ಕೃಷಿ ಸಚಿವಾಲಯ
ಪ್ರಸ್ತುತ ಕೋವಿಡ್ – 19 ಬಿಕ್ಕಟ್ಟಿನ ನಂತರ ಕೃಷಿ ವಲಯದ ರಫ್ತುಗಳ ಪುನರುತ್ಥಾನಕ್ಕಾಗಿ ಸರ್ಕಾರ ಸಂವಾದಕ್ಕೆ ಮುಂದಾಗಿದೆ
Posted On:
14 APR 2020 2:11PM by PIB Bengaluru
ಪ್ರಸ್ತುತ ಕೋವಿಡ್ – 19 ಬಿಕ್ಕಟ್ಟಿನ ನಂತರ ಕೃಷಿ ವಲಯದ ರಫ್ತುಗಳ ಪುನರುತ್ಥಾನಕ್ಕಾಗಿ ಸರ್ಕಾರ ಸಂವಾದಕ್ಕೆ ಮುಂದಾಗಿದೆ
ಕೃಷಿ ಸಚಿವ ಶ್ರೀ ನರೇಂದ್ರ ಸಿಂಗ್ ತೋಮರ್ ಅವರ ನಿರ್ದೇಶನದ ಮೇರೆಗೆ ಉತ್ಪಾದಕರು/ ಕೃಷಿ ಉತ್ಪನ್ನಗಳ ರಫ್ತುದಾರರ ಸಮಸ್ಯೆಗಳನ್ನು ಪರಿಹರಿಸಲು ಡಿಎಸಿ ಮತ್ತು ಎಫ್ ಡಬ್ಲ್ಯೂ ಕಾರ್ಯದರ್ಶಿ ವಿಡಿಯೋ ಕಾನ್ಫೆರೆನ್ಸ್ ನಡೆಸಿದರು
ಕೋವಿಡ್ – 19 ರೋಗ ಪತ್ತೆಗಾಗಿ ಲಾಕ್ ಡೌನ್ ಘೋಷಿಸಿರುವುದರರಿಂದ `ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ವಲಯದ ಮೇಲಾಗುತ್ತಿರುವ ಪರಿಣಾಮಗಳು ಮತ್ತು ಈ ವಲಯ ಎದುರಿಸುತ್ತಿರುವ ಸಮಸ್ಯೆಗಳನ್ನು ಚರ್ಚಿಸಲು ಈ ವಲಯದ ರಫ್ತುದಾರರೊಂದಿಗೆ ಮಾತುಕತೆಗೆ ಸರ್ಕಾರ ಮುಂದಾಗಿದೆ.
ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ ಸಚಿವ ಶ್ರೀ ನರೇಂದ್ರ ಸಿಂಗ್ ತೋಮರ್ ಅವರ ನಿರ್ದೇಶನದ ಮೇರೆಗೆ
ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ಉತ್ಪನ್ನಗಳ ರಫ್ತುದಾರರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಪ್ರಾಥಮಿಕ ಮಾಹಿತಿ ಪಡೆಯಲು ಮತ್ತು ಪ್ರಸ್ತುತ ಕೋವಿಡ್ – 19 ಬಿಕ್ಕಟ್ಟಿನಲ್ಲಿ ಪರಿಸ್ಥಿತಿ ಎದುರಿಸಲು ಸಹಾಯ ಹಸ್ತ ಚಾಚಲು ಮತ್ತು ಅವರ ಸಮಸ್ಯೆಗಳಿಗೆ ಆರಂಭಿಕ ಹಂತದಲ್ಲೇ ಪರಿಹರಿಸಲು ಅವಶ್ಯಕ ಕ್ರಮಗಳನ್ನು ಕೈಗೊಳ್ಳುವ ಮೂಲಕ ಕೃಷಿ ಇಲಾಖೆ, ಸಹಕಾರ ಮತ್ತು ಕೃಷಿಕ ಕಲ್ಯಾಣ ಇಲಾಖೆ ಕಾರ್ಯದರ್ಶಿ ಶ್ರೀ ಸಂಜಯ್ ಅಗರ್ ವಾಲ್ ನಿನ್ನೆ ವಿಡಿಯೋ ಕಾನ್ಫೆರೆನ್ಸ್ ನಡೆಸಿ ಅರ್ಥಪೂರ್ಣ ಮಧ್ಯಸ್ಥಿಕೆಯನ್ನು ವಹಿಸಿದ್ದಾರೆ. ರಫ್ತುದಾರರು, ಕೃಷಿ ಉತ್ಪನ್ನಗಳ ಉತ್ಪಾದಕರು/ರಫ್ತುದಾರರ ಮಂಡಳಿ ಪ್ರತಿನಿಧಿಗಳು ಅಂದರೆ ಹಣ್ಣುಗಳು, ತರಕಾರಿಗಳು, ಸುವಾಸಿತ ಮತ್ತು ಸುವಾಸಿತವಲ್ಲದ ಅಕ್ಕಿ, ಬೀಜಗಳು, ಹೂವುಗಳು, ಸಸ್ಯಗಳು, ಸಾವಯವ ಉತ್ಪನ್ನಗಳು, ಕೃಷಿ ಉತ್ಪನ್ನಗಳು ಮತ್ತು ಯಂತ್ರೋಪಕರಣಗಳ ಉತ್ಪಾದಕರು ಸಭೆಯಲ್ಲಿ ಭಾಗವಹಿಸಿದ್ದರು.
ಭಾಗವಹಿಸಿದವರು ಬಹಳಷ್ಟು ಸಾಮಾನ್ಯ ಮತ್ತು ತಮ್ಮ ವಲಯಕ್ಕೆ ಸಂಬಂಧಿಸಿದ ನಿರ್ದಿಷ್ಟ ಸಮಸ್ಯೆಗಳ ಕುರಿತು ಪ್ರಶ್ನೆಗಳನ್ನು ಕೇಳಿದರು. ಕಾರ್ಮಿಕರ ಲಭ್ಯತೆ ಮತ್ತು ಅವರ ಸಾರಿಗೆ, ಅಂತರ್ ರಾಜ್ಯ ಸಾರಿಗೆ ಸಮಸ್ಯೆಗಳು, ಮಂಡಿಗಳು ಮುಚ್ಚಿರುವುದರಿಂದ ಕಚ್ಚಾ ವಸ್ತುಗಳ ಕೊರತೆ, ಸಸ್ಯ ನೈರ್ಮಲ್ಯದ ಪ್ರಮಾಣ ಪತ್ರ, ಕೊರಿಯರ್ ಸೇವೆಗಳು ಸ್ಥಗಿತಗೊಂಡಿರುವುದರಿಂದ ಶಿಪ್ಪಿಂಗ್ ದಾಖಲೆಗಳನ್ನು ಪ್ರಸ್ತುತಪಡಿಸುವುದರಲ್ಲಿ ತಡೆ, ಸಾಗಣೆ ಸೇವೆಗಳ ಲಭ್ಯತೆ, ಬಂದರುಗಳ ಪ್ರವೇಶಕ್ಕೆ ಅವಕಾಶ ಮತ್ತು ಆಮದು/ರಫ್ತಿಗಾಗಿ ಸರಕುಗಳ ತೆರವು..ಇವು ಎಲ್ಲ ಕೃಷಿ ಉತ್ಪನ್ನಗಳ ರಫ್ತುದಾರರು ಎತ್ತಿ ತೋರಿದ ಕೆಲವು ಸಾಮಾನ್ಯ ಸಮಸ್ಯೆಗಳಾಗಿವೆ.
ಆಹಾರ ಸಂಸ್ಕರಣೆ, ಮಸಾಲೆ ಪದಾರ್ಥಗಳು, ಗೋಡಂಬಿ ಮತ್ತು ಯಂತ್ರ ಹಾಗೂ ಸಲಕರಣೆ (ಎಂ ಎನ್ ಡಿ) ವಲಯಗಳ ಪ್ರತಿನಿಧಿಗಳು ಶೇ 25 ರಿಂದ 30 ರಷ್ಟು ಕಾರ್ಯನಿರ್ವಹಿಸಲು ಅವಕಾಶ ನೀಡಬೇಕೆಂದು ಕೋರಿದ್ದಾರೆ ಮತ್ತು ತಮ್ಮ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಣೆಯಲ್ಲಿ ಸೂಕ್ತ ನಿಯಮಗಳನ್ನು ಪಾಲಿಸಲು ಬದ್ಧವಾಗಿದೆ ಎಂದು ಹೇಳಿದ್ದಾರೆ.
ಆಂತರಿಕ ಸಾರಿಗೆ ಸಮಸ್ಯೆಯನ್ನು ಗೃಹ ಸಚಿವಾಲಯ ಬಗೆಹರಿಸುತ್ತಿದ್ದು ಅಗತ್ಯ ನಿರ್ದೇಶನಗಳನ್ನು ನೀಡುತ್ತಿದೆ. ನಿರಂತರ/ನಿಯಮಿತ ಸಸ್ಯ ನೈರ್ಮಲ್ಯ ಪ್ರಮಾಣಪತ್ರಗಳ ವಿತರಣೆಗೆ ಮತ್ತು ಆನ್ ಲೈನ್ ಪ್ರಮಾಣ ಪತ್ರ ಸ್ವೀಕರಿಸಲು ಸೂಚನೆ ನೀಡಲಾಗಿದೆ
ಬಂದರು, ಸಮುದ್ರ ಸಾಗಣೆ ಸೇವೆಗಳು, ಕೋರಿಯರ್ ಸೇವೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಸೂಕ್ತ ಪರಿಹಾರಕ್ಕಾಗಿ ಪರಿಗಣಿಸಲಾಗುವುದು ಎಂದು ಶ್ರೀ ಅಗರವಾಲ್ ತಿಳಿಸಿದ್ದಾರೆ. ಉದ್ಯಮಗಳನ್ನು ಮುಕ್ತವಾಗಿ ಕಾರ್ಯನಿರ್ವಹಿಸುವ ಕುರಿತು ಮತ್ತು ಕ್ಷೇತ್ರಕ್ಕೆ ಸಂಬಂಧಿಸಿದ ನಿರ್ದಿಷ್ಟ ಸಮಸ್ಯೆಗಳನ್ನು ಸಚಿವ ಶ್ರೀ ನರೇಂದ್ರ ಸಿಂಗ್ ತೋಮರ್ ಅವರೊಂದಿಗೆ ಚರ್ಚಿಸಿ ಸೂಕ್ತವಾಗಿ ಪರಿಹರಿಸಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.
ಭಾರತ ಕೃಷಿ ಮತ್ತು ಕೃಷಿ ಸಂಬಂಧಿತ ಉತ್ಪನ್ನಗಳ ನಿವ್ವಳ ರಫ್ತುದಾರ ರಾಷ್ಟ್ರವಾಗಿದೆ. 2018 – 19 ರ ಅವಧಿಯಲ್ಲಿ ಭಾರತದ ಕೃಷಿ ಮತ್ತು ಕೃಷಿ ಸಂಬಂಧಿತ ಉತ್ಪನ್ನಗಳ ರಫ್ತು ರೂ. 2.73 ಲಕ್ಷ ಕೋಟಿಯಾಗಿತ್ತು ಮತ್ತು ಈ ವಲಯ ಯಾವತ್ತೂ ವ್ಯಾಪಾರದ ಸಮತೋಲನ ಕಾಯ್ದುಕೊಂಡಿದೆ. ದೇಶಕ್ಕೆ ಅಮೂಲ್ಯವಾದ ವಿದೇಶಿ ವಿನಿಮಯ ಗಳಿಸುವುದರ ಜೊತೆಗೆ ರಫ್ತು ಪ್ರಮುಖಾದುದಾಗಿದೆ. ಕೃಷಿ ಉತ್ಪನ್ನಗಳ ರಫ್ತು ರೈತರು/ಉತ್ಪಾದಕರು/ರಫ್ತುದಾರರಿಗೆ ವ್ಯಾಪಕ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಲಾಭ ಪಡೆಯಲು ಮತ್ತು ಆದಾಯ ಹೆಚ್ಚಿಸಕೊಳ್ಳಲು ಸಹಾಯ ಮಾಡುತ್ತದೆ. ರಫ್ತುಗಳು ಕೃಷಿ ವ್ಯಾಪ್ತಿಯನ್ನು ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವುದರ ಮೂಲಕ ಕೃಷಿವಲಯದಲ್ಲಿ ಉತ್ಪಾದನೆ ವೃದ್ಧಿಗೆ ಕಾರಣವಾಗಿವೆ.
*****
(Release ID: 1614572)
Visitor Counter : 193
Read this release in:
English
,
Urdu
,
Hindi
,
Marathi
,
Assamese
,
Manipuri
,
Punjabi
,
Gujarati
,
Odia
,
Tamil
,
Telugu