ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ
ಮಾರ್ಚ್, 2020 ರ ವೇತನ ತಿಂಗಳ ಎಲೆಕ್ಟ್ರಾನಿಕ್ ಚಲನ್ ಕಮ್ ರಿಟರ್ನ್ (ಇಸಿಆರ್) ಸಲ್ಲಿಸುವ ದಿನಾಂಕ 15.04.2020 ರಿಂದ 15.05.2020 ರವರೆಗೆ ವಿಸ್ತರಣೆ
Posted On:
15 APR 2020 5:48PM by PIB Bengaluru
ಮಾರ್ಚ್, 2020 ರ ವೇತನ ತಿಂಗಳ ಎಲೆಕ್ಟ್ರಾನಿಕ್ ಚಲನ್ ಕಮ್ ರಿಟರ್ನ್ (ಇಸಿಆರ್) ಸಲ್ಲಿಸುವ ದಿನಾಂಕ 15.04.2020 ರಿಂದ 15.05.2020 ರವರೆಗೆ ವಿಸ್ತರಣೆ
ಇದರಿಂದ ಲಾಕ್ ಡೌನ್ ಅವಧಿಯಲ್ಲಿ ಸಂಬಳ ಪಾವತಿಗಾಗಿ ಸುಮಾರು 6 ಲಕ್ಷ ಸಂಸ್ಥೆಗಳಿಗೆ ಪ್ರೋತ್ಸಾಹ
ಕೋವಿಡ್ -19 ಸೃಷ್ಟಿಸಿರುವ ಪರಿಸ್ಥಿತಿ ಮತ್ತು ಕೋವಿಡ್ -19 ಹರಡುವುದನ್ನು ತಡೆಗಟ್ಟಲು ಕೇಂದ್ರ ಸರ್ಕಾರವು 24.03.2020 ರ ಮಧ್ಯರಾತ್ರಿಯಿಂದ ಘೋಷಿಸಿರುವ ಲಾಕ್‌ಡೌನ್ ಅನ್ನು ಪರಿಗಣಿಸಿ, ಮಾರ್ಚ್‌ನಲ್ಲಿ ತಮ್ಮ ಉದ್ಯೋಗಿಗಳಿಗೆ ವೇತನ ಪಾವತಿಸಿದ ಉದ್ಯೋಗದಾತರಿಗೆ 2020 ರ ಮಾರ್ಚ್ ತಿಂಗಳಿಗೆ ಎಲೆಕ್ಟ್ರಾನಿಕ್ ಚಲನ್ ಕಮ್ ರಿಟರ್ನ್ (ಇಸಿಆರ್) ಸಲ್ಲಿಸುವ ದಿನಾಂಕ ವನ್ನು 15.05.2020 ರವರೆಗೆ ವಿಸ್ತರಿಸಲಾಗಿದೆ.
ಮಾರ್ಚ್, 2020 ರ ಅಂತಿಮ ದಿನಾಂಕವು ಸಾಮಾನ್ಯವಾಗಿ 15.04.2020 ಆಗಿರುತ್ತದೆ, ಆದ್ದರಿಂದ ಇಪಿಎಫ್ ಮತ್ತು ಎಂಪಿ ಆಕ್ಟ್, 1952 ರ ವ್ಯಾಪ್ತಿಗೆ ಬರುವ ಸಂಸ್ಥೆಗಳಿಗೆ ಮಾರ್ಚ್, 2020 ಕ್ಕೆ ನೀಡಬೇಕಾದ ಕೊಡುಗೆಗಳು ಮತ್ತು ಆಡಳಿತಾತ್ಮಕ ಶುಲ್ಕಗಳನ್ನು ಪಾವತಿಸಲು ಮೂವತ್ತು ದಿನಗಳ ಹೆಚ್ಚುವರಿ ಅವಧಿ ನೀಡಲಾಗಿದೆ.
ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಈ ನಿರ್ಧಾರವು 2020 ರ ಮಾರ್ಚ್‌ನಲ್ಲಿ ತನ್ನ ಉದ್ಯೋಗಿಗಳಿಗೆ ವೇತನವನ್ನು ವಿತರಿಸಿದ ಸಂಸ್ಥೆಗಳ ಉದ್ಯೋಗದಾತರಿಗೆ ಬೆಂಬಲ ಮತ್ತು ಪರಿಹಾರ ನೀಡುವುದು ಮತ್ತು ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ನೌಕರರಿಗೆ ವೇತನ ಪಾವತಿಸಲು ಉದ್ಯೋಗದಾತರಿಗೆ ಪ್ರೋತ್ಸಾಹ ನೀಡುತ್ತದೆ. ಉದ್ಯೋಗ ಕಡಿತವನ್ನು ತಡೆಗಟ್ಟಲು ಮತ್ತು ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ನೌಕರರ ಗಳಿಕೆಯನ್ನು ಖಚಿತಪಡಿಸಿಕೊಳ್ಳಲು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯ ಉದ್ದೇಶಕ್ಕನುಗುಣವಾಗಿ ಈ ಕ್ರಮ ಕೈಗೊಳ್ಳಲಾಗಿದೆ.
ಸುಮಾರು 5 ಕೋಟಿ ಉದ್ಯೋಗಿಗಳಿಗೆ ವೇತನ ಪಾವತಿಸುವ ಸುಮಾರು 6 ಲಕ್ಷ ಸಂಸ್ಥೆಗಳು ಯಾವುದೇ ದಂಡವಿಲ್ಲದೇ ಇಸಿಆರ್ ಸಲ್ಲಿಸಲು ಈ ಪರಿಹಾರ ಪ್ರಯೋಜನವಾಗಲಿದೆ.
ಉದ್ಯೋಗದಾತರು 2020 ರ ಮಾರ್ಚ್ ವೇತನ ವಿತರಣೆಯ ದಿನಾಂಕವನ್ನು ಮಾರ್ಚ್, 2020 ರ ಇಸಿಆರ್ ನಲ್ಲಿ ಘೋಷಿಸಬೇಕು.
ಈ ಘೋಷಣೆಯೊಂದಿಗೆ ಮಾರ್ಚ್, 2020 ರ ಕೊಡುಗೆಗಳು ಮತ್ತು ಆಡಳಿತಾತ್ಮಕ ಶುಲ್ಕಗಳನ್ನು ಈಗ 15.05.2020 ರವರೆಗೆ ಪಾವತಿ ಮಾಡಬಹುದಾಗಿದೆ.
ಮಾರ್ಚ್, 2020 ರ ವೇತನವನ್ನು ವಿತರಿಸುವ ಉದ್ಯೋಗದಾತರು 2020 ರ ಮಾರ್ಚ್‌ನಲ್ಲಿ ಇಪಿಎಫ್ ಬಾಕಿ ಪಾವತಿಸಲು ನಿಗದಿತ ದಿನಾಂಕದ ವಿಸ್ತರಣೆಯ ಪರಿಹಾರವನ್ನು ಪಡೆಯುವುದಲ್ಲದೆ, 15.05.2020 ರಂದು ಅಥವಾ ಅದಕ್ಕೂ ಮೊದಲು ಪಾವತಿಸಿದರೆ ಬಡ್ಡಿ ಮತ್ತು ದಂಡವನ್ನು ತಪ್ಪಿಸಿಕೊಳ್ಳುತ್ತಾರೆ.
***
(Release ID: 1614809)
Visitor Counter : 266
Read this release in:
Assamese
,
Punjabi
,
Marathi
,
English
,
Urdu
,
Hindi
,
Bengali
,
Gujarati
,
Odia
,
Tamil
,
Telugu