ರೈಲ್ವೇ ಸಚಿವಾಲಯ
ಕೋವಿಡ್-19 ಲಾಕ್ ಡೌನ್ ವೇಳೆ ಪೂರೈಕೆ ಸರಣಿ ಕಾಯ್ದುಕೊಳ್ಳಲು ಸಜ್ಜಾಗಿರುವ ಮತ್ತು ಮೂಲಸೌಕರ್ಯ ವಲಯಕ್ಕೆ ಅಗತ್ಯ ಪೂರೈಕೆ ಮಾಡುತ್ತಿರುವ ಭಾರತೀಯ ರೈಲ್ವೆ
Posted On:
12 APR 2020 8:14PM by PIB Bengaluru
ಕೋವಿಡ್-19 ಲಾಕ್ ಡೌನ್ ವೇಳೆ ಪೂರೈಕೆ ಸರಣಿ ಕಾಯ್ದುಕೊಳ್ಳಲು ಸಜ್ಜಾಗಿರುವ ಮತ್ತು ಮೂಲಸೌಕರ್ಯ ವಲಯಕ್ಕೆ ಅಗತ್ಯ ಪೂರೈಕೆ ಮಾಡುತ್ತಿರುವ ಭಾರತೀಯ ರೈಲ್ವೆ
ರೈಲ್ವೆಯಿಂದ 2020ರ ಏಪ್ರಿಲ್ 1 ರಿಂದ 11ರ ವರೆಗೆ 1.9 ಲಕ್ಷ ವ್ಯಾಗನ್ ಗೂ ಅಧಿಕ ಕಲ್ಲಿದ್ದಲು ಮತ್ತು ಸುಮಾರು 13,000 ವ್ಯಾಗನ್ ಪೆಟ್ರೋಲಿಯಂ ಉತ್ಪನ್ನಗಳ ಸಾಗಾಣೆ
ಕೋವಿಡ್-19 ಹಿನ್ನೆಲೆಯಲ್ಲಿ ಜಾರಿಗೊಳಿಸಲಾಗಿರುವ ಲಾಕ್ ಡೌನ್ ಅವಧಿಯಲ್ಲಿ ಭಾರತೀಯ ರೈಲ್ವೆ ನಿರಂತರವಾಗಿ ಮೂಲಸೌಕರ್ಯ ವಲಯಕ್ಕೆ ಅಗತ್ಯ ವಸ್ತುಗಳನ್ನು ಪೂರೈಸುತ್ತಿದೆ.
ಕಳೆದ 11 ದಿನಗಳಲ್ಲಿ 2020ರ ಏಪ್ರಿಲ್ 1 ರಿಂದ 11ರ ವರೆಗೆ ರೈಲ್ವೆ, 192165 ವ್ಯಾಗನ್ ಕಲ್ಲಿದ್ದಲನ್ನು ತುಂಬಿ ಸಾಗಾಣೆ ಮಾಡಿದೆ ಮತ್ತು 13276 ವ್ಯಾಗನ್ ಪೆಟ್ರೋಲಿಯಂ ಉತ್ಪನ್ನಗಳನ್ನು ಸಾಗಿಸಿದೆ (ಒಂದು ವ್ಯಾಗನ್ ನಲ್ಲಿ 58 ರಿಂದ 60 ಟನ್ ಸರಕು ಇರುತ್ತದೆ) ವಿವರಗಳು ಈ ಕೆಳಗಿನಂತಿವೆ:
ಕ್ರ.ಸಂ.
|
ದಿನಾಂಕ
|
ಒಟ್ಟು ಸಂಖ್ಯೆಯ ಕಲ್ಲಿದ್ದಲು ವ್ಯಾಗನ್
|
ಪೆಟ್ರೋಲಿಯಂ ಉತ್ಪನ್ನಗಳ ವ್ಯಾಗನ್ ಸಂಖ್ಯೆ
|
1.
|
01.04.2020
|
14078
|
1132
|
2.
|
02.04.2020
|
18186
|
1178
|
3.
|
03.04.2020
|
17474
|
1163
|
4.
|
04.04.2020
|
18038
|
1079
|
5.
|
05.04.2020
|
17211
|
791
|
6.
|
06.04.2020
|
17410
|
731
|
7.
|
07.04.2020
|
18215
|
1450
|
8.
|
08.04.2020
|
18225
|
1273
|
9.
|
09.04.2020
|
17387
|
1536
|
10.
|
10.04.2020
|
18137
|
1338
|
11.
|
11.04.2020
|
17804
|
1605
|
|
ಒಟ್ಟು
|
192165
|
13276
|
ರೈಲ್ವೆ ಸಚಿವಾಲಯದಲ್ಲಿ ಇಂಧನ, ಸಾರಿಗೆ ಮತ್ತು ಮೂಲಸೌಕರ್ಯ ವಲಯಗಳಿಗೆ ಅಗತ್ಯ ಇಂಧನ ಸಾಮಗ್ರಿಗಳು ಹಾಗೂ ಅತ್ಯವಶ್ಯಕ ವಸ್ತುಗಳನ್ನು ರೈಲುಗಳ ಮೂಲಕ ಯಾವುದೇ ಅಡೆತಡೆ ಇಲ್ಲದೆ ಸಾಗಿಸುವ ಆರಂಭಿಸಿರುವ ತುರ್ತು ಸರಕು ನಿಯಂತ್ರಣ ಕೇಂದ್ರ ಕಾರ್ಯೋನ್ಮುಖವಾಗಿದೆ. ಭಾರತೀಯ ರೈಲ್ವೆ, ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಸರಕು ರೈಲುಗಳ ಕಾರ್ಯಾಚರಣೆ ವೇಳೆ ಯಾವುದೇ ಸಮಸ್ಯೆಗಳು ಎದುರಾದರೆ ಅವುಗಳನ್ನು ರಾಜ್ಯ ಸರ್ಕಾರಗಳೊಂದಿಗೆ ಚರ್ಚಿಸಿ ಪರಿಹರಿಸಿಕೊಳ್ಳುತ್ತಿದೆ.
*****
(Release ID: 1613865)
Visitor Counter : 134