ನಾಗರೀಕ ವಿಮಾನಯಾನ ಸಚಿವಾಲಯ
ಲೈಫ್ ಲೈನ್ ಉಡಾನ್ ಕಾರ್ಯಾಚರಣೆ ಅಡಿಯಲ್ಲಿ, ಒಂದೇ ದಿನ ರಾಷ್ಟ್ರಾದ್ಯಂತ 108 ಟನ್ ಗಳಷ್ಟು ಅಗತ್ಯ ವಸ್ತುಗಳನ್ನು ಸಾಗಿಸಿದ ವೈದ್ಯಕೀಯ ಸರಕು ಸಾಗಣೆ ವಿಮಾನಗಳು
Posted On:
12 APR 2020 7:10PM by PIB Bengaluru
ಲೈಫ್ ಲೈನ್ ಉಡಾನ್ ಕಾರ್ಯಾಚರಣೆ ಅಡಿಯಲ್ಲಿ, ಒಂದೇ ದಿನ ರಾಷ್ಟ್ರಾದ್ಯಂತ 108 ಟನ್ ಗಳಷ್ಟು ಅಗತ್ಯ ವಸ್ತುಗಳನ್ನು ಸಾಗಿಸಿದ ವೈದ್ಯಕೀಯ ಸರಕು ಸಾಗಣೆ ವಿಮಾನಗಳು
ಕೊವಿಡ್ – 19 ವಿರುದ್ಧದ ಭಾರತದ ಹೋರಾಟಕ್ಕೆ ಬೆಂಬಲ ನೀಡಲು, 214 ಕ್ಕೂ ಹೆಚ್ಚು ಲೈಫ್ ಲೈನ್ ವಿಮಾನಗಳ ಮೂಲಕ ದೇಶದ ದೂರದ ಭಾಗಗಳಿಗೆ ಅಗತ್ಯ ವೈದ್ಯಕೀಯ ಸರಕುಗಳನ್ನು ಸಾಗಿಸುವ ಕಾರ್ಯವನ್ನ ನಾಗರಿಕ ವಿಮಾನಯಾನ ಸಚಿವಾಲಯ (ಎಂ ಒ ಸಿ ಎ) ನಿರ್ವಹಿಸಿದೆ. ಇವುಗಳಲ್ಲಿ 128 ವಿಮಾನಗಳು ಏರ್ ಇಂಡಿಯಾ ಮತ್ತು ಅಲಯೆನ್ಸ್ ಏರ್ ಸಂಸ್ಥೆಗಳದ್ದಾಗಿವೆ. ಇಲ್ಲಿಯವರೆಗೆ ಸುಮಾರು 373.23 ಟನ್ ಗಳಷ್ಟಯ ಸರಕುಗಳನ್ನು ಸಾಗಿಸಲಾಗಿದೆ. ಇಂದಿನವರೆಗೆ ಸುಮಾರು 1,99,784 ಕಿ. ಮೀ. ಗಳ ವ್ಯಾಪ್ತಿಯನ್ನ ವಿಮಾನಯಾನದ ಮೂಲಕ ಕ್ರಮಿಸಲಾಗಿದೆ ಎಂದು ಎಂ ಒ ಸಿ ಎ, ಜಂಟಿ ಕಾರ್ಯದರ್ಶಿ, ಶ್ರೀಮತಿ. ಉಷಾ ಪಧೀ ಹೇಳಿದ್ದಾರೆ. ಏಪ್ರಿಲ್ 11, 2020 ರಂದು ಸಾಗಿಸಲಾದ ಸರಕುಗಳ ತೂಕ 108 ಟನ್ ಗಳು. ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ವಾಯುಯಾನ ಉದ್ಯಮವು, ಭಾರತದಲ್ಲಿ ಮತ್ತು ವಿದೇಶಗಳಿಗೆ ವೈದ್ಯಕೀಯ ಸರಕುಗಳನ್ನು ಪರಿಣಾಮಕಾರಿ ಮತ್ತು ಕಡಿಮೆ ಬೆಲೆಯಲ್ಲಿ ಸಾಗಿಸುವ ಮೂಲಕ ಕೊವಿಡ್ – 19 ರ ವಿರುದ್ಧದ ಭಾರತದ ಹೋರಾಟಕ್ಕೆ ಬೆಂಬಲ ನೀಡಲು ದೃಢ ನಿರ್ಧಾರ ಕೈಗೊಂಡಿವೆ.
ಈಶಾನ್ಯ ಪ್ರದೇಶ, ದ್ವೀಪ ಪ್ರದೇಶಗಳು ಮತ್ತು ಬೆಟ್ಟ ಪ್ರದೇಶದ ರಾಜ್ಯಗಳಿಗೆ ವಿಶೇಷ ಗಮನಹರಿಸಲಾಗಿದೆ. ಪ್ರಮುಖವಾಗಿ ಜಮ್ಮು ಮತ್ತು ಕಾಶ್ಮೀರ, ಲದಾಖ್, ಈಶಾನ್ಯ ಮತ್ತು ಇತರ ದ್ವೀಪ ಪ್ರದೇಶಗಳಿಗಾಗಿ ಏರ್ ಇಂಡಿಯಾ ಮತ್ತು ಐ ಎ ಫ್ ಜೊತೆಗೂಡಿವೆ. ಸರಕುಗಳ ಹೆಚ್ಚಿನ ಪ್ರಮಾಣ ಹಗುರವಾದ ಮತ್ತು ಕಡಿಮೆ ತೂಕದ ವಸ್ತುಗಳಾದ ಮಾಸ್ಕ್ ಗಳು, ಕೈಗವಸುಗಳು ಮತ್ತು ವಿಮಾನಗಳಲ್ಲಿ ಹೆಚ್ಚು ಸಂಗ್ರಹಣಾ ಸ್ಥಳವನ್ನು ಬಳಸುವ ಸೇವಿಸಬಹುದಾದ ವಸ್ತುಗಳನ್ನು ಒಳಗೊಂಡಿದೆ. ತಕ್ಕ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಪ್ರಯಾಣಿಕರು ಕುಳಿತುಕೊಳ್ಳುವ ಪ್ರದೇಶ ಮತ್ತು ಓವರ್ ಹೆಡ್ ಕ್ಯಾಬಿನ್ ಗಳಲ್ಲಿ ಸರಕುಗಳನ್ನು ಶೇಖರಿಸಲು ವಿಶೇಷ ಅನುಮತಿ ಪಡೆಯಲಾಗಿದೆ.
ಲೈಫ್ ಲೈನ್ ಉಡಾನ್ ವಿಮಾನಗಳಿಗೆ ಸಂಬಂಧಿಸಿದ ಸಾರ್ವಜನಿಕ ಮಾಹಿತಿಯ ಇತ್ತೀಚಿನ ವರದಿಯನ್ನು ಪ್ರತಿದಿನ https://esahaj.gov.inlifeline_udan/public_info ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗುವುದು. ಈ ವೆಬ್ ಸೈಟನ್ನು ವಿವಿಧ ಪಾಲುದಾರರ ಜೊತೆ ಅಡೆತಡೆಯಿಲ್ಲದ ಸಮನ್ವಯತೆಯನ್ನು ಕಲ್ಪಿಸಲು ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್ ಐ ಸಿ) ಮತ್ತು ಎಂ ಒ ಸಿ ಎ ಜಂಟಿಯಾಗಿ ಕೇವಲ ದಾಖಲೆಯ ಮೂರೇ ದಿನಗಳಲ್ಲಿ ಅಭಿವೃದ್ಧಿಪಡಿಸಿದೆ.
ದೇಶೀಯ ಸರಕು ಸಾಗಿಸುವ ವಿಮಾನಯಾನ ನಿರ್ವಾಹಕರಾದ ಬ್ಲೂ ಡಾರ್ಟ್, ಸ್ಪೈಸ್ ಜೆಟ್ ಮತ್ತು ಇಂಡಿಗೊ ವಾಣಿಜ್ಯ ಆಧಾರದ ಮೇಲೆ ಕಾರ್ಗೊ ವಿಮಾನಗಳ ಹಾರಾಟ ನಿರ್ವಹಿಸುತ್ತಿವೆ. ಸ್ಪೈಸ್ ಜೆಟ್ 4,01,290 ಕಿ. ಮೀ. ದೂರವನ್ನು ಮತ್ತು 2334.51 ಟನ್ ಗಳಷ್ಟು ಸರಕುಗಳನ್ನು 286 ಕಾರ್ಗೊ ವಿಮಾನಗಳ ಮೂಲಕ ಸಾಗಾಟ ನಡೆಸಿತು. ಇವುಗಳಲ್ಲಿ 87 ವಿದೇಶೀ ಕಾರ್ಗೊ ವಿಮಾನಗಳಾಗಿವೆ. ಬ್ಲೂ ಡಾರ್ಟ್ 92,075 ಕಿ. ಮೀ. ದೂರವನ್ನು ಮತ್ತು 1479 ಟನ್ ಗಳಷ್ಟು ಸರಕುಗಳನ್ನು 94 ದೇಶೀಯ ಕಾರ್ಗೊ ವಿಮಾನಗಳ ಮೂಲಕ ಸಾಗಾಟ ನಡೆಸಿತು. ಇಂಡಿಗೊ 21,906 ಕಿ. ಮೀ. ದೂರವನ್ನು ಮತ್ತು 21.77 ಟನ್ ಗಳಷ್ಟು ಸರಕುಗಳನ್ನು 25 ಕಾರ್ಗೊ ವಿಮಾನಗಳ ಮೂಲಕ ಸಾಗಾಟ ನಡೆಸಿತು. ಇದರಲ್ಲಿ ಸರ್ಕಾರಕ್ಕಾಗಿ ಉಚಿತವಾಗಿ ಸಾಗಿಸಲಾದ ವೈದ್ಯಕೀಯ ಸಾಮಗ್ರಿಗಳೂ ಒಳಗೊಂಡಿವೆ.
ಸ್ಪೈಸ್ ಜೆಟ್ ನಿಂದ ದೇಶೀಯ ಕಾರ್ಗೊ ಸಾಗಣೆ
ದಿನಾಂಕ
|
ವಿಮಾನಗಳ ಸಂಖ್ಯೆ
|
ಟನ್ನುಗಳು
|
ಕಿ. ಮೀ. ಗಳು
|
11-04-2020
|
9
|
40.36
|
7271
|
ಸ್ಪೈಸ್ ಜೆಟ್ ನಿಂದ ಅಂತಾರಾಷ್ಟ್ರೀಯ ಕಾರ್ಗೊ ಸಾಗಣೆ
ದಿನಾಂಕ
|
ವಿಮಾನಗಳ ಸಂಖ್ಯೆ
|
ಟನ್ನುಗಳು
|
ಕಿ. ಮೀ. ಗಳು
|
11-04-2020
|
11
|
103.35
|
21,100
|
ಬ್ಲೂ ಡಾರ್ಟ್ ಕಾರ್ಗೊಯಿಂದ ಸಾಗಣೆ
ದಿನಾಂಕ
|
ವಿಮಾನಗಳ ಸಂಖ್ಯೆ
|
ಟನ್ನುಗಳು
|
ಕಿ. ಮೀ. ಗಳು
|
11-04-2020
|
8
|
145.000
|
7856.00
|
Iಇಂಡಿಗೊ ಕಾರ್ಗೊಯಿಂದ ಸಾಗಣೆ
ದಿನಾಂಕ
|
ವಿಮಾನಗಳ ಸಂಖ್ಯೆ
|
ಟನ್ನುಗಳು
|
ಕಿ. ಮೀ. ಗಳು
|
11-04-2020
|
6
|
15.66
|
4829
|
(ಸೂಚನೆ – ಇಂಡಿಗೊ ಸರಕು ಸಾಗಣೆಯಲ್ಲಿ ಸರ್ಕಾರ ನೀಡುತ್ತಿರುವ ವೈದ್ಯಕೀಯ ಸಾಮಗ್ರಿಗಳನ್ನು ಉಚಿತವಾಗಿ ಸಾಗಿಸುವುದೂ ಒಳಗೊಂಡಿರುತ್ತದೆ)
ಅಂತಾರಾಷ್ಟ್ರೀಯ ವಲಯ
ಔಷಧಿಗಳು, ವೈದ್ಯಕೀಯ ಉಪಕರಣಗಳು ಮತ್ತು ಕೊವಿಡ್ – 19 ಪರಿಹಾರ ಸಾಮಗ್ರಿಗಳನ್ನು ಸಾಗಿಸಲು, ಏಪ್ರಿಲ್ 4, 2020 ರಿಂದ ಜಾರಿಗೆ ಬರುವಂತೆ ಏರ್-ಬ್ರಿಡ್ಜ್ ಅನ್ನು ಪ್ರಾರಂಭಿಸಲಾಗಿದೆ. ತರಲಾದ ವೈದ್ಯಕೀಯ ಸರಕುಗಳ ದಿನಾಂಕವಾರು ಪ್ರಮಾಣ ಈ ಕೆಳಗಿನಂತಿದೆ:
ಕ್ರಮ ಸಂಖ್ಯೆ
|
ದಿನಾಂಕ
|
ಇಂದ
|
ಪ್ರಮಾಣ (ಟನ್ ಗಳಲ್ಲಿ)
|
1
|
04.4.2020
|
ಶಾಂಘಾಯ್
|
21
|
2
|
07.4.2020
|
ಹಾಂಗ್ ಕಾಂಗ್
|
6
|
3
|
09.4.2020
|
ಶಾಂಘಾಯ್
|
22
|
4
|
10.4.2020
|
ಶಾಂಘಾಯ್
|
18
|
5
|
11.4.2020
|
ಶಾಂಘಾಯ್
|
18
|
|
|
ಒಟ್ಟು
|
85
|
ಏಪ್ರಿಲ್ 7, 2020 ಮತ್ತು ಏಪ್ರಿಲ್ 8, 2020 ರಂದು 4 ಟನ್ ಗಳಷ್ಟು ಸಾಮಗ್ರಿಗಳನ್ನು ಏರ್ ಇಂಡಿಯಾ ಕೊಲಂಬೊಗೆ ಸಾಗಿಸಿತ್ತು. ಅವಶ್ಯಕತೆಗೆ ಅನುಗುಣವಾಗಿ, ನಿರ್ಣಾಯಕ ವೈದ್ಯಕೀಯ ಉಪಕರಣಗಳನ್ನು ಇತರ ದೇಶಗಳಿಗೆ ಸಾಗಿಸಲು ಏರ್ ಇಂಡಿಯಾ ನಿಯಮಿತ ಕಾರ್ಗೊ ವಿಮಾನಗಳನ್ನು ಮೀಸಲಿರಿಸಿದೆ
ಹಲವಾರು ನಿಯಂತ್ರಣಾ ಉಪಕ್ರಮಗಳನ್ನು ಘೋಷಿಲಾಗಿದ್ದು, ಕೆಳಗಿನವೂ ಒಳಗೊಂಡಿವೆ:
(1) ಸುರಕ್ಷತಾ ಕ್ರಮಗಳನ್ನು ಒಳಪಟ್ಟಂತೆ ವಿಮಾನದ ಪ್ರಯಾಣಿಕರ ಕ್ಯಾಬಿನ್ ನಲ್ಲಿ ಸರಕುಗಳನ್ನು ಸಾಗಿಸಲು ಅನುಮತಿ
(2) ವಿಮಾನ ನಿಲ್ದಾಣಗಳಲ್ಲಿ ಆಮದು ಸರಕುಗಳ ಮೇಲೆ 50% ರಷ್ಟು ರಿಯಾಯಿತಿ ಮತ್ತು
(3) ಅಪಾಯಕಾರಿ ವಸ್ತುವುಗಳ ಪ್ರಮಾಣಪತ್ರ ಸಿಂಧುತ್ವದ ವಿಸ್ತರಣೆ (ಉದಾ: ಔಷಧಿಗಳಿಗಾಗಿ ಬಳಸುವ ರಾಸಾಯನಿಕಗಳು)
****
(Release ID: 1613794)
Visitor Counter : 146
Read this release in:
English
,
Urdu
,
Hindi
,
Marathi
,
Bengali
,
Manipuri
,
Assamese
,
Punjabi
,
Gujarati
,
Tamil
,
Telugu