ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ಕೋವಿಡ್-19 ಸಂಶೋಧನಾ ಒಕ್ಕೂಟಕ್ಕೆ ಡಿಬಿಟಿ-ಬಿಐಆರ್ ಎ ಸಿ ಕರೆ

Posted On: 20 APR 2020 10:41AM by PIB Bengaluru

ಕೋವಿಡ್-19 ಸಂಶೋಧನಾ ಒಕ್ಕೂಟಕ್ಕೆ ಡಿಬಿಟಿ-ಬಿಐಆರ್ ಎ ಸಿ ಕರೆ

ರೋಗ ಪತ್ತೆ, ಲಸಿಕೆ, ಚಿಕಿತ್ಸೆ ಮತ್ತು ಇತರೆ ಅಭಿವೃದ್ಧಿಗಳ ಪ್ರಸ್ತಾವಗಳಿಗೆ ಆಹ್ವಾನ

16 ಪ್ರಸ್ತಾವಗಳಿಗೆ ಆರ್ಥಿಕ ನೆ ನೀಡಲು ಶಿಫಾರಸ್ಸು

 

ಜೈವಿಕ ತಂತ್ರಜ್ಞಾನ ಇಲಾಖೆ ಮತ್ತು ಜೈವಿಕ ತಂತ್ರಜ್ಞಾನ ಉದ್ಯಮ ಸಂಶೋಧನಾ ನೆರವಿನ ಮಂಡಳಿ(ಬಿಐಆರ್ ಎಸಿ) ಕೋವಿಡ್-19 ಸಂಶೋಧನಾ ಒಕ್ಕೂಟ ಸ್ಥಾಪನೆಗೆ ಅರ್ಜಿಗಳನ್ನು ಆಹ್ವಾನಿಸಿತ್ತು. ಮೊದಲನೇ ಹಂತದ ಕೊನೆಯ ದಿನಾಂಕ 2020ರ ಮಾರ್ಚ್ 30ಕ್ಕೆ ಮುಕ್ತಾಯವಾಗಿದ್ದು, ತಜ್ಞರು ಮತ್ತು ಉದ್ಯಮದಿಂದ ಸುಮಾರು 500 ಅರ್ಜಿಗಳನ್ನು ಸ್ವೀಕರಿಸಲಾಗಿತ್ತು. ಅವುಗಳ ಬಹು ಹಂತದ ಪರಿಶೀಲನಾ ಕಾರ್ಯ ಪ್ರಗತಿಯಲ್ಲಿದೆ ಮತ್ತು ಈವರೆಗೆ 16 ಪ್ರಸ್ತಾವಗಳಿಗೆ ಉಪಕರಣಗಳ ಅಭಿವೃದ್ಧಿ, ಡಯಾಗ್ನೋಸ್ಟಿಕ್, ಲಸಿಕೆ ಅಭ್ಯರ್ಥಿಗಳು, ಚಿಕಿತ್ಸೆಗಳು ಮತ್ತು ಇತರೆ ಅಭಿವೃದ್ಧಿಗಳಲ್ಲಿ ತೊಡಗಿರುವ ಪ್ರಸ್ತಾವಗಳಿಗೆ ಆರ್ಥಿಕ ನೆರವು ನೀಡಲು ನಿರ್ಧರಿಸಲಾಗಿದೆ.

ಲಸಿಕೆ ಅಭಿವೃದ್ಧಿಪಡಿಸುವಲ್ಲಿ ತೊಡಗಿರುವ ಅಭ್ಯರ್ಥಿಗಳು ನಾನಾ ವೇದಿಕೆಗಳನ್ನು ಬಳಕೆ ಮಾಡಿಕೊಳ್ಳುವುದನ್ನು ಖಾತ್ರಿಪಡಿಸಲು ಬಹು ಆಯಾಮದ ಮನೋಭಾವಗಳನ್ನು ಅಳವಡಿಸಿಕೊಳ್ಳಲಾಗಿದೆ ಮತ್ತು ಸಂಶೋಧನಾ ಒಕ್ಕೂಟದಿಂದ ರಾಷ್ಟ್ರೀಯ ಬಯೋಫಾರ್ಮ ಮಿಷನ್ ಅಡಿಯಲ್ಲಿ ನೆರವು ನೀಡುವ ಮೂಲಕ ಅಭಿವೃದ್ಧಿಯ ಬೇರೆ ಬೇರೆ ಹಂತಗಳನ್ನು ತ್ವರಿತಗೊಳಿಸಲು ಒತ್ತು ನೀಡಲಾಗಿದೆ. ಹೆಚ್ಚಿನ ಅಪಾಯವಿರುವ ಗುಂಪುಗಳಿಂದ ರಕ್ಷಿಸಲು ತಕ್ಷಣಕ್ಕೆ ಲಭ್ಯವಿರುವ ಲಸಿಕೆಯನ್ನು ಮತ್ತಷ್ಟು ಅಭಿವೃದ್ಧಿಯಲ್ಲಿ ತೊಡಗಿರುವವರು ಮತ್ತು ನೋವೆಲ್ ಕೊರೊನಾ ಸೋಂಕಿಗೆ ಹೊಸದಾಗಿ ಲಸಿಕೆ ಅಭಿವೃದ್ಧಿಯಲ್ಲಿ ತೊಡಗಿರುವವರನ್ನು ಇಬ್ಬರ ಪ್ರಸ್ತಾವಗಳೂ ಬಂದಿದ್ದವು. ಅವುಗಳನ್ನು ಆಯ್ಕೆ ಮಾಡಲಾಗಿದೆ. ನೋವೆಲ್ ಕೊರೊನಾ ವೈರಸ್ ಸಾರ್ಸ್-ಸಿಒವಿ-2 ವಿರುದ್ಧ ಡಿಎನ್ಎ ಲಸಿಕೆ ಅಭಿವೃದ್ಧಿಗೆ ಹಣಕಾಸು ಬೆಂಬಲವನ್ನು ನೀಡಲು ಕಾಡಿಲಾ ಹೆಲ್ತ್ ಕೇರ್ ಲಿಮಿಟೆಡ್ ಗೆ ಶಿಫಾರಸ್ಸು ಮಾಡಿದೆ ಮತ್ತು ರೇಬಿಸ್ ವೆಕ್ಟರ್ ವೇದಿಕೆ ಬಳಸಿ, ಕೋವಿಡ್-19ಗೆ ಲಸಿಕೆ ಅಭಿವೃದ್ಧಿಪಡಿಸುವ ಅಭ್ಯರ್ಥಿಗೆ ಆರ್ಥಿಕ ನೆರವು ನೀಡಲು ಭಾರತ್ ಬಯೋಟೆಕ್ ಇಂಟರ್ ನ್ಯಾಷನಲ್ ಲಿಮಿಟೆಡ್ ಗೆ ಸೂಚಿಸಲಾಗಿದೆ. ಅಲ್ಲದೆ ಅತ್ಯಂತ ಹೆಚ್ಚಿನ ಅಪಾಯ ಎದುರಿಸುತ್ತಿರುವ ಜನಸಂಖ್ಯೆಗೆ ಬಿಸಿಜೆ ಲಸಿಕೆಗೆ (ವಿಪಿಎಂ1002) ರಿ ಕಾಂಬಿನೆಂಟ್ ಅಧ್ಯಯನ ಆಧರಿಸಿದ ಮೂರನೇ ಹಂತದ ಮಾನವರ ಕ್ಲಿನಿಕಲ್ ಟ್ರಯಲ್ ಗೆ ಸೆರುಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಪ್ರೈವೇಟ್ ಲಿಮಿಟೆಡ್(ಎಸ್ಐಐಪಿಎಲ್) ನೆರವು ನೀಡಲಿದೆ. ಸಾರ್ಸ್-ಸಿಒವಿ-2 ಲಸಿಕೆಯನ್ನು ಬೆಂಬಲಿಸಲು ರಾಷ್ಟ್ರೀಯ ಪ್ರತಿರಕ್ಷಾ(ರೋಗ ನಿರೋಧಕ) ಕೇಂದ್ರದ ವೇದಿಕೆಯಲ್ಲಿ ಲಸಿಕೆ ಅಭಿವೃದ್ಧಿಗೆ ಹಣಕಾಸಿನ ಬೆಂಬಲ ನೀಡಲೂ ಸಹ ಅನುಮೋದನೆ ನೀಡಲಾಗಿದೆ.

ಶುದ್ಧೀಕರಿಸಿದ ಇಮ್ಯುನೊಗ್ಲೋಬುಲಿನ್ ಜಿ, ಐಜಿಜಿ,ಅನ್ನು ಕೋವಿಡ್-19 ವಿರುದ್ಧ ವಾಣಿಜ್ಯ ಪ್ರಮಾಣದಲ್ಲಿ ಅಭಿವೃದ್ಧಿಪಡಿಸಲು ಮತ್ತು ಕೋವಿಡ್ ಸೋಂಕಿತ ರೋಗಿಗಳಿಗೆ ಹೆಚ್ಚಿನ ರೋಗ ನಿರೋಧಕ ಶಕ್ತಿ ನೀಡುವಂತಹ ಚಿಕಿತ್ಸೆ ಅಭಿವೃದ್ಧಿಗೆ ವಿರ್ಚೋವ್ ಬಯೋಟೆಕ್ ಪ್ರೈವೇಟ್ ಲಿಮಿಟೆಡ್ ಗೆ ಬೆಂಬಲ ನೀಡಲಾಗುವುದು. ವಿಟ್ರೊ ಲಂಗ್ ಆರ್ಗಾನೈಡ್ ಮಾಡೆಲ್ ಸೃಷ್ಟಿಗೆ ಓನ್ಕೋಸೀಕ್ ಬಯೋ ಪ್ರೈವೆಟ್ ಲಿಮಿಟೆಡ್ ಗೆ ಆರ್ಥಿಕ ಬೆಂಬಲ ನೀಡಲಾಗುವುದು.

ದೇಶೀಯ ಉತ್ಪಾದನೆಯನ್ನು ಉತ್ತೇಜಿಸಲು ಮತ್ತು ಕ್ಷಿಪ್ರಗತಿಯಲ್ಲಿ ಪತ್ತೆ ಪರೀಕ್ಷೆ ಮತ್ತು ಮಾಲಿಕ್ಯುಲರ್ ಉತ್ಪಾದನೆಯನ್ನು ಹೆಚ್ಚಿಸಲು ಈ ಕೆಳಗಿನ ಕಂಪನಿಗಳಿಗೆ ಆರ್ಥಿಕ ನೆರವು ನೀಡಲಾಗುವುದು. ಮೈಲ್ಯಾಬ್ ಡಿಸ್ಕವರಿ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್, ಹುವೆಲ್ ಲೈಫ್ ಸೈನ್ಸಸ್, ಯುಬಯೊ ಬಯೋಟೆಕ್ನಾಲಜಿ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್, ಧಿತಿ ಲೈಫ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್, ಮ್ಯಾಗ್ನೊಮೆ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್, ಬಿಗ್ ಟೆಕ್ ಪ್ರೈವೇಟ್ ಲಿಮಿಟೆಡ್ ಮತ್ತು ಯಾತುಮ್ ಬಯೋಟೆಕ್ ಪ್ರೈವೇಟ್ ಲಿಮಿಟೆಡ್.

ಜೈವಿಕ ತಂತ್ರಜ್ಞಾನ ಇಲಾಖೆಯ ರಾಷ್ಟ್ರೀಯ ಬಯೋಫಾರ್ಮ ಮಿಷನ್ ಅಡಿಯಲ್ಲಿ ಪತ್ತೆ ಕಿಟ್ ಮತ್ತು ವೆಂಟಿಲೇಟರ್ ಗಳ ಉತ್ಪಾದನೆಗೆ ಸಮಾನ ಸೌಕರ್ಯಗಳನ್ನು ಬಳಸುವ ವ್ಯವಸ್ಥೆಯನ್ನು ಆಂಧ್ರಪ್ರದೇಶದ ಮೆಡ್ ಟೆಕ್ ಝೋನ್((ಎಎಂಟಿಝಡ್)ನಲ್ಲಿ ಸ್ಥಾಪಿಸಲಾಗುವುದು, ಇಲ್ಲಿ ನಾನಾ ಉತ್ಪಾದಕರಿಗೆ ಉತ್ಪಾದನಾ ಸಾಮರ್ಥ್ಯವೃದ್ಧಿಗೆ ಅವಕಾಶ ನೀಡಲಾಗುವುದು.

ಕೋವಿಡ್-19 ಶಂಕಿತರ ತಪಾಸಣೆಗೆ ಥರ್ಮೊಪೈಲ್ ಆಧಾರಿತ ಅಲ್ಟ್ರಾಸಾನಿಕ್ ಸೆನ್ಸಾರ್ ಗಳನ್ನು ಸಂಪರ್ಕರಹಿತ ಮತ್ತು ಕೈಗೆಟಕುವ ದರದಲ್ಲಿ ಅಭಿವೃದ್ಧಿ ಮತ್ತು ನಿಯೋಜನೆಗೆ ಹಾಗೂ ಆರೋಗ್ಯ ರಕ್ಷಣಾ ಕಾರ್ಯಕರ್ತರಿಗೆ ಹೊಸ ಮಾದರಿಯ ದೇಶೀಯ ಪಿಪಿಇಗಳ ಉತ್ಪಾದನೆಗೂ ಸಹ ಬೆಂಬಲ ನೀಡಲಾಗುವುದು.

***



(Release ID: 1616483) Visitor Counter : 249