಿಡುಗಡೆ ಮಾಡಲಾಗಿದೆ. ಕೋವಿಡ್-19ರಿಂದಾಗಿ ಒಟ್ಟು 590 ಸಾವುಗಳು ಇದುವರೆಗೆ ವರದಿಯಾಗಿವೆ.

 

ಕೋವಿಡ್-19ಗೆ ಸಂಬಂಧಿತ ತಾಂತ್ರಿಕ ಸಮಸ್ಯೆಗಳು, ಮಾರ್ಗಸೂಚಿಗಳು ಮತ್ತು ಸಲಹೆಗಳ ಎಲ್ಲಾ ಅಧಿಕೃತ ಮತ್ತು ಹೊಸ ಮಾಹಿತಿಗಾಗಿ ದಯವಿಟ್ಟು ನಿಯಮಿತವಾಗಿ ಭೇಟಿ ನೀಡಿ: https://www.mohfw.gov.in

ಕೋವಿಡ್-19 ಗೆ ಸಂಬಂಧಿಸಿದ ತಾಂತ್ರಿಕ ಪ್ರಶ್ನೆಗಳನ್ನು technquery.covid19[at]gov[dot]in ಮತ್ತು ಇತರ ಪ್ರಶ್ನೆಗಳನ್ನು ಕೇಳಲು ncov2019[at]gov[dot]in ಗೆ ಇಮೇಲ್ ಮಾಡಬಹುದು.

ಕೋವಿಡ್-19 ಬಗ್ಗೆ ಯಾವುದೇ ಪ್ರಶ್ನೆಗಳಿದ್ದಲ್ಲಿ, ದಯವಿಟ್ಟು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಹಾಯವಾಣಿ ಸಂಖ್ಯೆ: +91-11-23978046 ಅಥವಾ 1075 (ಟೋಲ್-ಫ್ರೀ). ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ಕೋವಿಡ್-19ಗೆ ಸಂಬಂಧಿಸಿದ ಸಹಾಯವಾಣಿ ಸಂಖ್ಯೆಗಳ ಪಟ್ಟಿ https://www.mohfw.gov.in/pdf/coronvavirushelplinenumber.pdf ನಲ್ಲಿಯೂ ಲಭ್ಯವಿದೆ.

***


(Release ID: 1616977) Visitor Counter : 215