ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

ಎನ್ ಸಿಇಆರ್ ಟಿ ಶಾಲೆಗಳಿಗೆ ಪರ್ಯಾಯ ಶೈಕ್ಷಣಿಕ ಕ್ಯಾಲೆಂಡರ್ ಬಿಡುಗಡೆ ಮಾಡಿದ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರು

Posted On: 16 APR 2020 4:31PM by PIB Bengaluru

ಎನ್ ಸಿಇಆರ್ ಟಿ ಶಾಲೆಗಳಿಗೆ ಪರ್ಯಾಯ ಶೈಕ್ಷಣಿಕ ಕ್ಯಾಲೆಂಡರ್ ಬಿಡುಗಡೆ ಮಾಡಿದ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರು

ಈ ಕ್ಯಾಲೆಂಡರ್ ಅಡಿಯಲ್ಲಿ I-XIIನೇ ತರಗತಿ ವರೆಗಿನ ಎಲ್ಲಾ ವಿಷಯಗಳು ಒಳಪಡುತ್ತವೆ – ಕೇಂದ್ರ ಎಚ್ ಆರ್ ಡಿ ಸಚಿವರು

 

ಕೋವಿಡ್-19 ಹಿನ್ನೆಲೆಯಲ್ಲಿ ಮನೆಗಳಲ್ಲಿಯೇ ಇರುವ ವಿದ್ಯಾರ್ಥಿಗಳನ್ನು ಅರ್ಥಪೂರ್ಣವಾಗಿ ಶೈಕ್ಷಣಿಕ ಚಟುವಟಿಕೆಗಳ ಮೂಲಕ ಅವರ ಮನೆಗಳಲ್ಲೇ ತೊಡಗಿಸಲು ಮತ್ತು ಪೋಷಕರು ಹಾಗೂ ಶಿಕ್ಷಕರಿಗೆ ನೆರವಾಗುವ ಉದ್ದೇಶದಿಂದ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಮಾರ್ಗದರ್ಶನದಲ್ಲಿ ಎನ್ ಸಿಇಆರ್ ಟಿ ಹೊಸ ಪರ್ಯಾಯ ಶೈಕ್ಷಣಿಕ ಕ್ಯಾಲೆಂಡರ್ ಅನ್ನು ಅಭಿವೃದ್ಧಿಪಡಿಸಿದೆ. ಈ ಪರ್ಯಾಯ ಶೈಕ್ಷಣಿಕ ಕ್ಯಾಲೆಂಡರ್ ಅನ್ನು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ನವದೆಹಲಿಯಲ್ಲಿಂದು ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಈ ಕ್ಯಾಲೆಂಡರ್ ನಲ್ಲಿ ಶಿಕ್ಷಕರು ಹೇಗೆ ನಾನಾ ವಿಧದ ತಾಂತ್ರಿಕ ಉಪಕರಣಗಳು ಮತ್ತು ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಂಡು, ಹಾಸ್ಯವನ್ನೂ ಒಳಗೊಂಡಿರುವಂತೆ, ಆಸಕ್ತಿಕರವಾಗಿ ಹಾಗೂ ಮನೆಯಲ್ಲೇ ಇದ್ದುಕೊಂಡು ಹೇಗೆ ಕಲಿಯಬಹುದು ಎಂಬುದು ಸೇರಿದಂತೆ ಶಿಕ್ಷಣವನ್ನು ಕಲಿಸಬಹುದು ಎಂಬ ಬಗ್ಗೆ ತಿಳಿಸಲಾಗಿದೆ. ಆದರೆ ಇದರಲ್ಲಿ ಮೊಬೈಲ್, ರೇಡಿಯೋ, ಟೆಲಿವಿಷನ್, ಎಸ್ಎಂಎಸ್ ಮತ್ತು ಇತರೆ ಸಾಮಾಜಿಕ ಮಾಧ್ಯಮಗಳ ಪ್ರಮಾಣ ಏರುಪೇರಾಗುವುದನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ವಾಸ್ತವ ಅಂಶವೆಂದರೆ ಬಹುತೇಕರ ಮೊಬೈಲ್ ನಲ್ಲಿ ಅಂತರ್ಜಾಲ ಸಂಪರ್ಕ ಇರುವುದಿಲ್ಲ ಅಥವಾ ವಾಟ್ಸ್ ಅಪ್, ಫೇಸ್ ಬುಕ್, ಟ್ವಿಟರ್, ಗೂಗಲ್ ಮತ್ತಿತರ ನಾನಾ ಸಾಮಾಜಿಕ ಮಾಧ್ಯಮಗಳನ್ನು ಬಳಕೆ ಮಾಡುವ ಛಾತಿ ಇರುವುದಿಲ್ಲ. ಈ ವಿಷಯಗಳಲ್ಲಿ ಶಿಕ್ಷಕರು, ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಮೊಬೈಲ್ ಫೋನ್ ಗೆ ಎಸ್ಎಂಎಸ್ ಅಥವಾ ದೂರವಾಣಿ ಕರೆಯ ಮೂಲಕ ಅವರಿಗೆ ಮಾರ್ಗದರ್ಶನ ನೀಡಲು ಕ್ಯಾಲೆಂಡರ್ ಸಹಾಯ ಮಾಡುತ್ತದೆ. ಈ ಕ್ಯಾಲೆಂಡರ್ ಅನುಷ್ಠಾನಕ್ಕೆ ಪ್ರಾಥಮಿಕ ಹಂತದ ವಿದ್ಯಾರ್ಥಿಗಳಿಗೆ ಪೋಷಕರು ಸಹಾಯ ಮಾಡಬೇಕೆಂದು ನಿರೀಕ್ಷಿಸಲಾಗಿದೆ.

ಈ ಕ್ಯಾಲೆಂಡರ್ ವ್ಯಾಪ್ತಿಯಲ್ಲಿ I-XIIನೇ ತರಗತಿ ವ್ಯಾಪ್ತಿಯಲ್ಲಿ ಎಲ್ಲ ತರಗತಿಗಳ ಎಲ್ಲ ವಿಷಯಗಳು ಒಳಗೊಂಡಿವೆ ಎಂದು ಸಚಿವರು ಹೇಳಿದರು. ಈ ಕ್ಯಾಲೆಂಡರ್ ದಿವ್ಯಾಂಗರು(ವಿಶೇಷ ಗಮನಹರಿಸಬೇಕಾದ ಮಕ್ಕಳು) ಸೇರಿದಂತೆ ಎಲ್ಲ ವರ್ಗದ ಮಕ್ಕಳ ಅಗತ್ಯತೆಗಳನ್ನು ಈಡೇರಿಸುತ್ತದೆ. ಆಡಿಯೋ ಪುಸ್ತಕಗಳು, ರೇಡಿಯೊ ಕಾರ್ಯಮಗಳು, ವಿಡಿಯೋ ಕಾರ್ಯಕ್ರಮಗಳು ಇದರಲ್ಲಿ ಸೇರಿವೆ.

ಈ ಕ್ಯಾಲೆಂಡರ್ ಪ್ರತಿ ವಾರದ ಯೋಜನೆಯನ್ನು ಹೊಂದಿದ್ದು, ಅದರಲ್ಲಿ ಪಠ್ಯಕ್ರಮ ಅಥವಾ ಪಠ್ಯಕ್ಕೆ ಸಂಬಂಧಿಸಿದಂತೆ ಆಸಕ್ತಿಕರ ಮತ್ತು ಸವಾಲಿನ ಚಟುವಟಿಕೆಗಳು ಒಳಗೊಂಡಿವೆ ಎಂದು ಶ್ರೀ ಪೋಖ್ರಿಯಾಲ್ ಹೇಳಿದರು. ಅತ್ಯಂತ ಪ್ರಮುಖವಾಗಿ ಇದು ಕಲಿಕೆಯ ಫಲಿತಾಂಶಗಳ ಧ್ಯೇಯಗಳನ್ನು ಗುರುತಿಸುತ್ತದೆ. ಈ ಧ್ಯೇಯಗಳನ್ನು ಗುರುತಿಸುವ ಉದ್ದೇಶದಿಂದ ಶಿಕ್ಷಕರು ಮತ್ತು ಪೋಷಕರು ತಮ್ಮ ಮಕ್ಕಳ ಕಲಿಕೆಯ ಪ್ರಗತಿ ಮತ್ತು ಪಠ್ಯಕ್ರಮ ಹೊರತುಪಡಿಸಿ, ಏನೇನು ಕಲಿತಿದ್ದಾರೆ ಎಂಬುದರ ಫಲಿತಾಂಶವನ್ನು ತಿಳಿಯಲು ನೆರವಾಗುತ್ತದೆ.

ಕ್ಯಾಲೆಂಡರ್ ನಲ್ಲಿ ಕಲೆ, ಶಿಕ್ಷಣ, ದೈಹಿಕ ಕಸರತ್ತುಗಳು, ಯೋಗ, ವೃತ್ತಿಪರ ಕೌಶಲ್ಯಗಳು ಸೇರಿದಂತೆ ಹಲವು ಪ್ರಯೋಗಾತ್ಮಕ ಕಲಿಕೆಗಳು ಒಳಗೊಂಡಿವೆ ಎಂದು ಸಚಿವರು ಹೇಳಿದರು. ಈ ಕ್ಯಾಲೆಂಡರ್ ತರಗತಿವಾರು ಮತ್ತು ವಿಷಯವಾರು ಚಟುವಟಿಕೆಗಳನ್ನು ಕೋಷ್ಠಕ ರೂಪದಲ್ಲಿ ಸಿದ್ಧಪಡಿಸಲಾಗಿದೆ. ಅಲ್ಲದೆ ಈ ಕ್ಯಾಲೆಂಡರ್ ನಲ್ಲಿ ಹಿಂದಿ, ಇಂಗ್ಲಿಷ್, ಉರ್ದು ಮತ್ತು ಸಂಸ್ಕೃತ ಈ ನಾಲ್ಕು ಭಾಷೆಗಳ ವಿಷಯಗಳ ವ್ಯಾಪ್ತಿಯ ಚಟುವಟಿಕೆಗಳು ಸೇರಿವೆ. ಈ ಕ್ಯಾಲೆಂಡರ್ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿನ ಆತಂಕ ಮತ್ತು ಒತ್ತಡವನ್ನು ದೂರ ಮಾಡುವ ಕಾರ್ಯತಂತ್ರ ಒಳಗೊಂಡಿದೆ. ಕ್ಯಾಲೆಂಡರ್ ನಲ್ಲಿ ಭಾರತ ಸರ್ಕಾರದ ಇ-ಪಾಠಶಾಲಾ, ಎನ್ಆರ್ ಒಇಆರ್ ಮತ್ತು ದೀಕ್ಷಾ ಪೋರ್ಟಲ್ ನಲ್ಲಿ ಪ್ರತಿ ಪಾಠಗಳ ಇ-ಪಠ್ಯ ಸಾಮಗ್ರಿ ಲಿಂಕ್ ಕೂಡ ಒಳಗೊಂಡಿರುತ್ತದೆ.

ಈ ಕ್ಯಾಲೆಂಡರ್ ನಲ್ಲಿ ಸೂಚಿಸಲಾಗಿರುವ ಚಟುವಟಿಕೆಗಳು ಎಲ್ಲವೂ ಸಲಹೆಗಳ ಸ್ವರೂಪದಲ್ಲಿರುತ್ತವೆ ಮತ್ತು ಅವು ಕಡ್ಡಾಯವಾಗಿ ಮಾಡಲೇಬೇಕೆಂಬ ಒತ್ತಡವಿರುವುದಿಲ್ಲ ಎಂದು ಸಚಿವರು ಹೇಳಿದರು. ಶಿಕ್ಷಕರು ಮತ್ತು ಪೋಷಕರು ಈ ಚಟುವಟಿಕೆಗಳನ್ನು ಕ್ರೂಡೀಕರಿಸಿಕೊಂಡು ಆಸಕ್ತಿ ತೋರಿಸುವಂತಹ ವಿದ್ಯಾರ್ಥಿಗಳಿಂದ ಇವುಗಳನ್ನೆಲ್ಲ ಮಾಡಿಸಬಹುದು.

ಈ ಕ್ಯಾಲೆಂಡರ್ ಅನ್ನು ಡಿಟಿಎಚ್ ಚಾನಲ್ಸ್ ನಲ್ಲಿ ಮತ್ತು ವಿಡಿಯೋ ಕಾನ್ಫರೆನ್ಸ್ ಮೂಲಕ ಎಸ್ ಸಿಇಆರ್ ಟಿಎಸ್, ಶೈಕ್ಷಣಿಕ ನಿರ್ದೇಶನಾಲಯಗಳು, ಎಸ್ ಸಿಇಆರ್ ಟಿಎಸ್, ಕೇಂದ್ರೀಯ ವಿದ್ಯಾಲಯ ಸಂಘಟನೆ, ನವೋದಯ ವಿದ್ಯಾಲಯ ಸಮಿತಿ, ಸಿಬಿಎಸ್ಇ, ರಾಜ್ಯ ಶಾಲಾ ಶಿಕ್ಷಣ ಮಂಡಳಿ ಇತ್ಯಾದಿಗಳಿಗೆ ಜೊತೆ ಹಂಚಿಕೊಳ್ಳಲಾಯಿತು.

ಇದರಿಂದ ಕೋವಿಡ್-19 ಎದುರಿಸಲು ಈ ಸಂದರ್ಭದಲ್ಲಿ ನಮ್ಮ ವಿದ್ಯಾರ್ಥಿಗಳು, ಶಿಕ್ಷಕರು, ಶಾಲಾ ಪ್ರಾಂಶುಪಾಲರುಗಳು ಮತ್ತು ಪೋಷಕರು ಆನ್ ಲೈನ್ ಬೋಧನೆ – ಕಲಿಕಾ ಸಂಪನ್ಮೂಲ ಬಳಕೆ ಮಾಡಿಕೊಳ್ಳುವ ಸಕಾರಾತ್ಮಕ ಮಾರ್ಗಗಳನ್ನು ಕಂಡುಕೊಳ್ಳಲು ನೆರವಾಗಲಿದೆ ಮತ್ತು ಮನೆಯಲ್ಲಿಯೇ ಶಾಲಾ ಶಿಕ್ಷಣವನ್ನು ಪಡೆಯುವ ಮೂಲಕ ಮಕ್ಕಳ ಕಲಿಕೆಯ ಫಲಿತಾಂಶ ಸುಧಾರಿಸಲಿದೆ.

***



(Release ID: 1615292) Visitor Counter : 296