ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್-19 ಅಪ್ ಡೇಟ್ಸ್

Posted On: 16 APR 2020 6:18PM by PIB Bengaluru

ಕೋವಿಡ್-19 ಅಪ್ ಡೇಟ್ಸ್

 

ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳೊಂದಿಗಿನ ಸಾಮೂಹಿಕ ಪ್ರಯತ್ನದ ಮೂಲಕ ಕೋವಿಡ್-19 ತಡೆಗಟ್ಟುವಿಕೆ, ನಿಯಂತ್ರಣ ಮತ್ತು ನಿರ್ವಹಣೆಗಾಗಿ ಭಾರತ ಸರ್ಕಾರ ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇವುಗಳನ್ನು ನಿಯಮಿತವಾಗಿ ಉನ್ನತ ಮಟ್ಟದಲ್ಲಿ ಪರಿಶೀಲಿಸಲಾಗುತ್ತಿದೆ ಮತ್ತು ಮೇಲ್ವಿಚಾರಣೆ ಮಾಡಲಾಗುತ್ತಿದೆ.

ಭಾರತದಲ್ಲಿ ಕೋವಿಡ್-19 ಅನ್ನು ತಡೆಗಟ್ಟುವ ಕ್ರಮಗಳ ಕುರಿತು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷ್ ವರ್ಧನ್ ಅವರು ಆರೋಗ್ಯ ಕಾರ್ಯಕರ್ತರು ಮತ್ತು ಹಿರಿಯ ಅಧಿಕಾರಿಗಳು ಮತ್ತು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಕ್ಷೇತ್ರ ಅಧಿಕಾರಿಗಳೊಂದಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವರಾದ ಶ್ರೀ ಅಶ್ವಿನಿ ಕುಮಾರ್ ಚೌಬೆ ಸಮ್ಮುಖದಲ್ಲಿ ವಿಡಿಯೋ ಕಾನ್ಫರೆನಸ್ಸ ಮೂಲಕ ಚರ್ಚೆ ನಡೆಸಿದರು.

ಜಿಲ್ಲಾ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಡಬ್ಲ್ಯುಎಚ್ಒ ಅಧಿಕಾರಿಗಳು ಕ್ಲಸ್ಟರ್ಗಳಿಗಾಗಿ ಮೈಕ್ರೊ ಪ್ಲ್ಯಾನ್ಗಳ ಅಭಿವೃದ್ಧಿ ಮತ್ತು ರಾಜ್ಯಗಳು/ ಕೇಂದ್ರಾಡಳಿದ ಪ್ರದೇಶಗಳ ಅಧಿಕಾರಿಗಳೊಂದಿಗೆ ಸಾಂಕ್ರಾಮಿಕ ಹರಡುವಿಕೆಯನ್ನು  ತಡೆಗಟ್ಟಲು ತಾಂತ್ರಿಕ ಸಮನ್ವಯವನ್ನು ಮಾಡುತ್ತಿದ್ದಾರೆ ಮತ್ತು ಜಿಲ್ಲೆಗಳ ನಿರಂತರ ಕಣ್ಗಾವಲಿಗಾಗಿ ಕಾರ್ಯತಂತ್ರವನ್ನು ರೂಪಿಸುವಲ್ಲಿ ಅವರಿಗೆ ಸಹಾಯ ಮಾಡುತ್ತಿದ್ದಾರೆ ಎಂದು ಡಾ. ಹರ್ಷ್ ವರ್ಧನ್ ಅವರಿಗೆ ತಿಳಿಸಲಾಯಿತು. ಪ್ರಸರಣದ ಪರಿಸ್ಥಿತಿಗಳು ಮತ್ತು ಪ್ರಕರಣಗಳ ಪರೀಕ್ಷೆಯ ಆಧಾರದ ಮೇಲೆ ನಡೆಯುತ್ತಿರುವ ಕಣ್ಗಾವಲು ಮತ್ತು ಪ್ರತಿಸ್ಪಂದನೆಯನ್ನು ಮತ್ತಷ್ಟು ಬಲಪಡಿಸಲು ಡಬ್ಲ್ಯುಎಚ್ಒ ನ ರಾಷ್ಟ್ರೀಯ ಪೋಲಿಯೊ ಕಣ್ಗಾವಲು ನೆಟ್ವರ್ಕ್ ತಂಡವು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವನ್ನು ಬೆಂಬಲಿಸುತ್ತದೆ.

ಡಾ. ಹರ್ಷ್ ವರ್ಧನ್ ಅವರು ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿ (ಸಿಐಐ) ಆಯೋಜಿಸಿದ್ದ ಭಾರತೀಯ ಉದ್ಯಮದ ನಾಯಕರೊಂದಿಗೆ ಸಂವಾದ ನಡೆಸಿದರು, ಅಲ್ಲಿ ಅವರು ಪಿಎಂ-ಕೇರ್ಸ್ ನಿಧಿಗೆ ಕೊಡುಗೆ ನೀಡಿದ್ದಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದರು.  ಉದ್ಯಮದವರು ಎದುರಿಸುತ್ತಿರುವ ತೊಂದರೆಗಳ ಬಗ್ಗೆ ಸರ್ಕಾರಕ್ಕೆ ತಿಳಿದಿದೆ ಮತ್ತು ಆರ್ಥಿಕತೆಯ ಪುನರುಜ್ಜೀವನಕ್ಕಾಗಿ ಕೈಗೊಳ್ಳುತ್ತಿರುವ ಕ್ರಮಗಳಿಗೆ ಸಂಬಂಧಿಸಿದಂತೆ ಅವರ ಕಳವಳಗಳನ್ನು ನಿವಾರಿಸುತ್ತದೆ ಎಂದು ಅವರು ಭರವಸೆ ನೀಡಿದರು. ಕೋವಿಡ್-19 ಒಡ್ಡಿದ ಆರೋಗ್ಯ ರಕ್ಷಣೆಯ ಸವಾಲಿನಲ್ಲಿ ಮೇಕ್ ಇನ್ ಇಂಡಿಯಾ ಅವಕಾಶಗಳನ್ನು ಉತ್ತಮವಾಗಿ ಬಳಸಿಕೊಳ್ಳಲು ಅವರು ಉದ್ಯಮದವರನ್ನು ಪ್ರೋತ್ಸಾಹಿಸಿದರು, ಇದರಿಂದಾಗಿ ದೇಶವು ಹೆಚ್ಚು ಚೇತರಿಸಿಕೊಳ್ಳುವ ಮತ್ತು ಸ್ವಾವಲಂಬನೆಯಿಂದ ನಿರ್ಣಾಯಕ ಆರೋಗ್ಯ ಸಾಧನಗಳನ್ನು ಒದಗಿಸುವಂತಾಗುತ್ತದೆ ಎಂದರು.

ಲಾಕ್ ಡೌನ್ ಸಮಯದಲ್ಲಿ ಸುರಕ್ಷಿತ ಕುಡಿಯುವ ನೀರಿನ ಅಭ್ಯಾಸಕ್ಕಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಸಾರ್ವಜನಿಕ ಪ್ರಕಟಣೆಯನ್ನು ನೀಡಿದೆ.  ಪರಿಹಾರ ಶಿಬಿರಗಳಿಗೆ ಮತ್ತು ಸಮಾಜದ ದುರ್ಬಲ ವರ್ಗದವರಿಗೆ ವಿಶೇಷ ಗಮನಹರಿಸಿ ನೀರಿನ ಸರಬರಾಜನ್ನು ಹೆಚ್ಚಿಸಲು ಸಾರ್ವಜನಿಕ ಆರೋಗ್ಯ ಇಲಾಖೆಗಳಿಗೆ ಸೂಚಿಸಲಾಗಿದೆ.  ಕ್ಲೋರಿನ್ ಮಾತ್ರೆಗಳು, ಬ್ಲೀಚಿಂಗ್ ಪೌಡರ್ ಮತ್ತು ಹೈಪೋಕ್ಲೋರೈಟ್ ದ್ರಾವಣವನ್ನು ಸೂಕ್ತವಾಗಿ ಬಳಸುವಂತೆ ಸೂಚಿಸಲಾಗಿದೆ.

ಪ್ರಸಕ್ತ ಸಾಂಕ್ರಾಮಿಕ ಹರಡಿರುವ ಸಂದರ್ಭದಲ್ಲಿ ಹಿಂದೆಂದೂ ಕಾಣದಂತಹ ಬೇಡಿಕೆಯನ್ನು ಪೂರೈಸಲು ಅಗತ್ಯ ಆರೋಗ್ಯ ಸೇವೆಗಳನ್ನು ತಲುಪಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಎಲ್ಲಾ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ವಿವರವಾದ ಮಾರ್ಗಸೂಚಿಯನ್ನು ಹೊರಡಿಸಿದೆ.  ಈ ಸೇವೆಗಳಲ್ಲಿ ತಾಯಿ ಮಕ್ಕಳ ಆರೋಗ್ಯ, ಸಾಂಕ್ರಾಮಿಕ ಕಾಯಿಲೆಗಳ ತಡೆಗಟ್ಟುವಿಕೆ ಮತ್ತು ನಿರ್ವಹಣೆ, ತೊಡಕುಗಳನ್ನು ತಪ್ಪಿಸಲು ದೀರ್ಘಕಾಲದ ಕಾಯಿಲೆಗಳ ಚಿಕಿತ್ಸೆ ಮತ್ತು ತುರ್ತು ಪರಿಸ್ಥಿತಿಗಳನ್ನು ಪರಿಹರಿಸುವುದು ಸೇರಿವೆ. ಆರೋಗ್ಯ ಕಾರ್ಯಕರ್ತರಿಗೆ ಸುರಕ್ಷತೆಯನ್ನು ಖಾತರಿಪಡಿಸುವಾಗ ಈ ಸೇವೆಗಳನ್ನು ಒದಗಿಸಬೇಕು ಎಂದು ಸೂಚಿಸಲಾಗಿದೆ. ಕೋವಿಡ್-19ಗೆ ಮೀಸಲಾದ ಸೌಲಭ್ಯಗಳಲ್ಲದೆ, ಉಳಿದ ಸೌಲಭ್ಯಗಳು ಲಾಭಕ್ಕಾಗಿ ಅಲ್ಲ ಮತ್ತು ಖಾಸಗಿ ವಲಯದ ಸಹಾಯದಿಂದ ಅಂತಹ ಸೇವೆಗಳನ್ನು ಒದಗಿಸುವುದನ್ನು ಮುಂದುವರಿಸುತ್ತವೆ. ಜನದಟ್ಟಣೆ ತಡೆಗಟ್ಟಲು ಟೆಲಿ-ಆರೋಗ್ಯ ಸೇವೆಗಳನ್ನು ಉತ್ತೇಜಿಸಬೇಕು.

ಲಾಕ್‌ಡೌನ್ ಅಥವಾ ನಿರ್ಬಂಧಗಳ ಅವಧಿಯಲ್ಲಿ ರೋಗನಿರೋಧಕ ಶಕ್ತಿ ಮತ್ತು ಪ್ರಸವಪೂರ್ವದ ಆರೈಕೆಯಂತಹ ಸೇವೆಗಳನ್ನು ಮರುಸಂಘಟಿಸಬೇಕು ಮತ್ತು ದೈಹಿಕ ಅಂತರ ಮತ್ತು ಸೋಂಕಿನ ತಡೆಗಟ್ಟುವಿಕೆಗೆ ಸರಿಯಾಗಿ ಅಂತಹ ಸೇವೆಗಳಿಗೆ ದಿನಗಳನ್ನು ನಿಗದಿಪಡಿಸಬಹುದು ಎಂದು ಸೂಚಿಸಲಾಗಿದೆ. ಗರ್ಭಿಣಿಯರು, ಎಸ್‌ಎಎಂ (ತೀವ್ರ ಮತ್ತು ತೀವ್ರ ಅಪೌಷ್ಟಿಕತೆ), ಟಿಬಿ, ಕುಷ್ಠರೋಗ, ಎಚ್‌ಐವಿ, ವೈರಲ್ ಹೆಪಟೈಟಿಸ್, ಸಿಒಪಿಡಿ, ಡಯಾಲಿಸಿಸ್ ಇರುವ ಮಕ್ಕಳನ್ನು ಉಪ ಆರೋಗ್ಯ ಕೇಂದ್ರದ ಪ್ರಾಥಮಿಕ ಆರೋಗ್ಯ ತಂಡ ಮತ್ತು ಆಯುಷ್ಮಾನ್ ಭಾರತ್ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳ (ಎಚ್‌ಡಬ್ಲ್ಯೂಸಿ) ಮೂಲಕ ಅನುಸರಿಸಬೇಕು.

ಪ್ರಸ್ತುತ, ಕೋವಿಡ್-19ಕ್ಕೆ ಸಂಬಂಧಿಸಿದಂತೆ ದೇಶದಲ್ಲಿ 12,380 ದೃಢಪಡಿಸಿದ ಪ್ರಕರಣಗಳು ಮತ್ತು 414 ಸಾವುಗಳು ವರದಿಯಾಗಿವೆ. 1489 ಜನರನ್ನು ಗುಣಪಡಿಸಲಾಗಿದೆ/ ಚೇತರಿಸಿಕೊಂಡ ನಂತರ ಬಿಡುಗಡೆ ಮಾಡಲಾಗಿದೆ. ಭಾರತದಲ್ಲಿ ಸಿಒವಿಐಡಿ -19 ಪ್ರಕರಣಗಳ ಸಾವಿನ ಪ್ರಮಾಣ (ಸಿಎಫ್‌ಆರ್) 3.3%. ಚೇತರಿಸಿಕೊಂಡ ಜನರ ಶೇಕಡಾವಾರು ಪ್ರಮಾಣವು ಇಲ್ಲಿಯವರೆಗೆ 12.02% ಇದೆ.

ಇಲ್ಲಿಯವರೆಗೆ, 325 ಜಿಲ್ಲೆಗಳಲ್ಲಿ ಯಾವುದೇ ಪ್ರಕರಣಗಳು ವರದಿಯಾಗಿಲ್ಲ. ಮಾಹೆ, ಪುದುಚೇರಿಯಲ್ಲಿ ಕಳೆದ 28 ದಿನಗಳಿಂದ ಯಾವುದೇ ಹೊಸ ಪಾಸಿಟಿವ್ ಪ್ರಕರಣಗಳನ್ನು ವರದಿಯಾಗಿಲ್ಲ.  ಕಳೆದ 14 ದಿನಗಳಲ್ಲಿ ಈ ಕೆಳಗಿನ ಜಿಲ್ಲೆಗಳು ಯಾವುದೇ ಹೊಸ ಪ್ರಕರಣಗಳನ್ನು ವರದಿ ಮಾಡಿಲ್ಲ:

 

ರಾಜ್ಯ

ಜಿಲ್ಲೆಗಳ ಸಂಖ್ಯೆ

ಜಿಲ್ಲೆ(ಗಳ) ಹೆಸರು

ಬಿಹಾರ್

1

ಪಾಟ್ನಾ

ಪಶ್ಚಮ ಬಂಗಾಳ

1

ನಾಡಿಯ

ರಾಜಸ್ಥಾನ್

1

ಪ್ರತಾಪ್ ಘಢ್

ಗುಜರಾತ್

2

ಗಿರ್ ಸೋಮ್ ನಾಥ್, ಪೋರ್ ಬಂದರ್

ತೆಲಂಗಾಣ

1

ಭದ್ರಾದರಿ ಕೊತಗುಡೆಮ್

ಗೋವಾ

1

ದಕ್ಷಿಣ ಗೋವಾ

ಉತ್ತರಾಖಾಂಡ್

1

ಪಾವ್ರಿ ಗರವಾಲ್

ಉತ್ತರ ಪ್ರದೇಶ

1

ಪಿಲಿಭಿಟ್

ಜಮ್ಮು ಕಾಶ್ಮೀರ

1

ರಾಜೌರಿ

ಮಣಿಪುರ

1

ಇಂಫಾಲ್ ಪಶ್ಚಿಮ

ಛತ್ತೀಸ್ ಘಡ್

3

ಬಿಲಾಸ್ ಪುರ್, ದುರ್ಗ್ & ರಾಜನಂದಗಾವ್, ರಾಯ್ ಪುರ್

ಮಿಜೋರಾಮ್

1

ಐಜಾವ್ಲ್ ಪಶ್ಚಿಮ

ಕರ್ನಾಟಕ

5

ದಾವಣಗೆರೆ, ಕೊಡಗು, ತುಮಕೂರು, ಉಡುಪಿ & ಬಳ್ಳಾರಿ

ಕೇರಳ

2

ವಯನಾಡ್ & ಕೊಟ್ಟಾಯಂ

ಪಂಜಾಬ್

2

ಎಸ್.ಬಿ.ಎಸ್ ನಗರ್

ಹೋಷಿಯಾರ್ ಪುರ್ (29-03-2020)

ಹರ್ಯಾಣ

2

ಪಾನಿಪಟ್

ಮಧ್ಯ ಪ್ರದೇಶ

1

ಶಿವ್ ಪುರಿ

 

ಕೋವಿಡ್-19ಗೆ ಸಂಬಂಧಿತ ತಾಂತ್ರಿಕ ಸಮಸ್ಯೆಗಳು, ಮಾರ್ಗಸೂಚಿಗಳು ಮತ್ತು ಸಲಹೆಗಳ ಎಲ್ಲಾ ಅಧಿಕೃತ ಮತ್ತು ಹೊಸ ಮಾಹಿತಿಗಾಗಿ ದಯವಿಟ್ಟು ನಿಯಮಿತವಾಗಿ ಭೇಟಿ ನೀಡಿ: https://www.mohfw.gov.in

ಕೋವಿಡ್-19 ಗೆ ಸಂಬಂಧಿಸಿದ ತಾಂತ್ರಿಕ ಪ್ರಶ್ನೆಗಳನ್ನು technquery.covid19[at]gov[dot]in ಮತ್ತು ಇತರ ಪ್ರಶ್ನೆಗಳನ್ನು ಕೇಳಲು ncov2019[at]gov[dot]in ಗೆ ಇಮೇಲ್ ಮಾಡಬಹುದು.

ಕೋವಿಡ್-19 ಬಗ್ಗೆ ಯಾವುದೇ ಪ್ರಶ್ನೆಗಳಿದ್ದಲ್ಲಿ, ದಯವಿಟ್ಟು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಹಾಯವಾಣಿ ಸಂಖ್ಯೆ. : +91-11-23978046 ಅಥವಾ 1075 (ಟೋಲ್-ಫ್ರೀ). ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ಕೋವಿಡ್-19ಗೆ ಸಂಬಂಧಿಸಿದ ಸಹಾಯವಾಣಿ ಸಂಖ್ಯೆಗಳ ಪಟ್ಟಿ https://www.mohfw.gov.in/pdf/coronvavirushelplinenumber.pdf ನಲ್ಲಿಯೂ ಲಭ್ಯವಿದೆ.

***


(Release ID: 1615243) Visitor Counter : 312