ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್-19 ಅಪ್ ಡೇಟ್ಸ್

Posted On: 19 APR 2020 5:37PM by PIB Bengaluru

ಕೋವಿಡ್-19 ಅಪ್ ಡೇಟ್ಸ್

 

ಕೋವಿಡ್-19 ತಡೆಗಟ್ಟುವಿಕೆ, ನಿಯಂತ್ರಣ ಮತ್ತು ನಿರ್ವಹಣೆಗೆ ಹಲವಾರು ಕ್ರಮಗಳನ್ನು ಭಾರತ ಸರ್ಕಾರ ಮತ್ತು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ಕೈಗೊಳ್ಳುತ್ತಿವೆ. ಇವುಗಳನ್ನು ನಿಯಮಿತವಾಗಿ ಉನ್ನತ ಮಟ್ಟದಲ್ಲಿ ಪರಿಶೀಲಿಸಲಾಗುತ್ತಿದೆ ಮತ್ತು ಮೇಲ್ವಿಚಾರಣೆ ಮಾಡಲಾಗುತ್ತಿದೆ.

ಔಷಧಿ ಪರೀಕ್ಷೆ ಮತ್ತು ಲಸಿಕೆಗಳಿಗೆ ಸಂಬಂಧಿಸಿದ ವಿಜ್ಞಾನದ ವಿಷಯಗಳಲ್ಲಿ ಕೆಲಸ ಮಾಡಲು ಉನ್ನತ ಮಟ್ಟದ ಕಾರ್ಯಪಡೆಯನ್ನು ರಚಿಸಲಾಗಿದೆ. ಕಾರ್ಯಪಡೆಯು ಸದಸ್ಯರು (ಆರೋಗ್ಯ), ಎನ್ಐಟಿಐ ಆಯೋಗ್ ಮತ್ತು ಪ್ರಧಾನ ಮಂತ್ರಿಯವರ ಗೌರವಾನ್ವಿತ ಪ್ರಧಾನ ವೈಜ್ಞಾನಿಕ ಸಲಹೆಗಾರರು ಸಹ-ಅಧ್ಯಕ್ಷರಾಗಿದ್ದಾರೆ.. ಇದಲ್ಲದೆ, ಇತರ ಸದಸ್ಯರು ಆಯುಷ್, ಐಸಿಎಂಆರ್, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಜೈವಿಕ ತಂತ್ರಜ್ಞಾನ, ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (ಸಿಎಸ್ಐಆರ್), ಡಿಆರ್ ಡಿ , ಆರೋಗ್ಯ ಸೇವೆಗಳ ನಿರ್ದೇಶನಾಲಯ (ಡಿಜಿಹೆಚ್ಎಸ್) ಮತ್ತು ಭಾರತದ ಡ್ರಗ್ ಕಂಟ್ರೋಲರ್ ಜನರಲ್ (ಡಿಸಿಜಿಐ) ಪ್ರತಿನಿಧಿಗಳು ಇತರ ಸದಸ್ಯರಾಗಿದ್ದಾರೆ. ಲಸಿಕೆ ಅಭಿವೃದ್ಧಿಗೆ ಸಂಬಂಧಿಸಿದ ವಿಷಯದ ಕುರಿತು ಎಲ್ಲಾ ಸಚಿವಾಲಯಗಳು ಮಾಡಿದ ಕಾರ್ಯಗಳ ಸಮನ್ವಯವನ್ನು ಕಾರ್ಯಪಡೆ ತ್ವರಿತಗೊಳಿಸುತ್ತದೆ. ಇದು ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳ ಅಂತರರಾಷ್ಟ್ರೀಯ ಪ್ರಯತ್ನಗಳ ಮೂಲಕ ನಡೆಸಿದ ಸಂಶೋಧನಾ ಕಾರ್ಯವನ್ನು ತ್ವರಿತಗೊಳಿಸಲು ಮತ್ತಷ್ಟು ಸಹಾಯ ಮಾಡುತ್ತದೆ. ಅಲ್ಲದೆ, ಜೈವಿಕ ತಂತ್ರಜ್ಞಾನ ವಿಭಾಗವು ಲಸಿಕೆ ಅಭಿವೃದ್ಧಿಗೆ ನೋಡಲ್ ಏಜೆನ್ಸಿಯಾಗಿದೆ. ಲಸಿಕೆ ಅಭಿವೃದ್ಧಿಗೆ ಮಾರ್ಗಗಳನ್ನು ಗುರುತಿಸುವತ್ತ ಅವರ ಪ್ರಯತ್ನಗಳನ್ನು ಕೇಂದ್ರೀಕರಿಸಲಾಗುವುದು. ಕಾರ್ಯಪಡೆಯ ಮೂಲಕ, ಲಸಿಕೆ ಅಭಿವೃದ್ಧಿಯಲ್ಲಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಯತ್ನಗಳ ಪ್ರಗತಿಯನ್ನು ಸರ್ಕಾರವು ಮತ್ತಷ್ಟು ಸುಗಮಗೊಳಿಸುತ್ತದೆ, ಗಮನಿಸುತ್ತದೆ ಮತ್ತು ಮೇಲ್ವಿಚಾರಣೆ ಮಾಡುತ್ತದೆ. ಕಾರ್ಯಪಡೆಯು "ಕ್ಲಿನಿಕಲ್ ಕೋಹೋರ್ಟ್ಸ್” (ಕ್ಲಿನಿಕಲ್ ಸಮಂಜಸತೆ)" ಗಳ ಮೇಲೆ ಕೇಂದ್ರೀಕರಿಸುತ್ತದೆ, ಇದು ರೋಗ ಮತ್ತು ನಿರ್ವಹಣೆಯ ಬಗ್ಗೆ ಉತ್ತಮ ತಿಳುವಳಿಕೆಯನ್ನು ಹೊಂದಲು ಜನರ ದೀರ್ಘಕಾಲೀನ ಅನುಸರಣೆಯ ಮೇಲೆ ಕೇಂದ್ರೀಕರಿಸುತ್ತದೆ.

20 ಏಪ್ರಿಲ್ 2020 ರಿಂದ, ನಿಯಂತ್ರಣರಹಿತ ಪ್ರದೇಶಗಳಲ್ಲಿ ನಿರ್ಬಂಧಗಳನ್ನು ಸಡಿಲಗೊಳಿಸಲಾಗುತ್ತದೆ, ಆದರೆ ಹಾಟ್ಸ್ಪಾಟ್ ಜಿಲ್ಲೆಗಳಲ್ಲಿನ ನಿಯಂತ್ರಣ (ಕಂಟೇನ್ಮಂಟ್) ಪ್ರದೇಶಗಳಿಗೆ ಯಾವುದೇ ಸಡಿಲಿಕೆಯನ್ನು ನೀಡಲಾಗುವುದಿಲ್ಲ. ಸ್ಥಳೀಯ ಅವಶ್ಯಕತೆಗಳಿಗೆ ಅನುಗುಣವಾಗಿ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ಹೆಚ್ಚಿನ ಹೆಚ್ಚುವರಿ ಕ್ರಮಗಳನ್ನು ವಿಧಿಸಬಹುದು. ಆರೋಗ್ಯ ಸಚಿವಾಲಯದ ಮಾರ್ಗಸೂಚಿಗಳ ಪ್ರಕಾರ ನಿಯಂತ್ರಣ ವಲಯಗಳನ್ನು ಕೆಳಗೆ ವಿವರಿಸಲಾಗಿದೆ:

  • ಹಾಟ್ಸ್ಪಾಟ್ಗಳು ದೊಡ್ಡ ಕೋವಿಡ್-19 ಹರಡುವಿಕೆ ಅಥವಾ ಗಮನಾರ್ಹ ಹರಡುವಿಕೆಯ ಸಮೂಹಗಳನ್ನು ಹೊಂದಿರುವ ಪ್ರದೇಶಗಳಾಗಿವೆ.
  • ಹೆಚ್ಚಿನ ಪ್ರಕರಣಗಳು ಎಲ್ಲಿವೆಯೋ ಅಥವಾ ಪ್ರಕರಣಗಳ ದ್ವಿಗುಣಗೊಳಿಸುವಿಕೆಯ ಪ್ರಮಾಣವು 4 ದಿನಗಳಿಗಿಂತ ಕಡಿಮೆಯಿದ್ದರೆ.

ಹಾಟ್ಸ್ಪಾಟ್ಗಳಲ್ಲಿ, ಸ್ಥಳೀಯ ಆಡಳಿತವು ರೋಗ ಹರಡುವಿಕೆಯನ್ನು ನಿಯಂತ್ರಿಸಲು ನಿಯಂತ್ರಣ ವಲಯಗಳು ಮತ್ತು ಬಫರ್ ವಲಯಗಳನ್ನು ಗುರುತಿಸುತ್ತದೆ.

ನಿಯಂತ್ರಣ ವಲಯಗಳಲ್ಲಿ, ಅಗತ್ಯ ಸೇವೆಗಳನ್ನು ಹೊರತುಪಡಿಸಿ ಕಟ್ಟುನಿಟ್ಟಾದ ಪರಿಧಿಯ ನಿಯಂತ್ರಣದಲ್ಲಿ ಚಟುವಟಿಕೆಗಳನ್ನು ಅನುಮತಿಸಲಾಗುವುದಿಲ್ಲ. ಆಯ್ದ ವಿನಾಯತಿಯನ್ನು ನೀಡುವ ಸ್ಥಳಗಳಿಗೆ, ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು/ ಜಿಲ್ಲಾ ಆಡಳಿತಗಾರರು ಅಸ್ತಿತ್ವದಲ್ಲಿರುವ ಲಾಕ್ಡೌನ್ ಕ್ರಮಗಳ ಕಟ್ಟುನಿಟ್ಟಿನ ಅನುಸರಣೆ ನಡೆಯುವಂತೆ ನೋಡಿಕೊಳ್ಳಬೇಕು ಮತ್ತು ಕಚೇರಿಗಳು, ಕೆಲಸದ ಸ್ಥಳಗಳು, ಕಾರ್ಖಾನೆಗಳು ಮತ್ತು ಸಂಸ್ಥೆಗಳಲ್ಲಿ ಸಾಮಾಜಿಕ ಅಂತರಕ್ಕೆ ಸಂಬಂಧಿಸಿದ ಎಸ್ಒಪಿಗಳ (ಕಾರ್ಯನಿರ್ವಹಣೆಯ ಮಾನದಂಡ) ಪ್ರಕಾರ ಪೂರ್ವಸಿದ್ಧತಾ ಕ್ರಮಗಳನ್ನು ಅನುಸರಿಸಲಾಗುತ್ತಿದೆ.

ಕೆಲವು ಸ್ಥಳಗಳಿಗೆ ಪ್ರಕರಣಗಳು ಬಂದರೆ ಇದು ರೋಲಿಂಗ್ ಮಾನದಂಡವಾಗಿರುವುದರಿಂದ, ಸ್ಥಳಗಳು ಕೆಂಪು ವಲಯ (ರೆಡ್ ಝೋನ್) ಮತ್ತು ನಿಯಂತ್ರಣ ವಲಯದ (ಕಂಟೇನ್ಮೆಂಟ್ ಝೋನ್) ಭಾಗವಾಗಬಹುದು. ನಿಯಂತ್ರಣ ವಲಯಗಳಿಗೆ, ಅವರು ಲಾಕ್ಡೌನ್ ಕ್ರಮಗಳನ್ನು ಕಟ್ಟುನಿಟ್ಟಾಗಿ ಕಾರ್ಯಗತಗೊಳಿಸಬೇಕು ಆದರಿಂದಾಗಿ ಅವು ಕ್ರಮೇಣ ಸಹಜ ಸ್ಥಿತಿಗೆ ಮರಳಬಹುದು. ಎಲ್ಲಾ ಪೂರ್ವಸಿದ್ಧತಾ ಕ್ರಮಗಳನ್ನು ಕೈಗೊಳ್ಳಲಾಗಿದೆಯೆ ಎನ್ನವುದನ್ನು ಖಚಿತಪಡಿಸಿಕೊಳ್ಳಲು ಸಡಿಲಿಸಿರುವ ಪ್ರದೇಶಗಳು ಸಾಮಾಜಿಕ ಅಂತರದ ಎಲ್ಲಾ ಎಸ್ಒಪಿಗಳನ್ನು ಅನುಸರಿಸಬೇಕು.

ಒಟ್ಟಾರೆಯಾಗಿ, ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ 2144 ಮೀಸಲಾದ ಕೋವಿಡ್-19 ಆಸ್ಪತ್ರೆಗಳನ್ನು ಗುರುತಿಸಲಾಗಿದೆ, ಇದರಲ್ಲಿ 755 ಮೀಸಲಾದ ಕೋವಿಡ್ ಆಸ್ಪತ್ರೆಗಳು ಮತ್ತು 1389 ಮೀಸಲಾದ ಕೋವಿಡ್ ಆರೋಗ್ಯ ಕೇಂದ್ರಗಳು (ಡಿ ಸಿ ಹೆಚ್ ಸಿ) ಸೇರಿವೆ.

ದೇಶದಲ್ಲಿ ಕೋವಿಡ್-19 ಗಾಗಿ ಒಟ್ಟು 15,712 ದೃಢಪಡಿಸಿದ ಪ್ರಕರಣಗಳು ವರದಿಯಾಗಿವೆ. ಒಟ್ಟು 2231 ವ್ಯಕ್ತಿಗಳು ಅಂದರೆ, ಒಟ್ಟು ಪ್ರಕರಣಗಳಲ್ಲಿ 14.19% ರಷ್ಟು ಗುಣಮುಖರಾಗಿದ್ದಾರೆ / ಚೇತರಿಸಿಕೊಂಡ ನಂತರ ಬಿಡುಗಡೆ ಮಾಡಲಾಗಿದೆ

ಮಾಹೆ (ಪುದುಚೇರಿ) ಮತ್ತು ಕೊಡಗು (ಕರ್ನಾಟಕ) ಕಳೆದ 28 ದಿನಗಳಲ್ಲಿ ಹೊಸ ಪ್ರಕರಣಗಳು ವರದಿಯಾಗಿಲ್ಲ. ಕಳೆದ 14 ದಿನಗಳಲ್ಲಿ 23 ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಂದ 54 ಜಿಲ್ಲೆಗಳು ಹೊಸ ಪ್ರಕರಣಗಳನ್ನು ವರದಿ ಮಾಡಿಲ್ಲ. ಹಿಂದಿನ ಪಟ್ಟಿಯನ್ನು ಹೊರತುಪಡಿಸಿ, 10 ಹೊಸ ಜಿಲ್ಲೆಗಳನ್ನು ಸೇರಿಸಲಾಗಿದೆ. ಅವುಗಳೆಂದರೆ: ಗಯಾ ಮತ್ತು ಸರನ್ (ಬಿಹಾರ); ಬರೇಲಿ (ಉತ್ತರ ಪ್ರದೇಶ); ಫತೇಘಡ್ ಸಾಹಿಬ್ ಮತ್ತು ರೂಪನಗರ (ಪಂಜಾಬ್); ಭಿವಾನಿ, ಹಿಸಾರ್, ಫತೇಹಾಬಾದ್ (ಹರಿಯಾಣ); ಕಚರ್ ಮತ್ತು ಲಖಿಂಪುರ್ (ಅಸ್ಸಾಂ).

ಕೋವಿಡ್-19ಗೆ ಸಂಬಂಧಿತ ತಾಂತ್ರಿಕ ಸಮಸ್ಯೆಗಳು, ಮಾರ್ಗಸೂಚಿಗಳು ಮತ್ತು ಸಲಹೆಗಳ ಎಲ್ಲಾ ಅಧಿಕೃತ ಮತ್ತು ಹೊಸ ಮಾಹಿತಿಗಾಗಿ ದಯವಿಟ್ಟು ನಿಯಮಿತವಾಗಿ ಭೇಟಿ ನೀಡಿ: https://www.mohfw.gov.in

ಕೋವಿಡ್-19 ಗೆ ಸಂಬಂಧಿಸಿದ ತಾಂತ್ರಿಕ ಪ್ರಶ್ನೆಗಳನ್ನು technquery.covid19[at]gov[dot]in ಮತ್ತು ಇತರ ಪ್ರಶ್ನೆಗಳನ್ನು ಕೇಳಲು ncov2019[at]gov[dot]in ಗೆ ಇಮೇಲ್ ಮಾಡಬಹುದು.

ಕೋವಿಡ್-19 ಬಗ್ಗೆ ಯಾವುದೇ ಪ್ರಶ್ನೆಗಳಿದ್ದಲ್ಲಿ, ದಯವಿಟ್ಟು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಹಾಯವಾಣಿ ಸಂಖ್ಯೆ. : +91-11-23978046 ಅಥವಾ 1075 (ಟೋಲ್-ಫ್ರೀ). ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ಕೋವಿಡ್-19ಗೆ ಸಂಬಂಧಿಸಿದ ಸಹಾಯವಾಣಿ ಸಂಖ್ಯೆಗಳ ಪಟ್ಟಿ https://www.mohfw.gov.in/pdf/coronvavirushelplinenumber.pdf ನಲ್ಲಿಯೂ ಲಭ್ಯವಿದೆ.

***


(Release ID: 1616235) Visitor Counter : 209