ಪ್ರಧಾನ ಮಂತ್ರಿಯವರ ಕಛೇರಿ

ವಿಯಟ್ನಾಂ ಪ್ರಧಾನಿಯವರೊಂದಿಗೆ ಪ್ರಧಾನಿ ಮಾತುಕತೆ

Posted On: 13 APR 2020 3:20PM by PIB Bengaluru

ವಿಯಟ್ನಾಂ ಪ್ರಧಾನಿಯವರೊಂದಿಗೆ ಪ್ರಧಾನಿ ಮಾತುಕತೆ

 

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಯೆಟ್ನಾಂ ಪ್ರಧಾನ ಮಂತ್ರಿ ಶ್ರೀ ನ್ಗುಯೆನ್ ಕ್ಸುವಾನ್ ಫುಕ್  ಅವರೊಂದಿಗೆ ದೂರವಾಣಿ ಮಾತುಕತೆ ನಡೆಸಿದರು.

ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಉಂಟಾಗಿರುವ ಪರಿಸ್ಥಿತಿ ಮತ್ತು ಸವಾಲನ್ನು ಎದುರಿಸಲು ತೆಗೆದುಕೊಳ್ಳುತ್ತಿರುವ ಕ್ರಮಗಳ ಬಗ್ಗೆ ಉಭಯ ನಾಯಕರು ಚರ್ಚಿಸಿದರು.

ಕೋವಿಡ್-19 ವಿರುದ್ಧ ಹೋರಾಡುವಲ್ಲಿ ದ್ವಿಪಕ್ಷೀಯ ಸಹಯೋಗದ ಸಾಮರ್ಥ್ಯದ ಬಗ್ಗೆ ನಾಯಕರು ಒಪ್ಪಿಕೊಂಡರು. ಅಗತ್ಯವಾದ ವೈದ್ಯಕೀಯ ಸಲಕರಣೆಗಳ ಸರಬರಾಜಿಗೆ ಅನುಕೂಲವಾಗುವುದು ಸೇರಿದಂತೆ. ತಮ್ಮ ದೇಶಗಳಲ್ಲಿರುವ ಪರಸ್ಪರ ನಾಗರಿಕರಿಗೆ ಅಗತ್ಯವಾದ ಬೆಂಬಲವನ್ನು ನೀಡಲು ಬದ್ಧರಾಗಿರುವುದಾಗಿ ತಿಳಿಸಿದರು.

ಭಾರತ ಮತ್ತು ವಿಯೆಟ್ನಾಂ ನಡುವಿನ ಕಾರ್ಯತಂತ್ರ ಸಹಭಾಗಿತ್ವದ ಮಹತ್ವವನ್ನು ಒತ್ತಿ ಹೇಳಿದ ಉಭಯ ನಾಯಕರು, ವಿವಿಧ ರಂಗಗಳಲ್ಲಿ ಇತ್ತೀಚಿನ ಪ್ರಗತಿಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು. ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ಬೆಳವಣಿಗೆಗಳ ಬಗ್ಗೆಯೂ ಅವರು ಪರಿಶೀಲಿಸಿದರು.

ಸಾಂಕ್ರಾಮಿಕ ನಿಗ್ರಹ ಕ್ರಮಗಳು ಮತ್ತು ದ್ವಿಪಕ್ಷೀಯ ಸಂಬಂಧಗಳ ಇತರ ವಿಷಯಗಳ ಸಮನ್ವಯಕ್ಕಾಗಿ ಮುಂಬರುವ ದಿನಗಳಲ್ಲಿ ಪರಸ್ಪರ ತಂಡಗಳು ಸಂಪರ್ಕದಲ್ಲಿರಲು ಎಂದು ಇಬ್ಬರೂ ನಾಯಕರು ಒಪ್ಪಿಕೊಂಡರು.

ಪ್ರಸ್ತುತ ಬಿಕ್ಕಟ್ಟಿನ ಸಂದರ್ಭದಲ್ಲಿ ವಿಯೆಟ್ನಾಂ ಜನರ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಪ್ರಧಾನಿಯವರು ಹಾರೈಸಿದರು.

***



(Release ID: 1613942) Visitor Counter : 197