ರಕ್ಷಣಾ ಸಚಿವಾಲಯ

ವಿಶೇಷ ರೈಲಿನ ಮೂಲಕ ಸೇನಾ ಸಿಬ್ಬಂದಿ ಮುಂಚೂಣಿ ಪ್ರದೇಶಕ್ಕೆ

Posted On: 17 APR 2020 6:35PM by PIB Bengaluru

ವಿಶೇಷ ರೈಲಿನ ಮೂಲಕ ಸೇನಾ ಸಿಬ್ಬಂದಿ ಮುಂಚೂಣಿ ಪ್ರದೇಶಕ್ಕೆ

 

ಬೆಂಗಳೂರು, ಬೆಳಗಾವಿ ಮತ್ತು ಸಿಕಂದರಾಬಾದ್ ಗಳಲ್ಲಿನ ಸೇನಾ ತರಬೇತಿ ಸಂಸ್ಥೆಗಳಲ್ಲಿ ವೃತ್ತಿಪರ ಕೋರ್ಸ್ ಗಳನ್ನು ಪೂರ್ಣಗೊಳಿಸಿರುವ ಹಾಗೂ ಉತ್ತರ ಭಾರತದ ಹಲವು ಕಾರ್ಯಾಚರಣೆ ಪ್ರದೇಶಗಳಲ್ಲಿನ ಘಟಕಗಳಿಗೆ ಮರು ಸೇರ್ಪಡೆಗೆ ಬಾಕಿ ಇದ್ದ, ಸುಮಾರು 950 ಸಿಬ್ಬಂದಿಯನ್ನು ಹೊತ್ತ ವಿಶೇಷ ರೈಲು ಬೆಂಗಳೂರಿನಿಂದ ಇಂದು(ಏಪ್ರಿಲ್ 17) ಪ್ರಯಾಣ ಬೆಳೆಸಿತು. ಈ ಎಲ್ಲ ಸಿಬ್ಬಂದಿ ಕಡ್ಡಾಯ ಕ್ವಾರಂಟೈನ್ ಅವಧಿಯನ್ನು ಪೂರ್ಣಗೊಳಿಸಿದ್ದಾರೆ ಮತ್ತು ಅವರು ವೈದ್ಯಕೀಯವಾಗಿ ಸದೃಢರಾಗಿದ್ದಾರೆ. ಈ ರೈಲು 2020ರ ಏಪ್ರಿಲ್ 20ರಂದು ನಿಗದಿತ ಸ್ಥಳವನ್ನು ತಲುಪಲಿದೆ.

ಕೋವಿಡ್-19 ನಿರ್ವಹಣೆಗೆ ಪ್ಲಾಟ್ ಫಾರ್ಮ್ ಸೋಂಕು ನಿವಾರಣೆಗೆ, ಬೋಗಿ ಮತ್ತು ಬ್ಯಾಗೇಜ್ ಸಾಗಾಣೆಗೆ ಸ್ಯಾನಿಟೈಸೇಶನ್ ಸುರಂಗ ನಿರ್ಮಾಣ ಸೇರಿದಂತೆ ಸಾಧ್ಯವಾದ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಅವರು ರೈಲು ಹತ್ತುವಾಗ ಮತ್ತು ತಪಾಸಣೆ ಮಾಡುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಖಾತ್ರಿಪಡಿಸಲಾಯಿತು.

ದೇಶದ ಈಶಾನ್ಯ ಭಾಗಕ್ಕೆ ನಿಯೋಜನೆಗೊಂಡಿರುವ ಸೇನಾ ಯೋಧರನ್ನು ಕರೆದೊಯ್ಯುವ ವಿಶೇಷ ಎರಡನೇ ರೈಲು ನಂತರ ಹೊರಡಲು ನಿಗದಿಯಾಗಿದೆ.

***


(Release ID: 1615550) Visitor Counter : 177