ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ (ಪಿ.ಎಂ.ಜಿ.ಕೆ.ವೈ.) ಅಡಿಯಲ್ಲಿ ಪಿ.ಎಂ.ಯು.ವೈ.ಫಲಾನುಭವಿಗಳಿಗೆ ಇದುವರೆಗೆ 1.51 ಕೋಟಿಗೂ ಅಧಿಕ ಉಚಿತ ಎಲ್.ಪಿ.ಜಿ. ಸಿಲಿಂಡರ್ ವಿತರಣೆ

Posted On: 16 APR 2020 7:29PM by PIB Bengaluru

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ (ಪಿ.ಎಂ.ಜಿ.ಕೆ.ವೈ.) ಅಡಿಯಲ್ಲಿ ಪಿ.ಎಂ.ಯು.ವೈ.ಫಲಾನುಭವಿಗಳಿಗೆ ಇದುವರೆಗೆ 1.51 ಕೋಟಿಗೂ ಅಧಿಕ ಉಚಿತ ಎಲ್.ಪಿ.ಜಿ. ಸಿಲಿಂಡರ್ ವಿತರಣೆ

ಎಲ್.ಪಿ.ಜಿ.ಪೂರೈಕೆ ಹುಡುಗರ ಕಠಿಣ ಶ್ರಮ ಮತ್ತು ಪ್ರಾಮಾಣಿಕತೆಯನ್ನು ಶ್ಲಾಘಿಸಿ ಅವರನ್ನು ಮುಂಚೂಣಿ ಸೈನಿಕರೆಂದು ಬಣ್ಣಿಸಿದ ಶ್ರೀ ಧರ್ಮೇಂದ್ರ ಪ್ರಧಾನ್

ಪಿ.ಎಂ.-ಕೇರ್ಸ್ ನಿಧಿಗೆ ತಾವೂ ಕೊಡುಗೆ ನೀಡಿದ್ದಾಗಿ ಕೆಲವು ಎಲ್.ಪಿ.ಜಿ. ಪೂರೈಕೆ ಹುಡುಗರಿಂದ ಮಾಹಿತಿ

 

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನಾ (ಪಿ.ಎಂ.ಜಿ.ಕೆ.ವೈ.) ಅಡಿಯಲ್ಲಿ ಈ ತಿಂಗಳು ಪಿ.ಎಂ.ಯು.ವೈ. ಫಲಾನುಭವಿಗಳಿಗೆ ಇದುವರೆಗೆ 1.51 ಕೋಟಿಗೂ ಅಧಿಕ ಉಚಿತ ಎಲ್.ಪಿ.ಜಿ.ಸಿಲಿಂಡರುಗಳನ್ನು ವಿತರಿಸಲಾಗಿದೆ. ಪಿ.ಎಂ.ಕೆ.ಜಿ.ವೈ. ಅಡಿಯಲ್ಲಿ ಹಲವಾರು ಪರಿಹಾರ ಕ್ರಮಗಳನ್ನು ಬಡವರ ಕಲ್ಯಾಣಕ್ಕಾಗಿ ಕೇಂದ್ರ ಸರಕಾರ ಘೋಷಿಸಿದೆ ಮತ್ತು ಯೋಜನೆಯ ಬಹಳ ಮುಖ್ಯವಾದ ಘಟಕವೆಂದರೆ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ (ಪಿ.ಎಮ್.ಯು.ವೈ.) 8 ಕೋಟಿ ಫಲಾನುಭವಿಗಳಿಗೆ 3 ಎಲ್.ಪಿ.ಜಿ.ಸಿಲಿಂಡರುಗಳನ್ನು (14.2 ಕಿ.ಗ್ರಾಂ.) 2020 ರ ಏಪ್ರಿಲ್ ನಿಂದ ಜೂನ್ ತಿಂಗಳ ನಡುವಿನ ಅವಧಿಯಲ್ಲಿ ಉಚಿತವಾಗಿ ಒದಗಿಸುವುದಾಗಿದೆ. ಯಾವುದೇ ಅಡೆತಡೆ ಇಲ್ಲದೆ ಈ ಯೋಜನೆ ಜಾರಿಗೆ ತೈಲ ಮಾರುಕಟ್ಟೆ ಕಂಪೆನಿಗಳು ಒಂದು 14.2 ಕಿ.ಗ್ರಾಂ ಮರುಪೂರಣ ಮಾಡಲಾದ ಸಿಲಿಂಡರ್ ಅಥವಾ 5 ಕಿಲೋ ಗ್ರಾಂ ಮರುಪೂರಣ ಮಾಡಲಾದ ಸಿಲಿಂಡರ್ ಗೆ ಸಮನಾದ ಮುಂಗಡವನ್ನು ಆಯಾ ಮಾದರಿಯ ಪ್ಯಾಕೇಜಿಗೆ ಅನುಗುಣವಾಗಿ ಪಿ.ಎಂ.ಯು.ವೈ. ಗ್ರಾಹಕರ ಖಾತೆಗೆ ವರ್ಗಾಯಿಸುತ್ತಿವೆ. ಗ್ರಾಹಕರು ಈ ಮುಂಗಡವನ್ನು ಎಲ್.ಪಿ.ಜಿ.ಮರುಪೂರಣ ಮಾಡಲಾದ ಸಿಲಿಂಡರನ್ನು ಪಡೆಯಲು ಬಳಸಬಹುದು. ತೈಲ ಮಾರುಕಟ್ಟೆ ಕಂಪೆನಿಗಳು (ಒ.ಎಂ.ಸಿ.ಗಳು) ದಿನವೊಂದಕ್ಕೆ 50 ರಿಂದ 60 ಲಕ್ಷ ಸಿಲಿಂಡರುಗಳನ್ನು ವಿತರಿಸುತ್ತಿವೆ, ಅವುಗಳಲ್ಲಿ ಪಿ.ಎಂ.ಯು.ವೈ ಫಲಾನುಭವಿಗಳಿಗಾಗಿರುವ 18 ಲಕ್ಷ ಉಚಿತ ಸಿಲಿಂಡರುಗಳು ಸೇರಿವೆ.

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಹಾಗು ಉಕ್ಕು ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ ಇಂದು 800 ಕ್ಕೂ ಅಧಿಕ ಎಲ್.ಪಿ.ಜಿ. ಸಿಲಿಂಡರ್ ಪೂರೈಕೆ ಹುಡುಗರ ವೆಬಿನಾರ್ ನಲ್ಲಿ ಭಾಗವಹಿಸಿದರು.ಎಂ./ ಪಿ.ಎನ್.ಜಿ. ಕಾರ್ಯದರ್ಶಿ, ಎಂ/ಪಿ.ಎನ್.ಜಿ. ಮತ್ತು ಒ.ಎಂ.ಸಿ.ಗಳ ಅಧಿಕಾರಿಗಳು ಇದರಲ್ಲಿ ಪಾಲ್ಗೊಂಡಿದ್ದರು. ಎಲ್.ಪಿ.ಜಿ.ಸಿಲಿಂಡರ್ ಪೂರೈಕೆ ಹುಡುಗರನ್ನು ಕೋವಿಡ್ -19 ಮಹಾಮಾರಿಯಿಂದಾಗಿ ಉದ್ಭವಿಸಿರುವ ಅಭೂತಪೂರ್ವ ಬಿಕ್ಕಟ್ಟಿನ ಸಮಯದಲ್ಲಿ ಮುಂಚೂಣಿ ಯೋಧರು ಮತ್ತು ಕೊರೋನಾ ಹೋರಾಟಗಾರರು ಎಂದು ಬಣ್ಣಿಸಿದ ಶ್ರೀ ಪ್ರಧಾನ್, ಅವರ ನಿಷ್ಟೆ/ ಪ್ರಾಮಾಣಿಕತೆ , ಕಠಿಣ ಶ್ರಮ ಮತ್ತು ಕರ್ತವ್ಯದಲ್ಲಿ ಅರ್ಪಣಾಭಾವವನ್ನು ಕೊಂಡಾಡಿದರು. ಇಂತಹ ಸಮಯದಲ್ಲಿ , ಅವರು 60 ಲಕ್ಷದಷ್ಟು ಸಿಲಿಂಡರುಗಳನ್ನು ದಿನನಿತ್ಯ ಪೂರೈಕೆ ಮಾಡುತ್ತಿದ್ದಾರೆ, ಕೆಲವೊಮ್ಮೆ ಅವರ ಜೀವಕ್ಕಿರುವ ಅಪಾಯವನ್ನೂ ಲೆಕ್ಕಿಸದೆ ಅವರು ಈ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ ಪ್ರಧಾನ್ ಅವರು, ಕರ್ತವ್ಯ ನಿರ್ವಹಿಸುವಾಗ ಸಾಕಷ್ಟು ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳುವಂತೆಯೂ ಕರೆ ನೀಡಿದರು. ಸಂದರ್ಭಕ್ಕೆ ತಕ್ಕಂತೆ ಎದ್ದು ನಿಲ್ಲುವ ಮೂಲಕ ಕೆಲಸ ನಿರ್ವಹಿಸಿ ಅವರು ಸಮಾಜದಿಂದ ವಿಶೇಷ ಮನ್ನಣೆಯನ್ನು ಪಡೆದಿದ್ದಾರೆ ಮಾತ್ರವಲ್ಲ ಬಡವರ ಆಶೀರ್ವಾದವನ್ನೂ ಪಡೆಯುತ್ತಿದ್ದಾರೆ ಎಂದೂ ಹೇಳಿದರು.

ಈ ಕಠಿಣ ಪರಿಸ್ಥಿತಿಯಲ್ಲಿ ಕೆಲವು ಎಲ್.ಪಿ.ಜಿ. ಪೂರೈಕೆ ಹುಡುಗರು ಅವರ ಅನುಭವವನ್ನು ಹಂಚಿಕೊಂಡಿದ್ದಾರೆ. ಕಂಪೆನಿಗಳು ತಮಗೆ ಸಾಬೂನು, ಸ್ಯಾನಿಟೈಸರ್ , ಮುಖಗವಸು, ಮತ್ತು ಗ್ಲೋವ್ ಗಳನ್ನು ಒಳಗೊಂಡ ರಕ್ಷಣಾ ಕಿಟ್ ಒದಗಿಸಿರುವುದಾಗಿ ತಿಳಿಸಿದ್ದಾರೆ. ಸಿಲಿಂಡರುಗಳನ್ನು ಪೂರೈಕೆ ಮಾಡುವುದಕ್ಕೆ ಮೊದಲು ಅವುಗಳನ್ನು ಸ್ಯಾನಿಟೈಸ್ ಮಾಡುವುದಾಗಿ ತಿಳಿಸಿರುವ ಅವರು ಸಿಲಿಂಡರುಗಳನ್ನು ಪೂರೈಸುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿರುವುದಾಗಿಯೂ ಹೇಳಿದ್ದಾರೆ. ಅವರಲ್ಲಿ ಹಲವರು ತಾವು ಗ್ರಾಹಕರಿಗೆ ಸಾಮಾಜಿಕ ಅಂತರ ಪಾಲನೆ, ಆರೋಗ್ಯ ಸೇತು ಆಪ್ ನ್ನು ತಮ್ಮ ಫೋನುಗಳಿಗೆ ಅಳವಡಿಸಿಕೊಳ್ಳುವುದರಿಂದ ದೊರೆಯುವ ಪ್ರಯೋಜನ ಮತ್ತು ಡಿಜಿಟಲ್ ಮಾದರಿಯ ಮೂಲಕ ಪಾವತಿ ಮಾಡುವ ಬಗ್ಗೆ ಅರಿವು ಮೂಡಿಸುತ್ತಿರುವುದಾಗಿಯೂ ಹೇಳಿದ್ದಾರೆ. ಅವರಲ್ಲಿ ಅನೇಕ ಮಂದಿ ಸರಕಾರ ಮತ್ತು ಒ.ಎಂ.ಸಿ.ಗಳು ಅವರಿಗೆ ವಿಮೆ, ಮತ್ತು ಎಕ್ಸ್-ಗ್ರೇಸಿಯಾ ಪಾವತಿಗಳಿಗೆ ಅವಕಾಶ ಒದಗಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ಕೆಲವು ಪೂರೈಕೆ ಹುಡುಗರು ತಾವೂ ಪಿ.ಎಂ.-ಕೇರ್ಸ್ ನಿಧಿಗೆ ದೇಣಿಗೆ ನೀಡಿರುವುದಾಗಿ ಹೇಳಿರುವರಲ್ಲದೆ ತಮ್ಮ ಕರ್ತವ್ಯ ನಿಭಾಯಿಸುವಾಗ ಬಡವರಿಗೆ ಮತ್ತು ಹಿರಿಯರಿಗೆ ಸಹಾಯ ಮಾಡಿರುವುದಾಗಿಯೂ ತಿಳಿಸಿದ್ದಾರೆ.

ಕೈಗಾರಿಕಾ ದತ್ತಾಂಶಗಳು

16.04.2020ರಂದು ಉದ್ಯಮದ ಆರಂಬಿಕ ಸ್ಥಿತಿ ಗತಿ (ಲಕ್ಷಗಳಲ್ಲಿ )

 

15.04.2020

14.04.2020

ಮಾನದಂಡಗಳು ...

ನಿನ್ನೆಯವರೆಗೆ

ಮೊನ್ನೆಯವರೆಗೆ

ಪಿ.ಎಂ.ಯು. ವೈ ಯಲ್ಲಿ ದಿನದ ಬುಕ್ಕಿಂಗ್

19.26

18.8

ಪಿ.ಎಂ.ಯು.ವೈ.ಯಲ್ಲಿ ಒಟ್ಟು ಬುಕ್ಕಿಂಗ್*

194.83

175.6

ಪಿ.ಎಂ.ಯು. ವೈ ಯಲ್ಲಿ ದಿನದ ಡೆಲಿವರಿ

18.59

18.7

ಪಿ.ಎಂ.ಯು. ವೈ ಯಲ್ಲಿ ಒಟ್ಟು ಡೆಲಿವರಿ

151.24

132.6

ದಿನದ ಒಟ್ಟು ಮರುಪೂರಣ ಬುಕ್ಕಿಂಗ್

53.6

50.2

ದಿನದ ಒಟ್ಟು ಮರುಪೂರಣ ಡೆಲಿವರಿ

54.71

51.4

ಸ್ಥಾವರದಿಂದ ಪೂರೈಕೆ (14.2 ಕಿ.ಗ್ರಾಂ)

58.18

36.6

· 6.98 ಲಕ್ಷ ಮುಂದುವರೆಸಲಾದ ಬುಕ್ಕಿಂಗ್ ಗಳನ್ನು ಇದರಲ್ಲಿ ಸೇರಿಸಲಾಗಿಲ್ಲ.

***

 

 



(Release ID: 1615320) Visitor Counter : 275