ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯ

ಕೋವಿಡ್ -19 ಬಗ್ಗೆ ಜಾಗೃತಿ ಮತ್ತು ಜನರ ಸುರಕ್ಷತೆಗಾಗಿ ಸ್ಮಾರ್ಟ್ ಸಿಟಿಗಳು ಆಧುನಿಕ ತಂತ್ರಜ್ಞಾನವನ್ನು ಬಳಸುತ್ತಿವೆ

Posted On: 14 APR 2020 7:28PM by PIB Bengaluru

ಕೋವಿಡ್ -19 ಬಗ್ಗೆ ಜಾಗೃತಿ ಮತ್ತು ಜನರ ಸುರಕ್ಷತೆಗಾಗಿ ಸ್ಮಾರ್ಟ್ ಸಿಟಿಗಳು ಆಧುನಿಕ ತಂತ್ರಜ್ಞಾನವನ್ನು ಬಳಸುತ್ತಿವೆ

 

ಕೋವಿಡ್-19: ಸ್ಮಾರ್ಟ್ ನಗರಗಳಿಂದ ಉಪಕ್ರಮಗಳು

ವಡೋದರಾ

ಲಾಕ್ ಡೌನ್ (ದಿಗ್ಬಂಧನ) ಉಲ್ಲಂಘಿಸುವವರ ಮೇಲೆ ಕಣ್ಗಾವಲುಗಾಗಿ ವಡೋದರಾ ಜಿಲ್ಲಾಡಳಿತವು ಎರಡು ಕ್ಯಾಮೆರಾಗಳೊಂದಿಗೆ ಜೋಡಿಸಲಾದ ಹೀಲಿಯಂ ಬಲೂನ್ ಅನ್ನು ಸ್ಥಾಪಿಸಿದೆ. ತಂದಲ್ಜಾ ಪ್ರದೇಶದಲ್ಲಿ ಸ್ಥಾಪಿಸಲಾದ ಬಲೂನ್, ಸಾರ್ವಜನಿಕ ಧ್ವನಿವರ್ಧಕ ವ್ಯವಸ್ಥೆಯನ್ನು ಸಹ ಲಗತ್ತಿಸಲಾಗಿದೆ. ಕೊರೊನಾ ವೈರಸ್ ಸಾಂಕ್ರಾಮಿಕ ರೋಗವನ್ನು ಎದುರಿಸುವ ಕಾರ್ಯತಂತ್ರದ ಭಾಗವಾಗಿ ಆಡಳಿತವು ನಗರವನ್ನು ಕೆಂಪು, ಕಿತ್ತಳೆ, ಹಳದಿ ಮತ್ತು ಹಸಿರು ಎಂದು ನಾಲ್ಕು ವಲಯಗಳಾಗಿ ವಿಂಗಡಿಸಿದೆ.

ಬೆಂಗಳೂರು

ಬೆಂಗಳೂರಿನಲ್ಲಿರುವ ಮಾದರಿ ಕೋವಿಡ್-19 ಯೋಜನಾ ಕೊಠಡಿ - ಕರ್ನಾಟಕದ ಕೋವಿಡ್ -19 ಡೇಟಾ ಡ್ಯಾಶ್‌ಬೋರ್ಡ್ ಅನ್ನು ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವರು 7 ಏಪ್ರಿಲ್ 2020 ರಂದು ಬೆಂಗಳೂರು ಸ್ಮಾರ್ಟ್ ಸಿಟಿ ಕೋವಿಡ್ ಯೋಜನಾ ಕೊಠಡಿಯಲ್ಲಿ ಉದ್ಘಾಟಿಸಿದ್ದಾರೆ. ಈ ಡ್ಯಾಶ್‌ಬೋರ್ಡ್ ಎಲ್ಲಾ ಕೋವಿಡ್-19 ಸಂಬಂಧಿತ ದತ್ತಾಂಶದ ಏಕೈಕ ಮೂಲವಾಗಿದೆ, ಇದರಲ್ಲಿ ಸಂಪರ್ಕತಡೆಯಲ್ಲಿರುವ ಜನರು, ಅವರ ಸಂಪರ್ಕದಲ್ಲಿರುವ ವ್ಯಕ್ತಿಗಳು, ಕರ್ತವ್ಯದಲ್ಲಿರುವ ವೈದ್ಯಕೀಯ ಸಿಬ್ಬಂದಿ, ಆಸ್ಪತ್ರೆಗಳು, ತಾಲ್ಲೂಕುವಾರು ಮತ್ತು ನಗರವಾರು ದತ್ತಾಂಶ ಮತ್ತು ಅದಕ್ಕೂ ಮೀರಿದ ಮಾಹಿತಿಗಳು ಸೇರಿವೆ. ಈ ನೈಜ-ಸಮಯದ ದತ್ತಾಂಶವನ್ನು ತಂತ್ರಾಂಶಗಳು ಮತ್ತು ಅಪ್ಲಿಕೇಶನ್‌ಗಳೊಂದಿಗೆ ಸೇರಿಸಲಾಗುತ್ತಿದೆ.

ಕಲ್ಯಾಣ್ ಡೊಂಬಿವಾಲಿ

  • ಕರೋನದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಮಾಹಿತಿ ನೀಡಲು, ಜಾಗೃತಿ ವೀಡಿಯೊಗಳನ್ನು ಕೆಡಿಎಂಸಿ ಫೇಸ್ ಬುಕ್ ಪುಟದಲ್ಲಿ ಪ್ರಕಟಿಸಲಾಗಿದೆ. ನಾಗರಿಕರನ್ನು ನಿರಂತರವಾಗಿ ತೊಡಗಿಸಿಕೊಳ್ಳಲು, ಫೇಸ್ ಬುಕ್ ಪುಟವು ಬೆಳಿಗ್ಗೆ 7:00 ರಿಂದ ರಾತ್ರಿ 9:00 ರವರೆಗೆ.ದಿನನಿತ್ಯದ ಚಟುವಟಿಕೆಗಳನ್ನು ಪ್ರಕಟಿಸಿದೆ ನಗರವು ಯೋಗ, ಪಾಕಶಾಲೆಯ ಕಲೆ, ಏರೋಬಿಕ್ಸ್, ಸಂಗೀತ, ಕವನ, ಗಜಲ್, ಕಥಕ್ ಮತ್ತು ಭರತನಾಟ್ಯ, ತತ್ತ್ವಶಾಸ್ತ್ರ ಮತ್ತು ನಿಗದಿಪಡಿಸಿದ ಸಮಯದಲ್ಲಿ ವಿವಿಧ ಕ್ಷೇತ್ರಗಳ ಸ್ಥಳೀಯ ತಜ್ಞರು ಕೆಡಿಎಂಸಿಯ ಫೇಸ್ ಬುಕ್ ಪೇಜ್‌ನಲ್ಲಿ ನೇರಪ್ರಸಾರ ಮಾಡುತ್ತಾರೆ. ಈ ಉಪಕ್ರಮವು ನಾಗರಿಕರಿಂದ ಭಾರಿ ಪ್ರತಿಕ್ರಿಯೆ ಮತ್ತು ಮೆಚ್ಚುಗೆಯನ್ನು ಪಡೆಯುತ್ತಿದೆ.

ಆಗ್ರಾ

· ಇ-ಡಾಕ್ಟರ್ ಸೇವಾ ಎಂಬುದು ಟೆಲಿ-ವಿಡಿಯೋ ಸಮಾಲೋಚನಾ ಸೌಲಭ್ಯವಾಗಿದ್ದು, ಸ್ಥಳೀಯ ಜನರಿಗಾಗಿ ಆಗ್ರಾ ಸ್ಮಾರ್ಟ್ ಸಿಟಿ ಲಿಮಿಟೆಡ್ ಪ್ರಾರಂಭಿಸಿದೆ. https://tinyurl.com/edoctorapp . ಇದು ಆಗ್ರಾ ಸ್ಮಾರ್ಟ್ ಸಿಟಿ ಲಿಮಿಟೆಡ್‌ನ ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ) ಉಪಕ್ರಮವಾಗಿದೆ. ಸಮಾಲೋಚನೆ ಸೌಲಭ್ಯವು ಬೆಳಿಗ್ಗೆ 10 ರಿಂದ ಮಧ್ಯಾಹ್ನ 12.00 ರವರೆಗೆ (ಸೋಮವಾರದಿಂದ ಶನಿವಾರದವರೆಗೆ) ಲಭ್ಯವಿರುತ್ತದೆ .ಸಂಪರ್ಕಗಳಿಗಾಗಿ, ನಾಗರಿಕರು ಲಿಂಕ್ (https://tinyurl.com/edoctorapp ) ಬಳಸಿ ಲಾಗಿನ್ ಆಗಬೇಕು ಮತ್ತು ವೈದ್ಯರೊಂದಿಗೆ ಅಪಾಯಿಂಟ್ಮೆಂಟ್ ಅನ್ನು ನಿಗದಿಪಡಿಸಬೇಕು. ಮೊಬೈಲ್ ಅಪ್ಲಿಕೇಶನ್ ಬಳಸಿ ಅಪಾಯಿಂಟ್ಮೆಂಟ್ ತೆಗೆದುಕೊಳ್ಳಬಹುದು. ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡುವುದರ ಮೂಲಕ ಯಾವುದೇ ಆಂಡ್ರಾಯ್ಡ್ ಫೋನ್ (ಪ್ಲೇ ಸ್ಟೋರ್) ಬಳಕೆದಾರರಿಂದ ಅಪ್ಲಿಕೇಶನ್ ಡೌನ್‌ಲೋಡ್ ಮಾಡಬಹುದು:

(https://play.google.com/store/apps/details?id=com.needstreet.health.hppatient ). ಸೈಟ್/ ಅಪ್ಲಿಕೇಶನ್ ಮೂಲಕ ಅಪಾಯಿಂಟ್ಮೆಂಟ್ ತೆಗೆದುಕೊಂಡ ನಂತರ ನಿರ್ದಿಷ್ಟ ದಿನಾಂಕ ಮತ್ತು ಸಮಾಲೋಚನೆಗಾಗಿ ಸಮಯವನ್ನು ನಿಗದಿಪಡಿಸಲಾಗುತ್ತದೆ. ನಿಗದಿತ ಸಮಯದಲ್ಲಿ ರೋಗಿಯು ವೈದ್ಯರೊಂದಿಗೆ ದೂರವಾಣಿ/ ವಿಡಿಯೋ ಕರೆ ಮಾಡಬಹುದು. ಸಮಾಲೋಚನೆಯ ನಂತರ, ಆನ್‌ಲೈನ್ ಪ್ರಿಸ್ಕ್ರಿಪ್ಷನ್ ಅನ್ನು ರೋಗಿಯು ಸೈಟ್/ ಅಪ್ಲಿಕೇಶನ್‌ನಿಂದ ಡೌನ್‌ಲೋಡ್ ಮಾಡಬಹುದು. ಕೋರಿಕೆಯ ಮೇರೆಗೆ, ಅಗತ್ಯವಿರುವ ಔಷಧಿಗಳನ್ನು ಸ್ಮಾರ್ಟ್ ಹೆಲ್ತ್ ಸೆಂಟರ್-ಫಾರ್ಮಸಿಯಿಂದ ಮನೆಗೆ ತಲುಪಿಸಲಾಗುತ್ತದೆ.

· ಈ ಉದಾತ್ತ ಮತ್ತು ನವೀನ ಉಪಕ್ರಮವನ್ನು ಆಗ್ರಾ ಸ್ಮಾರ್ಟ್ ಸಿಟಿ ತನ್ನ ಪಿಪಿಪಿ ಪಾಲುದಾರ ಅಜೇಲ್ ಮ್ಯಾನ್ಯುಫ್ಯಾಕ್ಚರಿಂಗ್ ಪ್ರೈವೇಟ್ ಲಿಮಿಟೆಡ್ ಸಹಯೋಗದೊಂದಿಗೆ ತೆಗೆದುಕೊಂಡಿದೆ. ಸ್ಥಳೀಯ ಜನಸಾಮಾನ್ಯರಿಗೆ ಕೈಗೆಟುಕುವ ಮತ್ತು ಸಮಗ್ರ ಆರೋಗ್ಯ ಸೇವೆಗಳನ್ನು ಒದಗಿಸಲು ನಗರಾಡಳಿತವು ಆಗ್ರಾದಲ್ಲಿ 10 ಸ್ಮಾರ್ಟ್ ಆರೋಗ್ಯ ಕೇಂದ್ರಗಳನ್ನು ತೆರೆಯುವ ಪ್ರಕ್ರಿಯೆಯಲ್ಲಿದೆ ಅಂತಹ ಒಂದು ಕೇಂದ್ರವು ಈಗಾಗಲೇ ಕಾರ್ಯನಿರ್ವಹಿಸುತ್ತಿದೆ ಮತ್ತು ಸ್ಥಳೀಯ ಜನಸಂಖ್ಯೆಗೆ ಸೇವೆ ಸಲ್ಲಿಸುತ್ತಿದೆ.

· ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಸ್ಥಾಪಿಸಲಾದ ಸ್ಮಾರ್ಟ್ ಆರೋಗ್ಯ ಕೇಂದ್ರಗಳು ಕೊರೊನಾದ ಬಗ್ಗೆ ವಿವಿಧ ಮಾಡಬೇಕಾದ ಮತ್ತು ಮಾಡಬಾರದ ಮಾಹಿತಿ ಬಗ್ಗೆ ಜಾಗೃತಿ ಮೂಡಿಸಲು ಸಹಾಯ ಮಾಡುತ್ತದೆ, ಪ್ರತಿ ರೋಗಿಗೆ ಸಾಮಾನ್ಯ ಚಿಕತ್ಸಾಲಯ ಮತ್ತು ದಂತ ಚಿಕಿತ್ಸಾಲಯದಲ್ಲಿ ಕೊರೊನಾಗೆ ಸಂಬಂಧಿಸಿದ ಸಲಹೆಯ ಕುರಿತು 3-5 ನಿಮಿಷಗಳ ಸಂಕ್ಷಿಪ್ತ ಮಾಹಿತಿ ನೀಡಲಾಗುತ್ತದೆ. . ಮಾರ್ಚ್ ನಲ್ಲಿ 325 ರೋಗಿಗಳು ಮತ್ತು ಫೆಬ್ರವರಿಯಲ್ಲಿ 675 ರೋಗಿಗಳು ಸಮಾಲೋಚನೆಯನ್ನು ಪಡೆಸಿದರು. ಸ್ಮಾರ್ಟ್ ಆರೋಗ್ಯ ಕೇಂದ್ರದಲ್ಲಿ ಔಷಧಾಲಯದ ಮೂಲಕ 1015 ಸ್ಯಾನಿಟೈಜರ್‌ಗಳು ಮತ್ತು 935 ಮುಖಗವಸುಗಳನ್ನು ರಿಯಾಯಿತ ದರದಲ್ಲಿ ವಿತರಿಸಲಾಯಿತು, ಇದರಿಂದ ಜನರಿಗೆ ಹೆಚ್ಚು ಅನುಕೂಲವಾಯಿತು.

· ಆಗ್ರಾ ಸ್ಮಾರ್ಟ್ ಸಿಟಿ ಮತ್ತು ಆಗ್ರಾ ಪೊಲೀಸರ ಸಹಯೋಗದೊಂದಿಗೆ ಆಗ್ರಾ ನಗರಾಡಳಿತವು ನಗರ ನಿಗಮ್ ಆಗ್ರಾದಲ್ಲಿ ಆಗ್ರಾ ಸ್ಮಾರ್ಟ್ ಸಿಟಿ ಲಿಮಿಟೆಡ್ ಸ್ಥಾಪಿಸಿದ ಐಸಿಸಿಸಿ ನಿಯಂತ್ರಣ ಕೊಠಡಿಯನ್ನು ಪೂರ್ಣವಾಗಿ ಬಳಸುತ್ತಿದೆ. ಆಗ್ರಾ ಲಾಕ್ ಡೌನ್ ಮಾನಿಟರಿಂಗ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಲಾಗಿದೆ. ಜನಸಮೂಹವನ್ನು ನಿರ್ವಹಿಸಲು ಮತ್ತು ಕೋವಿಡ್ 19ರ ವಿರುದ್ಧ ಹೋರಾಡಲು ಆಗ್ರಾ ನಗರದ ವಿವಿಧ ಸ್ಥಳಗಳನ್ನು ಪರಿಣಾಮಕಾರಿಯಾಗಿ ಮೇಲ್ವಿಚಾರಣೆ ಮಾಡಲು ಈ ನವೀನ ವೀಡಿಯೊ ಕಣ್ಗಾವಲು ವ್ಯವಸ್ಥೆಯನ್ನು ಬಳಸಲಾಗುವುದು. ಈ ಪ್ರಯತ್ನದಲ್ಲಿ ಇತ್ತೀಚಿನದು ಕೃತಕ ಬುದ್ದಿಪತ್ತೆ (ಎ ಐ) ಆಧಾರಿತ ಅನಾಲಿಟಿಕ್ಸ್ ಆಗಿದೆ, ಇದು ಆಗ್ರಾದಲ್ಲಿ ಈ ಶ್ರೇಣಿಯಲ್ಲಿ COVID 19ರ ವಿರುದ್ಧ ಹೋರಾಡುವುದರಲ್ಲಿಯೇ ಮೊದಲನೆಯದಾಗಿದೆ. ಆಗ್ರಾ ಆಡಳಿತವು ಅಳವಡಿಸಿಕೊಂಡ ಇತ್ತೀಚಿನ ಅತ್ಯಾಧುನಿಕ ತಂತ್ರಜ್ಞಾನವನ್ನು ಸಿಎಸ್ಆರ್ ಉಪಕ್ರಮದಡಿಯಲ್ಲಿ ಅಸ್ತಿತ್ವದಲ್ಲಿರುವ ಕಣ್ಗಾವಲು ವಸ್ತುಗಳ ಮಾರಾಟಗಾರರು ಒದಗಿಸಿದ್ದಾರೆ. ಆಗ್ರಾದಲ್ಲಿ ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ನಿರ್ವಹಿಸಲು ಅಧಿಕಾರಿಗಳಿಗೆ ಸಹಾಯ ಮಾಡಲು ಎಚ್ಚರಿಕೆಯ ಸೂಚನೆಯನ್ನು ತಕ್ಷಣವೇ ನೀಡಲಾಗುತ್ತದೆ. ಕ್ಷೇತ್ರ ಸಿಬ್ಬಂದಿ ಮೊಬೈಲ್ ಫೋನ್‌ಗಳಲ್ಲಿನ ಆ್ಯಪ್ ಮೂಲಕ ಎಚ್ಚರಿಕೆಯ ಸೂಚನೆಗಳನ್ನು ಅಣಿ ಮಾಡಲಾಗಿದೆ ಮತ್ತು ಸ್ಥಳೀಯವಾಗಿ ಕರ್ತವ್ಯ ನಿರ್ವಹಿಸುವ ಪೊಲೀಸ್ ಆಡಳಿತಕ್ಕೆ ಸಹಾಯ ಮಾಡುತ್ತದೆ. ಆಗ್ರಾ ಲಾಕ್‌ ಡೌನ್ ಮಾನಿಟರ್ ಅಪ್ಲಿಕೇಶನ್ ಎಲ್ಲಾ ಠಾಣೆಯ ಮುಖ್ಯಸ್ಥರಿಗೆ ಮತ್ತು ಅಗತ್ಯವಿರುವ ಯಾವುದೇ ಇತರ ಪೊಲೀಸ್ ಸಿಬ್ಬಂದಿಗೆ ಲಭ್ಯವಿರುತ್ತದೆ.

· ಜಿಲ್ಲಾಡಳಿತದ ಜೊತೆಗೆ, ವಿವಿಧ ಎನ್‌ಜಿಒಗಳಿಂದ ಸಿದ್ಧಪಡಿಸಿದ ಆಹಾರ ಪ್ಯಾಕೆಟ್‌ಗಳನ್ನು ಸಂಗ್ರಹಿಸಲು ಸಿದ್ಧಪಡಿಸಿದ ಆಹಾರ ಬ್ಯಾಂಕ್ ಅನ್ನು ಸ್ಥಾಪಿಸಲಾಗಿದೆ ಮತ್ತು ಇದನ್ನು ನಿರ್ಗತಿಕರು, ಬಡವರು, ಕಾರ್ಮಿಕರಿಗೆ ಮುಂತಾದವರಿಗೆ ವಿತರಿಸಲಾಗುತ್ತದೆ, 5000 ಆಹಾರ ಪ್ಯಾಕೆಟ್‌ಗಳನ್ನು ವಿತರಿಸಲಾಗಿದೆ.

ಕಾಕಿನಾಡ

ಕಾಕಿನಾಡ ಐಸಿಸಿಸಿಯಲ್ಲಿ ಕೋವಿಡ್-19 ಡೇಟಾ ಡ್ಯಾಶ್‌ಬೋರ್ಡ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಕಾಕಿನಾಡ, ಜಿಲ್ಲೆ, ರಾಜ್ಯ ಮತ್ತು ದೇಶ ಮಟ್ಟದ ಮಾಹಿತಿಯನ್ನು ಐಸಿಸಿಸಿಯಲ್ಲಿ ಪ್ರದರ್ಶಿಸಲಾಗುತ್ತಿದೆ. ವಿವರಗಳನ್ನು https://covid19.kkdeservices.com:2278 ನಲ್ಲಿ ನೋಡಬಹುದು.

ಚಂಡೀಗಢ

ಚಂಡೀಗಢವು ಸಮಗ್ರ ‘ಫೈಟ್ ಕೋವಿಡ್ ಸ್ಟೇಷನ್ ಅನ್ನು ಸ್ಥಾಪಿಸಿದೆ. ಇದು ಥರ್ಮಲ್ ಸ್ಕ್ರೀನಿಂಗ್ ಮೂಲಕ ತಾಪಮಾನ ಪಡೆಯುವ ವ್ಯವಸ್ಥೆ, ಪೆಡಲ್ ನಿಂದ ಕಾರ್ಯನಿರ್ವಹಿಸುವ ಹ್ಯಾಂಡ್-ವಾಶ್ ಮತ್ತು ಸೋಪ್ ವಿತರಕವನ್ನು, ಸೋಡಿಯಂ ಹೈಪೋಕ್ಲೋರೈಟ್ ದ್ರಾವಣದ ಮಂಜು ಸಿಂಪಡಿಸುವಿಕೆ ಮತ್ತು ಹ್ಯಾಂಡ್ ಡ್ರೈಯರ್ ಸೌಲಭ್ಯವನ್ನು ಒಳಗೊಂಡಿದೆ. ಇದನ್ನು ಮೇನ್ ಮಂಡಿ ಸೆಕ್ಟರ್ -25, ಚಂಡೀಗಢದಲ್ಲಿ ಚಂಡೀಗಢ ಮುನ್ಸಿಪಲ್ ಕಾರ್ಪೊರೇಶನ್‌ನಿಂದ ಸ್ಥಾಪಿಸಲಾಗಿದೆ ಮತ್ತು ಮಂಡಿಗೆ ಭೇಟಿ ನೀಡುವವರೆಲ್ಲರೂ ಈ ಸ್ಟೇಷನ್ ಮೂಲಕ ಹಾದುಹೋಗಬೇಕಾಗಿದೆ.

***



(Release ID: 1614683) Visitor Counter : 281