ನಾಗರೀಕ ವಿಮಾನಯಾನ ಸಚಿವಾಲಯ

ಲೈಫ್ ಲೈನ್ ಉಡಾನ್ ಅಡಿಯಲ್ಲಿ 2 ಲಕ್ಷ ಕಿ ಮೀ ಗಿಂತಲೂ ಹೆಚ್ಚು ಹಾರಾಟ ನಡೆಸಿದ ವಿಮಾನಗಳು ವೈದ್ಯಕೀಯ ಸರಕುಗಳನ್ನು ರಾಷ್ಟ್ರಾದ್ಯಂತ ಸಾಗಿಸಿವೆ

Posted On: 13 APR 2020 4:44PM by PIB Bengaluru

ಲೈಫ್ ಲೈನ್ ಉಡಾನ್ ಅಡಿಯಲ್ಲಿ 2 ಲಕ್ಷ ಕಿ ಮೀ ಗಿಂತಲೂ ಹೆಚ್ಚು ಹಾರಾಟ ನಡೆಸಿದ ವಿಮಾನಗಳು ವೈದ್ಯಕೀಯ ಸರಕುಗಳನ್ನು ರಾಷ್ಟ್ರಾದ್ಯಂತ ಸಾಗಿಸಿವೆ

 

ಕೋವಿಡ್ – 19 ವಿರುದ್ಧದ ಭಾರತದ ಹೋರಾಟಕ್ಕೆ ನೆರವು ನೀಡಲು ದೇಶದ ದೂರದ ಪ್ರದೇಶಗಳಿಗೆ ವೈದ್ಯಕೀಯ ಸರಕುಗಳನ್ನು ಸಾಗಿಸಲು 214 ಕ್ಕೂ ಹೆಚ್ಚು ಲೈಫ್ ಲೈನ್ ವಿಮಾನಗಳ ಮೂಲಕ ದೇಶದ ದೂರದ ಭಾಗಗಳಿಗೆ ಅಗತ್ಯ ವೈದ್ಯಕೀಯ ಸರಕುಗಳನ್ನು ಸಾಗಿಸುವ ಕಾರ್ಯವನ್ನ ನಾಗರಿಕ ವಿಮಾನಯಾನ ಸಚಿವಾಲಯ (ಎಂ ಒ ಸಿ ಎ) ನಿರ್ವಹಿಸಿದೆ. ಎಂದು ನಾಗರಿಕ ವಿಮಾನಯಾನದ ಎಂ ಒ ಎಸ್, / ಸಿ ಎಸ್ ಹೆಚ್. ಹರ್ದೀಪ್ ಸಿಂಗ್ ಪುರಿ ಇಂದು ತಮ್ಮ ಟ್ವೀಟ್ ಸಂದೇಶದಲ್ಲಿ ತಿಳಿಸಿದ್ದಾರೆ. ಇಲ್ಲಿಯವರೆಗೆ ಸುಮಾರು 377.50 ಟನ್ ಗಳಷ್ಟು ಸರಕುಗಳನ್ನು ಸಾಗಿಸಲಾಗಿದೆ ಮತ್ತು ಸುಮಾರು 2,05,709 ಕಿ ಮೀ ದೂರವನ್ನು ಲೈಫ್ ಲೈನ್ ವಿಮಾನಗಳು ಕ್ರಮಿಸಿವೆ ಎಂದು ನಾಗರಿಕ ವಿಮಾನಯಾನ ಸಚಿವರು ಟ್ವೀಟ್ ಮಾಡಿದ್ದಾರೆ. ಇವುಗಳಲ್ಲಿ 132 ವಿಮಾನಗಳು ಏರ್ ಇಂಡಿಯಾ ಮತ್ತು ಅಲಯೆನ್ಸ್ ಏರ್ ಸಂಸ್ಥೆಗಳದ್ದಾಗಿವೆ. ಏಪ್ರಿಲ್ 12, 2020 ರಂದು ಸಾಗಿಸಲಾದ ಸರಕುಗಳ ತೂಕ 4.27 ಟನ್ ಗಳು. ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ವಾಯುಯಾನ ಉದ್ಯಮವು, ಭಾರತದಲ್ಲಿ ಮತ್ತು ವಿದೇಶಗಳಿಗೆ ವೈದ್ಯಕೀಯ ಸರಕುಗಳನ್ನು ಪರಿಣಾಮಕಾರಿ ಮತ್ತು ಕಡಿಮೆ ಬೆಲೆಯಲ್ಲಿ ಸಾಗಿಸುವ ಮೂಲಕ ಕೊವಿಡ್ – 19 ರ ವಿರುದ್ಧದ ಭಾರತದ ಹೋರಾಟಕ್ಕೆ ಬೆಂಬಲ ನೀಡಲು ದೃಢ ನಿರ್ಧಾರ ಕೈಗೊಂಡಿವೆ.

ಈಶಾನ್ಯ ಪ್ರದೇಶ, ದ್ವೀಪ ಪ್ರದೇಶಗಳು ಮತ್ತು ಬೆಟ್ಟ ಪ್ರದೇಶದ ರಾಜ್ಯಗಳಿಗೆ ವಿಶೇಷ ಗಮನಹರಿಸಲಾಗಿದೆ. ಸರಕುಗಳ ಹೆಚ್ಚಿನ ಪ್ರಮಾಣ ಹಗುರವಾದ ಮತ್ತು ಕಡಿಮೆ ತೂಕದ ವಸ್ತುಗಳಾದ ಮಾಸ್ಕ್ ಗಳು, ಕೈಗವಸುಗಳು ಮತ್ತು ವಿಮಾನಗಳಲ್ಲಿ ಹೆಚ್ಚು ಸಂಗ್ರಹಣಾ ಸ್ಥಳವನ್ನು ಬಳಸುವ ಸೇವಿಸಬಹುದಾದ ವಸ್ತುಗಳನ್ನು ಒಳಗೊಂಡಿದೆ. ತಕ್ಕ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಪ್ರಯಾಣಿಕರು ಕುಳಿತುಕೊಳ್ಳುವ ಪ್ರದೇಶ ಮತ್ತು ಓವರ್ ಹೆಡ್ ಕ್ಯಾಬಿನ್ ಗಳಲ್ಲಿ ಸರಕುಗಳನ್ನು ಶೇಖರಿಸಲು ವಿಶೇಷ ಅನುಮತಿ ಪಡೆಯಲಾಗಿದೆ.

ಲೈಫ್ ಲೈನ್ ಉಡಾನ್ ವಿಮಾನಗಳಿಗೆ ಸಂಬಂಧಿಸಿದ ಸಾರ್ವಜನಿಕ ಮಾಹಿತಿಯ ಇತ್ತೀಚಿನ ವರದಿಯನ್ನು ಪ್ರತಿದಿನ https://esahaj.gov.inlifeline_udan/public_info ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗುವುದು. ಇದು ವಿವಿಧ ಪಾಲುದಾರರ ಜೊತೆ ಅಡೆತಡೆಯಿಲ್ಲದ ಸಮನ್ವಯತೆಗೆ ಅವಕಾಶ ಕಲ್ಪಿಸುತ್ತದೆ.

ದೇಶೀಯ ಸರಕು ಸಾಗಿಸುವ ವಿಮಾನಯಾನ ನಿರ್ವಾಹಕರಾದ ಸ್ಪೈಸ್ ಜೆಟ್, ಬ್ಲೂ ಡಾರ್ಟ್, ಮತ್ತು ಇಂಡಿಗೊ ವಾಣಿಜ್ಯ ಆಧಾರದ ಮೇಲೆ ಕಾರ್ಗೊ ವಿಮಾನಗಳ ಹಾರಾಟ ನಿರ್ವಹಿಸುತ್ತಿವೆ. ಸ್ಪೈಸ್ ಜೆಟ್  24  ಮಾರ್ಚ್ ನಿಂದ 12 ಏಪ್ರಿಲ್ 2020 ರವರೆಗೆ 4, 26, 533 ಕಿ. ಮೀ. ದೂರವನ್ನು ಕ್ರಮಿಸಿ 2478  ಟನ್ ಗಳಷ್ಟು ಸರಕುಗಳನ್ನು 300 ಕಾರ್ಗೊ ವಿಮಾನಗಳ ಮೂಲಕ ಸಾಗಾಟ ನಡೆಸಿತು. ಇವುಗಳಲ್ಲಿ 95 ವಿದೇಶೀ ಕಾರ್ಗೊ ವಿಮಾನಗಳಾಗಿವೆ. ಬ್ಲೂ ಡಾರ್ಟ್ 25  ಮಾರ್ಚ್ ನಿಂದ 12 ಏಪ್ರಿಲ್ 2020 ರವರೆಗೆ 92,075 ಕಿ. ಮೀ. ದೂರವನ್ನು ಕ್ರಮಿಸಿ  1479 ಟನ್ ಗಳಷ್ಟು ಸರಕುಗಳನ್ನು 94 ದೇಶೀಯ ಕಾರ್ಗೊ ವಿಮಾನಗಳ ಮೂಲಕ ಸಾಗಾಟ ನಡೆಸಿತು. ಇಂಡಿಗೊ 3-12 ಏಪ್ರಿಲ್ 2020 ರವರೆಗೆ 21,906 ಕಿ. ಮೀ. ದೂರವನ್ನು ಕ್ರಮಿಸಿ  21.77 ಟನ್ ಗಳಷ್ಟು ಸರಕುಗಳನ್ನು 25 ಕಾರ್ಗೊ ವಿಮಾನಗಳ ಮೂಲಕ ಸಾಗಾಟ ನಡೆಸಿತು. ಇದರಲ್ಲಿ ಸರ್ಕಾರಕ್ಕಾಗಿ ಉಚಿತವಾಗಿ ಸಾಗಿಸಲಾದ ವೈದ್ಯಕೀಯ ಸಾಮಗ್ರಿಗಳೂ ಒಳಗೊಂಡಿವೆ.

ಸ್ಪೈಸ್ ಜೆಟ್ ನಿಂದ ದೇಶೀಯ ಕಾರ್ಗೊ ಸಾಗಣೆ

ದಿನಾಂಕ

ವಿಮಾನಗಳ ಸಂಖ್ಯೆ

ಟನ್ನುಗಳು

ಕಿ. ಮೀ. ಗಳು

12-04-2020

6

68.21

6,943

 

ಸ್ಪೈಸ್ ಜೆಟ್ ನಿಂದ ಅಂತಾರಾಷ್ಟ್ರೀಯ ಕಾರ್ಗೊ ಸಾಗಣೆ

 

ದಿನಾಂಕ

ವಿಮಾನಗಳ ಸಂಖ್ಯೆ

ಟನ್ನುಗಳು

ಕಿ. ಮೀ. ಗಳು

12-04-2020

8

75.23

18,300

 

ಅಂತಾರಾಷ್ಟ್ರೀಯ ವಲಯ

ಔಷಧಿಗಳು, ವೈದ್ಯಕೀಯ ಉಪಕರಣಗಳು ಮತ್ತು ಕೊವಿಡ್ – 19 ಪರಿಹಾರ ಸಾಮಗ್ರಿಗಳನ್ನು ಸಾಗಿಸಲು, ಏಪ್ರಿಲ್ 4, 2020 ರಿಂದ ಜಾರಿಗೆ ಬರುವಂತೆ ಏರ್-ಬ್ರಿಡ್ಜ್ ಅನ್ನು ಪ್ರಾರಂಭಿಸಲಾಗಿದೆ. 7 ಏಪ್ರಿಲ್ 2020 ರಂದು ದಕ್ಷಿಣ ಏಷ್ಯಾದೊಳಗೆ ಏರ್ ಇಂಡಿಯಾ ಸುಮಾರು 9 ಟನ್ ಮತ್ತು 8 ಏಪ್ರಿಲ್ 2020 ರಂದು ಕೊಲಂಬೊಗೆ 4 ಟನ್ ಸರಬರಾಜು ಮಾಡಿದೆ. ಇತರ ದೇಶಗಳಿಗೆ ಅವಶ್ಯಕತೆಗೆ ತಕ್ಕಂತೆ ತುರ್ತು ವೈದ್ಯಕೀಯ ಸರಕುಗಳನ್ನು ಸಾಗಿಸಲು  ಏರ್ ಇಂಡಿಯಾ ಸಮರ್ಪಿತ ಕಾರ್ಗೊ ವಿಮಾನಗಳನ್ನು ಮೀಸಲಿರಿಸಿದೆ.   

ತರಲಾದ ವೈದ್ಯಕೀಯ ಸರಕುಗಳ ದಿನಾಂಕವಾರು ಪ್ರಮಾಣ ಈ ಕೆಳಗಿನಂತಿದೆ:

 

ಕ್ರಮ ಸಂಖ್ಯೆ

ದಿನಾಂಕ

ಇಂದ

ಪ್ರಮಾಣ (ಟನ್ ಗಳಲ್ಲಿ)

1

04.4.2020

ಶಾಂಘಾಯ್

21

2

07.4.2020

ಹಾಂಗ್ ಕಾಂಗ್

6

3

09.4.2020

ಶಾಂಘಾಯ್

22

4

10.4.2020

ಶಾಂಘಾಯ್

18

5

11.4.2020

ಶಾಂಘಾಯ್

18

6

12.4.2020

ಶಾಂಘಾಯ್

24

 

 

 

 

 

 

ಒಟ್ಟು

109

 

ಎಲ್ಲ ಹಂತಗಳಲ್ಲಿ ಸರಕು ನಿರ್ವಹಣೆಯಲ್ಲಿ ಸೂಕ್ತ ನಿಯಂತ್ರಣಾ ಉಪಕ್ರಮಗಳನ್ನು ಅನುಸರಿಸಲಾಗುತ್ತದೆ

 

https://ci4.googleusercontent.com/proxy/fEeCGLkA5gvtqG_HuXAO4nzeY94nasr0sq6u-XMl2HcE-C1RxJpYq0BBs1Rx00VbQlY2s7KbUDGzhoAvzwTGMTk9ycqRi0RJiFS71rTViVM1BqHf0VW7=s0-d-e1-ft#https://static.pib.gov.in/WriteReadData/userfiles/image/image001NQC6.jpg

ಕೇರಳಕ್ಕೆ ಸಂಬಂಧಿಸಿದ ವೈದ್ಯಕೀಯ ಸರಕುಗಳನ್ನು ನಿರ್ವಹಣೆ ಮಾಡುತ್ತಿರುವ ಸಿಬ್ಬಂದಿ ಚಿತ್ರ

****

 



(Release ID: 1614141) Visitor Counter : 212