ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ದೇಶದಲ್ಲಿ ಕೊರೊನಾ ವೈರಸ್ ಹರಡುವಿಕೆ ನಿಯಂತ್ರಿಸಲು ಸಿಎಸ್ಐಆರ್ ಮತ್ತು ಅದರ ಘಟಕದ 38 ಪ್ರಯೋಗಾಲಯಗಳು ಕೈಗೊಂಡ ಕ್ರಮಗಳನ್ನು ಡಾ. ಹರ್ಷವರ್ಧನ್ ಪರಿಶೀಲಿಸಿದರು

Posted On: 12 APR 2020 7:17PM by PIB Bengaluru

ದೇಶದಲ್ಲಿ ಕೊರೊನಾ ವೈರಸ್ ಹರಡುವಿಕೆ ನಿಯಂತ್ರಿಸಲು ಸಿಎಸ್ಐಆರ್ ಮತ್ತು ಅದರ ಘಟಕದ 38 ಪ್ರಯೋಗಾಲಯಗಳು ಕೈಗೊಂಡ ಕ್ರಮಗಳನ್ನು ಡಾ. ಹರ್ಷವರ್ಧನ್ ಪರಿಶೀಲಿಸಿದರು

ಎಲ್ಲಾ ಸಿಎಸ್‌ಐಆರ್ ಪ್ರಯೋಗಾಲಯದ ನಿರ್ದೇಶಕರು ಮತ್ತು ಡಾ. ಶೇಖರ್ ಸಿ ಮಾಂಡೆ, ಡಿಜಿ, ಸಿಎಸ್‌ಐಆರ್ ಅವರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದರು

ಪ್ರಸ್ತುತ ಸಾಂಕ್ರಾಮಿಕ ರೋಗದ ಸವಾಲನ್ನು ಎದುರಿಸಲು ಸಿಎಸ್ಐಆರ್ ಮತ್ತು ಇತರ ಸಚಿವಾಲಯಗಳ ವಿಜ್ಞಾನಿಗಳು ಒಟ್ಟಾಗಿ ಕೆಲಸ ಮಾಡುವ ಮೂಲಕ ವೈಜ್ಞಾನಿಕ ಮತ್ತು ತಾಂತ್ರಿಕ ಆಧಾರಿತ ಪರಿಹಾರಗಳನ್ನು ಕಂಡುಹಿಡಿಯುವ ಅಗತ್ಯತೆಯನ್ನು ಡಾ.ಹರ್ಷವರ್ಧನ್ ಒತ್ತಿ ಹೇಳಿದ್ದಾರೆ

ಕೋವಿಡ್-19 ಎದುರಿಸುವಲ್ಲಿ ಸಿಎಸ್ಐಆರ್ ಮತ್ತು ಅದರ ಪ್ರಯೋಗಾಲಯಗಳ ಶ್ರಮವನ್ನು ಡಾ. ಹರ್ಷವರ್ಧನ್ ಶ್ಲಾಘಿಸಿದರು

 

ದೇಶದಲ್ಲಿ ಕೊರೊನಾ ವೈರಸ್ ಹರಡುವಿಕೆಯನ್ನು ಕಡಿಮೆ ಮಾಡಲು ಸಿಎಸ್ಐಆರ್ ಮತ್ತು ಅದರ 38 ಪ್ರಯೋಗಾಲಯಗಳು ಕೈಗೊಂಡಿರುವ ಕ್ರಮಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ  ಮತ್ತು ಭೂ ವಿಜ್ಞಾನ ಇಲಾಖೆ ಯ ಸಚಿವರಾದ ಡಾ. ಹರ್ಷವರ್ಧನ್ ಇಂದು ಪರಿಶೀಲಿಸಿದರು.  ಎಲ್ಲಾ ಸಿಎಸ್ಐಆರ್  ಪ್ರಯೋಗಾಲಯಗಳ ನಿರ್ದೇಶಕರು ಮತ್ತು ಡಾ.ಶೇಖರ್ ಸಿ ಮಾಂಡೆ, ಡಿಜಿ, ಸಿಎಸ್ಐಆರ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ  ಮಾತುಕತೆ ನಡೆಸಿದರು.

ಡಾ. ಶೇಖರ್ ಸಿ ಮಾಂಡೆ ಅವರು ಇತ್ತೀಚೆಗೆ  ಮೂಲ ಕಾರ್ಯತಂತ್ರದ ತಂಡ ( ಕೋರ್ ಸ್ಟ್ರಾಟಜಿ ಗ್ರೂಪ್  - ಸಿಎಸ್ ಸಿ )ವನ್ನು  ಸ್ಥಾಪಿಸುವ ಉಪಕ್ರಮ ಮತ್ತು ಕೋವಿಡ್ -19 ಸಂಬಂಧಿತ ಚಟುವಟಿಕೆಗಳನ್ನು ಕೈಗೊಳ್ಳುತ್ತಿರುವ ಐದು ಕಾರ್ಯಗಳ ಬಗ್ಗೆ ಸಚಿವರಿಗೆ ತಿಳಿಸಿದರು. ಐದು ಕಾರ್ಯಗಳಾವುವೆಂದರೆ : ಡಿಜಿಟಲ್ ಮತ್ತು ಆಣ್ವಿಕ ಕಣ್ಗಾವಲು; ಕ್ಷಿಪ್ರ ಮತ್ತು ಮಿತವ್ಯಯದ ರೋಗನಿರ್ಣಯ; ಹೊಸ ಔಷಧಗಳು / ಔಷಧಿಗಳ ಪುನರಾವರ್ತನೆ ಮತ್ತು ಸಂಬಂಧಿತ ಉತ್ಪಾದನಾ ಪ್ರಕ್ರಿಯೆಗಳು; ಆಸ್ಪತ್ರೆ ಸಹಾಯಕ ಸಾಧನಗಳು ಮತ್ತು ಪಿಪಿಇಗಳು; ಮತ್ತು ಸರಬರಾಜು ಸರಪಳಿ ಮತ್ತು ಸಾಗಾಣಿಕೆ ವ್ಯವಸ್ಥೆಗಳನ್ನು ಪರಿಶೀಲಿಸಲಾಗುತ್ತಿದೆ.  ದೇಶದಲ್ಲಿ ಬಿಕ್ಕಟ್ಟಿನ ಈ ಸಮಯದಲ್ಲಿ ಸಿಎಸ್ಐಆರ್ ಪ್ರಮುಖ ಕೈಗಾರಿಕೆಗಳು, ಸಾರ್ವಜನಿಕ ಉದ್ದಿಮೆಗಳು, ಎಂಎಸ್ಎಂಇಗಳು ಮತ್ತು ಇತರ ಇಲಾಖೆಗಳು ಮತ್ತು ಸಚಿವಾಲಯಗಳೊಂದಿಗೆ ನಿಕಟ ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಡಾ.ಮಾಂಡೆ ತಿಳಿಸಿದರು.

ಸಿಎಸ್ಐಆರ್-ಸಿಸಿಎಂಬಿ, ಸಿಎಸ್ಐಆರ್-ಐಜಿಐಬಿ, ಸಿಎಸ್ಐಆರ್-ಐಐಐಎಂ ಮತ್ತು ಸಿಎಸ್ಐಆರ್-ಐಎಮ್ ಟೆಕ್ ಜೊತೆಗೆ ಈಗಾಗಲೇ ರೋಗಿಗಳ ಮಾದರಿಗಳನ್ನು ಪರೀಕ್ಷಿಸುವಲ್ಲಿ ಅನೇಕ ಸಿಎಸ್ಐಆರ್ ಲ್ಯಾಬ್ಗಳು ತೊಡಗಿಕೊಂಡಿವೆ ಮತ್ತು ಸಿಎಸ್ಐಆರ್-ಐಹೆಚ್ ಬಿಟಿ, ಸಿಎಸ್ಐಆರ್-ಎನ್ ಇ ಇ ಆರ್ ಇ ಮತ್ತು ಸಿಎಸ್ಐಆರ್-ಐಐಸಿಬಿ ಇದೀಗ ಅನುಮೋದನೆಯನ್ನು ಸ್ವೀಕರಿಸಿದೆ ಎನ್ನುವುದನ್ನು ತಿಳಿದು ಸಚಿವರು ಸಂತಸಗೊಂಡರು.  ಸಿಎಸ್ಐಆರ್-ಸಿಡಿಆರ್ ಐ, ಸಿಎಸ್ಐಆರ್-ಐಐಟಿಆರ್ ಮತ್ತು ಸಿಎಸ್ಐಆರ್-ಎನ್ ಇ ಐ ಎಸ್ ಟಿ ನಂತಹ ಇನ್ನೂ ಕೆಲವು ಸಿಎಸ್ಐಆರ್ ಪ್ರಯೋಗಾಲಯಗಳು ಪರೀಕ್ಷೆಗಳಿಗಾಗಿ ತಯಾರಾಗುತ್ತಿವೆ ಮತ್ತು ಸಿಎಸ್ಐಆರ್-ಸಿಎಲ್ಆರ್ ಐ, ಸಿಎಸ್ಐಆರ್-ಎನ್ಐಐಎಸ್ ಟಿ ಮತ್ತು ಸಿಎಸ್ಐಆರ್-ಎನ್ಐಒ ಆರ್ ಟಿ-ಪಿಸಿಆರ್ ಯಂತ್ರಗಳೊಂದಿಗೆ ರಾಜ್ಯ ಸರ್ಕಾರಗಳನ್ನು ಬೆಂಬಲಿಸುತ್ತಿವೆ,  14 ಸಿಎಸ್ಐಆರ್ ಪ್ರಯೋಗಾಲಯಗಳು ಕೊರೊನಾ ವೈರಸ್ ನ ರೋಗನಿರ್ಣಯಕ್ಕೆ ಕೊಡುಗೆ ನೀಡುತ್ತಿವೆ. ಕೊರೊನಾವೈರಸ್ ರೋಗಿಗಳಿಗೆ ಪ್ಲಾಸ್ಮಾ ಆಧಾರಿತ ಚಿಕಿತ್ಸೆಯನ್ನು ಪ್ರಾರಂಭಿಸಲು ತ್ವರಿತ ಮತ್ತು ಅಗ್ಗದ ಪೇಪರ್ ಆಧಾರಿತ ರೋಗನಿರ್ಣಯ ಪರೀಕ್ಷೆ ಮತ್ತು ಸಿಎಸ್ಐಆರ್-ಐಐಸಿಬಿ ಅಭಿವೃದ್ಧಿಪಡಿಸಿದ ಸಿಎಸ್ಐಆರ್-ಐಜಿಐಬಿಯ ಪ್ರಯತ್ನಗಳನ್ನು ಅವರು ಶ್ಲಾಘಿಸಿದರು. ಮುಂದಿನ 3-4 ವಾರಗಳಲ್ಲಿ ಸಿಎಸ್ಐಆರ್ನಿಂದ ಸುಮಾರು 500 ಕರೋನಾ ವೈರಸ್ ಅನುಕ್ರಮಗಳನ್ನು ನಿರೀಕ್ಷಿಸಲಾಗಿದೆ ಎಂದು ಸಿಎಸ್ಐಆರ್-ಸಿಸಿಎಂಬಿ ನಿರ್ದೇಶಕ ಡಾ.ರಾಕೇಶ್ ಮಿಶ್ರಾ ಮಾಹಿತಿ ನೀಡಿದರು ಮತ್ತು ಸಿಎಸ್ಐಆರ್ ಸಂಸ್ಥೆಯು ಟಿಸಿಎಸ್ ಮತ್ತು ಇಂಟೆಲ್ ಮತ್ತು ಇತರರೊಂದಿಗೆ ದೇಶದಲ್ಲಿ ಕರೊನಾ ಹರಡುವಿಕೆಯ ಕಣ್ಗಾವಲಿಗೆ ಸಹಾಯ ಮಾಡುವ ಡಿಜಿಟಲ್ ಪ್ಲಾಟ್ಫಾರ್ಮ್ ಅನ್ನು ಅಭಿವೃದ್ಧಿಪಡಿಸಲು ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸಿಎಸ್ಐಆರ್-ಐಜಿಐಬಿ ನಿರ್ದೇಶಕ ಡಾ.ಅನುರಾಗ್ ಅಗ್ರವಾಲ್ ಮಾಹಿತಿ ನೀಡಿದರು.

ಸಿಎಸ್ಐಆರ್-ಐಐಸಿಟಿ ನಿರ್ದೇಶಕ, ಡಾ. ಚಂದ್ರಶೇಖರ್ ಅವರು ಪುನರುತ್ಪಾದಿತ ಔಷಧಿಗಳ ಸಂಶ್ಲೇಷಣೆಯಲ್ಲಿನ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಮತ್ತು ರೆಮ್ಡೆಸಿವಿರ್, ಫಾವಿಪಿರವಿರ್, ಅರ್ಬಿಡಾಲ್ ಸೇರಿದಂತೆ ಸಣ್ಣ ಅಣುಗಳು ಮತ್ತು ಎಪಿಐಗಳ ಬಗ್ಗೆ ಮತ್ತು ಸಿಎಸ್ಐಆರ್ ಫಾರ್ಮಾ ಇಂಡಸ್ಟ್ರಿಯೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ವಿವರಿಸಿದರು. ಸಿಎಸ್ಐಆರ್ ಆಯುಷ್ ಸಚಿವಾಲಯದೊಂದಿಗೆ ತಡೆಗಟ್ಟುವಿಕೆ ಮತ್ತು ರೋಗನಿರೋಧಕ, ರೋಗಲಕ್ಷಣದ ನಿರ್ವಹಣೆ ಮತ್ತು ಆಧುನಿಕ ಔಷಧಿ ಚಿಕಿತ್ಸೆಗಳಿಗೆ ಪೂರಕವಾದ ಔಷಧಿಗಳೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸಚಿವರು ಶ್ಲಾಘಿಸಿದರು. ಸಿಎಸ್ಐಆರ್ ಮತ್ತು ಆಯುಷ್ ಸಚಿವಾಲಯವು ಜಂಟಿಯಾಗಿ ನಾಲ್ಕು ಸಸ್ಯದಿಂದ ಪಡೆದ ವಸ್ತುಗಳಾದ ವಿಥಾನಿಯಾ ಸೋಮ್ನಿಫೆರಾ, ಟಿನೋಸ್ಪೊರಾ ಕಾರ್ಡಿಫೋಲಿಯಾ, ಗ್ಲೈಸಿರ್ಹಿಜಾ ಗ್ಲಾಬ್ರಾ ಮತ್ತು ಆಯುಷ್ -64 ಗಳನ್ನು ಅಭಿವೃದ್ಧಿಗಾಗಿ ಉಪಯೋಗಿಸಿಕೊಳ್ಳಲು ಯೋಜಿಸಿದೆ ಎಂದು ಸಿಎಸ್ಐಆರ್ - ಐಐಐಎಂ ನಿರ್ದೇಶಕರಾದ ಡಾ.ರಾಮ್ ವಿಶ್ವಕರ್ಮರವರು  ಸಚಿವರಿಗೆ ಮಾಹಿತಿ ನೀಡಿದರು.

ಸಿಎಸ್ಐಆರ್-ಎನ್ಎಎಲ್ ನಿರ್ದೇಶಕರುಸಂಬಂಧಿತ ಆಸ್ಪತ್ರೆ ಸಹಾಯಕ ಸಾಧನಗಳು ಮತ್ತು ಪಿಪಿಇಗಳ ಅಡಿಯಲ್ಲಿ ಸಿಎಸ್ಐಆರ್ ಉಪಕ್ರಮಗಳನ್ನು  ಎತ್ತಿ ತೋರಿಸಿದರು, ಅಲ್ಲಿ ಸಿಎಸ್ಐಆರ್ ಪ್ರಯೋಗಾಲಯಗಳು ಬಿ ಹೆಚ್ ಇ ಎಲ್ ಮತ್ತು ಬಿಇಎಲ್ ನೊಂದಿಗೆ ವೆಂಟಿಲೇಟರ್ ತಯಾರಿಕೆಗಾಗಿ ಮತ್ತು ಆಕ್ಸಿಜನ್ ಸಂಬಂಧಿತ ಸಾಧನಗಳಿಗಾಗಿ ಕಾರ್ಯನಿರ್ವಹಿಸುತ್ತಿವೆಮತ್ತು ಸಿಎಸ್ಐಆರ್ ಪ್ರಯೋಗಾಲಯಗಳು  3-ಡಿ ಮುದ್ರಿತ ಮುಖದ ಕವಚಗಳು, ಮುಖಗವಸುಗಳು, ನಿಲುವಂಗಿಗಳು ಮತ್ತು ಇತರ ರಕ್ಷಣಾ ಸಾಧನಗಳುನ್ನು ಅಭಿವೃದ್ಧಿ ಪಡಿಸುತ್ತಿವೆ.

ಅನೇಕ ಸಿಎಸ್ಐಆರ್ ಲ್ಯಾಬ್ಗಳು ಮುಂಚೂಣಿಯ ಕೆಲಸಗಾರರು, ಪೊಲೀಸ್ ಮತ್ತು ಇತರ ನಾಗರಿಕರಿಗೆ ಹೆಚ್ಚಿನ ಪ್ರಮಾಣದಲ್ಲಿ ಸುರಕ್ಷತಾ ವಸ್ತುಗಳು ಮತ್ತು ಸಾಧನಗಳನ್ನು ತಯಾರಿಸಿ ವಿತರಿಸುವ ಮೂಲಕ ಸಹಾಯ ಮಾಡುತ್ತಿವೆ ಎಂದು ಡಾ. ಹರ್ಷವರ್ಧನ್ ಮೆಚ್ಚುಗೆ ವ್ಯಕ್ತಪಡಿಸಿದರು. ಸಿಎಸ್ಐಆರ್ ಮತ್ತು ಇತರ ಸಚಿವಾಲಯಗಳ ವಿಜ್ಞಾನಿಗಳು ಒಟ್ಟಾಗಿ ಕೆಲಸ ಮಾಡುವ ಅವಶ್ಯಕತೆಯಿದೆ ಮತ್ತು ಪ್ರಸ್ತುತ ಸಾಂಕ್ರಾಮಿಕ ರೋಗದಿಂದಾಗಿ ಹುಟ್ಟಿದ ಸವಾಲನ್ನು ನಿಭಾಯಿಸಲು ವಿಜ್ಞಾನ ಮತ್ತ ತಂತ್ರಜ್ಞಾನ ಆಧಾರಿತ ಪರಿಹಾರಗಳನ್ನು ತರಬೇಕು ಎಂದು ಅವರು ಒತ್ತಿ ಹೇಳಿದರು.  ಭಾರತವು ತನ್ನ ವೈಜ್ಞಾನಿಕ ಸಮುದಾಯದಿಂದ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದೆ ಮತ್ತು ಈ ಅಗತ್ಯದ ಸಮಯದಲ್ಲಿ ವೈಜ್ಙಾನಿಕ ಸಮುದಾಯವು ತಕ್ಕುದಾದ ಕಾರ್ಯ ನಿರ್ವಹಿಸುತ್ತದೆ ಎನ್ನವುದರಲ್ಲಿ ಸಂದೇಹವೇ ಇಲ್ಲ ಎಂದು ಅವರು ಹೇಳಿದರು.

CSIR VIDEO

 

***

 


(Release ID: 1613792) Visitor Counter : 184