ಗೃಹ ವ್ಯವಹಾರಗಳ ಸಚಿವಾಲಯ

ಜೂಮ್ (ZOOM) ಮೀಟಿಂಗ್ ಪ್ಲಾಟ್‌ಫಾರ್ಮ್‌ನ ಸುರಕ್ಷಿತ ಬಳಕೆಯ ಬಗ್ಗೆ ಗೃಹ ಸಚಿವಾಲಯದ  ಸಲಹೆ

Posted On: 16 APR 2020 4:30PM by PIB Bengaluru

ಜೂಮ್ (ZOOM) ಮೀಟಿಂಗ್ ಪ್ಲಾಟ್ಫಾರ್ಮ್ ಸುರಕ್ಷಿತ ಬಳಕೆಯ ಬಗ್ಗೆ ಗೃಹ ಸಚಿವಾಲಯದ  ಸಲಹೆ

 

ಕೇಂದ್ರ ಗೃಹ ಸಚಿವಾಲಯದ (ಎಂಎಚ್) ಅಡಿಯಲ್ಲಿರುವ ಸೈಬರ್ ಸಮನ್ವಯ ಕೇಂದ್ರ (CyCord) ಖಾಸಗಿ ವ್ಯಕ್ತಿಗಳು ಜೂಮ್ ಮೀಟಿಂಗ್ ಪ್ಲಾಟ್ಫಾರ್ಮ್ ಅನ್ನು ಸುರಕ್ಷಿತವಾಗಿ ಬಳಸುವುದರ ಕುರಿತು ಸಲಹೆಗಳನ್ನು ನೀಡಿದೆ. ವೇದಿಕೆಯನ್ನು ಸರ್ಕಾರಿ ಅಧಿಕಾರಿಗಳು ಅಧಿಕೃತ ಉದ್ದೇಶಗಳಿಗಾಗಿ ಬಳಸುವಂತಿಲ್ಲ ಎಂದು ಇದರಲ್ಲಿ  ಹೇಳಲಾಗಿದೆ.

ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡದ (Cert-In) ಹಿಂದಿನ ಸಲಹೆಗಳನ್ನು ಉಲ್ಲೇಖಿಸಿ ಜೂಮ್ ಸುರಕ್ಷಿತ ವೇದಿಕೆಯಲ್ಲ ಎಂದು ಹೇಳಲಾಗಿದೆ. ಖಾಸಗಿ ಉದ್ದೇಶಗಳಿಗಾಗಿ ವೇದಿಕೆಯನ್ನು ಬಳಸಲು ಇಚ್ಛಿಸುವ ಖಾಸಗಿ ವ್ಯಕ್ತಿಗಳನ್ನು ರಕ್ಷಿಸಲು ಮಾರ್ಗಸೂಚಿಗಳನ್ನು ನೀಡಲಾಗಿದೆ.

ಜೂಮ್ ಕಾನ್ಫರೆನ್ಸ್ ಕೊಠಡಿಗೆ ಯಾವುದೇ ಅನಧಿಕೃತ ಪ್ರವೇಶವನ್ನು ತಡೆಗಟ್ಟುವುದು ಮತ್ತು ಕಾನ್ಫರೆನ್ಸ್ ನಲ್ಲಿ ಇತರ ಬಳಕೆದಾರರ ಟರ್ಮಿನಲ್ಗಳ ಮೇಲೆ ಅನಧಿಕೃತವಾಗಿ ಭಾಗವಹಿಸುವವರ ದುರುದ್ದೇಶಪೂರಿತ ದಾಳಿಗಳನ್ನು ತಡೆಯುವುದು ಸಲಹೆಯ ಉದ್ದೇಶವಾಗಿದೆ.

ಲಿಂಕ್ನಲ್ಲಿ ವ್ಯಕ್ತಿಗಳು ತೆಗೆದುಕೊಳ್ಳಬೇಕಾದ ರಕ್ಷಣಾ ಕ್ರಮಗಳ ವಿವರಗಳನ್ನು ನೋಡಬಹುದು.

***(Release ID: 1615249) Visitor Counter : 66