ಹಣಕಾಸು ಸಚಿವಾಲಯ

ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ ನವೀಕರಣಗೊಳ್ಳಬೇಕಾದ ಆರೋಗ್ಯ ಮತ್ತು ವಾಹನ (ಥರ್ಡ್ ಪಾರ್ಟಿ) ವಿಮಾ ಪಾಲಿಸಿದಾರರು ಮೇ 15 ರವರೆಗೆ ಪ್ರೀಮಿಯಂ ಪಾವತಿ ಮಾಡಬಹುದು: ಕೇಂದ್ರ ಸರ್ಕಾರದ ಅಧಿಸೂಚನೆ

प्रविष्टि तिथि: 16 APR 2020 11:23AM by PIB Bengaluru

ಕೋವಿಡ್-19 ಲಾಕ್ಡೌನ್ ಸಮಯದಲ್ಲಿ ನವೀಕರಣಗೊಳ್ಳಬೇಕಾದ ಆರೋಗ್ಯ ಮತ್ತು ವಾಹನ (ಥರ್ಡ್ ಪಾರ್ಟಿ) ವಿಮಾ ಪಾಲಿಸಿದಾರರು ಮೇ 15 ರವರೆಗೆ ಪ್ರೀಮಿಯಂ ಪಾವತಿ ಮಾಡಬಹುದು: ಕೇಂದ್ರ ಸರ್ಕಾರದ ಅಧಿಸೂಚನೆ

ಹೆಚ್ಚುವರಿ ಅವಧಿಯಲ್ಲಿ ಪಾಲಿಸಿಯ ಮುಂದುವರಿಕೆ ಮತ್ತು ಜಗಳ ಮುಕ್ತ ಕ್ಲೈಮುಗಳ ಪಾವತಿಗೆ ಇದರಿಂದ ಅನುಕೂಲ

 

ಕೋವಿಡ್-19 ಲಾಕ್ಡೌನ್ ಸಮಯದಲ್ಲಿ ನವೀಕರಣವಾಗಬೇಕಿದ್ದ ಆರೋಗ್ಯ ಮತ್ತು ವಾಹನ (ಥರ್ಡ್ ಪಾರ್ಟಿ) ವಿಮಾ ಪಾಲಿಸಿಗಳ ಪಾಲಿಸಿದಾರರಿಗೆ ತೊಂದರೆಗಳನ್ನು ಕಡಿಮೆ ಮಾಡುವ ಉದ್ದೇಶದಿಂದ, ಕೇಂದ್ರ ಸರ್ಕಾರವು ಅಧಿಸೂಚನೆಗಳನ್ನು ಹೊರಡಿಸಿದೆ. ಅಂತಹ ಪಾಲಿಸಿದಾರರಿಗೆ ಮೇ 15 ರವರೆಗೆ ಪ್ರೀಮಿಯಂ ಪಾವತಿಗಳನ್ನು ಮಾಡಲು ಅವಕಾಶ ಕಲ್ಪಿಸಲಾಗಿದೆ. ಹೆಚ್ಚುವರಿ ಅವಧಿಯಲ್ಲಿ ಪಾಲಿಸಿ ಮುಂದುವರಿಕೆ ಮತ್ತು ಜಗಳ ಮುಕ್ತ ಹಕ್ಕುಗಳ ಪಾವತಿಯನ್ನು ಇದು ಖಚಿತಪಡಿಸುತ್ತದೆ. 2020 ಮಾರ್ಚ್ 25 ರಿಂದ 2020 ಮೇ 3 ರವರೆಗೆ ನವೀಕರಣವಾಗಬೇಕಿದ್ದ ಆರೋಗ್ಯ ಅಥವಾ ವಾಹನ (ಥರ್ಡ್ ಪಾರ್ಟಿ) ವಿಮಾ ಪಾಲಿಸಿಗಳ ಪಾಲಿಸಿದಾರರು ಕೋವಿಡ್-19 ರಿಂದಾಗಿ ದೇಶದಲ್ಲಿರುವ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, 2020 ಮೇ 15 ಅಥವಾ ಅದಕ್ಕೂ ಮೊದಲು ವಿಮೆದಾರರಿಗೆ ಪಾಲಿಸಿಗಳ ನವೀಕರಣಕ್ಕಾಗಿ ಅನುಮತಿ ನೀಡಲಾಗಿದೆ. ಪಾಲಿಸಿಯು ನವೀಕರಣಕ್ಕಾಗಿ ಬಾಕಿ ಇರುವ ದಿನಾಂಕದಿಂದ ವಾಹನ ವಿಮೆಯು ತೃತೀಯ ವಿಮಾ ರಕ್ಷಣೆಯನ್ನು ನೀಡುತ್ತದೆ. ಇದರಿಂದಾಗಿ ಹೆಚ್ಚುವರಿ ಅವಧಿಯಲ್ಲಿ ಯಾವುದೇ ಸೂಕ್ತ ಕ್ಲೈಮುಗಳನ್ನು ಪಾವತಿಸಬಹುದು.

***


(रिलीज़ आईडी: 1614958) आगंतुक पटल : 310
इस विज्ञप्ति को इन भाषाओं में पढ़ें: Punjabi , English , Urdu , Marathi , हिन्दी , Assamese , Bengali , Gujarati , Odia , Tamil , Telugu , Malayalam