ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

ನವದೆಹಲಿಯಲ್ಲಿ ಸ್ವಯಂ ಮತ್ತು ಸ್ವಯಂ ಪ್ರಭಾದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರು

Posted On: 20 APR 2020 7:23PM by PIB Bengaluru

ನವದೆಹಲಿಯಲ್ಲಿ ಸ್ವಯಂ ಮತ್ತು ಸ್ವಯಂ ಪ್ರಭಾದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರು

 

ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಶ್ರೀ ರಮೇಶ್ ಪೋಖ್ರಿಯಲ್ 'ನಿಶಾಂಕ್' ಇಂದು ನವದೆಹಲಿಯ ರಾಷ್ಟ್ರೀಯ ಆನ್‌ಲೈನ್ ಶಿಕ್ಷಣ ವೇದಿಕೆಯಾದ ಸ್ವಯಂ ಮತ್ತು 32 ಡಿಟಿಎಚ್ ಟೆಲಿವಿಷನ್ ಶಿಕ್ಷಣ ಚಾನೆಲ್‌ಗಳ ಬಗ್ಗೆ ವಿವರವಾದ ವಿಮರ್ಶೆ ನಡೆಸಿದರು. ಸಚಿವಾಲಯದ ಕಾರ್ಯದರ್ಶಿ, ಶ್ರೀ ಅಮಿತ್ ಖರೆ, ಯುಜಿಸಿ ಅಧ್ಯಕ್ಷರಾದ ಶ್ರೀ ಡಿಪಿ ಸಿಂಗ್, ಎಐಸಿಟಿಇ ಅಧ್ಯಕ್ಷರಾದ ಶ್ರೀ ಅನಿಲ್ ಸಹಸ್ರಬುದ್ಧೆ, ಎನ್‌ಸಿಇಆರ್‌ಟಿ ಅಧ್ಯಕ್ಷರಾದ ಶ್ರೀ ಹೃಶಿಕೇಶ್ ಸೆನ್ಪತಿ, ಎನ್‌ಐಒಎಸ್ ಅಧ್ಯಕ್ಷರು ಸಚಿವಾಲಯದ ಹಿರಿಯ ಅಧಿಕಾರಿ, ರಾಷ್ಟ್ರೀಯ ಸಂಯೋಜಕರು ಮತ್ತು ಐಐಟಿ ಮದ್ರಾಸ್, ಐಐಟಿ ದೆಹಲಿ, ಐಐಎಂ ಬೆಂಗಳೂರು ಮತ್ತು ಐಐಐಟಿ ಹೈದರಾಬಾದ್ ನ ಪ್ರೊಫೆಸರ್ ಗಳು ಸಭೆಯಲ್ಲಿ ಭಾಗವಹಿಸಿದ್ದರು.

ಈ ಯೋಜನೆಗಳ ಪ್ರಗತಿಯ ಸಂಕ್ಷಿಪ್ತ ಪ್ರಸ್ತುತಿಯನ್ನು ಮಾಡಲಾಯಿತು. ಲಾಕ್‌ಡೌನ್ ಸ್ಥಿತಿಯಲ್ಲಿ ಬೇಡಿಕೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ ಮತ್ತು ಸ್ವಯಂ (SWAYAM) ಕೋರ್ಸ್‌ಗಳು ಮತ್ತು ಸ್ವಯಂ ಪ್ರಭ (SWAYAM PRABHA) ವೀಡಿಯೊಗಳ ಬಳಕೆ ಹೆಚ್ಚಾಗಿದೆ.

ಸ್ವಯಂ

  1. ಕೋರ್ಸ್‌ಗಳು ಪ್ರಸ್ತುತ ಸ್ವಯಂ ನಲ್ಲಿ ಲಭ್ಯವಿದೆ, ಪ್ರಾರಂಭವಾದಾಗಿನಿಂದ ಇವುಗಳನ್ನು 1.56 ಕೋಟಿ ವಿದ್ಯಾರ್ಥಿಗಳಿಗೆ ನೀಡಲಾಗಿದೆ. ಪ್ರಸ್ತುತ, 26 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು 574 ಕೋರ್ಸ್‌ಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಒಟ್ಟಾರೆಯಾಗಿ, 1509 ಕೋರ್ಸ್‌ಗಳು ಸ್ವಯಂ ಕಲಿಕೆಗೆ ಲಭ್ಯವಿದೆ. ಸ್ವಯಂ 2.0 (SWAYAM 2.0) ಆನ್‌ಲೈನ್ ಪದವಿ ಕಾರ್ಯಕ್ರಮಗಳ ಪ್ರಾರಂಭವನ್ನು ಸಹ ಬೆಂಬಲಿಸುತ್ತದೆ. ಸ್ವಯಂ ಕೋರ್ಸ್‌ಗಳನ್ನು ಎಐಸಿಟಿಇ ಮಾದರಿ ಪಠ್ಯಕ್ರಮಕ್ಕೆ ಹೊಂದುವಂತೆ ಮಾಡಲಾಗಿದೆ, ಅಂತರವನ್ನು ಗುರುತಿಸಲಾಗಿದೆ. ತಾಂತ್ರಿಕೇತರ ಕೋರ್ಸ್‌ಗಳಿಗೆ ಇದೇ ರೀತಿಯ ಕ್ರಮವನ್ನು ಯುಜಿಸಿಯ ಸಮಿತಿಯು ನಡೆಸುತ್ತಿದೆ.

ಎಲ್ಲಾ 1900 ಸ್ವಯಂ ಕೋರ್ಸ್‌ಗಳು ಮತ್ತು 60000 ಸ್ವಯಂ ಪ್ರಭ ವೀಡಿಯೊಗಳನ್ನು ಹತ್ತು ಪ್ರಾದೇಶಿಕ ಭಾಷೆಗಳಿಗೆ ಅನುವಾದಿಸಲು ಮತ್ತು ವಿದ್ಯಾರ್ಥಿಗಳಿಗೆ ಲಭ್ಯವಾಗುವಂತೆ ನಿರ್ಧರಿಸಲಾಯಿತು ಇದರಿಂದ ಹೆಚ್ಚಿನ ಲಾಭವನ್ನು ಪಡೆಯಬಹುದು. ಹೆಚ್ಚು ಜನಪ್ರಿಯ ವಿಷಯ, ಮತ್ತು ಮೊದಲ ವರ್ಷದಲ್ಲಿ ಕಲಿಸಿದ ಎಂಜಿನಿಯರಿಂಗ್ ಕೋರ್ಸ್‌ಗಳಿಗೆ ಅನುವಾದಕ್ಕೆ ಆದ್ಯತೆ ನೀಡಲಾಗುವುದು. ಅನುವಾದದ ಕಾರ್ಯವನ್ನು ರಾಷ್ಟ್ರೀಯ ಸಂಯೋಜಕರಿಗೆ ವಿಕೇಂದ್ರೀಕರಿಸಲು ನಿರ್ಧರಿಸಲಾಯಿತು, ಅವರು ವಿದ್ಯಾರ್ಥಿಗಳು, ಸರ್ಕಾರಿ ಅಥವಾ ಖಾಸಗಿ ಏಜೆನ್ಸಿಗಳು, ಲಭ್ಯವಿರುವ ತಂತ್ರಜ್ಞಾನವನ್ನು ವಿಷಯದ ಅನುವಾದವನ್ನು ಕೈಗೊಳ್ಳಲು ಲಭ್ಯವಿರುವ ಎಲ್ಲಾ ಸೇವೆಗಳನ್ನು ಬಳಸಲು ಅನುಮತಿಸಬಹುದು.

ಇಡೀ ಯೋಜನೆಯನ್ನು ತಕ್ಷಣ ಪ್ರಾರಂಭಿಸಲಾಗುವುದು ಮತ್ತು ಸಮಯಕ್ಕೆ ಅನುಗುಣವಾಗಿ ಪೂರ್ಣಗೊಳಿಸಲಾಗುತ್ತದೆ. ಜನಪ್ರಿಯ ಕೋರ್ಸ್‌ಗಳು ಮತ್ತು ವೀಡಿಯೊಗಳನ್ನು ಮೊದಲು ಮಾಡಲಾಗುತ್ತದೆ. ಈ ಕಾರ್ಯವನ್ನು ಕಡಿಮೆ ಸಮಯದಲ್ಲಿ ಪೂರ್ಣಗೊಳಿಸಲು ದೇಶಾದ್ಯಂತ ಹಲವಾರು ಶಿಕ್ಷಣ ಸಂಸ್ಥೆಗಳಿಗೆ ಕೊಡುಗೆ ನೀಡಲು ಕೋರಲಾಗುತ್ತದೆ. ಪ್ರತಿ ಎನ್‌ಸಿ (ನ್ಯಾಷನಲ್ ಕೋ-ಆರ್ಡಿನಾಟರ್ಸ್) ಏಪ್ರಿಲ್ 23 ರೊಳಗೆ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಗೆ (ಇ-ಮೇಲ್: NMEICT@nmeict.ac.in) ಕ್ರಿಯಾ ಯೋಜನೆಯನ್ನು ಸಲ್ಲಿಸಬೇಕು.

ವಿಷಯದ ಅನುವಾದ, ಖಾಲಿಯಾದ ಜಾಗಗಳಲ್ಲಿ ಹೊಸ ವಿಷಯವನ್ನು ರಚಿಸುವುದು ಮತ್ತು ಅಂಕಗಳ (ಕ್ರೆಡಿಟ್) ವರ್ಗಾವಣೆಯನ್ನು ಸ್ವೀಕರಿಸುವ ಕಾರ್ಯದಲ್ಲಿ ಎನ್‌ಸಿಗಳಿಗೆ ಎಲ್ಲಾ ಸಹಾಯವನ್ನು ಒದಗಿಸಲು ಐಐಟಿಗಳ ಎಲ್ಲಾ ನಿರ್ದೇಶಕರಿಗೆ ಸಲಹೆ ನೀಡಲಾಗುತ್ತದೆ.

ಸ್ವಯಂ ಅಂಕಗಳನ್ನು (ಕ್ರೆಡಿಟ್) ಸ್ವೀಕರಿಸಲು ಯುಜಿಸಿ ಮತ್ತು ಎಐಸಿಟಿಇ ಯು ವಿಶ್ವವಿದ್ಯಾಲಯಗಳು ಮತ್ತು ಸಂಸ್ಥೆಗಳೊಂದಿಗೆ ಅನುಸರಿಸುತ್ತವೆ ಎಂದು ನಿರ್ಧರಿಸಲಾಯಿತು. ಇದು ವಿದ್ಯಾರ್ಥಿಗಳಿಗೆ ಬೃಹತ್ ಮುಕ್ತ ಆನ್‌ಲೈನ್ ಕೋರ್ಸ್ (ಎಮ್ ಒ ಒ ಸಿ) ಆದರೂ ವಿವಿಧ ಕೋರ್ಸ್‌ಗಳಲ್ಲಿ ಭಾಗವಹಿಸಲು ಅನುವು ಮಾಡಿಕೊಡುತ್ತದೆ.

ಅಲ್ಲದೆ, ಸ್ವಯಂ ಅಡಿಯಲ್ಲಿ ಹೆಚ್ಚಿನ ಕೋರ್ಸ್‌ಗಳನ್ನು ಒದಗಿಸಲು ಬೋಧಕವರ್ಗವನ್ನು ಪ್ರೋತ್ಸಾಹಿಸಲು, ಅವರ ವೃತ್ತಿಜೀವನಕ್ಕೆ ಸೂಕ್ತ ಪ್ರೋತ್ಸಾಹಧನವನ್ನು ನೀಡಲಾಗುವುದು.

ಇದಲ್ಲದೆ, ಒಟ್ಟು ದಾಖಲಾತಿ ಅನುಪಾತವನ್ನು ಹೆಚ್ಚಿಸಲು ಆನ್‌ಲೈನ್ ಮತ್ತು ದೂರಶಿಕ್ಷಣ ಮಾರ್ಗಸೂಚಿಗಳಿಗೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ತಯಾರಿಸಲು ಯುಜಿಸಿಯನ್ನು ಕೇಳಲಾಗಿದೆ.

ಸ್ವಯಂ ಪ್ರಭಾ

ಜಿಎಸ್ಎಟಿ -15 ಉಪಗ್ರಹವನ್ನು ಬಳಸಿಕೊಂಡು 24 ಎಕ್ಸ್ 7 ಆಧಾರದ ಮೇಲೆ ಉತ್ತಮ ಗುಣಮಟ್ಟದ ಶೈಕ್ಷಣಿಕ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲು ಮೀಸಲಾಗಿರುವ 32 ಡಿಟಿಎಚ್ ಚಾನೆಲ್‌ಗಳ ಗುಂಪೇ ಸ್ವಯಂ ಪ್ರಭಾ. ಪ್ರತಿದಿನ, ಕನಿಷ್ಠ (4) ಗಂಟೆಗಳ ಕಾಲ ಹೊಸ ವಿಷಯವಿರುತ್ತದೆ, ಅದು ದಿನದಲ್ಲಿ 5 ಬಾರಿ ಪುನರಾವರ್ತನೆಯಾಗುತ್ತದೆ, ಇದು ವಿದ್ಯಾರ್ಥಿಗಳಿಗೆ ತಮ್ಮ ಅನುಕೂಲವಾದ ಸಮಯವನ್ನು ಆಯ್ಕೆ ಮಾಡಲು ಅನುವು ಮಾಡಿಕೊಡುತ್ತದೆ.

ಈ ಕೆಳಗಿನ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ:

· ಲಭ್ಯವಿರುವ ವಿಷಯವನ್ನು ಹೊಂದಿಸಲು ಚಾನಲ್‌ಗಳ ಪುನರ್ವಿತರಣೆಯ ಸಾಧ್ಯತೆ ಮತ್ತು ವೀಕ್ಷಕರ ಸಂಖ್ಯೆಯನ್ನು ಅನ್ವೇಷಿಸಲಾಗುತ್ತದೆ.

· ವಿದ್ಯಾ ದಾನ್ ಕಾರ್ಯಕ್ರಮದಡಿ ಕೊಡುಗೆ ನೀಡಲು ಇಚ್ಛಿಸುವವರಿಂದ ವಿಷಯವನ್ನು ಸಂಗ್ರಹಿಸುವ ಮೂಲಕ ಸ್ವಯಂ ಪ್ರಭಾದಲ್ಲಿ ವಿಷಯವನ್ನು ಉತ್ಕೃಷ್ಟಗೊಳಿಸಲು ನಿರ್ಧರಿಸಲಾಯಿತು. ಅದನ್ನು ಸ್ವಯಂ ಪ್ರಭಾದಲ್ಲಿ ಅಪ್‌ಲೋಡ್ ಮಾಡುವ ಮೊದಲು ಸ್ವೀಕರಿಸಿದ ವಿಷಯವನ್ನು ಅನುಮೋದಿಸಲು ವಿಷಯ ತಜ್ಞರ ಸಮಿತಿಗಳನ್ನು ಪ್ರತಿ ಎನ್‌ಸಿ ರಚಿಸುತ್ತದೆ,

· ಡಿಟಿಎಚ್ ಮೂಲಕ ಪ್ರಸಾರವನ್ನು ರೇಡಿಯೋ, ಸಾಮಾಜಿಕ ಮಾಧ್ಯಮ ಸೇರಿದಂತೆ ಲಭ್ಯವಿರುವ ಎಲ್ಲಾ ಚಾನೆಲ್ಗಳ ಮೂಲಕ ಜನಪ್ರಿಯಗೊಳಿಸಲಾಗುತ್ತದೆ.

· ಸ್ವಯಂ ಪ್ರಭಾದಲ್ಲಿನ ವೀಡಿಯೊ ವಿಷಯವನ್ನು ಪಠ್ಯಕ್ರಮ ಮತ್ತು ಶೈಕ್ಷಣಿಕ ಕ್ಯಾಲೆಂಡರ್‌ಗೆ ಹೊಂದಿಸಲಾಗುತ್ತದೆ

· ನಾಲ್ಕು ಐಐಟಿ-ಪಿಎಎಲ್ ಚಾನೆಲ್‌ಗಳ ವಿಷಯಗಳ ಅನುವಾದಕ್ಕಾಗಿ ಸಿಬಿಎಸ್‌ಇ, ಎನ್‌ಐಒಎಸ್ ಐಐಟಿ-ದೆಹಲಿಗೆ ಎಲ್ಲಾ ಸಹಾಯವನ್ನು ಒದಗಿಸುತ್ತದೆ. ಈ ವಿಷಯವನ್ನು ಇಲಾಖೆಯಲ್ಲಿ ಜೆಎಸ್ (ಐಇಸಿ) ಅನುಸರಿಸಬೇಕು.

ಸಭೆಯ ನಿರ್ಧಾರಗಳನ್ನು ಸಚಿವಾಲಯವು ಅನುಷ್ಠಾನಕ್ಕಾಗಿ ಪರಿಶೀಲಿಸುತ್ತದೆ.

***(Release ID: 1616835) Visitor Counter : 242