ನಾಗರೀಕ ವಿಮಾನಯಾನ ಸಚಿವಾಲಯ
ಲೈಫ್ ಲೈನ್ ಉಡಾನ್ ವಿಮಾನಗಳು 2,87,061 ಕಿ.ಮೀ. ದೂರ ಕ್ರಮಿಸಿ, ಕೊವಿಡ್-19 ವಿರುದ್ಧದ ಹೋರಾಟಕ್ಕೆ ಪುಷ್ಠಿ ನೀಡಿವೆ
Posted On:
19 APR 2020 2:22PM by PIB Bengaluru
ಲೈಫ್ ಲೈನ್ ಉಡಾನ್ ವಿಮಾನಗಳು 2,87,061 ಕಿ.ಮೀ. ದೂರ ಕ್ರಮಿಸಿ, ಕೊವಿಡ್-19 ವಿರುದ್ಧದ ಹೋರಾಟಕ್ಕೆ ಪುಷ್ಠಿ ನೀಡಿವೆ
ಪವನ್ ಹನ್ಸ್ ನಿಯಮಿತ ಸಂಸ್ಥೆ ಸೇರಿದಂತೆ ಹೆಲಿಕಾಪ್ಟರ್ ಸೇವೆಗಳು ಈಶಾನ್ಯ, ಜಮ್ಮು ಮತ್ತು ಕಾಶ್ಮೀರ, ಲಡಾಖ್, ಮತ್ತು ದ್ವೀಪ ಪ್ರದೇಶಗಳಿಗೆ ನಿರ್ಣಾಯಕ ವೈದ್ಯಕೀಯ ಸಾಮಗ್ರಿಗಳು ಮತ್ತು ರೋಗಿಗಳನ್ನು ಸಾಗಿಸುತ್ತಿವೆ.
ಏರ್ ಇಂಡಿಯಾ, ಅಲಯೆನ್ಸ್ ಏರ್, ಐಎಎಫ್, ಮತ್ತು ಖಾಸಗಿ ಸಂಸ್ಥೆಗಳ 288 ವಿಮಾನಗಳು ಲೈಫ್ ಲೈನ್ ಉಡಾನ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಇಂದಿನವರೆಗೆ 479.55 ಟನ್ ಗಳಷ್ಟು ಸರಕುಗಳನ್ನು ಸಾಗಿಸಲಾಗಿದೆ. ಇವುಗಳಲ್ಲಿ 180 ವಿಮಾನಗಳು ಏರ್ ಇಂಡಿಯಾ ಮತ್ತು ಅಲಯೆನ್ಸ್ ಏರ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಇಂದಿನವರೆಗೆ ಲೈಫ್ ಲೈನ್ ಉಡಾನ್ ವಿಮಾನಗಳು ಸುಮಾರು 2,87,061 ಕಿ. ಮೀ. ಗೂ ಹೆಚ್ಚು ವ್ಯಾಪ್ತಿಯನ್ನ ಕ್ರಮಿಸಿವೆ. ಅಗತ್ಯ ವೈದ್ಯಕೀಯ ಸಾಮಗ್ರಿಗಳನ್ನು ದೇಶದ ದೂರದ ಭಾಗಗಳಿಗೆ ಸಾಗಿಸುವ ಮೂಲಕ ಕೊವಿಡ್ – 19 ರ ವಿರುದ್ಧದ ಭಾರತದ ಹೋರಾಟಕ್ಕೆ ನೆರವು ಒದಗಿಸಲು ‘ಲೈಫ್ ಲೈನ್ ಉಡಾನ್’ ವಿಮಾನಗಳು ಎಂ ಒ ಸಿ ಎ ಮೂಲಕ ಕಾರ್ಯನಿರ್ವಹಿಸುತ್ತಿವೆ.
18 ಏಪ್ರಿಲ್ 2020 ರವರೆಗೆ ಪವನ್ ಹನ್ಸ್ ಹೆಲಿಕಾಪ್ಟರ್ ಗಳು 6265 ಕಿ. ಮೀ. ಗಳ ದೂರ ಕ್ರಮಿಸಿ 1.86 ಟನ್ ಗಳಷ್ಟು ಸರಕುಗಳನ್ನು ಸಾಗಿಸಿವೆ. ಪವನ್ ಹನ್ಸ್ ನಿಯಮಿತ ಸಂಸ್ಥೆ ಸೇರಿದಂತೆ ಹೆಲಿಕಾಪ್ಟರ್ ಸೇವೆಗಳು ಜಮ್ಮು ಮತ್ತು ಕಾಶ್ಮೀರ, ಲದಾಖ್, ದ್ವೀಪಗಳು ಮತ್ತು ಈಶಾನ್ಯ ಪ್ರದೇಶಗಳಿಗೆ ನಿರ್ಣಾಯಕ ವೈದ್ಯಕೀಯ ಸಾಮಗ್ರಿಗಳು ಮತ್ತು ರೋಗಿಗಳನ್ನು ಸಾಗಿಸಲು ಕಾರ್ಯನಿರ್ವಹಿಸುತ್ತಿವೆ. ದೇಶೀಯ ಲೀಫ್ ಲೈನ್ ಉಡಾನ್ ಸಾಗಾಣೆ ಮಾಡುವ ಸರಕುಗಳಲ್ಲಿ, ಕೊವಿಡ್ – 19 ಗೆ ಸಂಬಂಧಿಸಿದ ಕಾರಕಗಳು, ಕಿಣ್ವಗಳು, ವೈದ್ಯಕೀಯ ಉಪಕರಣಗಳು, ಪರೀಕ್ಷಾ ಕಿಟ್ ಗಳು ಮತ್ತು ವೈಯಕ್ತಿಕ ರಕ್ಷಣಾ ಸಾಧನಗಳು (ಪಿಪಿಇ), ಮಾಸ್ಕ್ ಗಳು, ಕೈಗವಸುಗಳು ಮತ್ತು ಹೆಚ್ ಎಲ್ ಎಲ್ ಹಾಗೂ ಐ ಸಿ ಎಮ್ ಆರ್ ನ ಇತರ ಉಪಕರಣಗಳೂ ಸೇರಿದಂತೆ, ರಾಜ್ಯ ಮತ್ತು ಕೇಂದ್ರಾಡಳಿತ ಸರ್ಕಾರಗಳಿಂದ ಮನವಿ ಪಡೆಯಲಾದ ಸರಕುಗಳು ಮತ್ತು ಅಂಚೆ ಪ್ಯಾಕೆಟ್ ಗಳನ್ನು ಸಹ ಒಳಗೊಂಡಿದೆ.
ಈಶಾನ್ಯ ಪ್ರದೇಶ, ದ್ವೀಪ ಪ್ರದೇಶಗಳು ಮತ್ತು ಬೆಟ್ಟ ಪ್ರದೇಶದ ರಾಜ್ಯಗಳಿಗೆ ವಿಶೇಷ ಗಮನಹರಿಸಲಾಗಿದೆ. ಪ್ರಮುಖವಾಗಿ ಜಮ್ಮು ಮತ್ತು ಕಾಶ್ಮೀರ, ಲದಾಖ್, ಈಶಾನ್ಯ ಮತ್ತು ಇತರ ದ್ವೀಪ ಪ್ರದೇಶಗಳಿಗಾಗಿ ಏರ್ ಇಂಡಿಯಾ ಮತ್ತು ಐಎಎಫ್ ಜಂಟಿಯಾಗಿ ಕಾರ್ಯನಿರ್ವಹಿಸುತ್ತಿವೆ.
ದೇಶೀಯ ಸರಕು ಸಾಗಿಸುವ ವಿಮಾನಯಾನ ನಿರ್ವಾಹಕರಾದ ಬ್ಲೂ ಡಾರ್ಟ್, ಸ್ಪೈಸ್ ಜೆಟ್ ಮತ್ತು ಇಂಡಿಗೊ ವಾಣಿಜ್ಯ ಆಧಾರದ ಮೇಲೆ ಕಾರ್ಗೊ ವಿಮಾನಗಳ ಹಾರಾಟ ನಿರ್ವಹಿಸುತ್ತಿವೆ. ಸ್ಪೈಸ್ ಜೆಟ್ 6,00,261 ಕಿ. ಮೀ. ದೂರವನ್ನು ಮತ್ತು 3270 ಟನ್ ಗಳಷ್ಟು ಸರಕುಗಳನ್ನು 410 ಕಾರ್ಗೊ ವಿಮಾನಗಳ ಮೂಲಕ 24 ಮಾರ್ಚ್ ರಿಂದ 18 ಏಪ್ರಿಲ್ 2020 ರ ನಡುವೆ ಸಾಗಾಟ ನಡೆಸಿತು. ಇವುಗಳಲ್ಲಿ 128 ವಿದೇಶೀ ಕಾರ್ಗೊ ವಿಮಾನಗಳಾಗಿವೆ. ಬ್ಲೂ ಡಾರ್ಟ್ 1,39,179 ಕಿ. ಮೀ. ದೂರವನ್ನು ಮತ್ತು 2241 ಟನ್ ಗಳಷ್ಟು ಸರಕುಗಳನ್ನು 141 ದೇಶೀಯ ಕಾರ್ಗೊ ವಿಮಾನಗಳ ಮೂಲಕ, 25 ಮಾರ್ಚ್ ರಿಂದ 18 ಏಪ್ರಿಲ್ 2020 ರ ನಡುವೆ ಸಾಗಾಟ ನಡೆಸಿತು. ಇಂಡಿಗೊ 32,290 ಕಿ. ಮೀ. ದೂರವನ್ನು ಮತ್ತು 48 ಟನ್ ಗಳಷ್ಟು ಸರಕುಗಳನ್ನು 31 ಕಾರ್ಗೊ ವಿಮಾನಗಳ ಮೂಲಕ 3 ರಿಂದ 18 ಏಪ್ರಿಲ್ 2020 ರ ನಡುವೆ ಸಾಗಾಟ ನಡೆಸಿತು. ಇದರಲ್ಲಿ ಸರ್ಕಾರಕ್ಕಾಗಿ ಉಚಿತವಾಗಿ ಸಾಗಿಸಲಾದ ವೈದ್ಯಕೀಯ ಸಾಮಗ್ರಿಗಳೂ ಒಳಗೊಂಡಿವೆ.
ಅಂತಾರಾಷ್ಟ್ರೀಯ ವಲಯ - ಔಷಧಿಗಳು, ವೈದ್ಯಕೀಯ ಉಪಕರಣಗಳು ಮತ್ತು ಕೊವಿಡ್ – 19 ಪರಿಹಾರ ಸಾಮಗ್ರಿಗಳ ಸಾಗಣೆಗೆ ಪೂರ್ವ ಏಷ್ಯಾದೊಂದಿಗೆ ಏರ್ ಬ್ರಿಡ್ಜ್ ಅನ್ನು ಸ್ಥಾಪಿಸಿದ ನಂತರ ತರಲಾದ ದಿನಾಂಕವಾರು ವೈದ್ಯಕೀಯ ಸರಕು ಪ್ರಮಾಣ ಕೆಳಗಿನಂತಿದೆ:
ಕ್ರಮ ಸಂಖ್ಯೆ
|
ದಿನಾಂಕ
|
ಇಂದ
|
ಪ್ರಮಾಣ (ಟನ್ ಗಳಲ್ಲಿ)
|
1
|
04.4.2020
|
ಶಾಂಘೈ
|
21
|
2
|
07.4.2020
|
ಹಾಂಗ್ ಕಾಂಗ್
|
06
|
3
|
09.4.2020
|
ಶಾಂಘೈ
|
22
|
4
|
10.4.2020
|
ಶಾಂಘೈ
|
18
|
5
|
11.4.2020
|
ಶಾಂಘೈ
|
18
|
6
|
12.4.2020
|
ಶಾಂಘೈ
|
24
|
7
|
14.4.2020
|
ಹಾಂಗ್ ಕಾಂಗ್
|
11
|
8
|
14.4.2020
|
ಶಾಂಘೈ
|
22
|
9
|
16.4.2020
|
ಶಾಂಘೈ
|
22
|
10
|
16.4.2020
|
ಹಾಂಗ್ ಕಾಂಗ್
|
17
|
11
|
16.4.2020
|
ಸಿಯೋಲ್
|
05
|
12
|
17.4.2020
|
ಶಾಂಘೈ
|
21
|
13
|
18.4.2020
|
ಶಾಂಘೈ
|
17
|
14
|
18.4.2020
|
ಸಿಯೋಲ್
|
14
|
15
|
18.4.2020
|
ಗ್ವಾಂಗ್ ಝೊವ್
|
04
|
|
|
ಒಟ್ಟು
|
242
|
ದಕ್ಷಿಣ ಏಷ್ಯಾದಲ್ಲೇ, ಏರ್ ಇಂಡಿಯಾ ಏಪ್ರಿಲ್ 7, 2020 ಮತ್ತು ಏಪ್ರಿಲ್ 8, 2020 ರಂದು 9 ಟನ್ ಗಳಷ್ಟು ಸರಕುಗಳನ್ನು ಕೊಲಂಬೊಗೆ ಸಾಗಿಸಿವೆ
ಕೃಷಿ ಉಡಾನ್ ಕಾರ್ಯಕ್ರಮದಡಿ ಏರ್ ಇಂಡಿಯಾ ಎರಡು ವಿಮಾನಗಳನ್ನು ಮುಂಬೈ - ಫ್ರಾಂಕ್ ಫರ್ಟ್ ಮತ್ತು ಮುಂಬೈ – ಲಂಡನ್ ನಡುವೆ ಕಳೆದ ವಾರ ಉಡಾಯನವನ್ನು ನಡೆಸಿದ್ದು, ಹಣ್ಣು ಮತ್ತು ತರಕಾರಿಗಳನ್ನು ಸಾಗಿಸಿ, ಅಲ್ಲಿಂದ ಸಾಮಾನ್ಯ ಸರಕುಗಳೊಂದಿಗೆ ಮರಳಿ ಬಂತು. 15 ಏಪ್ರಿಲ್ 2020 ರಂದು ವೈದ್ಯಕೀಯ ಸಾಮಗ್ರಿಗಳನ್ನು ಹೊಂದಿದ ಮತ್ತೊಂದು ವಿಮಾನವನ್ನು ಏರ್ ಇಂಡಿಯಾ ದೆಹಲಿ-ಸೆಚೆಲೆಸ್-ಮಾರಿಶಿಯಸ್-ದೆಹಲಿ ಮಧ್ಯೆ ಹಾರಾಟ ನಡೆಸಿತು.
***
(Release ID: 1616203)
Visitor Counter : 237
Read this release in:
English
,
Urdu
,
Marathi
,
Hindi
,
Assamese
,
Manipuri
,
Bengali
,
Punjabi
,
Gujarati
,
Tamil
,
Telugu