ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ

ಕೇಂದ್ರೀಯ ಆಡಳಿತ ನ್ಯಾಯ ಮಂಡಳಿಯ ಪೀಠಗಳ ಕಾರ್ಯನಿರ್ವಹಣೆ 03.05.2020ರ ವರೆಗೆ ಸ್ಥಗಿತ

Posted On: 21 APR 2020 3:00PM by PIB Bengaluru

ಕೇಂದ್ರೀಯ ಆಡಳಿತ ನ್ಯಾಯ ಮಂಡಳಿಯ ಪೀಠಗಳ ಕಾರ್ಯನಿರ್ವಹಣೆ 03.05.2020ರ ವರೆಗೆ ಸ್ಥಗಿತ

 

ಈ ಹಿಂದೆ 2020ರ ಏಪ್ರಿಲ್ 14ರಂದು ನೀಡಲಾಗಿದ್ದ ಪತ್ರಿಕಾ ಪ್ರಕಟಣೆಯಲ್ಲಿ ಕೇಂದ್ರೀಯ ಆಡಳಿತ ನ್ಯಾಯ ಮಂಡಳಿಯ ನ್ಯಾಯಪೀಠಗಳ ಕಲಾಪ ಪುನರಾರಂಭಿಸುವ ಸಾಧ್ಯತೆಗಳ ಬಗ್ಗೆ ಸರ್ಕಾರ, ಲಾಕ್ ಡೌನ್ ಕುರಿತಂತೆ ಕೈಗೊಳ್ಳುವ ನಿರ್ಧಾರವನ್ನು ಅವಲಂಬಿಸಿ 2020ರ ಏಪ್ರಿಲ್ 20ರ ನಂತರ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಲಾಗಿತ್ತು.

ಇದೀಗ ಸರ್ಕಾರ ಕೆಲವು ಚಟುವಟಿಕೆಗಳಿಗೆ ಮಾತ್ರ ಲಾಕ್ ಡೌನ್ ನಿಯಮಾವಳಿಗಳಿಂದ ವಿನಾಯಿತಿ ಪ್ರಕಟಿಸಿದೆ. ಅದರ ಉದ್ದೇಶ, ಅತ್ಯವಶ್ಯಕ ಸಾಮಗ್ರಿಗಳು ವಿಶೇಷವಾಗಿ ಆಹಾರಧಾನ್ಯಗಳು ಸುಗಮ ರೀತಿಯಲ್ಲಿ ಸಾಗಾಣೆಯಾಗೇಕು ಮತ್ತು ಬಡವರ್ಗದವರಿಗೆ ಜೀವನೋಪಾಯಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿದೆ. ಕೆಲವು ಕಚೇರಿಗಳಿಗೆ ಪ್ರವೇಶ ಸೀಮಿತಗೊಳಿಸಿ, ಯಾವುದೇ ಸಂಪರ್ಕವಿಲ್ಲದೆ, ಸೀಮಿತ ರೀತಿಯಲ್ಲಿ ಕಾರ್ಯ ನಿರ್ವಹಿಸಲು ಅವಕಾಶ ಮಾಡಿಕೊಡಲಾಗಿದೆ.

ಮಾಹಿತಿ ಸ್ವೀಕರಿಸಿರುವಂತೆ ಹೈಕೋರ್ಟ್ ಗಳೂ ಕೂಡ ಕಾರ್ಯ ನಿರ್ವಹಿಸುತ್ತಿಲ್ಲ. ಕೆಲವು ಅಪರೂಪದ ಪ್ರಕರಣಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸುತ್ತಿವೆ. ಬಹುತೇಕ ಸ್ಥಳಗಳಲ್ಲಿ ನ್ಯಾಯಪೀಠಗಳು ಇರುವ ಜಾಗ ಹಾಟ್ ಸ್ಪಾಟ್ ಗಳಾಗಿವೆ. ಅಂತಹ ಕಡೆಗಳಲ್ಲಿ ಈ ಸಂದರ್ಭಗಳಲ್ಲಿ ಪ್ರಕರಣಗಳ ವಿಚಾರಣೆಗೆ ಹಾಜರಾಗಲು ಮತ್ತು ಅರ್ಜಿಗಳನ್ನು ಸಲ್ಲಿಸಲು ವಕೀಲರ ಸಂಘದ ಪ್ರತಿನಿಧಿಗಳೂ ಸಹ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಆದ್ದರಿಂದ 2020ರ ಮೇ 5ರ ವರೆಗೆ ಕೇಂದ್ರೀಯ ನ್ಯಾಯಮಂಡಳಿಯ ಎಲ್ಲ ನ್ಯಾಯಪೀಠಗಳ ಕಾರ್ಯನಿರ್ವಹಣೆಯನ್ನು ಅಮಾನತುಗೊಳಿಸಲು ತೀರ್ಮಾನಿಸಲಾಗಿದೆ. ಈಗಾಗಲೇ ಘೋಷಿಸಿರುವ ಕೆಲವು ರಜಾ ದಿನಗಳು ಅಥವಾ ರಜೆಯ ಅವಧಿಯಲ್ಲಿ ಪೀಠಗಳ ಕಾರ್ಯ ನಿರ್ವಹಣೆ ಸಾಧ್ಯತೆಗಳ ಬಗ್ಗೆ ಮುಂದಿನ ದಿನಗಳಲ್ಲಿ ನಿರ್ಧರಿಸಲಾಗುವುದು.

***


(Release ID: 1616839) Visitor Counter : 262