ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಕೋವಿಡ್ – 19 ಅಪ್ ಡೇಟ್ಸ್
Posted On:
13 APR 2020 6:37PM by PIB Bengaluru
ಕೋವಿಡ್ – 19 ಅಪ್ ಡೇಟ್ಸ್
ಸಾಮೂಹಿಕ ಪ್ರಯತ್ನದ ಮೂಲಕ ದೇಶದಲ್ಲಿ ಕೋವಿಡ್-19 ಎದುರಿಸಲು, ಕೋವಿಡ್-19 ನ ತಡೆಗಟ್ಟುವಿಕೆ, ನಿಯಂತ್ರಣ ಮತ್ತು ನಿರ್ವಹಣೆಗಾಗಿ ಭಾರತ ಸರ್ಕಾರವು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇವುಗಳನ್ನು ನಿಯಮಿತವಾಗಿ ಉನ್ನತ ಮಟ್ಟದಲ್ಲಿ ಪರಿಶೀಲಿಸಲಾಗುತ್ತಿದೆ ಮತ್ತು ಮೇಲ್ವಿಚಾರಣೆ ಮಾಡಲಾಗುತ್ತಿದೆ.
ಸಿಜಿಐಆರ್ (ಕೌನ್ಸಿಲ್ ಆಫ್ ಸೈಂಟಿಫಿಕ್ & ಇಂಡಸ್ಟ್ರಿಯಲ್ ರಿಸರ್ಚ್) ಡಿಜಿ, ಸಿಎಸ್ಐಆರ್ ಮತ್ತು 38 ಸಿಎಸ್ಐಆರ್ ಪ್ರಯೋಗಾಲಯದ ನಿರ್ದೇಶಕರ ಸಮ್ಮುಖದಲ್ಲಿ ಕೋವಿಡ್ -19 ರ ಸಂಶೋಧನಾ ಪ್ರಯತ್ನಗಳನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಡಾ.ಹರ್ಷ್ ವರ್ಧನ್ ಪರಿಶೀಲಿಸಿದರು.
ಸಿಎಸ್ಐಆರ್ ಪ್ರಯೋಗಾಲಯಗಳು ಪ್ರಮುಖ ಖಾಸಗಿ ವಲಯದ ಉದ್ಯಮೆಗಳು, ಸಾರ್ವಜನಿಕ ಉದ್ದಿಮೆಗಳು, ಎಂಎಸ್ಎಂಇಗಳು, ಇಲಾಖೆಗಳು ಮತ್ತು ಸಚಿವಾಲಯಗಳೊಂದಿಗೆ ನಿಕಟ ಸಹಭಾಗಿತ್ವದಲ್ಲಿ ಕೆಲಸ ಮಾಡುತ್ತಿವೆ ಮತ್ತು ಐದು ಐದು ಕಾರ್ಯಗಳನ್ನು ಗುರುತಿಸಿವೆ:
o ಡಿಜಿಟಲ್ ಮತ್ತು ಆಣ್ವಿಕ ಕಣ್ಗಾವಲು,
o ಕ್ಷಿಪ್ರ ಮತ್ತು ಆರ್ಥಿಕ ರೋಗನಿರ್ಣಯ,
o ಹೊಸ ಔಷಧಗಳು / ಔಷಧಗಳ ಪುನರಾವರ್ತನೆ ಮತ್ತು ಸಂಬಂಧಿತ ಉತ್ಪಾದನಾ ಪ್ರಕ್ರಿಯೆಗಳು,
o ಆಸ್ಪತ್ರೆ ಸಹಾಯಕ ಸಾಧನಗಳು ಮತ್ತು ಪಿಪಿಇಗಳು; ಮತ್ತು,
o ಸಾಗಾಣಿಕೆಯ ಸರಪಳಿ ಮತ್ತು ಸಾಗಾಣಿಕೆಗೆ ನೆರವಿನ ವ್ಯವಸ್ಥೆ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಕೋವಿಡ್-19 ಗೆ ಜಿಲ್ಲಾಡಳಿತ ಮಟ್ಟದಲ್ಲಿ ಸಕಾಲಿಕ ಪ್ರತಿಕ್ರಿಯೆಗಾಗಿ ಎಲ್ಲಾ ಹಂತದಲ್ಲೂ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸುತ್ತಿದೆ. ಲೈವ್ ಕೇಸ್ ಟ್ರ್ಯಾಕಿಂಗ್, ಕೇಸ್ ಮ್ಯಾನೇಜ್‌ಮೆಂಟ್ ಮತ್ತು ತಡೆಗಟ್ಟುವ ಯೋಜನೆಗಳ ಅನುಷ್ಠಾನವನ್ನೂ ತಂತ್ರಜ್ಞಾನದ ಮೂಲಕ ಮಾಡಲಾಗುತ್ತಿದೆ. ದೃಢಪಡಿಸಿದ ಪ್ರಕರಣಗಳ ಜಿಐಎಸ್ ಮ್ಯಾಪಿಂಗ್, ರೋಗವನ್ನು ಸಕ್ರಿಯವಾಗಿ ಸುಧಾರಿಸಿರುವ ಪ್ರದೇಶಗಳ ಗುರುತಿಸುವಿಕೆ, ಹೀಟ್ ಮ್ಯಾಪಿಂಗ್ ತಂತ್ರಜ್ಙಾನದ ಬಳಕೆ ಮತ್ತು ಮುನ್ಸೂಚಕ ದತ್ತಾಂಶ ವಿಶ್ಲೇಷಣೆಯನ್ನು ಧಾರಕ ಯೋಜನೆಗಳ ಅನುಷ್ಠಾನದ ಮೇಲ್ವಿಚಾರಣೆಗೆ ಬಳಸಲಾಗುತ್ತಿದೆ. ಇಂತಹ ತಂತ್ರಜ್ಞಾನ ಸಾಧನಗಳನ್ನು ಬೆಂಗಳೂರು ಯೋಜನಾ ಕೊಠಡಿಯಿಂದ ಬಹಳ ಪರಿಣಾಮಕಾರಿಯಾಗಿ ನಿಯೋಜಿಸಲಾಗಿದೆ.
ಇಂಟಿಗ್ರೇಟೆಡ್ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್‌ಗಳು ಮೀಸಲಾದ ಕ್ಷಿಪ್ರ ಕಾರ್ಯಾಚರಣೆಯ ತಂಡ (ಆರ್‌ಆರ್‌ಟಿ) ದೊಂದಿಗೆ ಸಮನ್ವಯ ಸಾಧಿಸುತ್ತಿದ್ದು, ಫೀಲ್ಡ್ ಸ್ಕ್ರೀನಿಂಗ್‌ನಲ್ಲಿ ಅನುಕೂಲವಾಗುವಂತೆ, ಆಂಬುಲೆನ್ಸ್ ಮತ್ತು ಕ್ವಾರಂಟೈನ್ ನಿರ್ವಹಣೆಯನ್ನು ಒದಗಿಸುತ್ತದೆ. ಕೆಲವು ಜಿಲ್ಲೆಗಳು ಸ್ಥಳೀಯ ವೈದ್ಯಕೀಯ ಮಳಿಗೆಗಳನ್ನು ಸಂಪರ್ಕಿಸುವ ರಿಮೋಟ್ ಡಿಜಿಟಲ್ ವೈದ್ಯಕೀಯ ಸಮಾಲೋಚನೆಯನ್ನು ಸಹ ಪ್ರಾರಂಭಿಸಿವೆ.
ಕ್ರಿಯಾ ಯೋಜನೆಯ ಅನುಷ್ಠಾನವು 15 ರಾಜ್ಯಗಳಲ್ಲಿನ 25 ಜಿಲ್ಲೆಗಳಲ್ಲಿ ಗಮನಾರ್ಹ ಫಲಿತಾಂಶಗಳನ್ನು ನೀಡಲು ಪ್ರಾರಂಭಿಸಿದೆ. ಈ ಜಿಲ್ಲೆಗಳಲ್ಲಿ ಕಳೆದ 14 ದಿನಗಳಿಂದ ಯಾವುದೇ ಪ್ರಕರಣಗಳು ವರದಿಯಾಗಿಲ್ಲ ಮತ್ತು ಭವಿಷ್ಯದಲ್ಲಿ ಯಾವುದೇ ಹೊಸ ಪ್ರಕರಣಗಳು ಸಂಭವಿಸದಂತೆ ನೋಡಿಕೊಳ್ಳಲು ನಿರಂತರ ಜಾಗರೂಕತೆಯನ್ನು ಕಾಯ್ದುಕೊಳ್ಳಲಾಗುತ್ತಿದೆ. ಈ ಜಿಲ್ಲೆಗಳ್ಯಾವುವೆಂದರೆ ಗೊಂಡಿಯಾ (ಮಹಾರಾಷ್ಟ್ರ), ರಾಜ್ ನಂದಗಾಂವ್, ದುರ್ಗ್, ಬಿಲಾಸ್ಪುರ್ (ಛತ್ತೀಸ್‌ಗಡ), ದಾವಣಗೆರೆ, ಕೊಡಗು, ತುಮಕೂರು, ಉಡುಪಿ (ಕರ್ನಾಟಕ), ದಕ್ಷಿಣ ಗೋವಾ (ಗೋವಾ), ವಯನಾಡ್ ಮತ್ತು ಕೊಟ್ಟಾಯಂ (ಕೇರಳ), ಪಶ್ಚಿಮ ಇಂಫಾಲ್ (ಮಣಿಪುರ) ರಾಜೌರಿ (ಜಮ್ಮು & ಕಾಶ್ಮೀರ), ಐಜಾವ್ಲ್ಲ್ ವೆಸ್ಟ್ (ಮಿಜೋರಾಂ), ಮಾಹೇ (ಪುದುಚೇರಿ), ಎಸ್‌ಬಿಎಸ್ ನಗರ (ಪಂಜಾಬ್), ಪಾಟ್ನಾ, ನಳಂದ ಮತ್ತು ಮುಂಗೆರ್ (ಬಿಹಾರ), ಪ್ರತಾಪಗಢ (ರಾಜಸ್ಥಾನ), ಪಾಣಿಪತ್, ರೋಹ್ಟಕ್, ಸಿರ್ಸಾ (ಹರಿಯಾಣ), ಪೌರಿ ಗರ್ವಾಲ್ (ಉತ್ತರಾಖಂಡ್) ಕೊಥಗುಡಮ್ (ತೆಲಂಗಾಣ).
ಏಪ್ರಿಲ್ 10 ರಂತೆ, ಪ್ರಧಾನ ಮಂತ್ರಿ ಗರಿಬ್ ಕಲ್ಯಾಣ್ ಪ್ಯಾಕೇಜ್ ಅಡಿಯಲ್ಲಿ 30 ಕೋಟಿಗೂ ಹೆಚ್ಚು ಬಡವರು ಕೋವಿಡ್-19 ಕಾರಣದಿಂದಾಗಿ ಲಾಕ್ ಡೌನ್ ಪರಿಣಾಮದ ರಕ್ಷಣೆಗಾಗಿ 28,256 ಕೋಟಿ ರೂ. ಧನಸಹಾಯ ಪಡೆದ ವಿವರಗಳು ಹೀಗಿವೆ:
o 19.86 ಕೋಟಿ ಪ್ರಧಾನ ಮಂತ್ರಿ ಜನ ಧನ್ ಯೋಜನೆ ಮಹಿಳಾ ಖಾತೆದಾರರು ರೂ. 9930 ಕೋಟಿ ಪಡೆದಿದ್ದಾರೆ
o ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಅಡಿಯಲ್ಲಿ 6.93 ಕೋಟಿ ರೈತರು 13,855 ಕೋಟಿ ರೂಪಾಯಿಗಳನ್ನು ಪಡೆದಿದ್ದಾರೆ.
o 2 2.82 ಕೋಟಿ ವಿಧವೆಯರು, ಹಿರಿಯ ನಾಗರಿಕರು ಮತ್ತು ವಿಶೇಷ ಚೇತನರು 1405 ಕೋಟಿ ರೂಪಾಯಿಗಳನ್ನು ಪಡೆದಿದ್ದಾರೆ
o 2.16 ಕೋಟಿ ಕಟ್ಟಡ ಮತ್ತು ಮೂಲಸೌಕರ್ಯ ನಿರ್ಮಾಣದ ಕಾರ್ಮಿಕರಿಗೆ 3066 ಕೋಟಿ ರೂಪಾಯಿ ನೆರವನ್ನು ನೀಡಲಾಗಿದೆ
ಕೊರೊನಾವೈರಸ್ ಸೋಂಕು ತಗಲುವ ಅಪಾಯವನ್ನು ನಿರ್ಣಯಿಸಲು ನಾಗರಿಕರಿಗೆ ಅನುವು ಮಾಡಿಕೊಡುವ ಮೊಬೈಲ್ ಅಪ್ಲಿಕೇಶನ್ ‘ಆರೋಗ್ಯಾ ಸೇತು’ 11 ಭಾಷೆಗಳಲ್ಲಿ ವಿನ್ಯಾಸಗೊಳಿಸಲಾಗಿದ್ದು, 3.5 ಕೋಟಿ ಡೌನ್‌ಲೋಡ್‌ಗಳನ್ನು ಮಾಡಲಾಗಿದೆ . ಬಳಕೆದಾರರ ಸುತ್ತಲಿನಲ್ಲಿರುವ ಕೋವಿಡ್ ಅಪಾಯವನ್ನು ಲೆಕ್ಕಾಚಾರ ಮಾಡುವಲ್ಲಿ, ಅಪಾಯದ ಮೌಲ್ಯಮಾಪನ, ಬ್ಲೂಟೂತ್ ತಂತ್ರಜ್ಞಾನ, ಕ್ರಮಾವಳಿಗಳು ಮತ್ತು ಕೃತಕ ಬುದ್ಧಿಮತ್ತೆಯಂತಹ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸುವ ಮೂಲಕ ಸಂಪರ್ಕ ಪತ್ತೆಹಚ್ಚುವಿಕೆಯಂತಹ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
27 ರಾಜ್ಯಗಳಲ್ಲಿ ರಾಜ್ಯ ಗ್ರಾಮೀಣ ಜೀವನೋಪಾಯ ಕಾರ್ಯಾಚರಣೆಗಳ (ಎಸ್‌ಆರ್‌ಎಲ್‌ಎಂ) ಅಡಿಯಲ್ಲಿ, 78,373 ಸ್ವಸಹಾಯ ಸಂಘ ಸದಸ್ಯರು 1.96 ಕೋಟಿ ಮುಖಗವಸುಗಳನ್ನು ತಯಾರಿಸಿದ್ದಾರೆ. ನ್ಯಾಷನಲ್ ಕೆಡೆಟ್ ಕಾರ್ಪ್ಸ್ (ಎನ್‌ಸಿಸಿ)ನ ಸ್ವಯಂಸೇವಕ ಕೆಡೆಟ್‌ಗಳು ನಾಗರಿಕ ಆಡಳಿತಕ್ಕೆ ‘ಎಕ್ಸರ್ಸೈಸ್ ಎನ್‌ಸಿಸಿ ಯೋಗ್ದಾನ್’’ ಅಡಿಯಲ್ಲಿ ಸಹಾಯ ಮಾಡುತ್ತಿದ್ದಾರೆ. ಕೋವಿಡ್-19ರ ವಿರುದ್ಧದ ಹೋರಾಟದಲ್ಲಿ 50,000 ಕ್ಕೂ ಹೆಚ್ಚು ಜನರು ಸ್ವಯಂಪ್ರೇರಿತರಾಗಿ ಕೊಡುಗೆ ನೀಡಿದ್ದಾರೆ.
ನಿನ್ನೆಯಿಂದ 796 ಹೆಚ್ಚಾಗಿರುವ ಪ್ರಕರಣಗಳ ವರದಿಯಾಗಿದ್ದು, ದೇಶದಲ್ಲಿ ಒಟ್ಟು 9152 ಕೋವಿಡ್-19 ದೃಢ ಪ್ರಕರಣಗಳು. 857 ಜನರನ್ನು ಗುಣಪಡಿಸಲಾಗಿದೆ/ ಚೇತರಿಕೆಯ ನಂತರ ಬಿಡುಗಡೆ ಮಾಡಲಾಗಿದೆ ಮತ್ತು ಇಂದಿಗೆ ಒಟ್ಟು 308 ಸಾವುಗಳು ವರದಿಯಾಗಿವೆ.
ಕೋವಿಡ್-19 ಸಂಬಂಧಿತ ತಾಂತ್ರಿಕ ಸಮಸ್ಯೆಗಳು, ಮಾರ್ಗಸೂಚಿಗಳು ಮತ್ತು ಸಲಹೆಗಳ ಎಲ್ಲಾ ಅಧಿಕೃತ ಮತ್ತು ಹೊಸ ಮಾಹಿತಿಗಾಗಿ ದಯವಿಟ್ಟು ನಿಯಮಿತವಾಗಿ ಭೇಟಿ ನೀಡಿ: https://www.mohfw.gov.in
ಕೋವಿಡ್-19 ಗೆ ಸಂಬಂಧಿಸಿದ ತಾಂತ್ರಿಕ ಪ್ರಶ್ನೆಗಳನ್ನು technquery.covid19[at]gov[dot]in ಮತ್ತು ಇತರ ಪ್ರಶ್ನೆಗಳನ್ನು ಕೇಳಲು ncov2019[at]gov[dot]in ಗೆ ಇಮೇಲ್ ಮಾಡಬಹುದು.
ಕೋವಿಡ್-19 ಬಗ್ಗೆ ಯಾವುದೇ ಪ್ರಶ್ನೆಗಳಿದ್ದಲ್ಲಿ, ದಯವಿಟ್ಟು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಹಾಯವಾಣಿ ಸಂಖ್ಯೆ. : +91-11-23978046 ಅಥವಾ 1075 (ಟೋಲ್-ಫ್ರೀ). ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ಕೋವಿಡ್-19ಗೆ ಸಂಬಂಧಿಸಿದ ಸಹಾಯವಾಣಿ ಸಂಖ್ಯೆಗಳ ಪಟ್ಟಿ https://www.mohfw.gov.in/pdf/coronvavirushelplinenumber.pdf ನಲ್ಲಿಯೂ ಲಭ್ಯವಿದೆ.
***
(Release ID: 1614112)
Visitor Counter : 204
Read this release in:
Assamese
,
English
,
Urdu
,
Hindi
,
Marathi
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam