ಗೃಹ ವ್ಯವಹಾರಗಳ ಸಚಿವಾಲಯ
ಕೋವಿಡ್-19 ವಿರುದ್ಧ ಹೋರಾಡಲು ಲಾಕ್ ಡೌನ್ ನಿರ್ಬಂಧದಿಂದ ಉಪ ಅರಣ್ಯ ಉತ್ಪನ್ನ, ಪ್ಲಾಂಟೇಶನ್ , ಎನ್ ಬಿಎಫ್ ಸಿ ಎಸ್, ಸಹಕಾರ ಸಾಲ ಸಂಘಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕೈಗೊಳ್ಳುವ ಕೆಲವು ನಿರ್ಮಾಣ ಚಟುವಟಿಕೆಗಳಿಗೆ ವಿನಾಯಿತಿ ನೀಡಿ ಆದೇಶ ಹೊರಡಿಸಿದ ಎಂಎಚ್ಎ
Posted On:
17 APR 2020 10:42AM by PIB Bengaluru
ಕೋವಿಡ್-19 ವಿರುದ್ಧ ಹೋರಾಡಲು ಲಾಕ್ ಡೌನ್ ನಿರ್ಬಂಧದಿಂದ ಉಪ ಅರಣ್ಯ ಉತ್ಪನ್ನ, ಪ್ಲಾಂಟೇಶನ್ , ಎನ್ ಬಿಎಫ್ ಸಿ ಎಸ್, ಸಹಕಾರ ಸಾಲ ಸಂಘಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕೈಗೊಳ್ಳುವ ಕೆಲವು ನಿರ್ಮಾಣ ಚಟುವಟಿಕೆಗಳಿಗೆ ವಿನಾಯಿತಿ ನೀಡಿ ಆದೇಶ ಹೊರಡಿಸಿದ ಎಂಎಚ್ಎ
ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ(ಎಂಎಚ್ಎ) ಕೋವಿಡ್-19 ವಿರುದ್ಧ ರಾಷ್ಟ್ರವ್ಯಾಪಿ ವಿಧಿಸಿರುವ ಲಾಕ್ ಡೌನ್ ಕುರಿತಂತೆ ಎಲ್ಲ ಸಚಿವಾಲಯಗಳು, ಇಲಾಖೆಗಳಿಗೆ ಪರಿಷ್ಕೃತ ಮಾರ್ಗಸೂಚಿಯನ್ನು ಹೊರಡಿಸಿ ಅದರಲ್ಲಿ ಕೆಲವೊಂದು ಚಟುವಟಿಕೆಗಳಿಗೆ (https://www.mha.gov.in/sites/default/files/MHA%20order%20dt%2015.04.2020%2C%20with%20Revised%20Consolidated%20Guidelines_compressed%20%283%29.pdf) ವಿನಾಯಿತಿಯನ್ನು ನೀಡಿದೆ.
ಈ ಕೆಳಗಿನ ಕೆಲವು ಚಟುವಟಿಕೆಗಳಿಗೆ ಲಾಕ್ ಡೌನ್ ನಿರ್ಬಂಧ ಆದೇಶದಿಂದ ವಿನಾಯಿತಿ ನೀಡಲಾಗಿದೆ :
· ಅರಣ್ಯ ಪ್ರದೇಶದಲ್ಲಿ ಅರಣ್ಯ ವಾಸಿಗಳು ಮತ್ತು ಇತರೆ ಪರಿಶಿಷ್ಟ ವರ್ಗದವರು, ಅರಣ್ಯ ಉಪ ಉತ್ಪನ್ನ(ಎಂಎಫ್ ಪಿ)/ಮರಹುಟ್ಟು ಹೊರತುಪಡಿಸಿ ಇತರೆ ಅರಣ್ಯ ಉತ್ಪನ್ನ(ಎನ್ ಟಿಎಫ್ ಪಿ) ಸೇರಿ ಅರಣ್ಯ ಉತ್ಪನ್ನಗಳ ಸಂಗ್ರಹ, ಕಟಾವು ಮತ್ತು ಸಂಸ್ಕರಣೆ.
· ಬಿದಿರು, ತೆಂಗು, ಅಡಿಕೆ, ಕೋಕಾ, ಸಾಂಬಾರ ಪದಾರ್ಥಗಳ ಕಟಾವು, ಸಂಸ್ಕರಣೆ ಪ್ಯಾಕೇಜಿಂಗ್ ಮಾರಾಟ ಮತ್ತು ಮಾರುಕಟ್ಟೆ.
· ವಸತಿ ಹಣಕಾಸು ಸಂಸ್ಥೆಗಳು(ಎಚ್ಎಫ್ ಸಿಎಸ್) ಸೇರಿದಂತೆ ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳು(ಎನ್ ಬಿಎಫ್ ಸಿ) ಮತ್ತು ಸಣ್ಣ ಹಣಕಾಸು ಕಂಪನಿಗಳು(ಎನ್ ಬಿಎಫ್ ಸಿ – ಎಂಎಫ್ಐ)ಗಳು ಅತಿ ಕಡಿಮೆ ಸಿಬ್ಬಂದಿಯೊಂದಿಗೆ ಕಾರ್ಯ ನಿರ್ವಹಣೆಗೆ ಅವಕಾಶ.
· ಸಹಕಾರ ಸಾಲ ಸಂಘಗಳು/ ಸೊಸೈಟಿಗಳು
· ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರು, ನೈರ್ಮಲೀಕರಣ ಕಾಮಗಾರಿಗಳು ಹಾಗೂ ವಿದ್ಯುತ್ ಪ್ರಸರಣ ಮಾರ್ಗ ಅಳವಡಿಕೆ ಮತ್ತು ನಿರ್ಮಾಣ, ದೂರಸಂಪರ್ಕ ಆಪ್ಟಿಕಲ್ ಫೈಬರ್ ಮತ್ತು ಕೇಬಲ್ ಅಳವಡಿಕೆ ಹಾಗೂ ಅದರ ಸಂಬಂಧಿ ಚಟುವಟಿಕೆಗಳನ್ನು ಕೈಗೊಳ್ಳಲು ಅವಕಾಶ.
ಆದೇಶದ ಪ್ರತಿಗೆ ಇಲ್ಲಿ ಕ್ಲಿಕ್ ಮಾಡಿ
***
(Release ID: 1615323)
Visitor Counter : 266
Read this release in:
English
,
Urdu
,
Hindi
,
Marathi
,
Manipuri
,
Assamese
,
Bengali
,
Punjabi
,
Gujarati
,
Odia
,
Tamil
,
Telugu
,
Malayalam